The Public Spot
Uncategorized

Modi Japan Tour: ದೇಶದ ವಿದೇಶಾಂಗ ನೀತಿ ಬಗ್ಗೆ ಟೀಕೆ ಒಳ್ಳೇದಾ..? ಕೆಟ್ಟದ್ದಾ..?

ಪ್ರಧಾನಿ ನರೇಂದ್ರ ಮೋದಿ ಜಪಾನ್‌ನ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಮೋದಿ ಅವರನ್ನು ಜಪಾನ್ ಸರ್ಕಾರ​ ಹಾಗೂ ಅನಿವಾಸಿ ಭಾರತೀಯರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಗಾಯತ್ರಿ ಮಂತ್ರ ಪಠಣೆ ಹಾಗೂ ಭಜನೆಯೊಂದಿಗೆ ನರೇಂದ್ರ ಮೋದಿಗೆ ಸ್ವಾಗತ ಕೋರಿದ್ದಾರೆ. ಆ ಬಳಿಕ ಭಾರತ – ಜಪಾನ್ ಜಂಟಿ ಆರ್ಥಿಕ ವೇದಿಕೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ, ಶೀಘ್ರದಲ್ಲೇ ಭಾರತ ಜಗತ್ತಿನ 3ನೇ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದು ತಿಳಿಸಿದ್ದಾರೆ. ಅದೇ ಸಮಯದಲ್ಲಿ ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್ ದೇಶ ಪ್ರಮುಖ ಪಾಲುದಾರನ ಪಾತ್ರ ನಿರ್ವಹಿಸಲಿದೆ ಎಂದು ಶ್ಲಾಘಿಸಿದರು.

ಪ್ರಧಾನಿ ನರೇಂದ್ರ ಮೋದಿ ಟೋಕಿಯೋದಲ್ಲಿ ನಡೆದ 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ಜಪಾನ್ ಪ್ರಧಾನಿ ಇಶಿಬಾ ಮತ್ತು ಪ್ರಧಾನಿ ಮೋದಿ ಮಧ್ಯೆ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚೆ ನಡೆದಿದೆ. ರಕ್ಷಣೆ, ವ್ಯಾಪಾರ, ತಂತ್ರಜ್ಞಾನ, ಭೌಗೋಳಿಕ ಅನ್ವೇಷಣೆಯಲ್ಲಿ ಪರಸ್ಪರ ಸಹಭಾಗಿತ್ವದ ಬಗ್ಗೆ ಉಭಯ ನಾಯಕರು ಸಹಿ ಹಾಕಿದರು. ಇದೇ ವೇಳೆ ಭಾರತದಲ್ಲಿ ಜಪಾನ್​ 10 ಟ್ರಿಲಿಯನ್​ ಯೆನ್​ ಹೂಡಿಕೆ ಮಾಡುವುದಾಗಿ ಜಪಾನ್​ ಘೋಷಣೆ ಮಾಡಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಆದರೆ ಪ್ರಧಾನಿ ಮೋದಿ ಜಪಾನ್​ ಭೇಟಿಯನ್ನು ವ್ಯಂಗ್ಯವಾಡಿದೆ ಕಾಂಗ್ರೆಸ್​.

ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಎರಡು ದಿನಗಳ ಜಪಾನ್​ ಪ್ರವಾಸವನ್ನು ಕಾಂಗ್ರೆಸ್​ ಟೀಕಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಿಂಸಾಚಾರ ಪೀಡಿತ ಮಣಿಪುರ ರಾಜ್ಯಕ್ಕೆ ಭೇಟಿ ನೀಡದೆ ನಿರ್ಲಕ್ಷಿಸಿದ್ದಾರೆ, ಮಣಿಪುರಕ್ಕೆ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿ ಜಪಾನ್ ಹಾಗೂ ಚೀನಾಗೆ ತೆರಳಿದ್ದಾರೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕಿಡಿಕಾರಿದ್ದಾರೆ. ಪಾಕಿಸ್ತಾನದ ವಿರುದ್ಧ ಆಪರೇಷನ್​ ಸಿಂದೂರ್​ ವೇಳೆ ಚೀನಾ ನಿರ್ಮಿತ ಗ್ರೆನೇಡ್​ ಬಳಸಲಾಗಿತ್ತು. ಭಾರತೀಯ ಸೇನೆ ವಿರುದ್ಧ ನಡೆದಿದ್ದ ಚೀನಾ ಕುತಂತ್ರವನ್ನು ಮೋದಿ ಮರೆತುಬಿಟ್ಟರೆ ಎಂದು ಟೀಕಿಸಿದ್ದಾರೆ.

ಆದರೆ ಕಾಂಗ್ರೆಸ್​ ಪಕ್ಷ ಕೇಳಿರೋದರಲ್ಲಿ ತಪ್ಪೇನು ಇಲ್ಲ. ಹೌದು.. ಚೀನಾ ‘ಆಪರೇಷನ್​ ಸಿಂದೂರ್​’ ಸಮಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವ ನಿರ್ಧಾರ ಮಾಡಿತ್ತು. ಡ್ರೋಣ್​ ಸೇರಿದ್ದಂತೆ ಗ್ರೆನೇಡ್​ಗಳನ್ನು ಪಾಕಿಸ್ತಾನಕ್ಕೆ ಪೂರೈಕೆ ಮಾಡಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಅಮೆರಿಕ ಶೇಕಡ 50ರಷ್ಟು ತೆರಿಗೆ ಏರುವ ಮೂಲಕ ಭಾರತದಿಂದ ದೂರ ಸರಿದಿದೆ. ಪಾಕಿಸ್ತಾನದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದೆ. ಈ ಸಮಯದಲ್ಲಿ ಭಾರತವೂ ಕೂಡ ತನ್ನದೇ ಆದ ಯೋಜನೆಗಳನ್ನು ಮಾಡುವ ಅವಶ್ಯಕತೆ ಇದೆ. ಶತ್ರುವಿನ ಶತ್ರು ಮಿತ್ರ ಎನ್ನುವ ಗಾಧೆ ಮಾತಿನಂತೆ ಚೀನಾ ಜೊತೆಗಿನ ವ್ಯವಹಾರ ಲಾಭ ತಂದುಕೊಡುವ ನಿರೀಕ್ಷೆಯಿದೆ.

ಆದರೆ ಚೀನಾ ದೇಶ ಆಕ್ರಮಣಕಾರಿ ನೀತಿ ಹೊಂದಿದ್ದು, ಇದೀಗ ಅಮೆರಿಕದಿಂದ ದೂರ ಆಗಿರುವ ಭಾರತದ ಮೇಲೆ ದಬ್ಬಾಳಿಕೆ ಮಾಡಿ, ತನಗೆ ಲಾಭ ಮಾಡಿಕೊಳ್ಳುವ ಉದ್ದೇಶ ಪ್ರದರ್ಶನ ಮಾಡಿದರೆ..! ಭಾರತ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಕೆಲಸ ಮಾಡಬೇಕಿದೆ. ಅದನ್ನು ಬಿಟ್ಟು ಶತ್ರುರಾಷ್ಟ್ರಕ್ಕೆ ಸಹಕಾರ ಕೊಟ್ಟಿತ್ತು ಎಂದು ದೂರದಲ್ಲಿ ಇರಿಸುವುದು ಸಾಧ್ಯವೇ ಇಲ್ಲ. ಅಂತಾರಾಷ್ಟ್ರೀಯ ನೀತಿ ನಿಯಮಗಳು ಕೆಲವೊಮ್ಮೆ ಬದಲಾವಣೆ ಆಗುತ್ತಲೇ ಇರುತ್ತವೆ ಅಲ್ಲವೇ..?

Related posts

Karnataka Rathna Dr Vishnuvardhan: ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪುರಸ್ಕಾರ

Publicspot

ಉಗ್ರರು, ಅಪರಾಧಿಗಳ ಪಾಲಿನ ಸ್ವರ್ಗ ನಮ್ಮ ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲು

Publicspot

Delhi Car Blast; ರೆಡ್​ಪೋರ್ಟ್​ ಬಳಿಕ ಕಾರು ಸ್ಫೋಟ.. 10ಕ್ಕೂ ಹೆಚ್ಚು ಸಾವು.. ಪುಲ್ವಾಮಾ ಲಿಂಕ್..!?

Publicspot

PIL rejected by supreme court; ಸುಪ್ರೀಂಕೋರ್ಟ್‌ ಆದೇಶ ಮುಚ್ಚಿಟ್ಟು SIT ರಚನೆ ಮಾಡಿತಾ ಸರ್ಕಾರ..?

Publicspot

ಕಾರ್​ ಸ್ಫೋಟ.. NIA ತನಿಖೆಗೆ ವಹಿಸಿ ಕೇಂದ್ರ ಗೃಹ ಇಲಾಖೆ ಆದೇಶ

Publicspot

Storms in S Naraayan Family: ಎಸ್​ ನಾರಾಯಣ್​ ದಂಪತಿ ಸೇರಿದಂತೆ ಪುತ್ರನಿಗೆ ಸಂಕಷ್ಟ..

Publicspot