The Public Spot
ರಾಜ್ಯ

Namma Metro ಹಳದಿ ಮಾರ್ಗದಲ್ಲಿ ಮಹಾನ್​ ಎಡವಟ್ಟು.. ಜನರೆಲ್ಲಾ ಕಂಗಾಲು..

ಆಗಸ್ಟ್​ 10ರಂದು ಎಲೆಕ್ಟ್ರಾನಿಕ್​ ಸಿಟಿ ಹಾಗೂ ರಾಗಿಗುಡ್ಡ ನಡುವಿನ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದರು. ಅತಿಯಾದ ಟ್ರಾಫಿಕ್​ ಹೊಂದಿರುವ ಎಲೆಕ್ಟ್ರಾನಿಕ್​ ಸಿಟಿ ಮಾರ್ಗಕ್ಕೆ ನಮ್ಮ ಮೆಟ್ರೋ ಜಾಲ ವಿಸ್ತರಣೆಯಿಂದ ಜನರು ನಿಟ್ಟುಸಿರು ಬಿಟ್ಟಿದ್ದರು. ಇನ್ಮುಂದೆ ಕಚೇರಿಗಳಿಗೆ ಹೋಗಲು ಬರುವುದಕ್ಕೆ 2 ಗಂಟೆಗಳ ಅವಶಕ್ಯತೆಯಿಲ್ಲ. ಬೆಂಗಳೂರಿನ ಹೃದಯ ಭಾಗಕ್ಕೆ ಕೇವಲ ಒಂದು ಕಂಟೆಯಲ್ಲಿ ತಲುಪಬಹುದು ಎಂದು ಸಂತಸ ಪಟ್ಟಿದ್ದರು. ಆದರೆ ಇದೀಗ ನಮ್ಮ ಮೆಟ್ರೋ ಆಡಳಿತ ಮಂಡಳಿ ಮಾಡಿರುವ ಎಡವಟ್ಟಿನಿಂದ ಜನ ಕಂಗಾಲಾಗಿದ್ದಾರೆ.

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ‌ BMRCL ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಪ್ರಯಾಣಿಕರು ಹಾಗೂ ಜನಪ್ರಧಿನಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕೊನಪ್ಪನ ಅಗ್ರಹಾರ ಮತ್ತು ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣಗಳಲ್ಲಿ ಬಹಳ ವ್ಯತ್ಯಾಸ ಮಾಡಲಾಗಿದೆ. ಹೀಗಾಗಿ ಮೆಟ್ರೋದಲ್ಲಿ ಪ್ರಯಾಣಿಸುವ ಜನರಲ್ಲಿ ಬಹಳ ಕನ್ಪ್ಯೂಷನ್ ಕ್ರಿಯೇಟ್​ ಆಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೊನಪ್ಪನ ಅಗ್ರಹಾರ ನಿಲ್ದಾಣ ಎಂತಲೂ ಕೊನಪ್ಪನj ಅಗ್ರಹಾರ ನಿಲ್ದಾಣ ದಲ್ಲಿ ಎಲೆಕ್ಟ್ರಾನಿಕ್ ‌ಸಿಟಿ ನಿಲ್ದಾಣ ಅಂತಾನೂ ಅದಲು ಬದಲು ಮಾಡಲಾಗಿದೆ. ಇದು ಮೊದಲ ಬಾರಿಗೆ ಬರುವ ಜನರಲ್ಲಿ ಸಮಸ್ಯೆಗೆ ಕಾರಣವಾಗಿದೆ.

ಈಗ ಯಾವುದೋ ಓರ್ವ ವ್ಯಕ್ತಿ ಎಲೆಕ್ಟ್ರಾನಿಕ್​ ಸಿಟಿಗೆ ಹೋಗಬೇಕಿದ್ದರೆ ಕೊನಪ್ಪನ ಅಗ್ರಹಾರಕ್ಕೆ ಟಿಕೆಟ್​ ಖರೀದಿ ಮಾಡಿಬೇಕು. ಅದೇ ರೀತಿ ಕೊನಪ್ಪನ ಅಗ್ರಹಾರಕ್ಕೆ ಹೋಗಬೇಕಿರುವ ವ್ಯಕ್ತಿ ಎಲೆಕ್ಟ್ರಾನಿಕ್​ ಸಿಟಿಗೆ ಟಿಕೆಟ್​ ಖರೀದಿ ಮಾಡಬೇಕಾಗಿದೆ. ಜನರಿಗೆ ಟಿಕೆಟ್ ಖರೀದಿ ಸಂದರ್ಭದಲ್ಲಿ ತುಂಬಾ ಗೊಂದಲ, ಸಮಸ್ಯೆ ಸೃಷ್ಟಿಯಾಗಿದೆ, ಎಲೆಕ್ಟ್ರಾನಿಕ್ ಸಿಟಿಗೆ ಹೋಗಬೇಕಾದ ಪ್ರಯಾಣಿಕ ಎಲೆಕ್ಟ್ರಾನಿಕ್​ ಸಿಟಿಗೆ ಟಿಕೆಟ್​ ಪಡೆಯಬೇಕು, ಕೊನಪ್ಪನ ಅಗ್ರಹಾರಕ್ಕೆ ಹೋಗಬೇಕಿರುವ ಪ್ರಯಾಣೀಕ ಕೊನಪ್ಪನ ಅಗ್ರಹಾರಕ್ಕೆ ಟಿಕೆಟ್ ಪಡೆದು ಹೋದರೆ ತಾವು ತಲುಪಬೇಕಿರುವ ಸ್ಥಳ ಬಿಟ್ಟು ಬೇರೆ ಕಡೆ ಹೋಗುವಂತಾಗಿದೆ.

ನಮ್ಮ ಮೆಟ್ರೀ ಮಾಡಿರುವ ಅಚಾತುರ್ಯದ ಬಗ್ಗೆ ಸಾಮಾನ್ಯ ಜನರು ಸೋಶಿಯಲ್ ಮೀಡಿಯಾ ಮೂಲಕ ಅಸಮಾಧನ ಹೊರ ಹಾಕ್ತಿದ್ದಾರೆ. ನಿಲ್ದಾಣಗಳ ಸ್ಥಳ ನಿಗದಿಯಲ್ಲಿ Namma Metro ಅಧಿಕಾರಿಗಳು ಮಾಡಿರುವ ಎಡವಟ್ಟಿನ ಬಗ್ಗೆ ಕಿಡಿಕಾರುತ್ತಿದ್ದಾರೆ. ಜನರ ಆಕ್ರೋಶದ ಬೆನ್ನಲ್ಲೇ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡಾ BMRCL ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಕೂಡಲೇ ನಮ್ಮ ಮೆಟ್ರೋ ಅಧಿಕಾರಿಗಳು ಸಮರ್ಪಕವಾದ ನಿರ್ಧಾರ ತೆಗೆದುಕೊಂಡು ಅದಲು ಬದಲು ಆಗಿರುವ ನಿಲ್ದಾಣಗಳನ್ನು ಸರಿ ಮಾಡುವ ಕೆಲಸ ಮಾಡಬೇಕಿದೆ. ಇಲ್ಲದಿದ್ರೆ ಇದು ಮುಂದಿನ ದಿನಗಳಲ್ಲಿ ಸಮಸ್ಯೆಯಾಗಿಯೇ ಉಳಿಯುತ್ತದೆ.

Related posts

Lingayath and Veershaiva are not same; ವೀರಶೈವಾ – ಲಿಂಗಾಯತ ಎರಡೂ ಬೇರೆ ಬೇರೆ.. ಮಾತೆ ಗಂಗಾದೇವಿ..

Publicspot

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿ

admin

ರಾಜ್ಯಮಟ್ಟದ ಸ್ವಾತಂತ್ರ‍್ಯ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ: ಮಹೇಶ್ವರ್ ರಾವ್.

admin

ಸಾವಿರ ದಿನಗಳ ಪೂರೈಕೆ ಸಂಭ್ರಮದಲ್ಲಿರುವ ಸರ್ಕಾರದಿಂದ ಇದೆಂಥಾ ಎಡವಟ್ಟು..?

Publicspot

ಹಾಸನಾಂಬೆ ದರ್ಶನಕ್ಕೆ ಹೋಗುವ ಮುನ್ನ ಹುಷಾರು.. ಜನಸಂಖ್ಯೆ ನಿಯಂತ್ರಣಕ್ಕೆ ಪರದಾಟ..!

Publicspot

ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ

admin