The Public Spot
ಆಹಾರ - ಆರೋಗ್ಯ

ಬೆಂಗಳೂರಿಗರ ಸೀಜನಲ್​ ಅಸ್ತಮಾಗೆ ಪಾರಿವಾಳ ಕಾರಣ ಅಂದ್ರೆ ನಂಬ್ತೀರಾ..?

ಬೆಂಗಳೂರಿನ ಜನರನ್ನು ಬಿಟ್ಟು ಬಿಡದಂತೆ ಕಾಡುವ ಸಮಸ್ಯೆ ಎಂದರೆ ಅಸ್ತಮಾ. ಅದರಲ್ಲೂ ಋತುಗಳು ಬದಲಾವಣೆ ಆಗುವಾಗ ಸೀಸಜನಲ್​ ಅಸ್ತಮಾ ಎನ್ನುವ ಹೊಸ ಸಮಸ್ಯೆಯೊಂದು ಬೆಂಗಳೂರಿಗರನ್ನು ಬಲವಾಗಿ ಕಾಡುತ್ತಿದೆ. ಈ ರೀತಿಯ ಸಮಸ್ಯೆಗೆ ಒಳಗಾದವರು ವರ್ಷಪೂರ್ತಿ ಅಸ್ತಮಾ ಸಮಸ್ಯೆಯಿಂದ ಬಳಲುವುದಿಲ್ಲ. ಬದಲಿಗೆ ಮಳೆಗಾಲ ಆರಂಭದಲ್ಲಿ ಒಂದೆರಡು ತಿಂಗಳು, ಆ ನಂತರ ಚಳಿಗಾಲದ ಆರಂಭದಲ್ಲಿ, ಬೇಸಿಗೆ ಕಾಲದ ಆರಂಭದಲ್ಲಿ ಹೀಗೆ.. ವರ್ಷಕ್ಕೆ ಮೂರ್ನಾಲ್ಕು ಬಾರಿ ಅಸ್ತಮಾ ಸಮಸ್ಯೆಯಿಂದ ಬಳಲುವುದು ಸರ್ವೇ ಸಮಾನ್ಯವಾಗಿದೆ.

ಬೆಂಗಳೂರಿನಲ್ಲಿ ವಾತಾವರಣ ಚೆನ್ನಾಗಿದೆ, ಆದರೆ ವಾಯುಮಾಲಿನ್ಯ ಮಟ್ಟ ಹೆಚ್ಚಾಗಿರುವುದರಿಂದ ಅಸ್ತಮಾ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇತ್ತೀಚಿಗೆ ಎಲ್ಲರನ್ನೂ ಸೀಸಜನಲ್​ ಅಸ್ತಮಾ ಕಾಡುವುದಕ್ಕೆ ಶುರು ಮಾಡಿದೆ. ಇದಕ್ಕೆ ಪ್ರಮುಖ ಕಾರಣ ಅಂದರೆ ನಿಮ್ಮ ಮನೆ ಮೇಲೆ, ಮನೆ ಮುಂದೆ ಹಾರಿ ಬರುವ ಪ್ರೇಮ ಪಕ್ಷಿ ಪಾರಿವಾಳ. ಸಿಂಬಲ್​ ಆಫ್​ ಲವ್​ ಎಂದು ಹೇಳಲ್ಪಡುವ ಈ ಪಾರಿವಾಳಕ್ಕೂ ಅಸ್ತಮಾ ಸಮಸ್ಯೆಗೂ ಅವಿನಭಾವ ಸಂಬಂಧವಿದೆ ಎನ್ನುತ್ತಾರೆ ವೈದ್ಯರು. ನಿಮ್ಮ ಮನೆಯಲ್ಲಿ ಆಹಾರ ಪದಾರ್ಥಗಳನ್ನು ಒಣಗಲು ಹಾಕಿದ್ದಾಗ ಅಥವಾ ಮನೆ ಮುಂದೆ ಬಂದು ಹಾರುವಾಗ ಅದರ ರೆಕ್ಕೆ ಪುಕ್ಕಗಳು ಉದುರಿರಬಹುದು. ಜೊತೆಗೆ ಪಾರಿವಾಳ ಪಿಕ್ಕೆ ಹಾಕಿರಬಹುದು. ಇದು ಅಸ್ತಮ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಅನ್ನೋದು ದೃಢಪಟ್ಟಿದೆ.

ಎಸಿಯಲ್ಲಿ ಕುಳಿತು ಕೆಲಸ ಮಾಡುವುದು, ರಸ್ತೆಗಳಲ್ಲಿ ತುಂಬಾ ದೂರ ಪ್ರಯಾಣ ಮಾಡುವಾಗ ರಸ್ತೆಯ ಧೂಳನ್ನು ಸೇವನೆ ಮಾಡುವುದು, ವಾಹನಗಳಿಂದ ಹೊರಬರುವ ಹೊಗೆಯನ್ನೂ ಸೇವಿಸಿದರೂ ಅಸ್ತಮಾ ಸಂಬಂಧಿತ ಹಾಗು ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಅದಕ್ಕೂ ಮಿಗಿಲಾಗಿ ಪಾರಿವಾಳಗಳು ನಿಮ್ಮ ಅಕ್ಕಪಕ್ಕದಲ್ಲಿ ಸಂಪರ್ಕಕ್ಕೆ ಬರುತ್ತಿವೆ ಎನ್ನುವಾಗ ಬರುವ ಅಸ್ತಮಾ ಸಮಸ್ಯೆ ಖಂಡಿತವಾಗಿಯೂ ಪಾರಿವಾಳಗಳಿಂದಲೇ ಬರುತ್ತದೆ ಎನ್ನುವುದು ವೈದ್ಯಲೋಕ ಕಂಡುಕೊಂಡಿರುವ ಸತ್ಯ. ಸರ್ವೇ ಸಾಮಾನ್ಯವಾಗಿ ಉಸಿರಾಟದ ಸಮಸ್ಯೆ ಎಂದು ಆಸ್ಪತ್ರೆಗೆ ಹೋದಾಗ ಪಾರಿವಾಳಗಳನ್ನು ಸಾಕಿದ್ದೀರಾ..? ಯಾವುದಾದರೂ ಪ್ರಾಣಿಗಳನ್ನು ಸಾಕಿದ್ದೀರಾ..? ಎನ್ನುವ ಪ್ರಶ್ನೆ ವೈದ್ಯರಿಂದ ಪುಟಿದು ಬರುತ್ತದೆ.

ನಾಳೆ ಬೆಂಗಳೂರಿಗೆ ಬರ್ತಿದ್ದಾರೆ ಪ್ರಧಾನಿ ಮೋದಿ.. ಏನೆಲ್ಲಾ ಬದಲಾವಣೆ..? – The Public Spot

ಪಾರಿವಾಳ ಭಾರತಕ್ಕೆ ಸೇರಿದ ಪಕ್ಷಿಯಲ್ಲ, ಅದನ್ನು ಬ್ರಿಟೀಷರು ಭಾರತಕ್ಕೆ ವ್ಯಾಪಾರ ಮಾಡಲು ಬಂದಾಗ ಪಾರಿವಾಳವನ್ನೂ ಜೊತೆಯಲ್ಲೇ ತಂದಿದ್ದರು. ಅದನ್ನು ಅಂಚೆ ಕಳುಹಿಸಲು ಬಳಸಿಕೊಳ್ಳುತ್ತಿದ್ದರು. ಈ ರೀತಿಯಾಗಿ ಪಾರಿವಾಳ ಸಂದೇಶ ವಾಹಕವಾಗಿ ಬಳಕೆ ಆಗ್ತಿತ್ತು. ಪಾರಿವಾಳಗಳು ಇಲಿಯಂತೆ ರೋಗಕಾರಕ ಎನ್ನುವುದು ದೃಢಪಟ್ಟಿದೆ. ಅವುಗಳಿಂದ ದೂರ ಇರುವುದು ಒಳಿತು. ಇನ್ನೊಂದು ವಿಶೇಷ ಎಂದರೆ ಪಾರಿವಾಳಗಳು ವಾಸ ಮಾಡುವ ಜಾಗದಲ್ಲಿ ಬೇರೆ ಸಣ್ಣಪುಟ್ಟ ಪಕ್ಷಿಗಳು ಕಾಣಸಿಗುವುದಿಲ್ಲ. ಬೆಂಗಳೂರಲ್ಲಿ ಪಾರಿವಾಳಗಳ ಸಂತತಿ ಎಷ್ಟೊಂದು ಹೆಚ್ಚಳ ಆಗಿದೆ ಎಂದರೆ ರಾಶಿ ರಾಶಿ ಆಹಾರ ಹಾಕಿದರೂ ಕೆಲವೇ ನಿಮಿಷಗಳಲ್ಲಿ ತಿಂದು ಮುಗಿಸುತ್ತವೆ. ಹಂದಿಯ ಹಾಗೆ ಕೊಳಚೆಯಲ್ಲೂ ಬದುಕಬಲ್ಲ ಏಕೈಕ ಪಕ್ಷಿ ಪಾರಿವಾಳ ಎನ್ನಬಹುದು. ಪಾರಿವಾಳಗಳಿಂದ ದೂರ ಇದ್ದಷ್ಡೂ ಸೀಜನಲ್​ ಅಸ್ತಮಾದಿಂದ ದೂರ ಉಳಿಯಬಹುದಾಗಿದೆ.

Related posts

Rat Fever: ಕರ್ನಾಟಕಕ್ಕೆ ವಕ್ಕರಿಸಿದೆ ಇಲಿ ಜ್ವರ.. ಮಳೆಯಿಂದ ಸೋಂಕು ಹೆಚ್ಚಳ..

Publicspot

Hospital Bill new Rules: ಖಾಸಗಿ ಆಸ್ಪತ್ರೆಗಳಲ್ಲಿ ಮೊದಲೇ ಬಿಲ್ ಕೇಳುವಂತಿಲ್ಲ​ .. ಸರ್ಕಾರದ ಹೊಸ ರೂಲ್ಸ್​..

Publicspot

5 Kg Ration Cut; ರೇಷನ್​ ಕಾರ್ಡ್​ಗೆ ಇನ್ಮುಂದೆ 10 ಕೆ.ಜಿ ಅಕ್ಕಿ ಸಿಗಲ್ಲ.. ಕಾರಣ ಗೊತ್ತಾ..?

Publicspot

New BPL Card: ರೇಷನ್​ ಕಾರ್ಡ್​ ಇಲ್ಲದವರಿಗೆ ಸರ್ಕಾರದಿಂದ ಗುಡ್​ ನ್ಯೂಸ್​..

Publicspot