The Public Spot
Uncategorizedರಾಜ್ಯ

ಕುರುಬರಿಗೆ ಎಸ್ಟಿ ಮೀಸಲಾತಿ ಕೇಂದ್ರ ವಾಪಸ್‌ ಕಳುಹಿಸಿದೆ.. ನಾನು ಮತ್ತೆ ಕಳುಹಿಸುತ್ತೇನೆ..

ಕಲಬುರಗಿಯಲ್ಲಿ ಕುರುಬ ಸಮಾಜದಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಕಲಬುರಗಿ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ. ಅಜಯಸಿಂಗ್, ಕನಕಗುರು ಪೀಠದ ಸಿದ್ದರಾಮಾನಂದ ಪುರಿ ಸ್ವಾಮೀಜಿ, ಹವಾ ಮಲ್ಲಿನಾಥ ಸ್ವಾಮೀಜಿ ಸೇರಿ ಇನ್ನಿತರರು. ಕಲಬುರಗಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇತ್ತಿಚಿನ ದಿನಗಳಲ್ಲಿ ಸಂಗೊಳ್ಳಿ ರಾಯಣ್ಣ ಬಗ್ಗೆ ಹೆಚ್ಚು ಪ್ರಚಾರ ಆಗುತ್ತಿರುವುದು ಸಂತಸ ತಂದಿದೆ. ವಿಚಾರ, ಸಂಗೊಳ್ಳಿ ರಾಯಣ್ಣ ಇಂದಿನ ಯುವಕರಿಗೆ ಸ್ಪೂರ್ತಿ. ಅವರು ಇರುವಂತೆ ಮಾಡಲು ರಾಯಣ್ಣ ಯಾವಾಗಲೂ ಪ್ರಾಧಿಕಾರ ರಚನೆ ಮಾಡಿದ್ದೇವೆ. 100 ಡಾಲರ್ ಜಮೀನು ಕೊಟ್ಟು ಅಭಿವೃದ್ದಿ ಮಾಡಿದ್ದು, ಅದು ಈಗ ಪ್ರೇಕ್ಷಣಿಯ ಸ್ಥಳವಾಗಿದೆ. ಕುರುಬ ಸಮಾಜ ಶೇಕಡ, 7% ರಷ್ಟು ಇರುವ ಜನಾಂಗ. ಶಿಕ್ಷಣದಲ್ಲಿ ಈ ಸಮಾಜ ಬಹಳ ಹಿಂದಿದೆ. ಎಲ್ಲರೂ ವಿದ್ಯಾವಂತರಾಗುವುದು ಅಗತ್ಯ ಮತ್ತು ಅತ್ಯಗತ್ಯ.

ಎಲ್ಲಾ ಶೋಷಿತ ವರ್ಗಕ್ಕೂ ಒಂದು ಗುರುಪೀಠ ಬೇಕು. ಅದಕ್ಕಾಗಿಯೇ ನಾನು 1992 ರಲ್ಲಿ ಕುರುಬ ಸಮಾಜಕ್ಕೆ ಗುರುಪೀಠ ಹುಟ್ಟು ಹಾಕಿದೆ. ಸಮಾಜದಲ್ಲಿ ಅಸಮಾನತೆ ನಿರ್ಮಾಣವಾಗಲು ಮುಖ್ಯ ಕಾರಣ ಜಾತಿ ವ್ಯವಸ್ಥೆ. ಶೂದ್ರ ವರ್ಗದ ಜನ ಅಕ್ಷರದಿಂದ ವಂಚಿತರಾದರು ಇದರಿಂದ ಅಸಮಾನತೆ ಮೂಡಿದೆ. ಸಮಾನತೆಯ ಸಮಾಜ, ಜಾತಿ ರಹಿತ, ವರ್ಗ ರಹಿತ ಸಮಾಜ ಆಗಬೇಕು. ಮೊದಲ ಬಾರಿ ಸಿಎಂ ಆಗಿದ್ದಾಗ ಅಸಮಾನತೆ ಹೋಗಲಾಡಿಸಲು ಅನೇಕ ಕಾರ್ಯಕ್ರಮಗಳನ್ನು ತಂದಿದ್ದೇನೆ. ಗ್ಯಾರೆಂಟಿ ಯೋಜನೆಗಳು ಸಹ ಅಸಮಾನತೆ ಹೋಗಲಾಡಿಸುವ ಸಂಕಲ್ಪದಿಂದ ಕೂಡಿವೆ. ನಮ್ಮ ದೇಶದ ಜಾತಿ ವ್ಯವಸ್ಥೆ ಬಹಳ ಆಳವಾಗಿ ಬೇರು ಬಿಟ್ಟಿದೆ. ನಮ್ಮ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ.. ಚಲನೆ ಇಲ್ಲದೇ ಬದಲಾವಣೆ ಸಾಧ್ಯವಿಲ್ಲ ಅಂತಾಗಿದೆ.

ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಟರಾಗಿ, ಆಗ ಮಾತ್ರ ಅಸಮಾನತೆ ದೂರವಾಗಲು ಸಾಧ್ಯ ಎಂದು ಕುರುಬ ಸಮುದಾಯದವರಿಗೆ ಸಿಎಂ ಕರೆ ನೀಡಿದ್ದು, ನೀವೆಲ್ಲರೂ ಜಾತಿ ಸಮೀಕ್ಷೆಯಲ್ಲಿ ಕುರುಬ ಅಂತ ಬರೆಯಬೇಕು. ಬರೆಯದೇ ಹೋದರೆ ನಿಮ್ಮ ಸಂಖ್ಯೆ ಕಡಿಮೆ ಆಗುತ್ತದೆ. ಆಗ ನಿಮಗೆ ಸೌಲಭ್ಯ ಸಿಗೋದು ಸಹ ಕಡಿಮೆ ಆಗುತ್ತದೆ. ಇದು ಬರೀ ಕುರುಬರಿಗಾಗಿ ಮಾಡುತ್ತಿರುವ ಸಮೀಕ್ಷೆ ಅಲ್ಲ. ಎಲ್ಲಾ ಜಾತಿ ಜನಾಂಗದವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಗಣತಿ ಮಾಡಲಾಗುತ್ತಿದೆ. ಗೊಂಡ ಸಮಾಜ ಎಸ್ಟಿಗೆ ಸೇರಿದೆ. ಇದೀಗ ಎಲ್ಲಾ ಕುರುಬರನ್ನ ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೇನೆ. ಆದರೆ ಕೇಂದ್ರದಿಂದ ನಮಗೆ ಶಿಫಾರಸ್ಸು ಬಂದಿದೆ. ಸ್ಪಷ್ಟೀಕರಣ ಕೊಟ್ಟು ಮತ್ತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ..

ಕುರುಬ ಸಮಾಜದ ಮಠ ಮಾಡಿದ್ದು ನಾನು, ಇಡೀ ರಾಜ್ಯ ಸುತ್ತಿದ್ದು, ಗುರುಪೀಠ ಮಾಡಿದ್ದು, ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಮಾಡಿದ್ದು ನಾನು. ಆದರೆ ಹೆಸರು ತಗೊಳ್ಳೋದು ಇನ್ಯಾರೋ ಆಗಬಾರದು. ಇಂತಹ ಡೋಂಗಿ ಜನರ ಬಗ್ಗೆ ಎಚ್ಚರಿಕೆಯಿಂದ ಇರಿ. ನಾನು ನಿಮ್ಮ ಜೊತೆಗಿದ್ದೇನೆ.. ನಿಮ್ಮ ಪ್ರೀತಿ ಅಭಿಮಾನ ಯಾವಾಗಲೂ ಇರಲಿ, ನಾನು ರಾಜಕೀಯ ಮಾಡುತ್ತಿರುವುದೇ ಸಾಮಾಜಿಕ ನ್ಯಾಯಕ್ಕೋಸ್ಕರ. ಸಿಎಂ ಆಗಿರಲಿ, ಇಲ್ಲದೇ ಇರಲಿ.. ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಜೊತೆಗೆ ನಾನು ಇರ್ತೇನೆ ಎಂದು ಶಪಥ ಮಾಡಿದ್ದೇನೆ.

ಸಚಿವ ಬೈರತಿ ಸುರೇಶ್ ಮಾತನಾಡಿ, ಕಲಬುರಗಿ ನಗರದ ಸಿಟಿ ಬಸ್ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನೆ ಮಾಡಿದ್ದಾರೆ. ಈ ದೇಶ ಕಂಡ ಪ್ರಾಮಾಣಿಕ ರಾಜಕಾರಣಿ ಅಂದ್ರೆ ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರು ಕುರುಬ ಸಮಾಜದಲ್ಲಿ ಹುಟ್ಟಿದ್ದು ನಮಗೆಲ್ಲ ಹೆಮ್ಮೆ. ಎಲ್ಲಾ ಸಮಾಜಗಳಿಗೂ ಒಳ್ಳೆಯದು ಮಾಡುವ ಮುಖ್ಯಮಂತ್ರಿ ಅಂದ್ರೆ ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರನ್ನು ಯಾವುದೇ ಕಾರಣಕ್ಕೂ ಯಾರು ಅಲ್ಲಾಡಿಸಲು ಆಗಲ್ಲ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಬೆಂಬಲ ಇರುವವರೆಗೂ ಸಿದ್ದರಾಮಯ್ಯರನ್ನು ಅಲ್ಲಾಡಿಸಲು ಯಾರಿಗೂ ಆಗಲ್ಲ. ಹೈಕಮಾಂಡ್ ಅವರೆಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಸಿದ್ದರಾಮಯ್ಯ ಜೊತೆ ಅವರೆಲ್ಲರೂ ನಿಲ್ಲುತ್ತಾರೆ ಎನ್ನುವ ಮೂಲಕ ಸಿಎಂ ಸ್ಥಾನದ ಬಗ್ಗೆ ಅಪನಂಬಿಕೆ ಬೇಡ ಅನ್ನೋ ಸಂದೇಶ ರವಾನಿಸಿದ್ದಾರೆ.

Related posts

Abhiman Studio: ಅಭಿಮಾನ್​ ಸ್ಟುಡಿಯೋ ವಶಕ್ಕೆ ಪಡೆದ ಸರ್ಕಾರ.. ಮತ್ತೆ ತಲೆ ಎತ್ತುತ್ತಾ ಸ್ಮಾರಕ..?

Publicspot

Rain Alert: ರಾಜ್ಯದಲ್ಲಿ ಎರಡು ದಿನ ಮಳೆಯಬ್ಬರ.. ಯಾವೆಲ್ಲಾ ಜಿಲ್ಲೆಗಳಿಗೆ ಅಲರ್ಟ್‌..!?

Publicspot

ಲ್ಯಾಂಡ್‌ ಲಾರ್ಡ್‌ ಸಿನಿಮಾಗೆ ತೆರಿಗೆ ವಿನಾಯ್ತಿ ಕೊಟ್ಟ ರಾಜ್ಯ ಸರ್ಕಾರ!

Publicspot

High Court News: ರಾಜ್ಯದಲ್ಲಿ ಮತ್ತೆ ರಸ್ತೆ ಇಳಿಯುತ್ತವೆ ಬೈಕ್​ ಟ್ಯಾಕ್ಸಿ..!?

Publicspot

ಜನ ಮೆಚ್ಚಿದ ಅಧಿಕಾರಿ ಮಹಾಂತೇಶ್‌ ಬೀಳಗಿ ಇನ್ನಿಲ್ಲ.. ಅಪಘಾತದಲ್ಲಿ ನಿಧನ

Publicspot

Banu Musthaq Angree: ಸಾಹಿತಿ ಬಾನು ಮುಷ್ತಾಕ್​ ಕಿಡಿಕಾರಿದ್ದು ಯಾಕೆ..?

Publicspot