The Public Spot
ಅಂಕಣ

TVK Party Vijay Stamped; 41 ಜನರ ಸಾವು ಮತ್ತು ತಮಿಳುನಾಡು ರಾಜಕೀಯ.. ಎಲ್ಲಿದೆ ದೋಷ..?

ತಮಿಳುನಾಡಿನ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ನಟ ವಿಜಯ್‌ ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ ಎನ್ನುವುದು ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳಿಗೆ ಮನವರಿಕೆ ಆಗಿದೆ. TVK ಪಕ್ಷ ಕಟ್ಟಿ ತಮಿಳುನಾಡಿನಾದ್ಯಂತ ಸುತ್ತತ್ತಾ ಜನರನ್ನು ಸೆಳೆಯುತ್ತಿರುವ ಪರಿಯನ್ನು ನೋಡಿದಾಗ ಎಲ್ಲರನ್ನೂ ಒಂದು ಕ್ಷಣ ಆತಂಕ ಎದುರಾಗುವುದು ಸರ್ವೇ ಸಾಮಾನ್ಯ. ಮೊನ್ನೆ ತಮಿಳುನಾಡಿನ ಕರೂರಿನಲ್ಲೂ ಇದೇ ರೀತಿ ಪಕ್ಷ ಸಂಘಟನೆ ಱಲಿ ಹಮ್ಮಿಕೊಂಡಿದ್ರು. 9 ಮಂದಿ ಮಕ್ಕಳು, 18 ಮಹಿಳೆಯರು, 14 ಜನ ಪುರುಷರು ಸೇರಿ 41 ಜನರು ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಜನರು ಆಸ್ಪತ್ರೆ ಸೇರಿದ್ದಾರೆ. ಇದಕ್ಕೆ ಯಾರು ಹೊಣೆ ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ.

41 ಜನರ ಸಾವಿಗೆ ಕಾರಣ ನಟ ವಿಜಯ್​ ಎಂದು ಸರ್ಕಾರದ ಮೂಲಗಳು ಹಾಗೂ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಬಹಿರಂಗ ಸಭೆ ಆರಂಭ ಆದ 5 ಗಂಟೆಗಳ ಬಳಿಕ ನಟ ವಿಜಯ್​ ಸ್ಥಳಕ್ಕೆ ಆಗಮಿಸಿದ್ರು. ಇದ್ರಿಂದ ಕಾಲ್ತುಳಿತ ಆಯ್ತು ಎನ್ನುವುದು ಸರ್ಕಾರದ ವಾದ. ಜೊತೆಗೆ ಕರೂರಿನಲ್ಲಿ (Rally) ರ್ಯಾಲಿ ಮಾಡಲು ಅನುಮತಿ ಕೇಳಿದಾಗ 10 ರಿಂದ 15 ಸಾವಿರ ಜನ ಸೇರ್ತಾರೆ ಅಂತ ಪರ್ಮಿಷನ್‌ ಪಡೆದುಕೊಂಡಿದ್ರು. ಆದರೆ ಆ (Rally) ರ್ಯಾಲಿಯಲ್ಲಿ ಸುಮಾರು 50 ಸಾವಿರ ಜನ ಸೇರಿದ್ರು. ಅದರ ಜೊತೆಗೆ ಮಧ್ಯಾಹ್ನ 3 ಗಂಟೆಗೆ ಬರಬೇಕಿದ್ದ ನಟ ವಿಜಯ್‌, ಸಂಜೆ ಏಳೂವರೆಗೆ ಬಂದಿದ್ದು ಘಟನೆಗೆ ಕಾರಣ ಎನ್ನಲಾಗ್ತಿದೆ.

ಆದರೆ ಟಿವಿಕೆ ಪಕ್ಷದ (Rally) ರ್ಯಾಲಿ ನಡೆಯುವ ಸ್ಥಳದಲ್ಲಿ ಲೋಕಲ್​ ನಾಯಕರು ಎಂಟ್ರಿ ಆಗಿರುವುದು ಗೊತ್ತಾಗಿದೆ. ನಟ ವಿಜಯ್‌ ದಳಪತಿ ತೆರೆದ ಬಸ್‌ ಮೇಲೆ ನಿಂತು ಭಾಷಣ ಮಾಡುವಾಗ ಕರೂರಿನ ಸ್ಥಳೀಯ ರಾಜಕೀಯ ನಾಯಕರು ಜನರ ಮಧ್ಯೆ ಕಾರಿನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಜನನಾಯಕರನ್ನು ಕಳಿಸೋಕೆ ಪೊಲೀಸರು ಜನರ ಮೇಲೆ ಲಾಠಿ ಬೀಸಿದ್ದಾರೆ. ಲಾಠಿ ಬೀಸುವುದು ಗೊತ್ತಾಗ್ತಿದ್ದ ಹಾಗೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಇನ್ನೂ ನಟ ವಿಜಯ್‌ ಭಾಷಣದಲ್ಲಿ ಡಿಎಂಕೆ ಪಕ್ಷದ ವಿ. ಸೆಂಥಿಲ್ ಬಾಲಾಜಿಯನ್ನ 10 ರೂಪಾಯಿ ಮಂತ್ರಿ ಅಂತ ಟೀಕಿಸಿದ್ರು. 50 ಸಾವಿರ ಜನರ ನಡುವೆ ಎಷ್ಟು ಜನ ಡಿಎಂಕೆ ಕಾರ್ಯಕರ್ತರು ಇದ್ರು ಅನ್ನೋದು ತನಿಖೆ ಬಳಿಕ ಗೊತ್ತಾಗ್ಬೇಕಿದೆ.

ಒಂದು ಕಡೆ (Rally) ರ್ಯಾಲಿ ನಡುವೆ ಸ್ಥಳೀಯ ರಾಜಕಾರಣಿಗಳು ಬೇಕೆಂದೇ ಎಂಟ್ರಿ ಕೊಟ್ಟಿದ್ದರು. ಸಾವಿರಾರು ಜನರ ನಡುವೆ ಕಾಲ್ತುಳಿತ ಸಂಭವಿಸಿತು. ಪೊಲೀಸ್ರು ಲಾಠಿ ಚಾರ್ಜ್​ ಮಾಡಿದ್ರು, ಆ್ಯಂಬುಲೆನ್ಸ್​ಗಳೂ ಅದೇ ಮಾರ್ಗದಲ್ಲಿ ಬಂದವು. ವಿಜಯ್​ ಭಾಷಣ ಅರ್ಧಕ್ಕೆ ಮೊಟಕು ಆಯ್ತು. ಈ ಎಲ್ಲಾ ಘಟನೆಗಳ ಹಿಂದೆ ಪಿತೂರಿ ಮಾಡಿದ ವ್ಯಕ್ತಿಯ ಉದ್ದೇಶ ಈಡೇರಿತು. ಕಾಲ್ತುಳಿತ ಆದ ಬಳಿಕ ನಟ ವಿಜಯ್​ ಅಲ್ಲಿಂದ ತೆರಳಿದ್ರು. ಸಂತಾಪದ ಪತ್ರ ಬರೆದ್ರು. ಆದರೆ ಅಲ್ಲಿ ಆಕ್ಟೀವ್ ಆಗಿದ್ದು ಡಿಎಂಕೆ ಮಾಜಿ ಮಂತ್ರಿ ವಿ. ಸೆಂಥಿಲ್​ ಬಾಲಾಜಿ. ಆ ಕೂಡಲೇ ಕರೂರಿಗೆ ಬಂದಿದ್ದ ಸಿಎಂ ಎಂ.ಕೆ ಸ್ಟಾಲಿನ್​. ಚೆನ್ನೈನಿಂದ ಕಾರಿನಲ್ಲೇ ಕರೂರಿಗೆ ಬಂದ ಸಿಎಂ ಹಾಗೂ ಸಚಿವರ ತಂಡ ಗಾಯಾಳುಗಳನ್ನು ಭೇಟಿಯಾಗಿ ಧೈರ್ಯ ತುಂಬಿದ್ರು. ಮೃತಪಟ್ಟ ಶವಗಳ ಎದುರು ಭಾವನಾತ್ಮಕವಾಗಿ ಕಣ್ಣೀರು ಹಾಕಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು.

ಆದರೆ ಕಾಲ್ತುಳಿತಕ್ಕೂ ಮುಂಚಿತವಾಗಿಯೇ (Rally) ರ್ಯಾಲಿ ತಡೆಯುವ ಉದ್ದೇಶ ಸ್ಪಷ್ಟವಾಗಿತ್ತು. (Rally) ರ್ಯಾಲಿ ಮೇಲೆ ಕಲ್ಲು ತೂರಾಟ ಮಾಡಿದ್ರು. ನಟ ವಿಜಯ್‌ ಮೇಲೆ ಚಪ್ಪಲಿ ತೂರಾಟವೂ ನಡೀತು. ಪೊಲೀಸರ ಮೇಲೆ ಕೆಲವು ಕಿಡಿಗೇಡಿಗಳು ಕಲ್ಲು ತೂರಿದ್ರಿಂದ ಲಾಠಿಚಾರ್ಜ್​ ಆಯ್ತು. ಹೀಗಾಗಿಯೇ ಕಾಲ್ತುಳಿತ ಆಗಿದ್ದು ಎನ್ನುಯತ್ತಿದೆ ಟಿವಿಕೆ ಪಕ್ಷ. ಮದ್ರಾಸ್‌ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದ ಟಿವಿಕೆ ಪಾರ್ಟಿ ಸಿಬಿಐ ತನಿಖೆಗೆ ಕೊಡುವಂತೆ ಮನವಿ ಮಾಡಿತ್ತು. ಆದರೆ ಮಧುರೈ ಪೀಠದಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ರಿಂದ ಇವತ್ತು ಮಧುರೈ ಪೀಠದಲ್ಲಿ ವಿಚಾರಣೆ ನಡೆದಿದ್ದು, ಅರ್ಜಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿಕೆ ಆಗಿದೆ. ಕೋರ್ಟ್ ಆದೇಶದ ಬಳಿಕ ತನಿಖೆ ನಡೆದು ಘಟನೆಗೆ ಕಾರಣ ಯಾರು ಅನ್ನೋದು ತಿಳಿಯಬೇಕಿದೆ. ಆದರೆ ಸಾಕಷ್ಟು ಘಟನೆಗಳು ಷಡ್ಯಂತ್ರದ ಭಾಗ ಎನ್ನುವುದಕ್ಕೆ ಪೂರಕ ಆಗಿರುವುದು ಸತ್ಯ.

Related posts

ಕೋಗಿಲು ಕ್ರಾಸ್​ ಡೆಮಾಲಿಷನ್​.. ಮಾನವೀಯತೆಯೋ..? ಮುಸ್ಲಿಂ ಅನ್ನೋ ಕಾರಣಕ್ಕೋ..?

Publicspot

Cm Change Talks; ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ಸತೀಶ್‌ ಜಾರಕಿಹೊಳಿ ಸಿಎಂ ಆಗ್ತಾರಾ..?

Publicspot

ಕಾಂಗ್ರೆಸ್​ನಲ್ಲಿ ಹೈಕಮಾಂಡ್ ಅಂದ್ರೆ ಯಾರು..? ಹೀಗೆ ಮಾಡೋದು ಸರೀನಾ..?

Publicspot

Cricket and Politics; ಕ್ರೀಡೆ ಮತ್ತು ಸ್ನೇಹ.. ಕ್ರಿಕೆಟ್​ ಮತ್ತು ರಾಜಕೀಯ.. ಭಾರತ ತಪ್ಪು ಮಾಡಿದ್ದೆಲ್ಲಿ..?

Publicspot

Legends talks about S.L Byarappa; ಬಾನು ಮುಷ್ತಾಕ್‌ ಮನೆಯಲ್ಲಿ ವಾರ ಕಳೆದಿದ್ರಂತೆ S.L ಭೈರಪ್ಪ..

Publicspot

ಎರಡೂವರೆ ವರ್ಷ ಆಯ್ತು.. ಊಟಕ್ಕೆ ಕರೆದಿರೋ ಸಿಎಂ.. ಬದಲಾವಣೆ ಫಿಕ್ಸಾ..?

Publicspot