The Public Spot
ರಾಜಕೀಯ

Vote Theft.. ರಾಹುಲ್​ ಆರೋಪಕ್ಕೆ ಟೀಕೆ ಮಾಡಿದವರಿಗೆ ಪ್ರಿಯಾಂಕ್​ ತಿರುಗೇಟು..

ಲೋಕಸಭಾ ಚುನಾವಣೆ ವೇಳೆ ಮತಗಳ್ಳತನ ಮಾಡಿರುವ ವಿಚಾರದಲ್ಲಿ ರಾಹುಲ್​ ಗಾಂಧಿ ಮಾಡಿದ ಆರೋಪದ ಬಗ್ಗೆ ಬಿಜೆಪಿ ನಾಯಕರು ಟೀಕೆ ಮಾಡಿದ ವಿಚಾರವಾಗಿ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಟಿ ನಡೆಸಿ ಹೆಚ್ಚಿನ ಮಾಹಿತಿ ನೀಡುವ ಕೆಲಸ ಮಾಡಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿ ಒಂದು ಲಕ್ಷ ‌ಮತದ‌ ವ್ಯತ್ಯಾಸ ಆಗಿದೆ. ಫಾರ್ಮ್ ನಂಬರ್ 16 ರಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಕ್ಷೇತ್ರದಲ್ಲಿ ಮತಗಳ ಏರಿಕೆ ಶೇಕಡ 8ರಷ್ಟು ಹೆಚ್ಚಾಗಿದೆ. ಹೆಚ್ಚಾಗಿರೋ ಮತಗಳ ಬಗ್ಗ ಚುನಾವಣಾ ಅಧಿಕಾರಿ‌ ಡಿಲಿಟ್ ಮಾಡೋಕೆ‌ ಕೊಟ್ಟಿದ್ದೇನೆ ಅಂತಾರೆ. ಮೇಲಿನವರು ಡೆಲಿಟ್ ಮಾಡಿಲ್ಲ ಎಂದು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

( Rahul Gandhi ) ರಾಹುಲ್ ಗಾಂಧಿ ಮಹದೇವಪುರದಲ್ಲಿ ಆರೋಪ ಮಾಡಿದ್ದಾರೆ. ಡುಪ್ಲಿಕೇಟ್​ ಮತಗಳ ಬಗ್ಗೆ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ಗುರುಕೀರ್ತ ಸಿಂಗ್ ಮೂರು ಬಾರಿ ಅರ್ಜಿ ಹಾಕಿದ್ದಾರೆ. ಅವನಿಗೆ ನಾಲ್ಕು ಬಾರಿ ಮತದಾನದ ಹಕ್ಕು ಕೊಟ್ಟಿದ್ದಾರೆ. ಬಿಜೆಪಿ ಸಾಕ್ಷಿ ಕೊಡಿ ಕೊಡಿ ಅಂತಿದೆ. ಬಿಜೆಪಿಯವರಿಗೆ ಕೈ ಮುಗಿದು‌ ಹೇಳ್ತಿ‌ನಿ, ಮೊದಲು ಅಧ್ಯಯನ ಮಾಡಿ. ನೀವು ತಪ್ಪು ಮಾಡಿ ರಾಹುಲ್ ಗಾಂಧಿಗೆ‌ ಚುನಾವಣಾ ಆಯೋಗಕ್ಕೆ ನೋಟಿಸ್‌ ಕೊಡ್ತಿದೆ. ಮತಗಳ ಪರಿಶೀಲನೆ ಮಾಡಲು ಅವಕಾಶ ಕೊಟ್ಟರೆ, ನೀವು ನಾಲ್ಕು ಬಾರಿ ಒಬ್ನ ವ್ಯಕ್ತಿ ಗೆ ಮತ ಅವಕಾಶ ನೀಡಿದ್ದೀರಿ ಎಂದು ದೂರಿದ್ದಾರೆ.

ಸೋನಲ್ ಎನ್ನುವವರು ಐದು ಬಾರಿ ಅರ್ಜಿ ಹಾಕಿದ್ದಾರೆ. ಒಂದೇ ಬೂತನಲ್ಲಿ ಐದು ಬಾರಿ ವೋಟ್ ಹಾಕೋಕೆ ಅವಕಾಶ ನೀಡಿದ್ದಾರೆ. ಹೀಗೆ 40,009 ನಕಲಿ ವೋಟ್ ಹಾಕಿದ್ದಾರೆ. ರೆಸಿಡೆನ್ಸಿ ಕಡ್ಡಾಯವಾಗಿ ಚುನಾವಣಾ ಆಯೋಗ ಪರಿಶೀಲನೆ ಮಾಡಬೇಕು. ನಾವು ಪರಿಶೀಲನೆ ಮಾಡಿದಾಗ ಮನೆ ನಂಬರ್ ಜಿರೋ ಅಂತ ಬಂದಿದೆ. ತಂದೆಯ ಹೆಸರುಗಳ ಕೂಡ ಅಕ್ಷರಗಳ ಹೆಸರಿನಲ್ಲಿ ತಪ್ಪಿದೆ. ಈ ಬಗ್ಗೆ ಮಹದೇವಪುರದಲ್ಲಿ ಆರ್‌ಟಿಐ ಅರ್ಜಿಗೆ ಮಾಹಿತಿ ಕೊಟ್ಟಿದ್ದಾರೆ. ಆದ್ರೆ ಸಿ ವಿ ರಾಮನ್‌ನಗರದ‌ ಮಾಹಿತಿ‌ ಕೊಡಲ್ಲ ಅಂತಾರೆ. ಚುನಾವಣಾ ಆಯೋಗದ ‌ಬಗ್ಗೆ ಮಾಹಿತಿ ಕೊಡಲು ಬರಲ್ಲ ಅಂತಾರೆ ಇದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಮಹದೇವಪುರಕ್ಕಿಂತ ಹೆಚ್ಚಿನ ಮಾಹಿತಿ‌ ಸಿವಿ ರಾಮನಗರದಲ್ಲಿ ಏನಿದೆ..? ಎಂದು ಪ್ರಶ್ನಿಸಿರುವ ಪ್ರಿಯಾಂಕ್​ ಖರ್ಗೆ, ಗೈಡ್ ಲೈನ್ ಒಂದು ಕ್ಷೇತ್ರಕ್ಕೊಂದು, ಇನ್ನೊಂದು ಕ್ಷೇತ್ರಕ್ಕೆ‌ ಬೇರೆ ಬೇರೆ ಇದ್ಯಾ? ಮತದಾರರ ಮಾಹಿತಿ ನಮಗೆ ಕೊಡ್ತಿಲ್ಲ, ನಮಗೆ ಬೇಡ ರಾಜ್ಯದ ಜನರಿಗೆ ಕೊಡಿ. ಮಾಹಿತಿ ಕೊಡಿ, ಸಿಸಿಟಿವಿ ದಾಖಲೆ ಕೊಡಿ. ಚುನಾವಣಾ ಆಯೋಗ ಯಾರ ಒತ್ತಡದ ಮೇಲೆ ಕೆಲಸ ಮಾಡ್ತಿದೆ..? ಬಿಜೆಪಿಯವರಿಗೂ ಬೇಕಾದರೂ ಮಾಹಿತಿ ಕೊಡಿ. ನಿಮಗೂ ಸಿಬಿಐ, ಐಟಿ ಇಡಿ ಮೂಲಕ ಬೆದರಿಕೆ ಹಾಕ್ತಿದ್ಯಾ? ನಂಬರ್ 35 ಕ್ಕೆ ಎಲ್ಲರೂ ಹೋಗಿ ಬಂದಿದ್ದೀರಿ. 10 ರಿಂದ 15 ಅಡಿ ಇರೋ ಮನೆಯಲ್ಲಿ 80 ಜನರು ಇರೋಲೆ‌ ಆಗತ್ತಾ? ಎಂದು ಮಾಧ್ಯಮದವರನ್ನು ಪ್ರಶ್ನೆ ಮಾಡಿದ್ದಾರೆ.

ಇದರ ಬಗ್ಗೆ ಕೂಡ ಎಲೆಕ್ಷನ್ ಗೈಡ್‌ಲೈನ್ ಏನು ಹೇಳಿದೆ..? ಎಂದು ಹೇಳಿರುವ ಪ್ರಿಯಾಂಕ್​ ಖರ್ಗೆ ಒಂದು ಮನೆಯಲ್ಲಿ 10 ಕ್ಕೂ ಹೆಚ್ಚು ಮತದಾರರಿದ್ದರೆ ಹೋಗಿ ಪರಿಶೀಲನೆ ಮಾಡಬೇಕು. ಪರಿಶೀಲನೆ ಆಗಿದ್ರೆ ಒಂದೇ ಅಡ್ರೆಸ್‌ನಲ್ಲಿ ಅಷ್ಟು ಜನ ಹೇಗೆ‌ ಸಿಗ್ತಾರೆ..? ಇದರಲ್ಲಿ 9 ಮಹಿಳೆ, 71 ಜನರು ಪುರುಷರಿದ್ದಾರೆ. ಇದರ ಬಗ್ಗೆ ಚುನಾವಣಾ ಆಯೋಗ ಹೇಗೆ ಅವಕಾಶ ಕೊಡ್ತು..? ಒಂದು ಕೋಣೆಯಲ್ಲಿ 46 ಜನರಿರುವ ಮಾಹಿತಿ ಇದೆ. ನಾವು, ಮಗ, ಹೆಂಡತಿ ಇದ್ದೀವಿ ಅಷ್ಟೆ ಅಂತ ಅಲ್ಲಿನ ಮಾಲೀಕರು ಹೇಳ್ತಿದ್ದಾರೆ. ಬಿಯರ್ ಕ್ಲಬ್ ನಲ್ಲಿ 68 ಜನರಿದ್ದಾರೆ ಆದ್ರೆ ಅಲ್ಲಿ ಯಾರೂ ವಾಸವಾಗಿಲ್ಲ. ಇದಕ್ಕೂ ಚುನಾವಣಾ ಆಯೋಗ ಮಾರ್ಗಸೂಚಿ ಇದೆ ಎಂದು ಮಾಹಿತಿ ನೀಡಿದ್ದಾರೆ.

Related posts

ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ

admin

Congress MP Opposed Cm Decision; ಸಿದ್ದರಾಮಯ್ಯ ಆಸೆಗೆ ತಣ್ಣೀರು ಎರಚಿದ ಕಾಂಗ್ರೆಸ್‌ ಸಂಸದ

Publicspot

Congress and Kannadigas; ಕನ್ನಡಿಗರ ಮೇಲಿನ ಪ್ರೀತಿಗಿಂತಾ ಅನ್ಯರೇ ಕಾಂಗ್ರೆಸ್ಗೆ ಮುಖ್ಯನಾ..?

Publicspot

ತ್ರಿಭಾಷಾ ಸೂತ್ರ ವಿಚಾರದಲ್ಲಿ ಕಾಂಗ್ರೆಸ್‌ ನಿಲುವು ಏನು..? ಹಿಂದಿ ಬೇಡ.. ಉರ್ದು ಬೇಕಾ..?

Publicspot

ಬೀಸೋ ದೊಣ್ಣೆಯಿಂದ ಪಾರಾಗುವ ಪ್ರಯತ್ನ ಮಾಡಿತೇ ಕಾಂಗ್ರೆಸ್‌ ಸರ್ಕಾರ..?

Publicspot

DCM DKS Apologize: ಡಿಕೆ ಶಿವಕುಮಾರ್​​ ಕ್ಷಮಾಪಣೆ ಕೇಳುತ್ತಲೇ ಮೂರ್ಖರು ಎಂದಿದ್ಯಾಕೆ..?

Publicspot