The Public Spot
ರಾಜ್ಯ

ನಿಮ್ಮ ಗ್ಯಾರಂಟಿ ಯಾರಿಗೆ ಬೇಕು.. ಗೊಬ್ಬರ ಕೊಡ್ರಿ.. ಸಚಿವರಿಗೆ ತರಾಟೆ..

ಮಂಡ್ಯ; ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿತ್ತು. ಅದರ ಪ್ತರಿಫಲ ಎಂಬಂತೆ ಕಾಂಗ್ರೆಸ್​ ಪಕ್ಷ ಭರ್ಜರಿ ಜಯ ದಾಖಲಿಸಿ ಅಧಿಕಾರಕ್ಕೂ ಬಂತು. ಆದರ ಲಾಭ ಪಡೆಯಲು ಕಾಂಗ್ರೆಸ್​ ಪಾರ್ಟಿ ಸಾಕಷ್ಟು ಪ್ರಯತ್ನ ನಡೆಸಿದ್ರೂ ಅದರಿಂದ ಕೆಲವೊಮ್ಮೆ ಮುಜುಗರಕ್ಕೆ ಒಳಗಾಗುವ ಸನ್ನಿವೇಶಗಳು ಎದುರಾಗುತ್ತಿವೆ.

ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ, ಗ್ಯಾರಂಟಿ ಯೋಜನೆ ಬಗ್ಗೆ ಭಾಷಣ ಮಾಡ್ತಿದ್ದಾಗ ಕೃಷಿ ಸಚಿವರಿಗೆ ವ್ಯಕ್ತಿಯೊಬ್ಬ ತರಾಟೆಗೆ ತೆಗೆದುಕೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಕ್ಷೇತ್ರಕ್ಕೆ 200 ಕೋಟಿ ರೂಪಾಯಿ ಹಣ ಕೊಟ್ಟಿದ್ದೇವೆ, ಮನೆ ಮನೆಗೆ 2 ಸಾವಿರ ಕೊಡ್ತಿದ್ದೀವಿ ಎಂದು ಸಚಿವರು ಭಾಷಣ ಮಾಡುವಾಗ ನಿಮ್ಮ ಗ್ಯಾರಂಟಿ ಹಣ ಯಾರಿಗೆ ಬೇಕು..? ಮೊದಲು ರೈತರಿಗೆ ಗೊಬ್ಬರ ಕೊಡಿ ಎಂದಿದ್ದಾರೆ.

ನಿಮ್ಮ ಗ್ಯಾರಂಟಿ ಹಣ ಯಾರಿಗೆ ಬೇಕು, ರೈತರಿಗೆ ಗೊಬ್ಬರ ಕೊಡಿ ಎನ್ನುತ್ತಿದ್ದ ಹಾಗೆ ತಾಳ್ಮೆ ಕಳೆದುಕೊಂಡ ಕೃಷಿ ಸಚಿವ ಚಲುವರಾಯಸ್ವಾಮಿ, ಆಕ್ರೋಶದಲ್ಲಿ ಕೂಗಾಡಿದ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಸಚಿವ ಎನ್ ಚಲುವರಾಯಸ್ವಾಮಿ ಕೃಷಿ ಉತ್ಪನ್ನ ಮಾರುಕಟ್ಟೆಯ ಬಿತ್ತನೆ ರಾಗಿ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಭಾಷಣ ಮಾಡ್ತಿದ್ದ ವೇಳೆ ಸಚಿವರ ಮಾತಿಗೆ ವ್ಯಕ್ತಿಯೊಬ್ಬರು ಚಾಟಿ ಬೀಸಿದ್ದಾರೆ.

ಮನೆ ಮನೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡ್ತಿದ್ದೇವೆ. ನಾಗಮಂಗಲ ಕ್ಷೇತ್ರಕ್ಕೆ 200 ಕೋಟಿ ರೂಪಾಯಿ ಅನುದಾನ ಕೊಡಲಾಗಿದೆ. ಸರ್ಕಾರದಿಂದ 5 ಗ್ಯಾರಂಟಿ ನೀಡಿದ್ದೇವೆ ಎಂದಾಗ, ಸಚಿವರ ಭಾಷಣ ಕೇಳ್ತಿದ್ದ ವ್ಯಕ್ತಿಯೊಬ್ಬ ನಿಮ್ಮ ಗ್ಯಾರಂಟಿ ಯಾರಿಗೆ ಬೇಕು ಮೊದ್ಲು ರೈತರಿಗೆ ಗೊಬ್ಬರ ಕೊಡಿ ಎಂದಾಗ ಹೈಡ್ರಾಮವೇ ನಡೆದಿದೆ. ಗೊಬ್ಬರ ಸಂಗ್ರಹ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರದ ಜೊತೆಗೆ ಉತ್ತಮ ಸಂವಹನ ಮತ್ತು ಮುಂಜಾಗ್ರತೆ ವಹಿಸದೆ ಸಮಸ್ಯೆ ಆಗಿದ್ದು, ಕೃಷಿ ಸಚಿವರು ಸಂಕಷ್ಟಕ್ಕೆ ಸಿಲುಕಿದಂತೆ ಕಾಣ್ತಿದೆ.

Related posts

Heavy Rain Alert: ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ.. ಶಾಲಾ ಕಾಲೇಜಿಗೆ ರಜೆ ಘೋಷಣೆ!!

Publicspot

Abhiman Studio: ಅಭಿಮಾನ್​ ಸ್ಟುಡಿಯೋ ವಶಕ್ಕೆ ಪಡೆದ ಸರ್ಕಾರ.. ಮತ್ತೆ ತಲೆ ಎತ್ತುತ್ತಾ ಸ್ಮಾರಕ..?

Publicspot

SC ಕ್ಯಾಸ್ಟ್ ಸೆನ್ಸ್; ದಲಿತರನ್ನು ಕ್ರಿಶ್ಚಿಯನ್ ಮಾಡಲು ಹೊರಟಿದೆ ರಾಜ್ಯ ಸರ್ಕಾರ.. ಬಿಜೆಪಿ ನಿಯೋಗ ಕಿಡಿ..

ಯಶವಂತಿ

17.50 ಲಕ್ಷ ಜನರ ಆರೋಗ್ಯ ಖಾತ್ರಿಪಡಿಸುವ ಶುದ್ಧ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿದ ಸಿಎಂ

admin

ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ

admin

ಬಿಜೆಪಿಯವರು ಕರ್ನಾಟಕದಲ್ಲಿ ಇಂತಹ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದಿದ್ದಾರೆಯೇ?

admin