The Public Spot
ಅಪರಾಧ

14 Days Judicial Custody : ಮಹೇಶ್​ ಶೆಟ್ಟಿ ತಿಮರೋಡಿ ಜಾಮೀನು ಅರ್ಜಿ ವಜಾ, ಹಿರಿಯಡ್ಕ ಜೈಲಿಗೆ​ ತಿಮರೋಡಿ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಕ್ರಮ, ಅನಾಚಾರಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದ ಮಹೇಶ್​ ಶೆಟ್ಟಿ ತಿಮರೋಡಿಯನ್ನು ಉಡುಪಿಯ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​ ಸಂತೋಷ್ ಬಗ್ಗೆ ತುಚ್ಚವಾಗಿ ಮಾತನಾಡಿದ್ದ ಪ್ರಕರಣದಲ್ಲಿ ಉಜಿರಿಗೆ ಬಂದ ಪೊಲೀಸರ ತಂಡ ಬಂಧಿಸಿ ಕರೆದೊಯ್ದಿತ್ತು. ಬಂಧನ ಪ್ರಕ್ರಿಯೆ ಮುಗಿಸಿದ ಬಳಿಕ ಕೋರ್ಟ್​ಗೆ ಹಾಜರು ಮಾಡಿದ ಪೊಲೀಸರು ಕಸ್ಟಡಿಗೆ ಪಡೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಕೋರ್ಟ್​ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಈ ನಡುವೆ ಮಹೇಶ್​ ಶೆಟ್ಟಿ ತಿಮರೋಡಿ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಜಾಮೀನು ಅರ್ಜಿ ತಿರಸ್ಕೃತ ಆಗಿದೆ. ಅಗಸ್ಟ್ 23ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ.

ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಹಿನ್ನಲೆಯಲ್ಲಿ ಉಜಿರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಉಜಿರೆ ವೃತ್ತದಲ್ಲಿ 2 KSRP ಬಸ್ ಪೊಲೀಸರ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ಖಾಕಿ ಕಟ್ಟೆಚ್ಚರ ವಹಿಸಿದೆ. ಮಹೇಶ್ ತಿಮರೋಡಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಬಗ್ಗೆ ವಕೀಲರು ಮಾತನಾಡಿ ಮಾಹಿತಿ ನೀಡಿದ್ದು, ತಿಮರೋಡಿಯವರ ಹೇಳಿಕೆಯನ್ನ ಪೊಲೀಸರು ದಾಖಲು ಮಾಡಿದ್ದಾರೆ. ತಿಮರೋಡಿ ಅವರು ಬಿಪಿ ಸಮಸ್ಯೆಯಿಂದ ಬಳಲ್ತಿದ್ದಾರೆ. ಹೈ ಬಿಪಿಗೆ ವೈದ್ಯರು ಮಾತ್ರೆ ನೀಡಿದ್ದರು. ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಲಾಯ್ತು. ಈ ಸೆಕ್ಷನ್ ನಲ್ಲಿ ಏಳು ವರ್ಷದವರೆಗೆ ಮಾತ್ರ ಶಿಕ್ಷೆಯಿತ್ತು. ಆದರೆ ಕೋರ್ಟ್​ ಆಗಸ್ಟ್​ 23 ರ ತನಕ ನ್ಯಾಯಾಂಗ ಬಂಧನ ಇದೆ. ನಾನ್ ಬೇಲೇಬಲ್ ಸೆಕ್ಷನ್ ಇರೋದರಿಂದ ಬೇಲ್ ಕೊಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ ಅಂತಾ ಮಹೇಶ್ ತಿಮರೋಡಿ ಪರ ವಕೀಲ ವಿಜಯವಾಸು ಪೂಜಾರಿ ಹೇಳಿದ್ದಾರೆ.

ಸೋಮವಾರ ಇನ್ನೊಂದು ಬಾರಿ ವಾದ-ಪ್ರತಿ ವಾದ ನಡೆಯುತ್ತದೆ, ಬಿ.ಎಲ್ ಸಂತೋಷ್ ಎಲ್ಲಿಯೂ ಪ್ರಕರಣ ದಾಖಲು ಮಾಡಿಲ್ಲ. ಆಗಸ್ಟ್​ 16ರಂದು ವಿಡಿಯೋ ವೈರಲ್ ಆಗಿದೆ. ಈವರೆಗೂ ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ದೂರಿನಲ್ಲಿ ಎರಡು ಜಾಮೀನು ರಹಿತ ಸೆಕ್ಷನ್ ಹಾಕಲಾಗಿದೆ. ಶಾಂತಿ ಕದಡುವ ಯಾವುದೇ ಘಟನೆ ನಡೆದಿಲ್ಲ. ಎರಡು ಸೆಕ್ಷನ್​ನಲ್ಲಿ ಮೂರು ವರ್ಷ ಶಿಕ್ಷೆ ಮತ್ತು ದಂಡ ಇರುತ್ತದೆ. ಸೋಮವಾರ ನೂರಕ್ಕೆ ನೂರು ತಿಮರೋಡಿಗೆ ಬೇಲ್ ಸಿಗುತ್ತದೆ. ಜಾಮೀನು ಪಡೆಯಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ವಕೀಲರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಕೋರ್ಟ್​ 14 ದಿನ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ಸೋಮವಾರ ಜಾಮೀನು ಸಿಕ್ಕರೆ ಹಿರಿಯಡ್ಕ ಜೈಲಿನಿಂದ ಮಹೇಶ್​ ಶೆಟ್ಟಿ ತಿಮರೋಡಿ ಬಿಡುಗಡೆ ಆಗಲಿದ್ದಾರೆ. ಈ ನಡುವೆ ತಿಮರೋಡಿ ಬೆಂಬಲಿಗರನ್ನೂ ಅರೆಸ್ಟ್​ ಮಾಡಲಾಗಿದೆ.

ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳ ಪೊಲೀಸರ ಕರ್ತವ್ಯಕ್ಕೆ ಅಡ್ಡಿ‌ ಮಾಡಿದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ ಪೊಲೀಸರು‌ ಕಾರಿನಲ್ಲಿದ್ದ ಸೃಜನ್, ಹಿತೇಶ್, ಸಹನ್ ಎಂಬುವರ ಬಂಧನ ಮಾಡಲಾಗಿದೆ. ಕಾರ್ಕಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು ಮಾಡಲಾಗಿದ್ದು, ಕಾರ್ಕಾಳ ತಾಲೂಕಿನ ಹೊಸಮಾರು ಬಳಿ ಘಟನೆ ಸಂಭವಿಸಿದೆ. ಅಡಿಷನಲ್ ಎಸ್​ಪಿ ಕಾರಿನ ಹಿಂದಿನಿಂದ ಗುದ್ದಿದ್ದ ಕಾರು. ಮಹೇಶ್ ಶೆಟ್ಟಿ ತಿಮರೋಡಿ ಬಂಧಿಸಿ ಕರೆದುಕೊಂಡು ಹೋಗುತ್ತಿದ್ದ ಪೊಲೀಸರು. ಪೊಲೀಸರೊಂದಿಗೆ ಹೋಗುತ್ತಿದ್ದ ಅಡಿಷನಲ್ ಎಸ್​ಪಿ ಕಾರು. ಈ ವೇಳೆ ಹಿಂದಿನಿಂದ ಕಾರಿಗೆ ಗುದ್ದಿದ್ದ ತಂಡ. ಸೆಕ್ಷನ್ 132 ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಸೆಕ್ಷನ್​ 121 ಪೊಲೀಸರನ್ನು ಗಾಯಗೊಳಿಸಿದ್ದು, ಸೆಕ್ಷನ್​ 281 – ಅಪಘಾತ, 3 (5) ಅಕ್ರಮ ಕೂಟ ಆರೋಪದಡಿ ಕೇಸು ದಾಖಲು ಮಾಡಲಾಗಿದೆ.

Related posts

Hassan Tragedy most of the Students Deaths: ಹಾಸನ‌ ದುರಂತದಲ್ಲಿ ಸತ್ತವರೆಲ್ಲಾ ಸ್ಟೂಡೆಂಟ್ಸ್​.. ಯಾಕೆ..?

Publicspot

Accident Murder: ರಸ್ತೆಯಲ್ಲಿ ಗಲಾಟೆ.. ಕಾರಿನಲ್ಲಿ ಗುದ್ದಿಸಿ ಕೊಲೆ ಮಾಡಿದ ದಂಪತಿ..

Publicspot

Teacher Asulted student; ಕ್ರೂರವಾಗಿ ವರ್ತಿಸಿದ ಶಿಕ್ಷಕನ ಬಂಧನ, ಜೈಲಿಗೆ ಶಿಫ್ಟ್​..

Publicspot

ಶಿಡ್ಲಘಟ್ಟದ ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ರಾಜೀವ್‌ ಗೌಡನ ಜೊತೆ ಮತ್ತೊಬ್ಬ ಅರೆಸ್ಟ್‌

Publicspot

ಕೋರ್ಟ್​ನಲ್ಲಿ ಇಂದಿನಿಂದ ದರ್ಶನ್​ ಕೊಲೆ ಕೇಸ್​ ವಿಚಾರಣೆ!!

Publicspot

You Tuber Sameer house Raid: ಸಮೀರ್​ ಬಗ್ಗೆ ಮಟ್ಟಣ್ಣವರ್​ ಕೊಟ್ಟ ಸ್ಪಷ್ಟನೆ ಏನು..?

Publicspot