The Public Spot
ಅಪರಾಧ

You Tuber Sameer house Raid: ಸಮೀರ್​ ಬಗ್ಗೆ ಮಟ್ಟಣ್ಣವರ್​ ಕೊಟ್ಟ ಸ್ಪಷ್ಟನೆ ಏನು..?

ಧರ್ಮಸ್ಥಳ ವಿಚಾರವಾಗಿ AI ವಿಡಿಯೋ ಮೂಲಕ ಅಪಪ್ರಚಾರ ಮಾಡಲಾಗಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ವರದಿಯಾಗಿತ್ತು. ಇದೇ ಕಾರಣಕ್ಕೆ ಬೆಳ್ತಂಗಡಿ ಪೊಲೀಸರು ಸಮೀರ್​ ಎಂಡಿ ನಿವಾಸದ ಮೇಲೆ ರೇಡ್​ ಮಾಡಿದ್ದಾರೆ. ಬೆಳ್ತಂಗಡಿ ಕೊರ್ಟ್​ನಿಂದ ಸರ್ಚ್​ ವಾರಂಟ್​ ಪಡೆದು ಬಂದು ದಾಳಿ ಮಾಡಿದ್ದಾರೆ ಅನ್ನೋ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗಿತ್ತು. ಈ ಎಲ್ಲಾ ವಿಚಾರಗಳ ಬಗ್ಗೆ ಹೋರಾಟಗಾರ ಗೀರೀಶ್​ ಮಟ್ಟಣ್ಣವರ್​ ಪ್ರತಿಕ್ರಿಯೆ ನೀಡಿ, ಇದೊಂದು ರೇಡ್​ ಅಲ್ಲ ಮತ್ತು ಸರ್ಚ್​ ವಾರಂಟ್​ ಪಡೆದು ಪೊಲೀಸರು ಬಂದಿರಲಿಲ್ಲ ಎಂದಿದ್ದಾರೆ.

ಸಮೀರ್​ ಎಂಡಿ ವಿಡಿಯೋ ಮಾಡಿದ ಸಂದರ್ಭದಲ್ಲಿ ದಣಿಗಳ ಚಾಟುಗಳು (ಸೇವಕರು) ಎಂದು ಬೆಳ್ತಂಗಡಿ ಪೊಲೀಸರ ಬಗ್ಗೆ ಮಾತನಾಡಿದ್ದರು. ಆ ವಿಚಾರವಾಗಿ ಧರ್ಮಸ್ಥಳ ಪೊಲೀಸರು ವೈಯಕ್ತಿವಾಗಿ ತೆಗೆದುಕೊಂಡು ಸುಮೋಟೋ ಕೇಸ್​ ಹಾಕಿದ್ದರು. ಆ ಪ್ರಕರಣದಲ್ಲಿ ಸ್ಥಳ ಮಹಜರು ಮಾಡಲು ಬಂದಿದ್ದರು ಅಷ್ಟೆ ಎಂದಿದ್ದಾರೆ. ಇನ್ನು ಮನೆಯಿಂದ ಕ್ಯಾಮೆರಾ, ಕಂಪ್ಯೂಟರ್​ ಸೇರಿದಂತೆ ವಿಡಿಯೋ ಮಾಡಲು ಬಳಸಿದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನೀವು ಮಾಧ್ಯಮ ವೃತ್ತಿಯಲ್ಲಿ ಇರುವ ಜನರಿಗೆ ಕ್ಯಾಮೆರಾ ಬಹುಮುಖ್ಯವಾದ ವಸ್ತು. ಅದನ್ನೇ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿದ್ದಾರೆ.

ಯೂಟ್ಯೂಬರ್ ಸಮೀರ್ ಎಂಟಿ ಮನೆಯಲ್ಲಿ ಸ್ಪಾಟ್ ಮಹಜರ್ ಮುಕ್ತಾಯ ಮಾಡಿದ ಧರ್ಮಸ್ಥಳ ಪೊಲೀಸರು, ವಾಪಸ್​ ತೆರಳಿದ್ದಾರೆ. ಹಾರ್ಡ್ ಡಿಸ್ಕ್, ಪೆನ್ನು ಪೇಪರ್ ಸೇರಿದಂತೆ ಸಣ್ಣಪುಟ್ಟ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳ ಪೊಲೀಸರು ಬರುವ ಮೊದಲೇ ಸಮೀರ್ ಮನೆಗೆ ಬಂದಿದ್ದ ಹೋರಾಟಗಾರ ಗಿರೀಶ್ ಮಟ್ಟಣ್ಣವರ್, ಪೊಲೀಸರ ಮಹಜರ್ ವೇಳೆ ಸ್ಥಳದಲ್ಲೇ ಇದ್ದು ಸೂಕ್ತ ಮಾಹಿತಿ ಕೊಡುವ ಕೆಲಸ ಮಾಡಿದ್ದಾರೆ. ಇಡೀ ಪೊಲೀಸರ ಸ್ಥಳ ಮಹಜರ್ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಮಹಜರ್​ ಮುಗಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಸಮೀರ್ ನಿರಾಕರಿಸಿದ್ದಾರೆ.

ಎಸ್​ಐಟಿ ತನಿಖೆ ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಮೊದಲಿಗೆ ಅಸ್ಥಿ ಶೋಧ ಮಾಡಲು ಉತ್ಖನನ ಮಾಡುತ್ತಿದ್ದ ಎಸ್​ಐಟಿ ಅಧಿಕಾರಿಗಳು ಇದೀಗ ಅದೇ ಮಾಸ್ಕ್​ಮ್ಯಾನ್​ ಚಿನ್ನಯ್ಯನನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ತಲೆಬುರುಡೆ ತಂದಿದ್ದು ಎಲ್ಲಿಂದ..? ಬುರುಡೆ ಸಿಕ್ಕಿದ್ದು ಹೇಗೆ..? ಅನ್ನೋ ಬಗ್ಗೆಯೂ ವಿಚಾರಣೆ ಮಾಡ್ತಿದ್ದಾರೆ. ಇನ್ನು ತಲೆ ಬುರುಡೆ ತಂದುಕೊಟ್ಟ ಆರೋಪ ಹಾಗೂ ಮಾಸ್ಕ್​ ಮ್ಯಾನ್​ ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪದ ಮೇಲೆ ಆರ್​ಟಿಐ ಕಾರ್ಯಕರ್ತ ಜಯಂತ್​ ಟಿ ಎಂಬುವರನ್ನು ಬೆಳ್ತಂಗಡಿ ಎಸ್​ಐಟಿ ಕಚೇರಿಯಲ್ಲಿ ವಿಚಾರಣೆ ಮಾಡಲಾಗಿದೆ. ಇನ್ನೊಂದು ಕಡೆ ಧರ್ಮಸ್ಥಳ ಹಾಗೂ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿದೇಶದಿಂದ ಹಣ ಏನಾದರೂ ಬಂದಿದ್ಯಾ..? ಅನ್ನೋ ಬಗ್ಗೆ ತನಿಖೆ ಮಾಡ್ತಿದ್ದಾರೆ. ಈ ನಡುವೆ NIA ತನಿಖೆಗೆ ವಹಿಸಿ ಎನ್ನುವ ಆಗ್ರಹ ಕೇಸರಿ ಪಾಳಯದಿಂದ ಕೇಳಿ ಬರುತ್ತಿದೆ.

Related posts

30 ಲಕ್ಷ ಚಿನ್ನಾಭರಣ ಜೊತೆಗೆ ನಾಪತ್ತೆ.. ಕುಣಿಗಲ್‌ನಲ್ಲಿ ಮಹಿಳೆ ಪತ್ತೆ ಆಗಿದ್ಹೇಗೆ..?

Publicspot

Priyanka Upendra; ಪ್ರಿಯಾಂಕಾ ಉಪೇಂದ್ರಗೆ ವಂಚಿಸಿದ್ದ ಬಿಹಾರಿ ಬಾಬು ಅಂದರ್​..

Publicspot

ಪ್ರಜ್ವಲ್​ ರೇವಣ್ಣ ಬ್ಯಾರಕ್​ನಲ್ಲಿ ಮೊಬೈಲ್​ ಪತ್ತೆ ಮತ್ತು ಅನುಮಾನ

Publicspot

Accident Murder: ರಸ್ತೆಯಲ್ಲಿ ಗಲಾಟೆ.. ಕಾರಿನಲ್ಲಿ ಗುದ್ದಿಸಿ ಕೊಲೆ ಮಾಡಿದ ದಂಪತಿ..

Publicspot

Doughter love intercast boy: ಮಗಳ ಅಂತರ್ ಜಾತಿ ಪ್ರೀತಿಗೆ ರಕ್ಕಸನಾದ ಅಪ್ಪ..

Publicspot

3 ಮಕ್ಕಳ ತಾಯಿ.. ಮದುವೆ ಆಗಲು ಒತ್ತಡ.. ಲಾಡ್ಜ್​ನಲ್ಲಿ ಅವನಲ್ಲ ಇವನು..

Publicspot