The Public Spot
ಅಪರಾಧ

ಆಂಟಿ ಕೊಂದ ಮಧು ಮುಡಿ ಕೊಟ್ಟು ಹರಕೆ ಕಟ್ಟಿದ್ಯಾಕೆ ಗೊತ್ತಾ..?

ಪ್ರೇಮಕ್ಕೆ ಕಣ್ಣಿಲ್ಲ ಅನ್ನೋದು ಸರ್ವೇ ಸಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರೀತಿಯ ಹೆಸರಲ್ಲಿ ಕಾಮಕ್ಕೆ ಕಣ್ಣಿಲ್ಲ ಎನ್ನುವಂತೆ ಆಗಿದೆ. ವಯಸ್ಸಲ್ಲದ ವಯಸ್ಸಲ್ಲಿ ಸಂಬಂಧ ಬೆಳೆಸಿಕೊಳ್ಳುವ ಚಪಲ ಶುರುವಾಗಿದೆ. ಮೊಮ್ಮಕ್ಕಳನ್ನು ಕಾಣುವ ವಯಸ್ಸಲ್ಲೂ ಇನ್ನೊಬ್ಬರ ಸಂಗ ಬೆಳೆಸುವ ಪರಿಪಾಠ ಬೆಳೆಯುತ್ತಿದೆ. ಮನೆ ಮಠ ಅನ್ನೋದನ್ನು ಪ್ರಾಯದ ಹುಡುಗರ ತೋಳ ತೆಕ್ಕೆಗೆ ಬೀಳುವ ಸಂಗತಿಗಳು ಬೆಳೆಕಿಗೆ ಬರುತ್ತಿವೆ. 2 ವರ್ಷದ ಹಿಂದೆ ನೆಂಟನ ಜೊತೆಗೆ ಸಂಗ ಬೆಳೆಸಿದ್ದ ಆಂಟಿ ಕದ್ದು ಮುಚ್ಚಿ ಚೆಲ್ಲಾಟ ಶುರು ಮಾಡಿಕೊಂಡಿದ್ದಳು.

ಹೊತ್ತಲ್ಲದ ಹೊತ್ತಲ್ಲಿ ಬಂದು ಹೋಗ್ತಿದ್ದ ನೆಂಟ, ಮಂಜುಳಾ ಆಂಟಿಯ ಪ್ರಣಯಸಖನಾಗಿ ಬದಲಾಗಿ ಹೋಗಿದ್ದ. ಆ ನೆಂಟನ ಸಂಗವೇ ಈಕೆಯ ಜೀವ ತೆಗೆಯುವ ಮಟ್ಟಕ್ಕೆ ಹೋಗಿದೆ. ಕದ್ದು ಮುಚ್ಚಿ ಬಂದು ಹೋಗ್ತಿದ್ದವನೇ ಆಂಟಿ ಮಂಜುಳಾ ಹೆಣ ಉರುಳಿಸಿದ್ದಾನೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹಿಂಡಸಗೆರೆ ನಿವಾಸಿ. 22 ವರ್ಷದ ಹಿಂದೆ ರಾಮಚಂದ್ರಯ್ಯ ಅನ್ನೋರ ಜೊತೆಗೆ ಮದುವೆ ಆಗಿತ್ತು. ಇಬ್ಬರು ಮಕ್ಕಳು ಹುಟ್ಟಿದ್ರು. ಎರಡನೇ ಮಗು ಹುಟ್ಟಿದ ಬಳಿಕ ಗಂಡ ಎನಿಸಿಕೊಂಡವನು ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದನು. ಇಷ್ಟೆಲ್ಲಾ ಆದ ಮೇಲೆ ಮಂಜುಳಾ ಮಕ್ಕಳನ್ನು ಸಾಕಿದ ಬಳಿಕ ಇತ್ತೀಚಿಗೆ ಮಗನಿಗೆ ಮದುವೆಯನ್ನೂ ಮಾಡಿದ್ದಳು.

ಮಕ್ಕಳು, ಮೊಮ್ಮಕ್ಕಳು ಅಂತಾ ಇರಬೇಕಿದ್ದ ಆಂಟಿಗೆ ಪ್ರಾಯದ ಹುಡುಗನ ಸಂಗ ಬೆಳೆದಿತ್ತು. ಎರಡು ವರ್ಷದ ಹಿಂದೆ ಪರಿಚಯವಾಗಿದ್ದ ಮಧು, ಮಂಜುಳ ಆಂಟಿ ಪಾಲಿನ ಮದನ ಕಾಮರಾಜನಾಗಿ ಬದಲಾಗಿದ್ದ. ಸಂಬಂಧ ಅನ್ನೋದು ಮಲಗುವ ಮಂಚದ ಮೇಲೇರಿತ್ತು. ಜೊತೆಗೆ ಹಣಕಾಸಿನ ವ್ಯವಹಾರವೂ ಶುರುವಾಗಿತ್ತು. ಕಷ್ಟ ಹೇಳಿಕೊಂಡಿದ್ದ ಮಧು, ಮಂಜುಳಾ ಆಂಟಿಯಿಂದ ಒಂದಿಷ್ಟು ಕಾಸು ಕಿತ್ತಿದ್ದ. ಆಂಟಿ ಬಳಿ ಕಾಸು ಇಸ್ಕೊಂಡು ಚಕ್ಕಂದ ಆಡುತ್ತಿದ್ದವನು, ಹಣವನ್ನು ವಾಪಸ್​ ಕೇಳಿದಾಗಲೆಲ್ಲಾ ಜಗಳ ಶುರು ಮಾಡ್ತಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿತ್ತು. ಆರು ದಿನದ ಹಿಂದೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮಂಜುಳಾ ಆಂಟಿಯ ಹೆಣ ಉರುಳಿಸಿದ್ದ.

ಆಂಟಿ ಮಂಜುಳಾ ಮನೆಯಲ್ಲಿ ಹೆಣ ಉರುಳಿಸಿದ ಬಳಿಕ ಮನೆಗೆ ಹೋಗಿ ಇಡೀ ರಾತ್ರಿ ಅಲ್ಲೇ ಕಾಲ ಕಳೆದಿದ್ದ. ಬೆಳಗ್ಗಿನ ಜಾಗ ಆಗ್ತಿದ್ದಂತೆ ಕಾರ್ ತೆಗೆದುಕೊಂಡು ಕುಣಿಗಲ್​ನ ಆಲಪ್ಪ ಗುಡ್ಡಕ್ಕೆ ಹೋಗಿದ್ದ. ಆ ನಂತರ ಸಿಕ್ಕಿ ಬೀಳುವ ಭಯದಲ್ಲಿ ದೇವರಿಗೆ ಮುಡಿ ಕೊಟ್ಟು, ನಾನು ಮಾಡಿದ ಅಪರಾಧವನ್ನು ಮನ್ನಿಸಿ, ಸಿಕ್ಕಿ ಬೀಳದಂತೆ ಮಾಡು ಎಂದು ಹರಕೆ ಕಟ್ಟಿಕೊಂಡು ಸೀದಾ ಬೆಂಗಳೂರಿಗೆ ತೆರಳಿದ್ದ. ಅಲ್ಲಿ ತನ್ನ ಸ್ನೇಹಿತನಿಗೆ ಕಾರ್​ ಕೊಟ್ಟು, 5 ಸಾವಿರ ಹಣ ಪಡೆದುಕೊಂಡು ಹೊಸ ಮೊಬೈಲ್‌‌ ಸಹ ಖರೀದಿ ಮಾಡಿಕೊಂಡಿದ್ದ. ಆ ಬಳಿಕ ಹೆತ್ತವರಿಗೆ ಫೋನ್‌ ಮಾಡಿ ಪುಣೆಗೆ ಹೋಗ್ತಿದ್ದೀನಿ ಎಂದು ಕಲಾಸಿಪಾಳ್ಯ ಬಸ್​ ನಿಲ್ದಾಣದಿಂದ ಪುಣೆ ಬಸ್‌ ಹತ್ತಿದ್ದ.

ಇಷ್ಟೆಲ್ಲಾ ಆಗುವ ಹೊತ್ತಿಗೆ ಹಂತಕನ ಬೆನ್ನು ಹತ್ತಿದ್ದ ತುಮಕೂರು ಪೊಲೀಸ್ರು, ಬಸ್‌​ ಚಾಲಕನನ್ನು ಕಾಂಟ್ಯಾಕ್ಟ್‌ ಮಾಡಿದ್ದರು. ಆ ಬಳಿಕ ಪೊಲೀಸ್ರು ಹೇಳಿದಂತೆ ಬಸ್‌ ಚಾಲಕ ಪುಣೆಯ ವಿದ್ಯಾಪೀಠ ಪೊಲೀಸ್ ಠಾಣೆಗೆ ಬಸ್​ ತಿರುಗಿಸಿದ್ದನು. ಇದಾವುದೂ ಗೊತ್ತಿಲ್ಲದೆ ಬಸ್​ನಲ್ಲಿ ಸುಖನಿದ್ರೆಯಲ್ಲಿದ್ದ ಮಧು, ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದ. ಪ್ರೀತಿಯಲ್ಲಿ ಶುರುವಾದ ಸಂಬಂಧ ಹಣಕಾಸಿನ ವಿಚಾರ ಕೊಲೆಯ ತನಕ ತಂದು ನಿಲ್ಲಿಸಿತ್ತು. ಕೊಟ್ಟ ಕಾಸು ವಾಪಸ್​ ಕೇಳಿದ್ದಕ್ಕೆ ಆಂಟಿಯ ಹೆಣ ಉರುಳಿಸಿದವನು ಕಂಬಿ ಹಿಂದೆ ಸೇರಿದ್ದಾನೆ. ವಯಸ್ಸಲ್ಲದ ವಯಸ್ಸಲ್ಲಿ ಹುಡುಗನ ಬಿಸಿ ತೋಳ ತೆಕ್ಕೆಗೆ ಬಿದ್ದ ಮಂಜುಳಾ ಆಂಟಿ ಜೀವನವನ್ನೇ ಕಳೆದುಕೊಳ್ಳುವಂತಾಗಿದೆ.

Related posts

ಗಿಳಿ ಹಿಡಿಯಲು ಹೋದ ಯುವಕ, ಕರೆಂಟ್​ ಶಾಕ್​ನಿಂದ ಸಾವು..!

Publicspot

Doughter love intercast boy: ಮಗಳ ಅಂತರ್ ಜಾತಿ ಪ್ರೀತಿಗೆ ರಕ್ಕಸನಾದ ಅಪ್ಪ..

Publicspot

Love Death; ಬೆಲೆ ಕಳೆದುಕೊಂಡ ಪ್ರೀತಿ.. ಗರ್ಭಿಣಿ ಆದ ಯುವತಿಗೆ ಕೈಕೊಟ್ಟ ಪ್ರೇಮಿ..!

Publicspot

ಶಾಸಕ ಚಂದ್ರು ಲಮಾಣಿಯನ್ನು ಟ್ರ್ಯಾಪ್‌ನಲ್ಲಿ ಸಿಲುಕಿಸಿದ್ರಾ..? ಬಂಜಾರ ಬೆಂಬಲ..!!

Publicspot

3 ಮಕ್ಕಳ ತಾಯಿ.. ಮದುವೆ ಆಗಲು ಒತ್ತಡ.. ಲಾಡ್ಜ್​ನಲ್ಲಿ ಅವನಲ್ಲ ಇವನು..

Publicspot

Dharmasthala SIT Investigation: ಧರ್ಮಸ್ಥಳ ಕೇಸ್​ ಬಗ್ಗೆ ಮಾಸ್ಕ್​ ಮ್ಯಾನ್​ ಸುಳ್ಳು ಹೇಳ್ತಿರೋದ್ಯಾಕೆ..?

Publicspot