The Public Spot
ಅಪರಾಧ

ಪ್ರೀತಿ ಪ್ರೇಮದ ಹೆಸರಲ್ಲಿ ಹಿಂದೂ ಹುಡುಗಿಗೆ ನಡೀತ ಲವ್ ಜಿಹಾದ್..!​

ಬೆಂಗಳೂರಿನಲ್ಲಿ ಲವ್ ಜಿಹಾದ್ ಅನ್ನೋ ದೊಡ್ಡ ಜಾಲವೇ ಸೃಷ್ಟಿಯಾಗಿದೆ ಅನ್ನೋ ಅನುಮಾನ ಮೂಡುವಂತಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಈ ಹುಡುಗಿ ತಾನಾಯ್ತು ತನ್ನ ಪಾಡಾಯ್ತು ಅಂತ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡುತ್ತಿದ್ದಳು. ಈ ವೇಳೆ ಪರಿಚಯವಾದ ಉಸ್ಮಾನ್ ಎಂಬಾತ ಈ ಹುಡುಗಿ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ. ಪ್ರೀತಿಸುವಂತೆ ಹಿಂದೆ ಮುಂದೆ ಓಡಾಡಿ ಕಾಡಿ ಬೇಡಿ ಮನಸನ್ನು ಓಲೈಸಿಕೊಂಡ ಉಸ್ಮಾನ್​, ಧರ್ಮವನ್ನು ಮೀರಿದ ಪ್ರೇಮಿಗಳು ಅನ್ನೋ ತರ ಆಕೆಯನ್ನು ಮೋಹಿಸಿದ್ದ. ಆ ಬಳಿಕ ಮದುವೆ ಆಗದೆ ವಂಚಿಸಿದ್ದಾನೆ.

ನಮ್ಮಿಬ್ಬರ ಧರ್ಮ ಬೇರೆ ಬೇರೆ ಎಂದರೂ ಕೇಳದೆ ಆಕೆಯ ಮನವೊಲಿಸಿದ್ದ ಉಸ್ಮಾನ್​, ನನ್ನನ್ನ ಪ್ರೀತಿ ಮಾಡದಿದ್ದರೆ ಆತ್ಮಹತ್ಯೆಗೆ ಶರಣಾಗ್ತೀನಿ ಅಂತಾನು ಬೆದರಿಕೆ ಒಡ್ಡಿದ್ನಂತೆ. ಈತನ ಭಾವನಾತ್ಮಕ ಆಟವನ್ನು ಅರ್ಥ ಮಾಡಿಕೊಳ್ಳದ ಹುಡುಗಿ ಈತನ ಪ್ರೀತಿಗೆ ಗ್ರೀನ್‌ ಸಿಗ್ನಲ್‌‌ ಕೊಟ್ಟಿದ್ದಳು. ಆ ಬಳಿಕ ಒಂದೂವರೆ ವರ್ಷದಿಂದ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್​ನಲ್ಲಿ ಬದುಕಲು ಶುರು ಮಾಡಿದ್ದರು. ಕೆಲಸ ಕಾರ್ಯ ಏನೂ ಇಲ್ಲದೆ ಊರು ಬಸವನಂತೆ ತಿರುಗ್ತಿದ್ದವನು ಬ್ಯುಸಿನೆಸ್‌ ಮಾಡ್ತೀನಿ ಅಂತಾ 12 ಲಕ್ಷದ 20 ಸಾವಿರ ಹಣ ವಸೂಲಿ ಮಾಡಿದ್ದ. ಅಷ್ಟೇ ಅಲ್ಲದೆ ಚಿನ್ನಾಭರಣವನ್ನೂ ಕಿತ್ಕೊಂಡಿದ್ದ ಎಂದು ದೂರಿದ್ದಾರೆ.

ಹಣ, ಆಭರಣದ ಜೊತೆಗೆ ತನ್ನ ದೇಹವನ್ನೂ ಆತನ ಜೊತೆಗೆ ಹಂಚಿಕೊಂಡು ಇನ್ನೇನು ನಮ್ಮಿಬ್ಬರ ಮದುವೆ ಅಂತಾ ಕನಸು ಕಂಡಿದ್ದಳು. ಆದರೆ ಯಾವಾಗ ಹುಡುಗಿ ನಾವಿಬ್ಬರೂ ಮದುವೆ ಆಗೋಣ ಎಂದಾಗ ತನ್ನ ಕರಾಳ ಮುಖ ತೋರಿಸಲು ಶುರು ಮಾಡಿದ್ದ. ಮುಸ್ಲಿಂ ಧರ್ಮಕ್ಕೆ ಮತಾಂತರ ಆದರೆ ಮಾತ್ರವೇ ನಾನು ಮದುವೆ ಆಗುತ್ತೇನೆ ಎಂದಿದ್ದನಂತೆ. ಯಾವಾಗ ಯುವತಿ ತನ್ನ ಧರ್ಮವನ್ನು ಬಿಟ್ಟು ಬರುವುದಿಲ್ಲ ಎಂದಾಗ ಯುವತಿ ಮೇಲೆ ಹಲ್ಲೆ ಮಾಡಿದ್ದನಂತೆ. ಒಂದು ವೇಳೆ ಬಲವಂತವಾಗಿ ನನ್ನನ್ನು ಮದುವೆ ಆದರೆ ದೆಹಲಿಯಲ್ಲಿ ಮಾದರಿಯಲ್ಲಿ ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿ ಇಡುತ್ತೇನೆ ಎಂದಿದ್ದನಂತೆ.

ದೆಹಲಿ ಮಾದರಿಯಲ್ಲಿ ಯುವತಿಯನ್ನೇ ಕೊಂದು 32 ಪೀಸ್ ಮಾಡ್ತೇನೆ. ಫ್ರಿಡ್ಜ್​ನಲ್ಲಿ ಇಡ್ತೀನಿ ಅಂತಾ ಬೆದರಿಸಿದ್ದು ಮಾತ್ರವಲ್ಲ, ಆಕೆಯ ಜೊತೆಗಿದ್ದ ಖಾಸಗಿ ಫೋಟೋ ಇಟ್ಕೊಂಡು ಬ್ಲ್ಯಾಕ್​ಮೇಲ್ ಮಾಡಿದ್ನಂತೆ. ಎಲ್ಲಾ ಕಡೆಯಿಂದಲು ಸಿಕ್ಕಿಬಿದ್ದ ಯುವತಿ, ದಿಕ್ಕು ಕಾಣದಂತಾದಳು. ಆಗ ಸುದ್ದಗುಂಟೆ ಪಾಳ್ಯ ಸುದ್ದಗುಂಟೆ ಪಾಳ್ಯ ಪೊಲೀಸ್​ ಠಾಣೆ ಮಟ್ಟಿಲೇರಿದ್ದು, ನನಗೆ ನ್ಯಾಯ ಕೊಡಿಸಿ ಅಂತಾ ಕಣ್ಣೀರು ಹಾಕುತ್ತಿದ್ದಾಳೆ. ಆದರೆ ಪ್ರೀತಿ ಅನ್ನೋದು ಜಾತಿ, ಧರ್ಮ ಮೀರಿದ್ದು ಅಂತಾನೂ ಕೊಂಡಾಡ್ತಾರೆ.. ಆದರೆ ಈ ಉಸ್ಮಾನ್​ ಹೆಣ್ಣಿನ ಪ್ರೀತಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ದೇಹವನ್ನು ಬಳಸಿಕೊಂಡ ಬಳಿಕ ಮದುವೆ ಆಗಲು ನಿರಾಕರಿಸಿದ್ದಾನೆ. ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿದ್ದವನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.

Related posts

Kashmir ಕಾಶ್ಮೀರದಲ್ಲಿ ಫೋಟೋ ಶೂಟ್​.. ವಾರ್ಷಿಕೋತ್ಸವಕ್ಕೂ ಮುನ್ನ ಮಾಸ್ಟರ್ ಪ್ಲ್ಯಾನ್

Publicspot

Lesbian Love; ಸಲಿಂಗ ಕಾಮವೂ ತಪ್ಪಲ್ಲ.. ಅಕ್ರಮ ಸಂಬಂಧವೂ ತಪ್ಪಲ್ಲ.. ಆದರೆ..

Publicspot

ಬಂಗಾರ ಮನೆಯಲ್ಲಿ ಇದ್ದರೆ ಸಂಪತ್ತು.. ಮೈಮೇಲಿದ್ದರೆ ಆಪತ್ತು..

Publicspot

IT Raid on PES Colleges; ಆದಾಯ ತೆರಿಗೆ ಇಲಾಖೆಯಿಂದ ಲೆಕ್ಕಪತ್ರ ಶೋಧ..

Publicspot

ಆನ್‌ಲೈನ್‌ ಗೇಮ್‌ಗೆ ಇಡೀ ಕುಟುಂಬವೇ ಸರ್ವನಾಶ..! ಪೋಷಕರೇ ಎಚ್ಚರ..

Publicspot

Bus Driver Ask Kiss for mobile charging: ಬಸ್​ ಡ್ರೈವರ್​ಗೆ ಬಿತ್ತು ಬೇಜಾನ್​ ಗೂಸಾ..

Publicspot