ಕಾಲ ಉರುಳಿದಂತೆ ಸಂಬಂಧಗಳ ತೀವ್ರತೆ ಹುಸಿಯಾಗುತ್ತ ಸಾಗಿದೆ ಎನ್ನುವಂತಾಗಿದೆ. ಯಾದಗಿಯಲ್ಲಿ ಸ್ವಂತ ಚಿಕ್ಕಪ್ಪನ ಹೆಂಡತಿ ಮೇಲೆ ಮಕ್ಕಳಿಬ್ಬರು ಕಳೆದ 10 ವರ್ಷಗಳಿಂದ ಅತ್ಯಾಚಾರ ಮಾಡಿದ್ದಾರೆ ಅನ್ನೋ ವಿಚಾರ ಎಲ್ಲರನ್ನೂ ಚಕಿತಗೊಳಿಸಿದೆ. ಚಿಕ್ಕಪ್ಪನ ಹೆಂಡತಿ ತಾಯಿಗೆ ಸಮಾನ ಅನ್ನೋ ಸಂಬಂಧವನ್ನೇ ಮರೆತ ಕೀಚಕರು 10 ವರ್ಷದಿಂದಲೂ ಕಾಮದ ಕಣ್ಣು ಬೀರುತ್ತಾ, ನಾವು ಹೇಳಿದಂತೆ ಕೇಳದೇ ಇದ್ರೆ, ಜೀವವನ್ನೇ ತೆಗೀತೀವಿ. ಮರ್ಯಾದೆ ತೆಗೀತೀವಿ ಅಂತಾ ಬೆದರಿಸಿ ನಿರಂತರ ಅತ್ಯಾಚಾರ ಮಾಡಿದ್ದಾರೆ ಅಂತಾ ಸ್ವತಃ ಚಿಕ್ಕಮ್ಮ ಆರೋಪ ಮಾಡ್ತಿದ್ದಾರೆ.

ಪೊಲೀಸ್ ಕಾನ್ಸ್ಟೇಬಲ್ ಆಗಿರುವ ರಮೇಶ್ ಹಾಗೂ ಜೆಸ್ಕಾಂನಲ್ಲಿ ಉದ್ಯೋಗ ಪಡೆದಿರುವ ಲಕ್ಷ್ಮಣ್ ಎಂಬ ಅಣ್ಣತಮ್ಮಂದಿರು ಸ್ವಂತ ಚಿಕ್ಕಮ್ಮನನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಗುರಮಠಕಲ್‌ನ ಸಹೋದರರಿಬ್ಬರು ಚಿಕ್ಕಪ್ಪನ ಹೆಂಡತಿ ಮೇಲೆಯೇ ಕಣ್ಣು ಹಾಕಿ, ಕಾಮ ಕೇಳಿ ಮಾಡಿದ್ದಾರೆ. ತಮ್ಮ ರೂಮಿಗೆ ಕರೆಸಿಕೊಳ್ಳುತ್ತಿದ್ದ ಈ ಕೀಚಕರು ಬಲವಂತವಾಗಿ ಅತ್ಯಾಚಾರ ಮಾಡಿದ್ದಾರಂತೆ. ಈ ವಿಚಾರವನ್ನ ತನ್ನ ಗಂಡನಿಗೆ ಹೇಳಿಕೊಂಡರೂ ನಂಬಲಿಲ್ಲ. ಹೀಗಾಗಿ ನಾನು ಬೇರೆ ಕಡೆ ಮನೆ ಮಾಡಿದ್ದೆ. ಆದರೆ ಅಲ್ಲಿಗೂ ಬರ್ತಿದ್ದ ಈ ಕಾಮುಕರು, ಚಿಕ್ಕಪ್ಪ ಇಲ್ಲದ ಸಮಯದಲ್ಲಿ ಮಾಡಬಾರದನ್ನ ಮಾಡಿ ಹೋಗುತ್ತಿದ್ದರು ಎಂದು ದೂರಿದ್ದಾರೆ.

ಸುಮಾರು 10 ವರ್ಷಗಳಿಂದ ಚಿಕ್ಕಮ್ಮನ ಮೇಲೆ ಆಸೆಗೆ ಬಿದ್ದಿದ್ದ ಈ ಸಹೋದರರು ನಿರಂತರವಾಗಿ ಬಳಸಿಕೊಂಡಿದ್ದಾರೆ. ಈ ವಿಚಾರ ಬಹಿರಂಗ ಆದರೆ ನಿನ್ನನ್ನ ಸಾಯಿಸ್ತೀವಿ ಅಂತಾ ಬೆದರಿಕೆ ಹಾಕಿದ್ರು. ಆದರೆ ಅವರ ಕಾಟ ತಡೆಯಲಾರದೆ ದೂರು ನೀಡುತ್ತಿದ್ದೇನೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಆದ್ರೆ, ಪೊಲೀಸರು ಮಾತ್ರ ಆರೋಪಿಗಳನ್ನ ಬಂಧಿಸಲು ಹಿಂದೆ ಮುಂದೆ ನೋಡ್ತಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಇದೀಗ ಪೊಲೀಸರಿಗೂ ಹಲವಾರು ಅನುಮಾನಗಳು ಕಾಡುತ್ತಿದ್ದು, 10 ವರ್ಷದಿಂದ ಅತ್ಯಚಾರ ಎಂದರೆ ನಂಬುವುದು ಹೇಗೆ ಎಂದು ಚಿಂತಿತರಾಗಿದ್ದಾರೆ.



