The Public Spot
ಅಪರಾಧ

ಒಂದಲ್ಲ.. ಎರಡಲ್ಲ.. ಆಂಟಿ ಮೂರನೇ ಮದುವೆ.. ಬುಲೆಟ್‌ ರೈಡ್‌ಗಾಗಿ ಜೂಟ್‌..

ಕಣ್ಣಲ್ಲೇ ಕಾಮದ ಕಿಚ್ಚು ಹೊತ್ತಿಸೋ ಈ ಕಾಮ ಕೋಮಲೆಯ ಹೆಸರು ಸುಧಾರಾಣಿ. ತನ್ನ ಸೌಂದರ್ಯವನ್ನೇ ಅಸ್ತ್ರ ಮಾಡ್ಕೊಂಡ ಮಹಿಳೆ, ಹುಡುಗರ ಪಾಲಿನ ಕನಸಿನ ರಾಣಿಯಾಗಿದ್ದಳು. ಒಬ್ಬನನ್ನ ಪ್ರೀತಿಸಿ ಮದುವೆ ಆಗೋದು, ಆಮೇಲೆ ಅವನಿಗೆ ಕೈಕೊಟ್ಟು ಡೆಲಿವರಿ ಬಾಯ್‌ ಜೊತೆ ಡಿಂಗ್‌ಡಾಂಗ್‌ ಆಡೋದು. ಆಮೇಲೆ ಅವನೂ ಬೋರ್‌ ಆದ ಅಂತಾ ಮತ್ತೊಬ್ಬನ ಜೊತೆ ಹಸೆಮಣೆ ಏರೋದು. ಅವನ ಬಿಟ್‌ ಇವನ್ನ ಬಿಟ್‌ ಇವನ್ಯಾರು ಅಂತಾ ಮೂವರ ಜೊತೆ ಪಲ್ಲಂಗ ಏರಿದ್ದಾಳೆ ಚೆಲುವೆ.

ಪ್ರಾಯದ ಹುಡುಗರ ಪಾಲಿನ ಕಾಮರಾಣಿ ಈ ಸುಧಾರಾಣಿ.. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಗ್ರಾಮದ ಸುಧಾರಾಣಿಗೆ ಮದುವೆ ಆಗೋದೇ ಹವ್ಯಾಸ.. ವಯಸ್ಸು 31 ಆದ್ರೂ ಇವಳಿಗೆ ಈಗಾಗಲೊಏ ಮೂರು ಮದುವೆ ಆಗಿದೆ. ಎಂಟು ವರ್ಷದ ಹಿಂದೆ ಹಿರೇಗೌಡ ಅನ್ನೋರ ಜೊತೆ ಹಸೆಮಣೆ ಏರಿದ್ದ ಸುಧಾರಾಣಿಗೆ ಮನೆಯವರೇ ಮುಂದೆ ನಿಂತು ಮದುವೆ ಮಾಡಿದ್ರು. ದಾಂಪತ್ಯದ ಫಲವಾಗಿ ಇಬ್ಬರು ಮಕ್ಕಳು ಕೂಡಾ ಇದ್ದಾರೆ.. ದಿನಗಳು ಉರುಳ್ತಿದ್ದಂತೆ ಗಂಡ ಹೆಂಡತಿ ಮಧ್ಯೆ ವಿರಸ ಶುರುವಾಗಿತ್ತು.. ಸಣ್ಣ ಸಣ್ಣ ವಿಷಯಕ್ಕೂ ಗಲಾಟೆ ಆಗ್ತಿತ್ತು. ಆದರ ಜೊತೆಗೆ ಗಂಡನಿಗೆ ಬುಲೆಟ್‌ ಓಡಿಸೋಕೆ ಬರಲ್ಲ ಅನ್ನೋ ಕಾರಣಕ್ಕೆ ಮದುವೆಯನ್ನೇ ಮುರಿದುಕೊಂಡಳು.

ಮೊದಲ ಗಂಡ ಹೀರೇಗೌಡನಿಗೆ ಗೋಲಿ ಹೊಡೆದ ಸುಧಾರಾಣಿ, ಡೆಲಿವರಿ ಬಾಯ್‌ಗೆ ಗಾಳ ಹಾಕಿದ್ದಳು. ಅನಂತಮೂರ್ತಿ ಅನ್ನೋ ಡೆಲಿವರಿ ಬಾಯ್‌ ಜೊತೆಗೆ ಪಲ್ಲಂಗ ಹತ್ತುತ್ತ ಕಣ್ಣಲ್ಲೇ ಗಿರಗಿಟ್ಲೆ ಆಡಿಸಿದ್ದಳು. ರಾತ್ರಿ ಹಗಲು ಅನ್ನದೆ ಡೆಲಿವರಿ ಮಾಡ್ಕೊಂಡಿದ್ದ ಅನಂತ ಮೂರ್ತಿಗೆ ತನ್ನ ಬಾಳಲ್ಲಿ ಸುಧಾರಾಣಿ ಸಿಕ್ಕಿದ್ದೇ ಪಂಚಾಮೃತ ಅನ್ನೋ ರೀತಿ ಅಂದುಕೊಂಡಿದ್ದ. ಹೀಗಾಗಿ ಹಿಂದೆ ಮುಂದೆ ವಿಚಾರಿಸಿದೆ ಆಂಟಿಯ ಮೋಡಿಗೆ ಕ್ಲೀನ್‌ ಬೋಲ್ಡ್‌ ಆಗಿ ಹೋಗಿದ್ದ.. ನನ್ನ ಗಂಡ ಸಾವನ್ನಪ್ಪಿದ್ದಾನೆ. ಹೀಗಾಗಿ ನೀನೇ ನನ್ನ ಬದುಕಿಗೆ ಆಸರೆಯಾಗಿ ಇರ್ಬೇಕು ಅಂದಿದ್ದಳು.. ಇದನ್ನ ಕೇಳ್ತಿದ್ದಂತೆ ಅನಂತಮೂರ್ತಿಯ ಅನುರಾಗ ಸಂಗಮ ಆಗಿತ್ತು. ಎರಡನೇ ಮದುವೆ ಆದ ಸುಧಾರಾಣಿ ಅಲ್ಲಾದರೂ ಸುಂದರ ಸಂಸಾರ ಮಾಡಿದ್ಲಾ ಅಂದ್ರೆ ನೋ.

ಒಂದು ವರ್ಷದಲ್ಲಿ ತನ್ನೆಲ್ಲಾ ಪೋಲಿ ಆಟಗಳನ್ನು ಪೂರೈಸಿಕೊಂಡ ಸುಧಾರಾಣಿ, ಅನಂತನ ಬಾಳಲ್ಲಿ ಅರಗಿಣಿಯಾಗಿ ಮೆರೆದಾಡಿ ನಿನ್ನ ಸಂಗವೂ ಸಾಕಲು ಅನ್ನೋಕೆ ಶುರು ಮಾಡಿದಳು. ಡೆಲಿವರಿ ಬಾಯ್‌ ಅನಂತ ಮೂರ್ತಿಯ ಸಂಬಂಧಕ್ಕೆ ಎಳ್ಳುನೀರು ಬಿಟ್ಟು ಹೋಗಿದ್ದಾಳೆ. ಹೋದವಳು ಹೋದಳು, ಸುಮ್ಮನೆ ಹೋಗಿಲ್ಲ. ಬರೋಬ್ಬರಿ 15 ರಿಂದ 20 ಲಕ್ಷ ಹಣ ಈಸ್ಕೊಂಡು ಎಸ್ಕೇಪ್‌ ಆಗಿದ್ದಾಳಂತೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯನ್ನ ತನ್ನ ಕಾಮ ಬಲೆಗೆ ಕೆಡವಿಕೊಂಡು ಮದ್ವೆಯಾಗಿದ್ದಾಳೆ ಅನ್ನೋ ಮಾಹಿತಿ ಸಿಕ್ಕಿದೆ. ಆತನಿಗೆ ಈಕೆಯ ಹಿನ್ನೆಲೆ ಮುನ್ನಲೆ ಏನೂ ಗೊತ್ತಿಲ್ಲ. ಇವ್ನ ಬಳಿ ಅದೇನ್‌ ಕಥೆಕಟ್ಟಿದ್ದಾಳೋ ದೇವರೇ ಬಲ್ಲ. ಈಗ ಮೂರನೆಯವನ ಜೊತೆಗೂ ಹಾರ ಹಾಕೊಂಡು ಸಪ್ತಪದಿ ತುಳಿದಿದ್ದಾಳೆ.

ಸುಧಾರಾಣಿಯ ಮದುವೆ ಅನ್ನೋ ಜೂಟ್‌ ಆಟ ಬಯಲಾಯ್ತೋ ಮೊದಲ ಹಾಗೂ ಎರಡನೇ ಗಂಡ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಮೊದಲನೇ ಗಂಡ, ನನ್ನ ಮಕ್ಕಳನ್ನ ನನ್ನ ಬಳಿ ಕಳಿಸಿಕೊಡಿ ಅಂತಿದ್ರೆ, ಎರಡನೇ ಗಂಡ ನನ್ನ ಹಣವನ್ನ ನನಗೆ ವಾಪಸ್‌ ಕೊಡಿಸಿ ಅಂತಿದ್ದಾನೆ. ಇನ್ನು ಮೂರನೇ ಗಂಡನ ಕಥೆ ಏನು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ. ಆದರೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಗಂಡು ಮಕ್ಕಳಿಗೆ ಮದುವೆ ಆಗಲು ಹೆಣ್ಣುಗಳು ಸಿಗುತ್ತಿಲ್ಲ ಅನ್ನೋ ಸಮಸ್ಯೆ ನಡುವೆ ತಿಂಗಳಿಗೆ ವರ್ಷಕ್ಕೆ ಮದುವೆ ಆಗುವ ಮಹಿಳೆಯರೂ ಇದ್ದಾರೆ ಅನ್ನೋದು ಅಚ್ಚರಿಯಾದರೂ ಸತ್ಯ. ದೇಹದ ಕಾಮನೆಯನ್ನು ತೀರಿಸಿಕೊಳ್ಳಲು ಅನುಕೂಲಕಾರಿ ಅಂದರೂ ಇದ್ದಿದ್ದೆಲ್ಲವನ್ನೂ ಉಂಡು ಹೋದ ಕೊಂಡು ಹೋದ ಎಂದರೆ ಸಮಸ್ಯೆ ಮಾತ್ರ ಕಟ್ಟಿಟ್ಟ ಬುತ್ತಿ.

Related posts

Ananya Mother: ನಾನು ಸಾಯಲು ಸಿದ್ಧಳಿದ್ದೇನೆ.. ರಸ್ತೆಯಲ್ಲಿ ಬೆತ್ತಲೆ ನಿಲ್ತೇನೆ..!

Publicspot

ಅಮಾವಾಸ್ಯೆ ದಿನ 9 ಬಲಿ ಪಡೆದ ಜವರಾಯ.. 24 ಗಂಟೆಯಲ್ಲಿ 17 ಜನರ ದುರ್ಮರಣ..

Publicspot

ಸಿಂಗರ್‌ ಮೈಲಾರಿಗೆ 14 ದಿನ ನ್ಯಾಯಾಂಗ ಬಂಧನ.. ರೇಪ್‌ ಬಗ್ಗೆ ಆತ ಹೇಳಿದ್ದೇನು..?

Publicspot

ಹಾಡಹಗಲೇ ಬರ್ತಾರೆ.. ಪೊಲೀಸರೇ ದರೋಡೆ ಮಾಡಿಕೊಂಡು ಹೋಗ್ತಾರೆ..!!?

Publicspot

Old Women Murder; ಕಜ್ಜಾಯ ಕೊಡ್ತೀನಿ ಬಾರಜ್ಜಿ ಎಂದವಳು ಕೊಂದು ಮೂಟೆ ಕಟ್ಟಿಟ್ಟಳು.. ಯಾಕೆ..?

Publicspot

ಕಮಲಾಕರ ಭಟ್‌ ಕೊಲೆ ಮಾಡಿದ್ರಾ..? ಆಂಟಿ ಜೊತೆ ಅಕ್ರಮ ಸಂಬಂಧ ಸತ್ಯನಾ..?

Publicspot