ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಇವತ್ತು ಅಧಿಕೃತವಾಗಿ ಉದ್ಘಾಟನೆ ಆಗುತ್ತಿದೆ. ಆದರೆ ಬಿಗ್‌ಬಾಸ್ ಟೀಂ ಈ ಬಾರಿ ಭಾರೀ ಬದಲಾವಣೆ ಮಾಡ್ಕೊಂಡಿದೆ. ಬಿಗ್‌ಬಾಸ್ ಇನ್ನೇನು ಕೆಲವೇ ನಿಮಿಷಗಳಲ್ಲಿ ಆರಂಭ ಆಗ್ತಿದ್ದು, ಅದಕ್ಕೂ ಮೊದಲೇ ಯಾರೆಲ್ಲಾ ಬಿಗ್‌ಬಾಸ್ ಮನೆಯೊಳಗೆ ಹೋಗ್ತಾರೆ ಅನ್ನೋ ಮಾಹಿತಿಯನ್ನು ಸಾಮಾಜಿಕ ಜಾಲತಾಣದ್ ಮೂಲಕ ಕಲರ್ಸ್ ಕನ್ನಡ ಟೀಂ ಬಹಿರಂಗ ಮಾಡದ್ತಿದ್ದು, ಇಲ್ಲೀವರೆಗೂ ನಾಲ್ವರು ಸ್ಪರ್ಧಿಗಳ ಹೆಸರನ್ನು ಬಹಿರಂಗ ಮಾಡಲಾಗಿದೆ.

ತನ್ನದೇ ಆದ ಮ್ಯಾನರಿಸಂ ಮೂಲಕ ಕನ್ನಡಿನ ಮನಸ್ಸು ಗೆದ್ದಿರುವ ಟಗರು ಸಿನಿಮಾದ ಕಾಕ್ರೋಚ್ ಪಾತ್ರಧಾರಿ ಸುಧೀರ್ ಬಾಲರಾಜ್ ಮೊದಲ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಎರಡನೇ ಸ್ಪರ್ಧಿಯಾಗಿ ಸಿಲ್ಲಿಲಲ್ಲಿ ಮತ್ತು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ಬಂಗಾರಮ್ಮ ( ಮಂಜು ಭಾಷಿಣಿ) ಪ್ರವೇಶ ಪಡೆದಿದ್ದಾರೆ. ಮೂರನೇ ಸ್ಪರ್ಧಿಯಾಗಿ ಉತ್ತರ ಕರ್ನಾಟಕ ಭಾಗದ ಜಾಲತಾಣದ ಪ್ರತಿಭೆ, ಹಳ್ಳಿ ಸೊಗಡಿನ ಮಲ್ಲನನ್ನು ಆಯ್ಕೆ ಮಾಡಲಾಗಿದೆ. ನಾಲ್ಕನೇ ಸ್ಪರ್ಧಿಯಾಗಿ ಕರಾವಳಿ ಭಾಗದಿಂದ ರಕ್ಷಿತಾ ಶೆಟ್ಟಿಯನ್ನು ಆಯ್ಕೆ ಮಾಡಲಾಗಿದೆ. ಕನ್ನಡವನ್ನೇ ಡಿಫರೆಂಟ್ ಆಗಿ ಮಾತನಾಡುತ್ತ ಜನರಿಗೆ ಸ್ವಲ್ಪ ಇರಿಸುಮುರುಸು ಮಾಡುವ ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಯಲ್ಲಿ ಹೇಗಿರ್ತಾರೆ ಅನ್ನೋ ಕುತೂಹಲ ಮೂಡಿಸಿದೆ.

ಕಳೆದ ಬಾರಿ ಸೀಸನ್ 11ರಲ್ಲಿ ಇಂಗ್ಲಿಷ್ ಭಾಷೆಯನ್ನೇ ಹಾಸು ಹೊಕ್ಕಿತ್ತು. ಯಾವ ಭಾಷೆಯಲ್ಲಿ ಆದ್ರೂ ಮಾತನಾಡಿಕೋ ಅನ್ನೋ ತರ ಇದ್ದಿದ್ರಿಂದ ಬಿಗ್‌ಬಾಸ್ ಸಾಕಷ್ಟು ಕನ್ನಡಿಗರಿಗೆ ಅರ್ಥವೇ ಆಗ್ತಿರಲಿಲ್ಲ. ಇನ್ನು ಬಿಗ್‌ಬಾಸ್ ಟೀಂನಲ್ಲೂ ಕನ್ನಡದವರನ್ನು ಹೊರತುಪಡಿಸಿ ತಮಿಳು ಸಿಬ್ಬಂದಿ ಪ್ರಭಾವ ಬೀರ್ತಿದ್ದಾರೆ. ಜೊತೆಗೆ ಮುಂಬೈ ಮೂಲದ ಹಿಂದಿ ಭಾಷಿಕರು ಇದ್ದಾರೆ. ಹೀಗಾಗಿ ಕನ್ನಡ ಕರ್ನಾಟಕದ ಪರಂಪರೆ, ಸಂಸ್ಕೃತಿ ಮತ್ತು ಕನ್ನಡಿಗರಿಗೆ ಬೇಕಾದ ಅಂಶಗಳು ಇಲ್ಲ ಅನ್ನೋ ಕಾರಣಕ್ಕೆ ನಟ ಸುದೀಪ್ ಬಿಗ್‌ಬಾಸ್ ಹೋಸ್ಟಿಂಗ್‌ನಿಂದ ಹೊರಬರುವುದಾಗಿ ಘೋಷಣೆ ಮಾಡಿದ್ದರು. ಕನ್ನಡಕ್ಕೆ ಸಿಗಬೇಕಾದ ಮಾನ್ಯತೆ ಸಿಗ್ತಿಲ್ಲ ಅನ್ನೋ ಕಾರಣಕ್ಕೆ ಸುದೀಪ್ ಈ ನಿರ್ಧಾರ ಮಾಡಿದ್ದರು ಎನ್ನಲಾಗಿತ್ತು. ಆದರೆ ಈ ಬಾರಿ ಬಿಗ್‌ಬಾಸ್ ಹೌಸ್ ರಿವಿಲ್ ಆಗಿದೆ.
ಕಾರ್ಯಕ್ರಮ ಆರಂಭವಾಗುವ ಮುನ್ನ ಸುದೀಪ್ ಮನೆಯೊಳಗೆ ಹೋಗಿ ಮನೆಯನ್ನು ಪರಿಚಯ ಮಾಡೋದು ಪ್ರತಿ ಭಾರಿಯೂ ನಡೆದುಕೊಂಡು ಆಚರಣೆ. ಆದರೆ ಈ ಬಾರಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳನ್ನು ಬಿಗ್‌ಬಾಸ್ ಮನೆಯೊಳಗೆ ಕರೆದುಕೊಂಡು ಹೋಗಿ ಬಿಗ್‌ಬಾಸ್ ಮನೆಯನ್ನು ತೋರಿಸಲಾಗಿದೆ. ಬಿಗ್‌ಬಾಸ್ ಮನೆ ಹೇಗಿರಬಹುದು ಅನ್ನೋ ಕುತೂಹಲ ಸ್ವಲ್ಪ ತಣಿದಿದೆ. ಮೈಸೂರು ಪ್ಯಾಲೇಸ್ ಥೀಮ್‌ನಲ್ಲಿ ಬಿಗ್‌ಬಾಸ್ ಮನೆ ಮಾಡಲಾಗಿದೆ. ಜೊತೆಗೆ ಕೆಲವೊಂದು ಕನ್ನಡದ ಅಕ್ಷರಗಳನ್ನು ಬಳಸಿಕೊಂಡು ಚಿತ್ರಗಳನ್ನು ರಚಿಸಲಾಗಿದೆ. ನವರಾತ್ರಿ ವೇಳೆ ಆರಂಭ ಆಗ್ತಿರೋ ಬಿಗ್‌ಬಾಸ್ ಮನೆಯೊಳಗೆ ಆನೆಗಳೂ ಇವೆ. ಪುರಾತನ ಕಾಲದ ಅರಮನೆಯನ್ನು ಆಧುನಿಕ ಕಾಲದಲ್ಲಿ ನಿರ್ಮಾಣ ಮಾಡಿದ್ದು, ಈ ಬಾರಿ ಇದು ಬಿಗ್‌ಬಾಸ್ ಮನೆಯಲ್ಲಿ ಬಿಗ್‌ಬಾಸ್ ಅರಮನೆ ಎನ್ನುವ ಮೂಲಕ ಕುತೂಹಲವನ್ನು ಹೆಚ್ಚಿಸಿದ್ದಾರೆ. ಇನ್ನೇನು ಕೆಲವೇ ನಿಮಿಷದಲ್ಲಿ ಬಿಗ್‌ಬಾಸ್ ಕಾರ್ಯಕ್ರಮ ಆರಂಭ ಆಗುತ್ತಿದೆ. ಎಲ್ಲಾ ಸ್ಪರ್ಧಿಗಳಿಗೂ ಆಲ್ ದಿ ಬೆಸ್.


