The Public Spot
Uncategorized

ಮೊದಲ ದಿನ ಅಬ್ಬರಿಸಿದ ಡೆವಿಲ್.. ಕಲೆಕ್ಷನ್​ ಆಗಿದ್ದೆಷ್ಟು..? ಯಾರು ಏನಂದ್ರು..?

ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ ಡೆವಿಲ್ ದರ್ಬಾರ್​ ಶುರು ಮಾಡಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ರಾಜ್ಯಾದ್ಯಂತ ದರ್ಶನ್​ ಅಭಿಮಾನಿಗಳು ನಿರೀಕ್ಷೆಯಂತೆ ದರ್ಶನ್​ ಚಿತ್ರವನ್ನು ಹೊತ್ತುಕೊಂಡು ಮೆರೆದಿದ್ದಾರೆ. ಮೊದಲ ದಿನವೇ 15 ಕೋಟಿ ಗಳಿಸಿರೋ ಮಾಹಿತಿ ಹೊರಬಿದ್ದಿದೆ. ನಿನ್ನೆ ಬೆಳಗ್ಗೆ 6.30ರಿಂದ ಆರಂಭವಾದ ಶೋಗಳು ಮಧ್ಯರಾತ್ರಿ ತನಕವೂ ನಡೆದಿದ್ದು, ಕರ್ನಾಟಕದ ಪ್ರತಿಯೊಂದು ಜಿಲ್ಲೆ, ತಾಲೂಕುಗಳಲ್ಲೂ ಡೆವಿಲ್ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ದರ್ಶನ್ ಡಬಲ್ ರೋಲ್​​ಗೆ ದರ್ಶನ್​ ತೂಗುದೀಪ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮೊದಲ ದಿನ 500ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಡೆವಿಲ್ ಚಿತ್ರ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ 900 ಪ್ರದರ್ಶನ ಕಾಣ್ತಿದೆ. ಮೈಸೂರಿನಲ್ಲಿ ದಿನವೊಂದಕ್ಕೆ 100 ಪ್ರದರ್ಶನ ಕಾಣ್ತಿದೆ. ಬೆಂಗಳೂರು, ‌ಮೈಸೂರು, ತುಮಕೂರು, ಶಿವಮೊಗ್ಗ, ಜಿಲ್ಲೆಗಳಲ್ಲಿ ಭರ್ಜರಿ ಕಲೆಕ್ಷನ್ ಆಗಿರುವ ಮಾಹಿತಿ ಸಿಕ್ಕಿದೆ. ಕೇವಲ ನಾಲ್ಕು ಜಿಲ್ಲೆಗಳಲ್ಲಿ ಶೇಕಡಾ 80 ರಷ್ಟು ಟಿಕೆಟ್ ಭರ್ತಿ ಆಗಿದೆ. ಮುಂಬೈ, ಪುಣೆ, ಚೆನೈ, ಹೈದರಾಬಾದ್ ಸೇರಿದಂತೆ ಹೊರ ರಾಜ್ಯಗಳಲ್ಲೂ ರಿಲೀಸ್ ಆಗಿದ್ದು, ಮುಂಬೈ, ಪುಣೆ, ಹೈದರಾಬಾದ್​ನಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ದರ್ಶನ್ ನಟನೆಯ ಕಾಟೇರ ಮೊದಲ ದಿನ 13 ಕೋಟಿ ಗಳಿಸಿತ್ತು, ಇದೀಗ ಡೆವಿಲ್​ ಕಾಟೇರನನ್ನು ಬೀಟ್​ ಮಾಡಿ ಮೊದಲ ದಿನವೇ 15 ಕೋಟಿ ಗಳಿಸಿದೆ ಎನ್ನಲಾಗಿದೆ. 30 ಕೋಟಿ ಬಜೆಟ್​ನಲ್ಲಿ ತಯಾರಾಗಿರುವ ಡೆವಿಲ್ ಸಿನಿಮಾ ಮೊದಲ ನಾಲ್ಕು ದಿನಗಳಲ್ಲಿ 50 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಮಾಡಲಾಗಿದೆ.

ಡೆವಿಲ್ ಸಿನಿಮಾ ಸೆಲೆಬ್ರಿಟಿ ಶೋ ಬಳಿಕ ಒರಾಯನ್​​ ಮಾಲ್​ನಲ್ಲಿ ಡೆವಿಲ್ ಹೀರೋಯಿನ್ ರಚನಾ ರೈ ಮಾತನಾಡಿ, ಈ ಸಕ್ಸಸ್ ನಿಮ್ಮದು. ಮನೆ ಮನೆಗೂ ಸಕ್ಸಸ್ ತಲುಪುತ್ತಿದೆ. ಆ ತುಡಿತ ತಡೆಯೋಕೆ ಆಗ್ತಿಲ್ಲ. ಪ್ರಕಾಶ್ ಸರ್ ಲೆಜೆಂಡ್ ಡೈರೆಕ್ಟರ್. ಪ್ರಕಾಶ್ ಸರ್​ಗೆ ಥ್ಯಾಂಕ್ಸ್​ ಹೇಳ್ತೀನಿ. ದರ್ಶನ್ ಸರ್​ಗೂ ಥ್ಯಾಂಕ್ಸ್​ ಹೇಳ್ತೀನಿ‌. ಇಡೀ ಡೆವಿಲ್​ ತಂಡಕ್ಕೆ ಧನ್ಯವಾದಗಳು. ಕನ್ನಡ ಸಿನಿಮಾ ನೋಡಿ ಬೆಳೆಸಿ. ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದಿದ್ದಾರೆ. ರಮೇಶ್ ಪಂಡಿತ್, ಸುನೇತ್ರಾ ಪಂಡಿತ್ ಮಾತನಾಡಿ ಕನ್ನಡದಲ್ಲಿ ಅದ್ಬುತ ಸಿನಿಮಾ ಮಾಡಿದ್ದಾರೆ. ತುಂಬ ಚೆನ್ನಾಗಿದೆ. ದರ್ಶನ್ ಆಕ್ಟಿಂಗ್ ಚೆನ್ನಾಗಿದೆ. ಪ್ರಕಾಶ್ ಸರ್ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಸಿನಿಮಾವನ್ನ ಥಿಯೇಟರ್​ನಲ್ಲಿ ನೋಡಿ ಎಂದಿದ್ದಾರೆ.

ನಟಿ ಶರ್ಮಿಳಾ ಮಾಂಡ್ರೆ ಮಾತನಾಡಿ ಸಿನಿಮಾ ತುಂಬ ಚೆನ್ನಾಗಿದೆ. ಎಲ್ಲರೂ ಸಿನಿಮಾ ನೋಡಿ ಎಂದಿದ್ದಾರೆ. ಓರಾಯನ್ ಮಾಲ್​ನಲ್ಲಿ ಸಿನಿಮಾ ಸಿನಿಮಾ ನೋಡಿ ಎಂಜಾಯ್ ಮಾಡಿದ ಬಳಿಕ ನಟಿ ಐಶ್ವರ್ಯ ಮಾತನಾಡಿ, ಸಿನಿಮಾ ತುಂಬ ಚೆನ್ನಾಗಿ ಇದೆ, ಒಳ್ಳೆಯ ಸಿನಿಮಾ, ಥಿಯೇಟರ್​ನಲ್ಲೇ ನೋಡಿ. ಸಿನಿಮಾ ಸಖತ್ತಾಗಿ ಬಂದಿದೆ ಎಂದಿದ್ದಾರೆ. ಒಟ್ಟಾರೆ ಮೊದಲು ಎರಡ್ಮೂರು ದಿನಗಳ ಕಾಲ ದರ್ಶನ್​ ಅಭಿಮಾನಿಗಳು, ಸಿನಿಮಾ ಮೇಲೆ ಅತಿಯಾದ ವ್ಯಾಮೋಹ ಹೊಂದಿರುವ ಜನರು ಮಾತ್ರವೇ ಸಿನಿಮಾ ನೋಡುವ ಕಾರಣದಿಂದ ಸಿನಿಮಾ ಹೇಗಿದೆ ಅನ್ನೋದನ್ನು ಖಚಿತವಾಗಿ ಹೇಳೋದಕ್ಕೆ ಸಾಧ್ಯವಿಲ್ಲ. ಸೋಮವಾರದ ಬಳಿಕ ನೋಡುವ ಜನರ ವಿಶ್ಲೇಷಣೆ ಬಳಿಕ ಅಷ್ಟೇ ಸಿನಿಮಾ ಭವಿಷ್ಯ ನಿರ್ಧಾರ ಆಗಲಿದೆ. ಆದರೆ ದರ್ಶನ್​ ಸಿನಿಮಾ ಅಂದ ಮೇಲೆ ಹಾಕಿದ ಬಂಡವಾಳಕ್ಕೆ ಕೊರತೆ ಇಲ್ಲ ಎನ್ನುವ ಮಾತು ಈ ಸಿನಿಮಾದಲ್ಲೂ ಸತ್ಯವಾಗುತ್ತದೆ ಅನ್ನೋದಂತು ಸತ್ಯ.

Related posts

JDS ಪಾಲಿಗೆ GT ದೇವೇಗೌಡರದ್ದೇ ಚಿಂತೆ.. ಅತ್ಮ ಸಾಕ್ಷಿ ಅಂದ್ರೆ ಏನು..?

Publicspot

Mask Man Arrest: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ ಎಂದಿದ್ದವನೇ ಅರೆಸ್ಟ್​ ಆಗಿದ್ಯಾಕೆ..?

Publicspot

Heavy Rain North India: ವರುಣದ ಆರ್ಭಟಕ್ಕೆ ಉತ್ತರ ಭಾರತ ತತ್ತರ..

Publicspot

Devil Release; ರಾಜ್ಯಾದ್ಯಂತ ನಟ ದರ್ಶನ್​ ಫ್ಯಾನ್ಸ್​​ ಆರ್ಭಟ..

Publicspot

Karnataka Rathna Dr Vishnuvardhan: ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪುರಸ್ಕಾರ

Publicspot

Modi Japan Tour: ದೇಶದ ವಿದೇಶಾಂಗ ನೀತಿ ಬಗ್ಗೆ ಟೀಕೆ ಒಳ್ಳೇದಾ..? ಕೆಟ್ಟದ್ದಾ..?

Publicspot