The Public Spot
ರಾಜ್ಯ

Caste Census Issue: ಜಾತಿ ಜನಗಣತಿ ಆರಂಭಕ್ಕೂ ಮುನ್ನವೇ ಶುರುವಾಯ್ತು ಗೊಂದಲ

ರಾಜ್ಯ ಸರ್ಕಾರ ಜಾತಿ ಜನಗಣತಿ ಮಾಡುತ್ತಿದ್ದು, ಸೆಪ್ಟೆಂಬರ್​ 22 ರಿಂದ ಆರಂಭವಾಗಲಿದೆ ಎಂದು ಘೋಷಣೆ ಮಾಡಲಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ನಡುವೆ ಒಕ್ಕಲಿಗ ಕ್ರಿಶ್ಚಿಯನ್​, ಲಿಂಗಾಯತ ಕ್ರಿಶ್ಚಿಯನ್​, ಬ್ರಾಹ್ಮಣ ಕ್ರಿಶ್ಚಿಯನ್​ ಎಂದೆಲ್ಲಾ ಸೇರ್ಪಡೆ ಮಾಡಿರುವುದು ಸಾಕಷ್ಟು ಅನುಮಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಈ ಕ್ರಮದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಆದರೆ ಕಾಂಗ್ರೆಸ್​ ನಾಯಕರು, ಸಚಿವರು ಮಾತ್ರ ಸರ್ಕಾರದ ಕ್ರಮವನ್ನು ದಿಟ್ಟವಾಗಿ ಸಮರ್ಥಿಸಿಕೊಳ್ತಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಆಗಿರುವ ಬಸವರಾಜ ರಾಯರಡ್ಡಿ, ಒಕ್ಕಲಿಗ ಕ್ರಿಶ್ಚಿಯನ್​, ಲಿಂಗಾಯತ ಕ್ರಿಶ್ಚಿಯನ್​, ಬ್ರಾಹ್ಮಣ ಕ್ರಿಶ್ಚಿಯನ್​ ಅನ್ನೋದೆಲ್ಲಾ ಇಲ್ಲ. ಒಮ್ಮೆ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡರೆ ಮುಗೀತು ಎಂದಿದ್ದಾರೆ.

ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಬಿಜೆಪಿಯವರು ಸಮಿಕ್ಷೆಯಲ್ಲಿ ಕ್ರೈಸ್ತ ಹೆಸರು ಸೇರ್ಪಡೆಗೆ ವಿರೋಧ ಮಾಡ್ತಿದ್ದಾರೆ. ಬಿಜೆಪಿಯವರು ಅರ್ಜೆಂಟ್​ನಲ್ಲಿದ್ದಾರೆ. ನಾವು ಯಾವುದೇ ಹೆಸರು ಸೇರ್ಪಡೆ ಮಾಡಿಲ್ಲ. ಆದರೆ ಕೆಲವರು ಈ ಹೆಸರು ಇರಲಿ ಅನ್ನೋ ಬಗ್ಗೆ ಆಯೋಗದಲ್ಲಿ ಚರ್ಚೆಯಾಗಿದೆ. ‌ಆಯೋಗಕ್ಕೆ ಕೆಲವರು ಮನವಿ ಮಾಡಿದ್ದಾರೆ ಅದಕ್ಕಾಗಿ ಸೇರ್ಪಡೆ ಮಾಡಲಾಗಿದೆ. ಬಿಜೆಪಿಯವರ ಆಡಳಿತ ಸದ್ದಾಂ ಹುಸೇನ್ ಆಡಳಿತ ಇದ್ದ ಹಾಗೆ. ಕಾಂಗ್ರೆಸ್ ಆಡಳಿತವು ಸರ್ವ ಸ್ವತಂತ್ರ್ಯ ಆಡಳಿತ. ಬಿಜೆಪಿಯವರಿಗೆ ಧರ್ಮದ ಹುಚ್ಚು ಹಿಡಿದಿದೆ. ರಾಜ್ಯದ ಚಿಂತಕರಿಂದ ಬಂದಿರುವ ಸಲಹೆಯಂತೆ ಹೆಸರು ಸೂಚಿಸಲಾಗಿದೆ. ನಮ್ಮ ಸಮಿಕ್ಷೆ ಆರಂಭವಾಗುವುದು ಸೆಪ್ಟೆಂಬರ್​ 22 ರಿಂದ, ಇದು ಪ್ರಜಾಪ್ರಭುತ್ವ ಆಡಳಿತ. ಈಗ ರಾಜಾಡಳಿತ ನಡೆಯುತ್ತಿಲ್ಲ. ನಮ್ಮ ಸರ್ಕಾರ ಬಿಜೆಪಿಯವರು ಹೇಳಿದಂತೆ ಕೇಳಬೇಕಾ? ಎಂದಿದ್ದಾರೆ.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕೊಪ್ಪಳದಲ್ಲಿ ಮಾತನಾಡಿ, ಸಮೀಕ್ಷೆಯ ಸಂದರ್ಭದಲ್ಲಿ ನಾನು ಯಾವುದೇ ಧರ್ಮದ ಹೆಸರು ಬರೆಸುವುದಿಲ್ಲ. ನಾನು ಬರೆಸುವುದು ಇದು ನನ್ನ ವಯಕ್ತಿಕ ವಿಚಾರ. ನಾನು ಶರಣ ತತ್ವವನ್ನು ಅನುಸುರಿಸುತ್ತೇನೆ. ಇದೇ ನನ್ನ ಸಮಿಕ್ಷೆಗೆ ನನ್ನ ಅಭಿಪ್ರಾಯ ಎಂದಿದ್ದಾರೆ. ಇನ್ನು ಯತ್ನಾಳ್ ರಾಜ್ಯದಲ್ಲಿ ಸಾಬರ ಸರಕಾರ ಇದೆ ಎನ್ನುವುದಕ್ಕೆ ನಾನು ಪ್ರತಿಕ್ರಿಯಿಸುವುದು ಸೂಕ್ತವಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಅಭಿವೃದ್ದಿ ಪರ ಸರಕಾರ ಇದೆ. ಸಮೀಕ್ಷೆಯಲ್ಲಿ ಲಿಂಗಾಯತ್ ಕ್ರೈಸ್ತ, ಒಕ್ಕಲಿಗ ಕ್ರೈಸ್ತ, ಬ್ರಾಹ್ಮಿಣ ಕ್ರೈಸ್ತ ಸೇರಿದಂತೆ ಬೇರೆ ಬೇರೆ ಹೆಸರುಗಳು ಇರೋದಕ್ಕೆ ಅರ್ಥವಿಲ್ಲ. ಒಮ್ಮೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಂತರ ಮುಗಿಯಿತು. ಇದನ್ನು ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿದ್ದಾರೆ. ಆದರೆ ಈ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಾರೆ ಅಷ್ಟೆ ಎಂದಿದ್ದಾರೆ.

ಕೊಪ್ಪಳದಲ್ಲಿ ಶಾಸಕ ಗಾಲಿ ಜನಾರ್ದನರಡ್ಡಿ ಮಾತನಾಡಿ, ಸಮಿಕ್ಷೆಯಲ್ಲಿ ಕ್ರೈಸ್ತ ಪದ ಸೇರಿಸಿರುವುದು ಇಟಲಿಯ ಪೋಪ್ ರೀತಿ ಕ್ರಿಶ್ಚಿಯನಿಟಿ ತರಲು ಹೊರಟಿದ್ದಾರೆ. ಹಿಂದು ಧರ್ಮದವರನ್ನು ಮತಾಂತರ ಮಾಡಲು ಹೊರಟಿದ್ದಾರೆ. ದೇಶದಲ್ಲಿ 1000 ವರ್ಷ ಬೇರೆ ಬೇರೆ ಧರ್ಮದವರು ಅಡಳಿತ ಮಾಡಿದರೂ ಹಿಂದು ಧರ್ಮ ಮತಾಂತರಗೊಂಡಿಲ್ಲ. ದೇಶದಲ್ಲಿ ಇನ್ನೂ ಹಿಂದು ಧರ್ಮವನ್ನು ಮತಾಂತರಗೊಳಿಸಲು ಹೊರಟಿದ್ದಾರೆ. ಇದರಿಂದ ಕಾಂಗ್ರೆಸ್ ಮುಳಗುತ್ತಿದೆ. ಕ್ರಿಶ್ಚಿಯಾನಿಟಿ ತಂದು ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ. ಕುರಬರಿಗೆ ಎಸ್‌ಟಿ ಮೀಸಲಾತಿ ವಿಷಯವನ್ನು ತಂದು ಎರಡೂ ಸಮುದಾಯದ ನಡುವೆ ಭಿನ್ನಾಭಿಪ್ರಾಯ ತರಲು ಹೊರಟಿದ್ದಾರೆ. ಆದರೆ ಬಸವರಾಜ ರಾಯರಡ್ಡಿ ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಾರೆ. ಸಿಎಂ ಆರ್ಥಿಕ ಸಲಹೆಗಾರರಾಗುವ ಮುನ್ನ ವಿಶ್ವರೂಪ ತಳೆದಿದ್ದರು ಎಂದು ಕುಟುಕಿದ್ದಾರೆ.

Related posts

ಜನರು ಫ್ಲೋರೈಡ್ ಯುಕ್ತ ನೀರನ್ನು ಕುಡಿಯುವ ಅನಿವಾರ್ಯತೆ ಇತ್ತು. ಇದರಿಂದ ಜನರಿಗೆ ಆರೋಗ್ಯದ ತೊಂದರೆ

admin

ಅಪರೂಪದ ಸಮಾಗಮ, ಅಚ್ಚರಿಯ ಬೆಳವಣಿಗೆಗೆ ಕಾರಣವಾದ ಮೋದಿ..!

ಯಶವಂತಿ

ಬಿಜೆಪಿಯವರು ಕರ್ನಾಟಕದಲ್ಲಿ ಇಂತಹ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದಿದ್ದಾರೆಯೇ?

admin

ಪಂಚಮಸಾಲಿ ಪೀಠದಿಂದ ಬಸವಜಯ ಮೃತ್ಯುಂಜಯ ಶ್ರೀ ಕಿಕ್​ಔಟ್! ಸಿಡಿ ಬಾಂಬ್​..

Publicspot

Cast Censes Karnataka Highcourt Conditions; ಜಾತಿ ಸಮೀಕ್ಷೆ ಅಲ್ಲ.. ಆರ್ಥಿಕ, ಸಾಮಾಜಿಕ ಸಮೀಕ್ಷೆ.. ವಾದ ಒಪ್ಪಿದ ಹೈಕೋರ್ಟ್‌

Publicspot

ಕಾಂಗ್ರೆಸ್ ಶಾಸಕ H.Y ಮೇಟಿ ನಿಧನರಾಗಿದ್ದು, ಬಾಗಲಕೋಟೆಯಲ್ಲಿ ಅಂತಿಮ ವಿಧಿವಿಧಾನ..

Publicspot