The Public Spot
ಅಪರಾಧ

ಕೋರ್ಟ್​ನಲ್ಲಿ ಇಂದಿನಿಂದ ದರ್ಶನ್​ ಕೊಲೆ ಕೇಸ್​ ವಿಚಾರಣೆ!!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಅಂಡ್​ ಗ್ಯಾಂಡ್​​ಗೆ ಢವಢವ ಶುರುವಾಗುವ ದಿನಗಳು ಹತ್ತಿರವಾಗುತ್ತಿದೆ. ಇಂದಿನಿಂದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅಧಿಕೃತವಾಗಿ ಟ್ರಯಲ್ ಆರಂಭ ಆಗುತ್ತಿದೆ. ಮೊದಲಿಗೆ ಪ್ರಮುಖ ಸಾಕ್ಷಿಗಳನ್ನು ವಿಚಾರಣೆ ನಡೆಸಲು ಕೋರ್ಟ್ ನಿರ್ಧಾರ ಮಾಡಿದ್ದು, ಇಂದು ಕೋರ್ಟ್​ಗೆ ರೇಣುಕಾಸ್ವಾಮಿ ತಂದೆ, ತಾಯಿ ಹಾಜರಾಗಲಿದ್ದಾರೆ.

ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವಲಿಂಗನಗೌಡರ್ ಹಾಗೂ ತಾಯಿ ರತ್ನಪ್ರಭಾ ಕೋರ್ಟ್​ ಎದುರು ಹಾಜರಾಗಿ ತಮಗೆ ಗೊತ್ತಿರುವ ಮಾಹಿತಿಯನ್ನು ಕೋರ್ಟ್​ಗೆ ತಿಳಿಸಲಿದ್ದಾರೆ. ರೇಣುಕಾಸ್ವಾಮಿ, ಅವತ್ತು ಮನೆಯಿಂದ ಎಷ್ಟು ಹೊತ್ತಿಗೆ ಹೊರಕ್ಕೆ ಹೋಗಿದ್ದ..? ಕಿಡ್ನ್ಯಾಪ್​ ಅಥವಾ ಬೆಂಗಳೂರಿಗೆ ಹೋಗ್ತಿದ್ದ ವಿಚಾರ ನಿಮಗೆ ಗೊತ್ತಿತ್ತಾ..? ಅನ್ನೋದು ಸೇರಿದಂತೆ ಹತ್ತಾರು ವಿಚಾರಗಳು 57ನೇ ಸಿಸಿಹೆಚ್ ಕೋರ್ಟ್​ನಲ್ಲಿ ನಡೆಯಲಿದೆ. CW-7, CW-8 ಇಂದು ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ‌ ದಾಖಲಿಸಲಿರೋ

ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಗೌಡ ವಿರುದ್ಧ ಏನಾದರೂ ನ್ಯಾಯಾಲಯದಲ್ಲಿ ಹೇಳ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಜೊತೆಗೆ ಕೋರ್ಟ್​ನಲ್ಲಿ ನ್ಯಾಯಾಧೀಶರು ಕೇಳುವ ಪ್ರಶ್ನೆಗಳಿಗೆ ಏನ್ ಉತ್ತರ ಕೊಡ್ತಾರೆ..? ರೇಣುಕಾಸ್ವಾಮಿ ತಂದೆ ತಾಯಿ ಅನ್ನೋ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿಸಿದೆ. ಪೊಲೀಸರ ವಿಚಾರಣೆ ವೇಳೆ ಕಿಡ್ನ್ಯಾಪ್ ಮಾಡಿ‌ ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದರು. ಇದೀಗ ಕೋರ್ಟ್​ನಲ್ಲಿ ಯಾವ ಹೇಳಿಕೆ ಬರುತ್ತದೆ ಅನ್ನೋದನ್ನು ಕಾದು ನೋಡ್ಬೇಕು.

ನ್ಯಾಯಾಧೀಶರು ಸಾಮಾನ್ಯವಾಗಿ ಘಟನೆ ಬಗ್ಗೆ ನಿಮಗೆ ಹೇಗೆ ಮಾಹಿತಿ ತಿಳಿಯಿತು..? ಈ ಘಟನೆ ಬಗ್ಗೆ ನಿಮಗೆ ಏನೇನು ಗೊತ್ತು..? ಅದನ್ನು ನ್ಯಾಯಾಲಯದ ಮುಂದೆ ಹೇಳಿ ಎನ್ನುತ್ತಾರೆ. ಪ್ರಾಸಿಕ್ಯೂಷನ್ ಪರವಾಗಿ ಎಸ್​ಪಿಪಿ ಪ್ರಸನ್ನ ಕುಮಾರ್ ಹಾಜರಿರುತ್ತಾರೆ. ಆರೋಪಿಗಳ ಪರ ವಕೀಲರು ಕೂಡ ಕೋರ್ಟ್​ನಲ್ಲಿ ಹಾಜರು ಇರ್ತಾರೆ. ದರ್ಶನ್, ಪವಿತ್ರಗೌಡ ಸೇರಿದಂತೆ ಜೈಲಿನಲ್ಲಿರುವ 7 ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್​ಗೆ ಹಾಜರಾಗುತ್ತಾರೆ. ಉಳಿದ ಆರೋಪಿಗಳು ವಕೀಲರ ಜೊತೆಗೆ ಕೋರ್ಟ್​ಗೆ ಆಗಮಿಸುತ್ತಾರೆ. ಒಟ್ಟಾರೆ ಇವತ್ತು ಸಾಕಷ್ಟು ಜನರ ಕಣ್ಣು ದರ್ಶನ್​ ಕೇಸ್​ ಮೇಲಿದೆ.

Related posts

ಕೋಟೆ ನಾಡಿನ ಕಾಂಗ್ರೆಸ್​ ಶಾಸಕ ಪಪ್ಪಿ ಜೈಲಿನಿಂದ ರಿಲೀಸ್​.. 4 ತಿಂಗಳ ಸೆರೆವಾಸಕ್ಕೆ ರಿಲೀಫ್..

Publicspot

Dharmasthala Twist; ಬುರುಡೆ ಹಿಂದೆ ಹೊರಟ SIT ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​..

Publicspot

Darshan And Police Officers: ರೇಣುಕಾಸ್ವಾಮಿ ಕೊಲೆ ಕೇಸ್​ ಮತ್ತು ಖಡಕ್​ ಅಧಿಕಾರಿಗಳ ಪಾತ್ರ..

ಯಶವಂತಿ

Second Marriage; ಮದುವೆ ಆದ್ಮೇಲೆ ಗಂಡನೇ ಪರದೈವ ಅನ್ನೋ ನಂಬಿಕೆ ಕಳೆದುಕೊಂಡಿದ್ಯಾ..?

Publicspot

Foreign Love ಇಳಕಲ್ ಆಂಟಿಗೂ ನೈಜೀರಿಯಾ ಅಂಕಲ್​ಗೂ ಲವ್‌‌!

Publicspot