The Public Spot
ಅಪರಾಧ

Dharmasthala Issue: ಧರ್ಮಸ್ಥಳ ವಿಚಾರದಲ್ಲಿ ಸರ್ಕಾರ ಮತ್ತೆ ಎಡವಟ್ಟುಗಳು..

ಧರ್ಮಸ್ಥಳ ವಿಚಾರವಾಗಿ ರಾಜ್ಯ ಸರ್ಕಾರ ಒಂದಾದ ಮೇಲೆ ಒಂದು ಎಡವಟ್ಟುಗಳನ್ನು ಮಾಡುತ್ತಲೇ ಇದೆ. SIT ತನಿಖೆ ನಡುವೆ ಬಿಜೆಪಿ ರಾಜಕಾರಣ ಮಾಡುವುದಕ್ಕೆ ಶುರು ಮಾಡುತ್ತಲ್ಲೇ ಕಕ್ಕಾಬಿಕ್ಕಿ ಆಗಿರುವ ಕಾಂಗ್ರೆಸ್‌ ನಾಯಕರು ತಾವು ಏನು ಮಾಡುತ್ತಿದ್ದೇವೆ ಅನ್ನೋ ಪರಿವೇ ಇಲ್ಲದೆ ಮಾತನಾಡುವುದಕ್ಕೆ ನಿಂತಿದ್ದಾರೆ. ಧರ್ಮಸ್ಥಳ ವಿಚಾರವಾಗಿ ಶ್ರೀ ಮಂಜುನಾಥ ಸ್ವಾಮಿಯನ್ನು ಮಧ್ಯೆ ಎಳೆದು ತಂದ ಬಿಜೆಪಿ ನಾಯಕರಿಗೆ ಸೂಕ್ತ ಪ್ರತ್ಯುತ್ತರ ನೀಡಲು ಸಾಧ್ಯವಾಗಲಿಲ್ಲ. ಬದಲಿಗೆ ನಾವೂ ಧರ್ಮಸ್ಥಳದ ಪರವಾಗಿದ್ದೇವೆ, ಱಲಿ ಮಾಡ್ತೇವೆ ಎಂದರು. ಆ ಬಳಿ ಇದೊಂದು ಸಂಚು ಎಂದು ಷರಾ ಬರೆದುಬಿಟ್ಟರು. ಆ ಬಳಿಕ ವಾಟ್ಸಪ್ ಯೂನಿವರ್ಸಿಟಿಯಿಂದ ಬಂದಿದ್ದನ್ನು ಬಿಜೆಪಿ ನಾಯಕರು ಪ್ರಸ್ತಾಪ ಮಾಡಿದ ಕೂಡಲೇ ಹಿಂದೇ ಮುಂದೆ ನೋಡದೆ ಅದನ್ನೇ ಸತ್ಯವೆಂದು ಕಠಿಣ ಕಾನೂನು ಕ್ರಮ ಎಂದು ಬಿಟ್ಟರು. ಕೊನೆಗೆ ಹಹ್ಹಹ್ಹ ಎಂದು ಸುಮ್ಮನಾದರು.

ಸಿಎಂ 24 ಕೊಲೆ ಮಾಡಿದ್ದಾರೆ ಎಂದು ಮಹೇಶ್‌ ಶೆಟ್ಟಿ ತಿಮರೋಡಿ ಹೇಳಿದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಸದನದಲ್ಲಿ ಹೇಳಿದರು. ಅದನ್ನು ಕೇಳುತ್ತಿದ್ದ ಹಾಗೆ ಗೃಹ ಸಚಿವರು ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸೂಚನೆ ಕೊಟ್ಟಿದ್ದೇನೆ ಎಂದು ಬಿಟ್ಟರು. ಮಹೇಶ್‌ ಶೆಟ್ಟಿ ತಿಮರೋಡಿ ಹೇಳಿದ ಮಾತನ್ನು ಯಾರಾದರೂ ತಿರುಚಿದ್ದಾರಾ..? ಅಥವಾ ನಾವು ನೋಡಿದ್ದು ಸತ್ಯವಾ ಅನ್ನೋದನ್ನೂ ಕೂಡ ಪರಿಶೀಲನೆ ಮಾಡುವ ಗೋಜಿಗೆ ಹೋಗಲಿಲ್ಲ. ಕನಿಷ್ಟ ಪಕ್ಷ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕ ಮಾಡಿ ತಿಮರೋಡಿ ಹಾಗೆ ಹೇಳಿದ್ದು ಸತ್ಯವಾ..? ಅನ್ನೋದನ್ನೂ ಪರಿಶೀಲನೆ ಮಾಡಲಿಲ್ಲ. ಕಾನೂನು ರೀತಿಯಲ್ಲಿ ಕಠಿಣ ಕ್ರಮಕ್ಕೆ ಸೂಚನೆ ಕೊಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿಯೇ ಬಿಡ್ತು.

ಇನ್ನೂ ಆ ಬಳಿಕ ಗೃಹ ಸಚಿವ ಪರಮೇಶ್ವರ್‌ ಯೂಟ್ಯೂಬರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ. ನಾನು ಜವಾಬ್ದಾರಿಯುತವಾಗಿ ಉತ್ತರಿಸಿದ್ದೇನೆ. ವಿಪಕ್ಷಗಳು ನೀರಸ ಉತ್ತರ ಅಂತ ಅಂದಿದ್ದಾರೆ. ಅರಗ ಜ್ಙಾನೇಂದ್ರ ಗೃಹ ಸಚಿವರಾಗಿದ್ದವರು. ಸುರೇಶ್ ಕುಮಾರ್ ಕಾನೂನು ಸಚಿವರಾಗಿದ್ದವರು. ಆಂತರಿಕ ನಿಯಮಗಳ ಬಗ್ಗೆ ಅರಿವಿದೆ. ನಿಮಗೆ ಲಕ್ಷ್ಮಣ ರೇಖೆಯ ಅರಿವಿದೆ ಅಂದುಕೊಂಡಿದ್ದೇನೆ. ಗೌಪ್ಯತೆಯ ಬಗ್ಗೆ ಪ್ರಮಾಣ ಮಾಡಿರುತ್ತೇವೆ. ಜನ ಏನೇನೋ ಆಪೇಕ್ಷೆ ಪಡಬಹುದು. ನೀವು ಏನೇನೋ ಆಪೇಕ್ಷೆ ಪಡಬಹುದು. ನೀವು ನಿರೀಕ್ಷೆ ಮಾಡಿದಂತೆ ನಾನು ಹೇಳಲು ಆಗಲ್ಲ ಎಂದಿದ್ದಾರೆ. ಯೂಟ್ಯೂಬರ್ಸ್ ಬಗ್ಗೆ ನೀವು ಹೇಳಿದ್ದೀರಿ, ವ್ಯಕ್ತಿ, ಸಂಸ್ಥೆ, ಸರ್ಕಾರದ ಬಗ್ಗೆ ಮಾಡ್ತಾರೆ. ಅದನ್ನ ನಾವು ಗಮನಿಸಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕಾಗುತ್ತದೆ. ಇಲ್ಲವಾದರೆ ಸಮಾಜದ ಸ್ವಾಸ್ಥ್ಯ ಹಾಳಾಗಬಹುದು. ಯೂಟ್ಯೂಬರ್ಸ್ ಇಲ್ಲಿಗೆ ಸ್ಟಾಪ್ ಮಾಡಿ, ಇಲ್ಲವಾದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಯೂಟ್ಯೂಬರ್ಸ್‌ಗೆ ಗೃಹ ಸಚಿವರು ಎಚ್ಷರಿಕೆ ನೀಡಿದ್ದಾರೆ. ಈ ಮೂಲಕ ಮತ್ತೊಂದು ಎಡವಟ್ಟು ಮಾಡಿದ್ದಾರೆ.

ಧರ್ಮಸ್ಥಳ ದೇವಸ್ಥಾನ ಆಡಳಿತ ಮಂಡಳಿಯಲ್ಲಿ ಇರುವ ಹರ್ಷೇಂದ್ರ ಕುಮಾರ್‌ ಜೈನ್‌ ಎಂಬುವರು ಕೋರ್ಟ್‌ನಲ್ಲಿ ಸುದ್ದಿ ಪ್ರಸಾರಕ್ಕೆ ತಡೆ ತಂದಿದ್ದರು. ಆ ಕೋರ್ಟ್‌ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ರದ್ದು ಮಾಡಿತ್ತು. ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು. ಈ ಕೂಡಲೇ ಹೈಕೋರ್ಟ್‌ ಆದೇಶವನ್ನು ರದ್ದು ಮಾಡಬೇಕು. ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಬೇಕು. ಇದರಿಂದ ಸಾಕಷ್ಟು ಮಾನ ಹಾನಿ ಆಗುತ್ತಿದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರು. ಆದರೆ ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ನಿರಾಕರಿಸಿ, ವಾಕ್ ಸ್ವಾತಂತ್ರ್ಯವನ್ನು ಮೊಟಕು ಮಾಡಿದಂತೆ ಆಗುತ್ತದೆ. ನಾವು ಹೈಕೋರ್ಟ್‌ ಆದೇಶಕ್ಕೆ ತಡೆ ನೀಡುವುದಕ್ಕೆ ಬಯಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ನಿಮಗೆ ಸುದ್ದಿ ಪ್ರಸಾರಕ್ಕೆ ತಡೆ ಬೇಕು ಎಂದಾದರೆ ಸ್ಥಳೀಯ ಕೋರ್ಟ್‌ಗೆ ಹೋಗಿ ಎಂದಿದ್ದರು. ಆದರೆ ಇದರ ಅರಿವೇ ಇಲ್ಲದ ಗೃಹ ಸಚಿವರು, ಯೂಟ್ಯೂಬರ್ಸ್‌ಗೆ ಕಡಿವಾಣ ಹಾಕುವುದಕ್ಕೆ ಮುಂದಾಗಿದ್ದಾರೆ. ಇಲ್ಲಿಗೆ ನಿಲ್ಲಿಸಿ ಎಂದು ವಾರ್ನ್‌ ಮಾಡಿದ್ದಾರೆ.

ಮೊನ್ನೆ ಮೊನ್ನೆ ತುಮಕೂರು ದಸರಾದಲ್ಲಿ ಕೆಟ್ಟದನ್ನು ತೋರಿಸಿ ಜಿಲ್ಲೆಯ ಮಾನ ತೆಗೆಯಬೇಡಿ ಎಂದು ಪತ್ರಕರ್ತರಿಗೆ ವಾರ್ನಿಂಗ್ ಮಾಡಿದ್ದರು. ಏನಾದರೂ ಇದ್ದರೆ ಮೊದಲೇ ನಮಗೆ ಹೇಳಿ ಬಿಡಿ, ಟಿವಿಯಲ್ಲಿ ತೋರಿಸಿ ಮಾನ ಹಾಳು ಮಾಡಬೇಡಿ ಎಂದಿದ್ದರು. ಇದನ್ನು ವಾರ್ನಿಂಗ್ ಎಂದುಕೊಳ್ಳಿ ಅಂತಾನೇ ಹೇಳಿದ್ದರು. ಮೊದಲೇ ಹೇಳಬೇಕು ಅಂದರೆ ವಾಟ್ಸಪ್‌ ಯೂನಿವರ್ಸಿಟಿಯಿಂದ ಬಂದ ಪ್ರಶ್ನೆಯನ್ನು ಮೊದಲು ಪರೀಕ್ಷೆ ಮಾಡಿ ಖಚಿತ ಮಾಡಿಕೊಂಡು ಅಧಿಕೃತ ಎಂದ ಬಳಿಕ ಅಷ್ಟೇ ಉತ್ತರ ಕೊಡಬೇಕು ಎಂದು ಮಾಧ್ಯಮಗಳು ಹೇಳಿಕೊಡಬೇಕಾ..? AI ನಲ್ಲಿ ನೋಡಿ ನಾನು ನಂಬರ್‌ ಒನ್‌ ಗೃಹ ಮಂತ್ರಿ ಎಂದು ಹೇಳಿಕೊಳ್ಳುವ ಡಾ ಜಿ ಪರಮೇಶ್ವರ್‌ ಅವರಿಗೆ ತನಿಖೆ ನಡೆಯುವಾಗ ಅಥವಾ ದೂರು ದಾಖಲಾದ ಬಳಿಕ ಆರೋಪಿತ ವ್ಯಕ್ತಿಯನ್ನು ಭೇಟಿ ಮಾಡಬಾರದು. ಅದೂ ಅಲ್ಲದೆ ವೈದ್ಯಕೀಯ ಶಿಕ್ಷಣ ಇಲಾಖೆ ಕೆಲಸವನ್ನು ಗೃಹ ಸಚಿವರು ಮಾಡಬಾರದು ಎಂದು ಮಾಧ್ಯಮದವರೇ ಹೇಳಿಕೊಡಬೇಕಾ..? ತಪ್ಪುಗಳನ್ನು ಮಾಡಿ ಮುಜುಗರಕ್ಕೆ ಒಳಗಾದರೆ ಜನ ಬೀದಿಯಲ್ಲಿ ನಿಂತು ನಗುತ್ತಾರೆ ಅನ್ನೋದನ್ನೂ ಮಾಧ್ಯಮಗಳೇ ಹೇಳಿಕೊಡಬೇಕಾ..? ಸಿಕ್ಕಸಿಕ್ಕಲ್ಲಿ ವಾರ್ನಿಂಗ್‌ ಮಾಡೋದನ್ನು ಮೊದಲು ಬಿಡಿ ಅನ್ನೋದನ್ನು ಪತ್ರಕರ್ತರೇ ಹೇಳಿಕೊಡಬೇಕಾ..? ನೀವೇ ಹೇಳಿ ಸಾರ್..?

Related posts

PG, Sexual Assult: ಮಹಿಳಾ ಪಿಜಿಗೆ ಕಳ್ಳತನಕ್ಕೆ ಬಂದವನಿಂದ ಲೈಂಗಿಕ ದೌರ್ಜನ್ಯ..

Publicspot

ಬೆಂಗಳೂರಿನ ಮಂತ್ರಿ ಮಾಲ್‌ ಪಕ್ಕದಲ್ಲೇ ಪ್ರೇಯಸಿಯ ಕತ್ತು ಸೀಳಿ ಮರ್ಡರ್‌..!

Publicspot

Aunty Rape: ಚಿಕ್ಕಮ್ಮನ ಜೊತೆಗೇ ಕಾಮ ಕೇಳಿ.. 10 ವರ್ಷದ ಬಳಿಕ ಅತ್ಯಾಚಾರ ಎಂದ ಆಂಟಿ..

Publicspot

ಸ್ಕ್ಯಾನಿಂಗ್​ಗೆ ಹೋದಾಗ ಬೆರಳಿಟ್ಟು ವಿಕೃತಿ.. ಲೈಂಗಿಕ ಕಿರುಕುಳ ಬಾಯ್ಬಿಡದಂತೆ ಧಮ್ಕಿ..

Publicspot

Drashan Jail Shift: ದರ್ಶನ್​ ಜೈಲು ಶಿಫ್ಟ್​ ಮಾಡೋದು ಪಕ್ಕಾನಾ..?

Publicspot

ಕುರುಬ ಸಮುದಾಯದ ನೌಕರನ ಮೇಲೆ ಕೈ ಮಾಡಿದ ಸವಧಿ.. ಆಕ್ರೋಶ

Publicspot