The Public Spot
ಅಪರಾಧ

Foreign Love ಇಳಕಲ್ ಆಂಟಿಗೂ ನೈಜೀರಿಯಾ ಅಂಕಲ್​ಗೂ ಲವ್‌‌!

ಸಾಮಾಜಿಕ ಜಾಲತಾಣ ಎಂಬುದು ಜಗತ್ತನ್ನೇ ಅಂಗೈಗೆ ತಂದು ಕೂರಿಸಿದೆ ಅನ್ನೋದು ಸತ್ಯ. ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತ ವ್ಯಕ್ತಿಯನ್ನು ನಾವು ಕರುನಾಡಿನಿಂದಲೇ ಪರಿಚಯ ಮಾಡ್ಕೊಬಹುದು. ಜೀವನದಲ್ಲಿ ಒಮ್ಮೆಯಾದ್ರೂ ಮೀಟ್​ ಮಾಡ್ತೀವೋ ಇಲ್ವೋ, ಆದರೆ ಜಾಲತಾಣದಲ್ಲಿ ಆತ್ಮೀಯರಾಗಿ ಕಾಲ ಕಳಿಯಬಹುದು. ಸ್ನೇಹ ಸಂಬಂಧ ಆತ್ಮೀಯತೆ ಹೆಚ್ಚಾದಾಗ ಪ್ರೇಮ ಸಂಬಂಧಕ್ಕೆ ಬದಲಾಗುವುದು ಹೆಚ್ಚು ಸಮಯ ಬೇಕಿರಲ್ಲ. ಆ ಟೈಂ ಅನ್ನೋದೇ ಹಾಗೆ. ಒಬ್ಬರ ಜೊತೆಗೆ ಆತ್ಮೀಯತೆ ಹೆಚ್ಚಾದಾಗ ನಾವು ನಾವಾಗಿ ಇರಲ್ಲ. ಪ್ರೀತಿ ಮುಂದೆ ಯಾವುದೂ ದೊಡ್ಡದಲ್ಲ ಎನ್ನುವಂತಾಗುತ್ತದೆ.

ಬಾಗಲಕೋಟೆಯ ಇಳಕಲ್‌ನ ಆಂಟಿಗೂ ನೈಜೀರಿಯಾ ಅಂಕಲ್​ಗೂ ಸಂಬಂಧ ಬೆಸೆದಿದ್ದು ಜಾಲತಾಣ. ಮ್ಯಾಟ್ರಿಮೋನಿಯಲ್ಲಿ ಇಳಕಲ್‌ ಆಂಟಿಗೂ ನೈಜೀರಿಯಾ ಅಂಕಲ್‌ಗೂ ಪರಿಚಯ ಆಗಿತ್ತು. ಮದುವೆಯಾಗಿ ಗಂಡ ಬಿಟ್ಟಿದ್ದ ಮಹಿಳೆಗೆ ಜೊತೆಗೆ ಮಾತುಕತೆ ಶುರು ಮಾಡಿದ್ದ ನೈಜೀರಿಯನ್ ಅಂಕಲ್​ ಮಾತಿನಲ್ಲೇ ಮೋಡಿ ಮಾಡಿದ್ದ. ನಿನಗೆ ಜೀವನ ಕೊಡ್ತೀನಿ ಅಂತಾ ಹಸೇಮಣೆ ಶಾಸ್ತ್ರ ಮುಗಿಸಿಕೊಂಡಿದ್ದ ಕಿಲಾಡಿ ಅಂಕಲ್​, ಲಕ್ಷ ಲಕ್ಷ ರೂಪಾಯಿ ದೋಚಿಕೊಂಡು ಎಸ್ಕೇಪ್‌ ಆಗಿದ್ದ.

ನೋಡೋಕೆ ಚಂದ ಇಲ್ಲದಿದ್ರೂ ಅದೇನು ನೋಡ್ಕೊಂಡು ಮೋಡಿ ಹೋಗಿದ್ಲೋ ಏನೋ.. ಅಲಿವರ್ ವುಗುವೊ ಒಕಿಚಿಕು ಅನ್ನೋ ನೈಜೀರಿಯನ್​ ಪ್ರಜೆ ಬಾಗಲಕೋಟೆಯ ಇಳಕಲ್‌ ಮೂಲದ ಮಹಿಳೆ ಜೊತೆಗೆ ಜಾಲಿ ರೈಡ್​ ಶುರು ಮಾಡಿದ್ದ. ಮದ್ವೆಯಾಗಿ ಗಂಡನಿಂದ ದೂರ ಆಗಿದ್ದ ಮಹಿಳೆ ಮತ್ತೊಬ್ಬ ಪುರುಷನ ತೋಳ್​ ತೆಕ್ಕೆಯಲ್ಲಿ ಬಂಧಿಯಾಗ್ಬೇಕು ಅಂತಾ ಬಯಸಿದ್ಲು. ಸರಿಯಾದ ಸಮಯಕ್ಕೆ ಕಲ್ಲು ಹೊಡೆದ ಅಲಿವರ್ ವುಗುವೊ ಒಕಿಚಿಕು, ನೈಜೀರಿಯಾ ಪ್ರಜೆ ಅನ್ನೋದನ್ನು ಮುಚ್ಚಿಟ್ಟು ಮಕ್ಮಲ್​ ಟೋಪಿ ಹಾಕಿದ್ದ.

ಮ್ಯಾಟ್ರಿಮೋನಿಯಿಂದ ಪರಿಚಯ ಆಗಿದ್ದ ಅಲಿವರ್ ವುಗುವೊ ಒಕಿಚಿಕು, ತಾನು ಲಂಡನ್‌ನಲ್ಲಿ ಇರೋದು. ನನ್ನ ಹೆಸರು ಅಮಿತ್‌ ಅಂತಾ ಚಂದಮಾಮನ ಕಥೆ ಹೇಳಿದ್ದ. ಲಂಡನ್‌ನಿಂದ ಬರುವಾಗ ಯುಎಸ್ ಡಾಲರ್ ತಂದಿದ್ದೇನೆ. ದೆಹಲಿಯ ಕಸ್ಟಮ್ಸ್​ನಲ್ಲಿ ಸೀಜ್ ಮಾಡಿದ್ದಾರೆ. ಬಿಡಿಸಿಕೊಳ್ಳೋದಕ್ಕೆ ಇಂಡಿಯನ್ ಕರೆನ್ಸಿ ಬೇಕು ಅಂತಾ ಹಸಿಬಿಸಿ ಕಥೆ ಕಟ್ಟಿದ್ದ. ಇದನ್ನ ನಂಬಿದ ಆಂಟಿ, ಮದ್ವೆ ಆಗೋ ಹುಡುಗ ಅಲ್ವಾ ಅಂತಾ ಬರೋಬ್ಬರಿ 5 ಲಕ್ಷದ 55 ಸಾವಿರ ಹಣ ಕೊಟ್ಟಿದ್ದಾರೆ. ಯಾವಾಗ ಆಂಟಿ ಕಡೆಯಿಂದ ಲಕ್ಷ ಲಕ್ಷ ಹಣ ಬಂತೋ ನೈಜೀರಿಯನ್​ ಸುಂದರ ಎಸ್ಕೇಪ್‌ ಆಗಿದ್ದ.

ಫೋನ್​ ಕಾಲ್​ ಮಾಡಿದ್ರು ಪತ್ತೆ ಇಲ್ಲ.. ಮೆಸೇಜ್​ ಮಾಡಿದ್ರೂ ರಿಪ್ಲೈ ಇಲ್ಲ. ಇಷ್ಟೆಲ್ಲಾ ಆಗ್ತಿದ್ದ ಹಾಗೆ ಆಂಟಿಗೆ ನಾನು ಮೋಸ ಹೋದೆ ಅನ್ನೋ ಸತ್ಯ ಸಂಗತಿ ಗೊತ್ತಾಗಿತ್ತು. ಆದರೆ ಗಂಡನಿಲ್ಲದ ಮಹಿಳೆ ಬೇರೊರೊಬ್ಬ ಪುರುಷನ ಆಸರೆ ಬಯಸಿದಾಗ ಆತಕ ಆಕೆಯಿಂದ ಬಂದಷ್ಟು ಹಣವನ್ನು ಪೀಕಿ ಎಸ್ಕೇಪ್​ ಆಗ್ತಾನೆ ಅನ್ನೋ ಮರ್ಮ ಅರಿಯದ ಆಂಟಿ ಪೊಲೀಸ್​ ಠಾಣೆ ಮೆಟ್ಟಿಲ ಮೇಲೆ ಕುಳಿತಿದ್ದರು. ತನಗೆ ಆದ ಅನ್ಯಾಯ ಮತ್ತೊಬ್ಬರಿಗೆ ಆಗಬಾರದು ಅನ್ನೋ ಉದ್ದೇಶದಿಂದ ಪೊಲೀಸ್​ ಠಾಣೆಗೆ ದೂರು ಕೊಟ್ಟು, ಹಲ್ಲು ಮಸೆಯುತ್ತಿದ್ರು. ಜಾಲತಾಣದಲ್ಲಿ ವಿದೇಶಿ ಪ್ರಜೆಯೊಬ್ಬ ನಮ್ಮ ಸ್ನೇಹಿತರು ಆಗಲೇಬಾರದು ಅಂತಾ ಹೇಳೋಕೆ ಆಗಲ್ಲ, ಆದರೆ ವಂಚಕರೂ ಇರ್ತಾರೆ ಅನ್ನೋ ಅರಿವು ಇರಬೇಕು ಅಷ್ಟೆ.

Related posts

ಹಾಡಹಗಲೇ ಬರ್ತಾರೆ.. ಪೊಲೀಸರೇ ದರೋಡೆ ಮಾಡಿಕೊಂಡು ಹೋಗ್ತಾರೆ..!!?

Publicspot

Darshan And Pavitra Gowda Tension: ದರ್ಶನ್​ ಪಾಲಿಗೆ ಮಂಗಳವಾರ ಶುಭವೋ..? ಅಶುಭವೋ..?

Publicspot

ಜೈಲಿನಲ್ಲಿ ಚಳಿ.. ಬೆಡ್‌ಶೀಟ್‌ ಕೇಳಿದ ದರ್ಶನ್.. ಎಲ್ಲಾ ಕೈದಿಗಳಿಗೂ ಅನ್ವಯ ಆಗುತ್ತಾ..?

Publicspot

ಕಾಯೋ ದೈವವೇ ಕ್ರೂರವಾದರೆ.. ರಕ್ಷಣೆ ಎಲ್ಲಿದೆ..? ಅಯ್ಯೋ ದೇವರೇ..?

Publicspot

Love Death; ಬೆಲೆ ಕಳೆದುಕೊಂಡ ಪ್ರೀತಿ.. ಗರ್ಭಿಣಿ ಆದ ಯುವತಿಗೆ ಕೈಕೊಟ್ಟ ಪ್ರೇಮಿ..!

Publicspot

ಮದುವೆಗೆ ಹೆಣ್ಣುಗಳು ಸಿಗದೆ ಬಳಲುತ್ತಿರುವಾಗ ವಂಚಕರ ಮಾಸ್ಟರ್​ ಪ್ಲ್ಯಾನ್​..!

Publicspot