The Public Spot
ಅಪರಾಧ

ಮದುವೆಗೆ ಹೆಣ್ಣುಗಳು ಸಿಗದೆ ಬಳಲುತ್ತಿರುವಾಗ ವಂಚಕರ ಮಾಸ್ಟರ್​ ಪ್ಲ್ಯಾನ್​..!

ರಾಜ್ಯದಲ್ಲಿ ಅಷ್ಟೇ ಅಲ್ಲ, ಇಡೀ ದೇಶಾದ್ಯಂತ ಹೆಣ್ಣು ಮತ್ತು ಗಂಡಿನ ನಡುವಿನ ಅನುಪಾತ ಭಾರೀ ವ್ಯತ್ಯಾಸ ಆಗಿದೆ. ಈ ಹಿಂದೆ ಹೆಣ್ಣು ಮಗು ಹುಟ್ಟುವುದು ಬೇಡ ಅನ್ನೋ ಕಾರಣಕ್ಕೆ ಅಬಾರ್ಷನ್​ ಮಾಡಿಸಿ ಹೆಣ್ಣು ಭ್ರೂಣಗಳನ್ನು ಕೊಂದ ಪರಿಣಾಮ ಈಗಿನ ಗಂಡು ಮಕ್ಕಳು ಮದುವೆಯಾಗಲು ಹೆಣ್ಣು ಮಕ್ಕಳು ಸಿಗದೆ ಪರದಾಡುತ್ತಿದ್ದಾರೆ. ಇರುವ ಹೆಣ್ಣು ಮಕ್ಕಳು ಸರ್ಕಾರಿ ಕೆಲಸ, ಬೆಂಗಳೂರಲ್ಲಿ ವೃತ್ತಿಯನ್ನೇ ಬಯಸುತ್ತಿರುವ ಕಾರಣದಿಂದ ಮದುವೆ ಆಗದೆ ಅದೆಷ್ಟೋ ಜನರು ಏಕಾಂಗಿ ಬದುಕು ಸವೆಸುವಂತಾಗಿದೆ. ಈ ನಡುವೆ ಮದುವೆ ಅನ್ನೋದನ್ನೇ ಬಂಡವಾಳ ಮಾಡಿಕೊಂಡು ವಂಚನೆಗೆ ಇಳಿದಿದ್ದಾರೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಕಳೆದ 5 ದಿನಗಳ ಹಿಂದಷ್ಟೇ ರೇಖಾ. ಕೆ ಎಂಬಾಕೆಯ ಜೊತೆಯಲ್ಲಿ ಮದುವೆ ಆಗಿತ್ತು. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗಿರಿಯಾಪುರ ಗ್ರಾಮದ ರೇಖಾ ಜೊತೆಗೆ ಹೀರೆಕೆರೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ಫೆಬ್ರವರಿ 06 ರಂದು ಮದುವೆ ನೆರವೇರಿತ್ತು. ಮದುವೆಗೂ ಮುನ್ನವೇ ಇಬ್ಬರು ಮಕ್ಕಳಿರುವ ವಿಚಾರವನ್ನು ಮುಚ್ಚಿಟ್ಟು ಮದುವೆ ಮಾಡಿಸಿದ ಆರೋಪ ಕೇಳಿ ಬಂದಿದೆ. ಮದುವೆಯಾಗಿ ವಾರ ಕಳೆಯುವ ಮುನ್ನವೇ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ.

ಮದುವೆಯಾದ 5ನೇ ದಿನಕ್ಕೆ ಹುಡುಗನ ಬಾಳಲ್ಲಿ ಬಿರುಗಾಳಿ ಎದ್ದಿದೆ. ಮ್ಯಾರೇಜ್ ಬ್ರೋಕರ್​ಗಳ ಎಡವಟ್ಟಿನಿಂದ ಹುಡುಗನ ಜೀವನದಲ್ಲಿ ಬಿರುಗಾಳಿಯೇ ಎದ್ದಿದೆ. ಮೊದಲು ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿರುವ ಮಹಿಳೆಗೆ ಮತ್ತೊಂದು ಮದುವೆ ಮಾಡಿಸಿದ್ದಾರೆ. ಮುಂಚೆ ಮದುವೆ ಆಗಿರುವ ವಿಚಾರವನ್ನು ಮುಚ್ಚಿಟ್ಟು ವಂಚಿಸಿದ ಆರೋಪ ಕೇಲಿ ಬಂದಿದೆ. ತುಮ್ಮಿನಕಟ್ಟಿ ಗ್ರಾಮದ ನಿವಾಸಿ ರವಿ ಜವಳಿ ಅವರನ್ನು ಮದುವೆ ಆಗುವ ಮುನ್ನ ಇಬ್ಬರು ಹೆಣ್ಣು ಮಕ್ಕಳನ್ನ ದತ್ತು ತೆಗೆದುಕೊಂಡಿದ್ದೇನೆ ಅಂತೇಳಿದ್ದ ರೇಖಾ, ಈಗ ವರಸೆ ಬದಲಿಸಿ ಅವರಿಬ್ಬರೂ ನನ್ನ ಮಕ್ಕಳು ಎಂದಿರುವುದು ಹುಡುಗನಿಗೆ ಶಾಕಿಂಗ್ ಸುದ್ದಿಯಾಗಿದೆ.

ರೇಖಾಳ ಕಾಳ್ಳಾಟ ಗೊತ್ತಾಗುತ್ತಿದ್ದಂತೆ ಯುವಕನ ಮನೆಯರು ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ರೇಖಾಳನ್ನು ಹಲಗೇರಿ ಪೊಲೀಸ್ ಠಾಣೆಗೆ ಒಪ್ಪಿಸಿ ಅವಳ ಮೇಲೆ ಕೇಸ್ ದೂರು ದಾಖಲಿಸಿದ್ದಾರೆ. ತುಮಕೂರಿನ ಪಾವಗಡ ಮತ್ತು ಚಿತ್ರದುರ್ಗದ ಹೊಸದುರ್ಗ ಅಂತಾ ಎರಡು ಎರಡು ವಿಳಾಸದ ಗುರುತಿನ ಚೀಟಿ ಹೊಂದಿರುವುದು ಪತ್ತೆಯಾಗಿದೆ. ಈ ಬಗ್ಗೆ ಮಾತನಾಡಿದ ‌ಮಹಿಳೆ, ನನಗೆ ಮದುವೆಯಾಗಿತ್ತು. ಗಂಡನ‌ ಜೊತೆ ಇರಲಿಲ್ಲ. ಎಲ್ಲವನ್ನೂ ಹೇಳಿಯೇ ಮದುವೆಯಾಗಿದ್ದೇನೆ. ನಾನು ಯಾವುದೇ ಹಣ ಪಡೆದಿಲ್ಲ. ನನಗೆ ಮದುವೆ ಬೇಡ. ನಾನು ಊರಿಗೆ ಹೋಗುತ್ತೇನೆ. ‌ಬ್ರೋಕರ್ ಹಣ ತೆಗೆದುಕೊಂಡಿದ್ದಾರೆ. ನನಗೆ ಮಕ್ಕಳು ಇಲ್ಲ. ನಮ್ಮ ಅಕ್ಕನ ಮಕ್ಕಳನ್ನು ಸಾಕಿಕೊಂಡಿದ್ದೇನೆ ಎಂದಿದ್ದಾರೆ.

ಮದುವೆಗಾಗಿ ಹೆಣ್ಣುಗಳನ್ನು ಹುಡುಕುತ್ತಿದ್ದಾಗ ಬ್ರೋಕರ್​ಗಳ ಮೂಲಕ ರೇಖಾಳ ಮಾಹಿತಿ ಸಿಕ್ಕಿತ್ತು. ಆ ಬಳಿಕ ಮದುವೆ ನಿಶ್ಚಯವಾಗಿ ಕಳೆದ 5 ದಿನಗಳಿಂದ ರಂಜನ್ ನಾಯಕ್ ಮತ್ತು ಶಾರದಮ್ಮ ಎಂಬ ಬ್ರೋಕರ್​ಗಳ ಮೂಲಕ ಮದುವೆ ನಿಶ್ಚಯ ಆಗಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಅಸಲಿ ಸಂಗತಿ ಬೆಳಕಿಗೆ ಬಂದಿದ್ದು, ಹಲಗೇರಿ ಪೊಲೀಸ್ ಠಾಣೆಗೆ ರವಿ ಜವಳಿ ದೂರು ನೀಡಿದ್ದಾರೆ. ವಂಚಿಸಿ ಮದುವೆ ಆಗಿರುವ ಮಹಿಳೆ ರೇಖಾ ಮತ್ತು ಬ್ರೋಕರ್ಗಳ ವಿರುದ್ಧ ವಂಚನೆ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ವಿಚಾರಣೆ ನಡೆಸಿ ವಂಚನೆ ಆಗಿದ್ಯಾ..? ವಂಚನೆ ಹಿಂದಿನ ಉದ್ದೇಶ ಏನು..? ಹಣ ಮತ್ತು ಚಿನ್ನಾಭರಣಕ್ಕಾಗಿ ಈ ರೀತಿ ಮಾಡಿದ್ರಾ..? ಅನ್ನೋ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಬೇಕಿದೆ.

Related posts

ಜೈಲಲ್ಲಿ ಪವಿತ್ರಾಗೌಡಗೆ ಮನೆಯೂಟ ಸಿಗುತ್ತಾ..? ಇಲ್ವಾ..? ಹೈಕೋರ್ಟ್‌ ಹೇಳಿದ್ದೇನು..?

Publicspot

Seven Year Dreams End; 7 ವರ್ಷದ ಬಳಿಕ ತಾಯಿ ಆಗುವ ಆಸೆಗೆ ಹುಳಿ ಹಿಂಡಿದ್ದು ಯಾರು..?

Publicspot

Film Actress Case; ಲಿವ್‌ ಇನ್‌ ರಿಲೇಷನ್‌.. ಆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌.. ಕೋರ್ಟ್‌ನಲ್ಲಿ ಜಾಮೀನು..

Publicspot

ಜೈಲಿನಲ್ಲಿ ಚಳಿ.. ಬೆಡ್‌ಶೀಟ್‌ ಕೇಳಿದ ದರ್ಶನ್.. ಎಲ್ಲಾ ಕೈದಿಗಳಿಗೂ ಅನ್ವಯ ಆಗುತ್ತಾ..?

Publicspot

ಜೀವಾವಧಿ ಶಿಕ್ಷೆಗೆ ಗುರಿಯಾಗ್ತಾರಾ ಕಾಂಗ್ರೆಸ್​ ಶಾಸಕ ವಿನಯ್​ ಕುಲಕರ್ಣಿ..?

Publicspot

Suprem Court Guiding: ದರ್ಶನ್‌ ಬೇಲ್‌ ರದ್ದು ಮಾಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು..?

ಯಶವಂತಿ