The Public Spot
ಟ್ರೆಂಡ್

ಚಳಿಗಾಲ ವಿಪರೀತ.. ಎಚ್ಚರ ತಪ್ಪಿದ್ರೆ ಹಾರಿ ಹೋಗುತ್ತೆ ಪ್ರಾಣ ಪಕ್ಷಿ.. ಕಾರಣ ಏನು..?

ಉತ್ತರ ಕರ್ನಾಟಕದ 14 ಜಿಲ್ಲೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಕಲಬುರ್ಗಿ, ಬೀದರ್, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಯಾದಗಿರಿ, ಧಾರವಾಡ, ಕೊಪ್ಪಳ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಮುಂದಿನ ಎರಡೂ ದಿನಗಳ ಕಾಲ ಶೀತಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದೆ. 14 ಜಿಲ್ಲೆಗಳಲ್ಲಿ ತಾಪಮಾನ ದಿಢೀರ್ ಕುಸಿತ ಆಗಿದೆ. ತಾಪಮಾನ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅತಿ ಕಡಿಮೆ ತಾಪಮಾನ ದಾಖಲು ಆಗಿದೆ. ವಿಜಯಪುರ ಜಿಲ್ಲೆಯಲ್ಲಿ 7 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲು ಆಗಿದೆ.

ಉತ್ತರ ಕರ್ನಾಟಕದ ಜನರು ಚಳಿಗೆ ಥಂಡಾ ಹೊಡೆದಿದ್ದದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಚಳಿಯ ಅಬ್ಬರ ಜೋರಾಗಿದೆ. ಜನ ಜೀವನವನ್ನು ತತ್ತರಗೊಳಿಸಿರುವ ಮೈ ಕೊರೆಯುವ ಚಳಿ, ಜನರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಶೀತ ಗಾಳಿ ಬೀಸಿದರೆ ತಾಪಮಾನ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕಳೆದೊಂದು ವಾರದಿಂದ ಶೀತಗಾಳಿ ಹೆಚ್ಚಾಗಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಅಷ್ಟು ಮಾತ್ರವಲ್ಲದೆ ಮಾನವನ ಜೀವಕ್ಕೂ ಹಾನಿಯಾಗುವ ಸಾಧ್ಯತೆ ಇದೆ. ಕಾರಣ ಏನು ಅಂದ್ರೆ ನಿಮ್ಮ ಆರೋಗ್ಯದಲ್ಲಿ ಉಂಟಾಗುವ ಏರುಪೇರು. ನಿಮ್ಮ ಜೀವಕ್ಕೇ ಅಪಾಯ ತರಲಿದೆ.

ಸಾಮಾನ್ಯವಾಗಿ ನಮ್ಮ ದೇಹದ ಉಷ್ಣಾಂಶ 22 ರಿಂದ 28 ಡಿಗ್ರಿ ಸೆಲ್ಸಿಯಸ್​ ಒಳಗೆ ಇರಬೇಕು. ಈ ಉಷ್ಣಾಂಶಕ್ಕಿಂತ ಹೆಚ್ಚಾಗಿ ಅಥವಾ ಅದಕ್ಕಿಂತಲೂ ಉಷ್ಣಾಂಶ ಕಡಿಮೆ ಆಗಿರುವ ವಾತಾವರಣದಲ್ಲಿ ಹೊಂದಾಣಿಕೆ ಆಗುವುದು ಕಷ್ಟ ಸಾಧ್ಯ. ಅಷ್ಟೇ ಅಲ್ಲದೆ ನಿಮ್ಮ ದೇಹ ತನ್ನ ಕಾರ್ಯವನ್ನೇ ನಿಲ್ಲಿಸಿಬಿಡಬಹುದು. ಅದರಲ್ಲೂ ಹೃದಯ ತನ್ನ ರಕ್ತ ಪರಿಚಲನೆಯನ್ನು ನಿಲ್ಲಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜಮ್ಮು ಕಾಶ್ಮೀರ ಸೇರಿದಂತೆ ಶೀತವಲಯ ರಾಷ್ಟ್ರಗಳಲ್ಲಿ ಅಲ್ಲಿನ ಜನರು ಅಲ್ಲೇ ಹುಟ್ಟಿ ಬೆಳೆದು ಶೀತಕ್ಕೆ ಹೊಂದಿಕೊಂಡಿರುತ್ತಾರೆ. ಅಷ್ಟು ಮಾತ್ರವಲ್ಲದೆ ತನ್ನ ದೇಹವನ್ನು ಬಿಸಿಯಾಗಿಡುವ ಮನೆ ಹಾಗೂ ಬಟ್ಟೆ, ಹೊದಿಕೆಗಳನ್ನು ಬಳಸುತ್ತಾರೆ. ಆದರೆ ಸಮಶೀತೋಷ್ಣವಲಯ ಪ್ರದೇಶದಲ್ಲಿ ಆ ವ್ಯವಸ್ಥೆ ಇರುವುದಿಲ್ಲ.

ಸಾಮಾನ್ಯವಾಗಿ ಬೆಳಗ್ಗಿನ ಜಾವ ನಿದ್ರೆಯಿಂದ ಏಳುವ ಜನರು ಎದ್ದ ತಕ್ಷಣ ತೋಟದ ಕಡೆಗೆ ಹೋಗುವುದು ಸರ್ವೇ ಸಾಮಾನ್ಯ. ಜನರು ತಾಪಮಾನವನ್ನೂ ಪರೀಕ್ಷೆ ಮಾಡುವುದಿಲ್ಲ. ಹಾಗೆಯೇ ಹೋಗುವಾಗ ದೇಹ ನಿಧಾನವಾಗಿ ತಣ್ಣಗಾಗುತ್ತಾ ಸಾಗುತ್ತದೆ. ದೇಹದ ಶೀತದಲ್ಲೂ ಪ್ರತಿರೋಧ ತೋರುತ್ತ, ಉಷ್ಣಾಂಶವನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತದೆ. ಆದರೂ ಶೀತ ಅಧಿಕವಾಗಿದ್ದಾಗ ದೇಹದ ಉಷ್ಣತೆ ಕಡಿಮೆ ಆಗಿ ಅರ್ಧ ದೇಹವನ್ನು ಮೀರಿದರೆ ನಿಮ್ಮ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ರಕ್ತದ ಪರಿಚಲನೆ ಕುಂಠಿತವಾಗುತ್ತದೆ. ಹೃದಯ ಸಮಸ್ಯೆ ಇದ್ದವರಿಗೆ ಮಾತ್ರ ಆಗುತ್ತದೆ ಎನ್ನಲು ಸಾಧ್ಯವಿಲ್ಲ. ಈಗಾಗಲೇ ಹೃದಯದಲ್ಲಿ ಬ್ಲಾಕೇಜ್​ ಇದ್ದರೆ ಅತ್ಯಂತ ಶೀಘ್ರವಾಗಿಯೇ ಆಗುತ್ತದೆ. ಇದನ್ನು ಸಡೆನ್ ಹಾರ್ಟ್​ ಅಟ್ಯಾಕ್​ (ಹೃದಯಸ್ತಂಭನ) ಎನ್ನಬಹುದು.

Related posts

33 ಲಕ್ಷ ವಾಚ್​.. ಸಿಎಂ , ಡಿಸಿಎ ಕೊಟ್ಟ ಉತ್ತರ ಏನು ಗೊತ್ತಾ..?

Publicspot

CM, DCM ಕೈಯಲ್ಲಿ 33 ಲಕ್ಷದ ವಾಚ್.. ಕದ್ದಿದ್ದೋ..? ಕೊಂಡಿದ್ದೋ..? ಲೆಕ್ಕ ಕೇಳಿದ ಛಲವಾದಿ..

Publicspot

ಎಲೆಕ್ಟ್ರಿಕ್‌ ವಾಹನ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ದೂರು.. ಕುಮಾರಣ್ಣ ಏನಂತಾರೆ..?

Publicspot

AIBE 20 ಪರೀಕ್ಷೆಯ ಅಡ್ಮಿಟ್‌ ಕಾರ್ಡ್‌ ರಿಲೀಸ್‌‌.. ಡೌನ್‌ಲೋಡ್‌ ಮಾಡೋದು ಹೇಗೆ..?

Publicspot

ಸುಳ್ಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿ ಸಿಕ್ಕಿಬಿತ್ತಾ ರಾಮೇಶ್ವರಂ ಕೆಫೆ..?

Publicspot

CM Meeting; ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಭೆ.. ಬರ್ತಾರಾ ರೈತರು..?

Publicspot