The Public Spot
ಟ್ರೆಂಡ್

ಎಲೆಕ್ಟ್ರಿಕ್‌ ವಾಹನ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ದೂರು.. ಕುಮಾರಣ್ಣ ಏನಂತಾರೆ..?

BMTC ಎಲೆಕ್ಟ್ರಿಕ್ ಬಸ್ ಚಾಲಕರಿಂದ ಬೆಂಗಳೂರಿನಲ್ಲಿ ಸಾಲು ಸಾಲು ಅಪಘಾತ ಪ್ರಕರಣ ದಾಖಲಾಗ್ತಿದ್ದು, ಬಿಎಂಟಿಸಿಗೆ ಕಿಲ್ಲರ್ ಹಣೆಪಟ್ಟಿಯನ್ನ ತಂದುಕೊಟ್ಟಿದ್ದಾರೆ. ಇವಿ ಬಸ್‌ ‌ಚಾಲಕರು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ Ev ಬಸ್‌ ಚಾಲಕರಿಗೆ ಕೋಕ್ ಕೊಡುವ ಬಗ್ಗೆ ಮಹತ್ವದ ಚರ್ಚೆ ನಡೆಯುತ್ತಿದೆ. ಎಲೆಕ್ಟ್ರಿಕ್ ಬಸ್‌ಗಳಲ್ಲಿ ಇನ್ಮುಂದೆ BMTC ಸಂಸ್ಥೆಯ ಡ್ರೈವರ್‌ಗಳನ್ನು ಬಳಕೆ ಬಗ್ಗೆಯೂ ಚರ್ಚೆ ಆಗಿದೆ. ಈಗಾಗಲೇ ಎಲೆಕ್ಟ್ರಿಕ್ ಬಸ್ ಚಾಲಕರಿಂದ ಸಾಲು ಸಾಲು ಆ್ಯಕ್ಸಿಡೆಂಟ್ ಆಗ್ತಿರುವುದು ಬೆಳಕಿಗೆ ಬಂದಿದೆ. ಕಳೆದ ಶನಿವಾರ ಅಷ್ಟೇ ಎಲೆಕ್ಟ್ರಿಕ್ ಬಸ್ ಚಾಲಕನ ನಿರ್ಲಕ್ಷ್ಯದಿಂದ ವಿಜಯನಗರದ RPC ಲೇಔಟ್‌ನಲ್ಲಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಈ ಪ್ರಕರಣದ ಬಳಿಕೆ ಸಾರಿಗೆ ಇಲಾಖೆ ಮೇಜರಿ ಸರ್ಜರಿಗೆ ಮುಂದಾಗಿದೆ ಎನ್ನಲಾಗಿದೆ.

ಎಲೆಕ್ಟ್ರಿಕ್ ಬಸ್ ಚಾಲಕರ ನಿರ್ಲಕ್ಷ್ಯದ ಬಗ್ಗೆ ಪದೇ ಪದೇ ದೂರು ಬರ್ತಿದ್ದು, ಬಿಎಂಟಿಸಿ ಬಸ್‌ ಚಾಲಕರನ್ನು ಎಲೆಕ್ಟ್ರಿಕ್ ಬಸ್ ನಿಯೋಜನೆ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಎಲೆಕ್ಟ್ರಿಕ್ ಬಸ್ ಚಾಲಕರ ಎಡವಟ್ಟಿನ ಬಳಿಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದು, ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಗೂ ಸಾರಿಗೆ ಸಚಿವರು ಪತ್ರ ಬರೆದಿದ್ದಾರೆ. ಎಲೆಕ್ಟ್ರಿಕ್ ಬಸ್ ಕೇಂದ್ರ ಸರ್ಕಾರದ ಅಧೀನದಲ್ಲಿ ಇರೋದರಿಂದ ಕೇಂದ್ರ ಸಾರಿಗೆ ಇಲಾಖೆಗೂ ಸಚಿವರು ಪತ್ರ ಬರೆದಿದ್ದಾರೆ. ಬೆಂಗಳೂರಿಗರ ಪಾಲಿಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರು ಕಂಟಕವಾಗಿ ಪರಿಣಮಿಸಿದ್ದಾರೆ. ಹಲವರ ಪ್ರಾಣವನ್ನ ಕಸಿದ ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಬಿಎಂಟಿಸಿ ಕೋಕ್ ನೀಡಲು ಮುಂದಾಗುವ ಸಾಧ್ಯತೆ ಇದೆ.

ಕಳೆದ ವಾರ ಎಲೆಕ್ಟ್ರಿಕ್ ಬಸ್ ಚಾಲಕರಿಂದ ಸಾಲು ಸಾಲು ಪ್ರತಿಭಟನೆಗಳು, ಕೆಲಸ ಬಹಿಷ್ಕರಿಸಿ ಪ್ರತಿಭಟನೆ ಮಾಡಿದ್ದರು. BMTC ಇವಿ ಬಸ್ ಚಾಲಕರಿಂದ ಆ್ಯಕ್ಸಿಡೆಂಟ್ ಪ್ರಕರಣ ಹೆಚ್ಚುತ್ತಿವೆ. ಎಲೆಕ್ಟ್ರಿಕ್ ಬಸ್ಸುಗಳ ಆಪರೇಟರ್‌ಗಳ ಕಾರ್ಯ ಕ್ಷಮತೆಯಲ್ಲಿ ಲೋಪ ಆಗ್ತಿದೆ. ಕೇಂದ್ರ ಸರ್ಕಾರ ತಕ್ಷಣವೇ ಮಧ್ಯ ಪ್ರವೇಶ ಮಾಡಬೇಕು ಅಂತಾ ಪತ್ರ ಬರೆದಿದ್ದಾರೆ. ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿಗೆ ಸಚಿವ ರಾಮಲಿಂಗಾ ರೆಡ್ಡಿ ಪತ್ರ ಬರೆದಿದ್ದು, ತಾಂತ್ರಿಕ ವೈಫಲ್ಯಗಳು, ಬ್ಯಾಟರಿ ಸಂಬಂಧಿತ ಅವಘಡಗಳು, ಅಪಘಾತ ಪ್ರಮಾಣದಲ್ಲಿ ತೀವ್ರ ಹೆಚ್ಚಳ ಆಗಿದೆ. ಬಸ್ಸುಗಳ ಕಳಪೆ ನಿರ್ವಹಣೆ, ಕ್ರಮಬದ್ದ ಮತ್ತು ಸಮಗ್ರ ಚಾಲಕರ ತರಬೇತಿ ಕೊರತೆ, ಬಸ್ಸುಗಳ ನಿರಂತರ ಅಲಭ್ಯತೆ, ಚಾಲಕರ ಕೊರತೆ, ಚಾಲಕರ ದಿಢೀರ್ ಮುಷ್ಕರಗಳಿಂದ ಸಮಸ್ಯೆ ಆಗ್ತಿದೆ ಎಂದಿದ್ದಾರೆ ಸಚಿವ ರಾಮಲಿಂಗಾ ರೆಡ್ಡಿ.

ಎಲೆಕ್ಟ್ರಿಕ್ ಬಸ್‌ಗಳಲ್ಲಿ ತಾಂತ್ರಿಕ ದೋಷಗಳು ಹೆಚ್ಚಾಗಿ ಕಂಡು ಬರ್ತಿವೆ. ಬ್ಯಾಟರಿಗಳು ನಿಗದಿತ ಅವಧಿವರೆಗೂ ಬರುತ್ತಿಲ್ಲ. ಅವುಗಳನ್ನು ಚಾರ್ಜ್ ಮಾಡಲು ಎರಡು ಗಂಟೆಗಳ ಕಾಲಾವಕಾಶ ಬೇಕು. ಅಷ್ಟರಲ್ಲಿ ಚಾಲಕರ ಶಿಫ್ಟ್ ಮುಗಿದೇ ಹೋಗಿರುತ್ತದೆ. ಎಲೆಕ್ಟ್ರಿಕ್‌ ಬಸ್‌ಗಳ ಚಾಲಕರ ದಿಢೀರ್ ಮುಷ್ಕರದ ಕಾರಣದಿಂದ ಸಾರ್ವಜನಿಕರಿಗೆ ಸಮಸ್ಯೆ ಆಗಿದೆ. ಸಂಬಳ ಏರಿಕೆ, ಬೋನಸ್ ಬೇಡಿಕೆ ಕಾರಣಗಳಿಂದ ಎಲೆಕ್ಟ್ರಾನಿಕ್ ಬಸ್‌ಗಳ ಚಾಲಕರು ದಿಢೀರ್ ಮುಷ್ಕರ ನಡೆಸುತ್ತಾರೆ. ಬ್ಯಾಟರಿ ಸಂಬಂಧಿಸಿದ ಸಮಸ್ಯೆಗಳು ಹಾಗೂ ಬ್ರೇಕ್ ಡೌನ್ ಬಗ್ಗೆ ತಕ್ಷಣವೇ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಬಿಎಂಟಿಸಿಗೆ ದೊಡ್ಡ ಕೆಟ್ಟ ಹೆಸರು ಬರುತ್ತದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಗ್ರಹ ಮಾಡಿದ್ದಾರೆ. ಎಲೆಕ್ಟ್ರಿಕ್ ಬಸ್ಸುಗಳಲ್ಲಿ ಅನುಭವಿ ಚಾಲಕರು ಇಲ್ಲ. ವಾರ್ನಿಂಗ್ ಕೊಟ್ಟರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಬಸ್ಸುಗಳ ನಿರ್ವಹಣೆ ಎಲ್ಲವೂ ಅವರದ್ದೇ ಆಗಿದೆ ಎಂದಿದ್ದಾರೆ.

ರಾಜ್ಯಕ್ಕೆ ಎಲೆಕ್ಟ್ರಾನಿಕ್ ಬಸ್‌ಗಳನ್ನು ನೀಡಿರುವುದು ಸಂತೋಷ. ಆದರೆ ಕ್ವಾಲಿಟಿ ವಿಚಾರದಲ್ಲಿ ರಾಜ್ಯ ಸರ್ಕಾರದ ತಕರಾರು ಇದೆ. ರಾಜ್ಯದ ಡೀಸೆಲ್ ಬಸ್‌ಗಳಷ್ಟು ಕ್ವಾಲಿಟಿ, ಕೇಂದ್ರದ ಎಲೆಕ್ಟ್ರಿಕ್ ಬಸ್‌ಗಳು ಇಲ್ಲ ಎಂದಿರುವ ಸಚಿವರು, ಎಲೆಕ್ಟ್ರಿಕ್‌ ಬಸ್‌ ಡ್ರೈವರ್‌ಗಳು ನಮ್ಮವರಷ್ಟು ತರಬೇತಿ ಹೊಂದಿಲ್ಲ. ಬ್ರೇಕ್, ಬ್ಯಾಟರಿ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರ್ತಿವೆ. ತಾಂತ್ರಿಕ ವೈಫಲ್ಯಗಳು. ಬಸ್‌ಗಳ ನಿರಂತರ ಅಲಭ್ಯತೆ ಬಗ್ಗೆ ರಾಮಲಿಂಗಾರೆಡ್ಡಿ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರ ಈ ಪತ್ರಕ್ಕೆ ಏನು ಉತ್ತರ ಕೊಡುತ್ತೆ ಅನ್ನೋದನ್ನು ಕಾದು ನೋಡ್ಬೇಕು. ಒಟ್ಟಾರೆ ಎಲೆಕ್ಟ್ರಿಕ್‌ ಬಸ್‌ ಚಾಲಕರನ್ನು ಏಜೆನ್ಸಿ ಅವರು ನೇಮಕ ಮಾಡುತ್ತಾರೆ. ಹೀಗಾಗಿ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ.

Related posts

Today Blood moon: ರಕ್ತ ಚಂದ್ರಗ್ರಹ.. ಎಲ್ಲೆಲ್ಲಿ ಕಾಣುತ್ತೆ..? ಏನಿದ್ರ ವಿಶೇಷ..

Publicspot

Baby Inside Another Baby ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಮಗು.. ಅಚ್ಚರಿ ಮತ್ತು ವಿಸ್ಮಯ..

Publicspot

ಕಾಳಸಂತೆಯಲ್ಲಿ ಸಿಲಿಂಡರ್‌ ಮಾರಾಟ ಮಾಡಿದ್ರೆ ಹುಷಾರ್‌..! ಬರೀ ಮಾತಿಗಾ..?

Publicspot

20 decades Ganesha Pooja At Home: ಈ ಗಣೇಶನಿಗೆ ಪೂಜೆ ಸಲ್ಲಿಸಿದ್ರೆ ಆಗುತ್ತಂತೆ ಇಷ್ಟಾರ್ಥ ಸಿದ್ಧಿ..!

Publicspot

CM Meeting; ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಭೆ.. ಬರ್ತಾರಾ ರೈತರು..?

Publicspot

RSS VS DSS.. ಮತ್ತೆ ಸಂಘದ ವಿರುದ್ಧ ಗುಡುಗಿದ ಪ್ರಿಯಾಂಕ್‌ ಖರ್ಗೆ

Publicspot