The Public Spot
ಅಪರಾಧ

husband Suicide : ಗಂಡನ ಮನೆ ಬಿಟ್ಟ ಹೆಂಡತಿ ತವರು ಸೇರಿದ್ಲು.. ನದಿಗೆ ಹಾರಿದ ಗಂಡ..

ಕೂಡಿ ಬಾಳಿದರೆ ಸ್ವರ್ಗ ಸುಖ ಅನ್ನೋ ಮಾತು ಈ ಸ್ಟೋರಿಯ ಕಥಾ ನಾಯಕ ಹಾಗೂ ನಾಯಕಿಗೆ ಹೇಳಿ ಮಾಡಿಸಿದಂತಿದೆ. ಒಳ್ಳೆ ಕೆಲಸ. ಕೈ ತುಂಬ ಸಂಬಳ. ಅಪ್ಪ, ಅಮ್ಮ, ಹೆಂಡತಿ ಜೊತೆಗೆ ಇಬ್ಬರು ಮಕ್ಕಳು ಇದ್ದರು. ಆದರೆ ಕೊರಳೊಡ್ಡಿ ಮಾಂಗಲ್ಯ ಕಟ್ಟಿಸಿಕೊಂಡು ಧರ್ಮಪತ್ನಿ ಆಗಿದ್ದ ಹೆಂಡತಿಗೆ ಕೂಡು ಕುಟುಂಬ ಸಾಕಾಗಿತ್ತು. ಬೇರೆ ಮನೆ ಮಾಡೋಣ ಅನ್ನೋ ಹಠಕ್ಕೆ ಬಿದ್ದಿದ್ದಳು. ಯಾವಾಗ ಗಂಡ ಇಲ್ಲ ಅಂತಾ ತಲೆ ಅಲ್ಲಾಡಿಸಿದ್ನೋ, ಸಣ್ಣ ಸಣ್ಣ ವಿಷ್ಯಕ್ಕೂ ಗಲಾಟೆ ಮಾಡೋದು ಮಾಡ್ತಿದ್ಲಂತೆ. ಹೀಗಾಗಿ ಸಂಸಾರ ಅನ್ನೋದು ಸೂತ್ರವಿಲ್ಲದ ಗಾಳಿಪಟ ಆದಂತೆ ಆಗಿತ್ತು. ಬದುಕಿನ ಮೇಲೆ ಆಸೆಯನ್ನೇ ಬಿಟ್ಟವನು ನದಿ ಹಾರಿ ಪ್ರಾಣ ಬಿಟ್ಟಿದ್ದಾನೆ.

ಸಂಸಾರ ಅಂದ್ರೇನೇ ಹಾಗೆ, ಪ್ರೀತಿ ಜೊತೆಗೆ ಹೊಂದಾಣಿಕೆ ಅನ್ನೋದು ತುಂಬಾ ಮುಖ್ಯ. ಇಬ್ಬರ ಮಧ್ಯೆ ಮನಸ್ತಾಪಗಳು ಶುರುವಾದ್ರೆ ಬದುಕು ಅನ್ನೋದು ನರಕ ಆಗುತ್ತದೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಚಿಕ್ಕ ಉಪ್ಪೇರಿ ನಿವಾಸಿ ಈರಣ್ಣ ಆರೋಗ್ಯ ಇಲಾಖೆಯಲ್ಲಿ 108 ಸಿಬ್ಬಂದಿಯಾಗಿ ಕೆಲಸ‌ ಮಾಡ್ತಿದ್ದ. 13 ವರ್ಷದ ಹಿಂದೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಲಸಗಿ ಗ್ರಾಮದ ಹುಡುಗಿಯನ್ನು ಮದುವೆ ಮಾಡಿಕೊಂಡು ಇಬ್ಬರು ಮುದ್ದಾದ ಮಕ್ಕಳೂ ಇದ್ದರು. ಆದರೆ ಗಂಡ ಹೆಂಡತಿಯ ಸರಸ ಸಲ್ಲಾಪ ಸ್ವಲ್ಪ ದಿನದಲ್ಲೇ ಸಪ್ಪೆಯಾಗಿತ್ತು. ಸಣ್ಣ ಸಣ್ಣ ವಿಷ್ಯಕ್ಕೂ ಜಗಳ ನಡೆಯುತ್ತಲೇ ಇತ್ತು.

ಅಪ್ಪ ಅಮ್ಮನ ಜೊತೆಗೆ ಇದ್ದ ಈರಣ್ಣನಿಗೆ ಸಪರೇಟ್‌ ಮನೆ ಮಾಡೋಣ ಅನ್ನೋ ಹೆಂಡತಿಯ ಮಾತು ಹಿಡಿಸಿರಲಿಲ್ಲ. ಹೆಂಡತಿಯ ಹಠಕ್ಕೆ ಈರಣ್ಣನಿಗೆ ಸುತರಾಮ್‌ ಒಪ್ಪಲಿಲ್ಲ. ಅಪ್ಪ-ಅಮ್ಮನನ್ನ ಬಿಟ್ಟು ನಾನು ಎಲ್ಲೂ ಬರಲ್ಲ ಎಂದುಬಿಟ್ಟಿದ್ದ. ಇದ್ರಿಂದ ಸಿಟ್ಟಿಗೆದ್ದ ಹೆಂಡ್ತಿ ತವರು ಸೇರಿಕೊಂಡಿದ್ದಳು. ಆ ಬಳಿಕ ಊರಿನ ಹಿರಿಯರು ಸೇರಿ ರಾಜಿ ಪಂಚಾಯ್ತಿಯನ್ನೂ ಮಾಡಿದ್ರು. ಆದರೂ ಹೆಂಡತಿ ಮಾತ್ರ ಸರಿಯಾಗುವ ಮನಸ್ಸು ಮಾಡಲಿಲ್ಲ. ದಾಂಪತ್ಯದಲ್ಲಿ ಮನಸ್ತಾಪ ಜಾಸ್ತಿ ಆಗ್ತಿದ್ದಂತೆ ಈರಣ್ಣ ಕುಡಿತದ ದಾಸನಾಗಿದ್ದ.

ಇಷ್ಟೆಲ್ಲಾ ಆಗ್ತಿದ್ದ ಹಾಗೆ ಕುಡುಕ ಗಂಡನ ಜೊತೆ ಹೇಗೆ ಸಂಸಾರ ಮಾಡಲಿ ಅಂತಾ ಮತ್ತೆ ತವರು ಸೇರಿಕೊಂಡ ಹೆಂಡತಿ. ಗಂಡನ ಮನೆಗೆ ವಾಪಸ್​ ಆಗಿರಲಿಲ್ಲ. ನನ್ನ ಜೀವನ ಇಷ್ಟೆ. ಹಾಳಾಗಿ ಹೋಯ್ತು ಅನ್ನೋ ಬೇಸರಲ್ಲಿ ಗಂಡ ನಾರಾಯಣಪುರ ಬಲದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನಸ್ತಾಪ ಅನ್ನೋದು ಅಮಾಯಕನ ಜೀವವನ್ನೇ ತೆಗೆದಿದೆ. ಸಂಸಾರ ಅಂದ್ಮೇಲೆ ಇಬ್ಬರೂ ಕೂಡಿ ಬಾಳ್ಬೇಕು ಅನ್ನೋದು ಹಿರಿಯರ ಮಾತು. ಆದರೆ ಈಗ ಹಿರಿಯರು ಇದ್ರೆ ನಾನು ಮದುವೆ ಆಗಲ್ಲ. ನಾನು ಮದುವೆ ಆಗುವ ಹುಡುಗ ಅಮ್ಮ ಅಪ್ಪನನ್ನು ಬಿಟ್ಟು ಬರಬೇಕು ಅನ್ನೋ ಹೆಣ್ಣು ಮಕ್ಕಳು ಬದುಕನ್ನು ಬರಡಾಗಿಸುತ್ತಿದ್ದಾರೆ ಅನ್ನಬಹುದು.ಕೂಡಿ ಬಾಳಿದರೆ ಸ್ವರ್ಗ ಸುಖ ಅನ್ನೋ ಮಾತು ಈ ಸ್ಟೋರಿಯ ಕಥಾ ನಾಯಕ ಹಾಗೂ ನಾಯಕಿಗೆ ಹೇಳಿ ಮಾಡಿಸಿದಂತಿದೆ. ಒಳ್ಳೆ ಕೆಲಸ. ಕೈ ತುಂಬ ಸಂಬಳ. ಅಪ್ಪ, ಅಮ್ಮ, ಹೆಂಡತಿ ಜೊತೆಗೆ ಇಬ್ಬರು ಮಕ್ಕಳು ಇದ್ದರು. ಆದರೆ ಕೊರಳೊಡ್ಡಿ ಮಾಂಗಲ್ಯ ಕಟ್ಟಿಸಿಕೊಂಡು ಧರ್ಮಪತ್ನಿ ಆಗಿದ್ದ ಹೆಂಡತಿಗೆ ಕೂಡು ಕುಟುಂಬ ಸಾಕಾಗಿತ್ತು. ಬೇರೆ ಮನೆ ಮಾಡೋಣ ಅನ್ನೋ ಹಠಕ್ಕೆ ಬಿದ್ದಿದ್ದಳು. ಯಾವಾಗ ಗಂಡ ಇಲ್ಲ ಅಂತಾ ತಲೆ ಅಲ್ಲಾಡಿಸಿದ್ನೋ, ಸಣ್ಣ ಸಣ್ಣ ವಿಷ್ಯಕ್ಕೂ ಗಲಾಟೆ ಮಾಡೋದು ಮಾಡ್ತಿದ್ಲಂತೆ. ಹೀಗಾಗಿ ಸಂಸಾರ ಅನ್ನೋದು ಸೂತ್ರವಿಲ್ಲದ ಗಾಳಿಪಟ ಆದಂತೆ ಆಗಿತ್ತು. ಬದುಕಿನ ಮೇಲೆ ಆಸೆಯನ್ನೇ ಬಿಟ್ಟವನು ನದಿ ಹಾರಿ ಪ್ರಾಣ ಬಿಟ್ಟಿದ್ದಾನೆ.

ಸಂಸಾರ ಅಂದ್ರೇನೇ ಹಾಗೆ, ಪ್ರೀತಿ ಜೊತೆಗೆ ಹೊಂದಾಣಿಕೆ ಅನ್ನೋದು ತುಂಬಾ ಮುಖ್ಯ. ಇಬ್ಬರ ಮಧ್ಯೆ ಮನಸ್ತಾಪಗಳು ಶುರುವಾದ್ರೆ ಬದುಕು ಅನ್ನೋದು ನರಕ ಆಗುತ್ತದೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಚಿಕ್ಕ ಉಪ್ಪೇರಿ ನಿವಾಸಿ ಈರಣ್ಣ ಆರೋಗ್ಯ ಇಲಾಖೆಯಲ್ಲಿ 108 ಸಿಬ್ಬಂದಿಯಾಗಿ ಕೆಲಸ‌ ಮಾಡ್ತಿದ್ದ. 13 ವರ್ಷದ ಹಿಂದೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಲಸಗಿ ಗ್ರಾಮದ ಹುಡುಗಿಯನ್ನು ಮದುವೆ ಮಾಡಿಕೊಂಡು ಇಬ್ಬರು ಮುದ್ದಾದ ಮಕ್ಕಳೂ ಇದ್ದರು. ಆದರೆ ಗಂಡ ಹೆಂಡತಿಯ ಸರಸ ಸಲ್ಲಾಪ ಸ್ವಲ್ಪ ದಿನದಲ್ಲೇ ಸಪ್ಪೆಯಾಗಿತ್ತು. ಸಣ್ಣ ಸಣ್ಣ ವಿಷ್ಯಕ್ಕೂ ಜಗಳ ನಡೆಯುತ್ತಲೇ ಇತ್ತು.

ಅಪ್ಪ ಅಮ್ಮನ ಜೊತೆಗೆ ಇದ್ದ ಈರಣ್ಣನಿಗೆ ಸಪರೇಟ್‌ ಮನೆ ಮಾಡೋಣ ಅನ್ನೋ ಹೆಂಡತಿಯ ಮಾತು ಹಿಡಿಸಿರಲಿಲ್ಲ. ಹೆಂಡತಿಯ ಹಠಕ್ಕೆ ಈರಣ್ಣನಿಗೆ ಸುತರಾಮ್‌ ಒಪ್ಪಲಿಲ್ಲ. ಅಪ್ಪ-ಅಮ್ಮನನ್ನ ಬಿಟ್ಟು ನಾನು ಎಲ್ಲೂ ಬರಲ್ಲ ಎಂದುಬಿಟ್ಟಿದ್ದ. ಇದ್ರಿಂದ ಸಿಟ್ಟಿಗೆದ್ದ ಹೆಂಡ್ತಿ ತವರು ಸೇರಿಕೊಂಡಿದ್ದಳು. ಆ ಬಳಿಕ ಊರಿನ ಹಿರಿಯರು ಸೇರಿ ರಾಜಿ ಪಂಚಾಯ್ತಿಯನ್ನೂ ಮಾಡಿದ್ರು. ಆದರೂ ಹೆಂಡತಿ ಮಾತ್ರ ಸರಿಯಾಗುವ ಮನಸ್ಸು ಮಾಡಲಿಲ್ಲ. ದಾಂಪತ್ಯದಲ್ಲಿ ಮನಸ್ತಾಪ ಜಾಸ್ತಿ ಆಗ್ತಿದ್ದಂತೆ ಈರಣ್ಣ ಕುಡಿತದ ದಾಸನಾಗಿದ್ದ.

ಇಷ್ಟೆಲ್ಲಾ ಆಗ್ತಿದ್ದ ಹಾಗೆ ಕುಡುಕ ಗಂಡನ ಜೊತೆ ಹೇಗೆ ಸಂಸಾರ ಮಾಡಲಿ ಅಂತಾ ಮತ್ತೆ ತವರು ಸೇರಿಕೊಂಡ ಹೆಂಡತಿ. ಗಂಡನ ಮನೆಗೆ ವಾಪಸ್​ ಆಗಿರಲಿಲ್ಲ. ನನ್ನ ಜೀವನ ಇಷ್ಟೆ. ಹಾಳಾಗಿ ಹೋಯ್ತು ಅನ್ನೋ ಬೇಸರಲ್ಲಿ ಗಂಡ ನಾರಾಯಣಪುರ ಬಲದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನಸ್ತಾಪ ಅನ್ನೋದು ಅಮಾಯಕನ ಜೀವವನ್ನೇ ತೆಗೆದಿದೆ. ಸಂಸಾರ ಅಂದ್ಮೇಲೆ ಇಬ್ಬರೂ ಕೂಡಿ ಬಾಳ್ಬೇಕು ಅನ್ನೋದು ಹಿರಿಯರ ಮಾತು. ಆದರೆ ಈಗ ಹಿರಿಯರು ಇದ್ರೆ ನಾನು ಮದುವೆ ಆಗಲ್ಲ. ನಾನು ಮದುವೆ ಆಗುವ ಹುಡುಗ ಅಮ್ಮ ಅಪ್ಪನನ್ನು ಬಿಟ್ಟು ಬರಬೇಕು ಅನ್ನೋ ಹೆಣ್ಣು ಮಕ್ಕಳು ಬದುಕನ್ನು ಬರಡಾಗಿಸುತ್ತಿದ್ದಾರೆ ಅನ್ನಬಹುದು.

Related posts

ಗಣೇಶ ಮೂರ್ತಿಗೆ ಚಪ್ಪಲಿ ಹಾರ.. ಹಿಂದೂ ಸಮಾಜದ ಆಕ್ರೋಶ.. ಮಹಿಳೆ ಬಂಧನ

Publicspot

ಕಾಯೋ ದೈವವೇ ಕ್ರೂರವಾದರೆ.. ರಕ್ಷಣೆ ಎಲ್ಲಿದೆ..? ಅಯ್ಯೋ ದೇವರೇ..?

Publicspot

Dharmasthala Issue: ಧರ್ಮಸ್ಥಳ ವಿಚಾರದಲ್ಲಿ ಸರ್ಕಾರ ಮತ್ತೆ ಎಡವಟ್ಟುಗಳು..

Publicspot

Online Game Murder; ಜೂಜಿನ ಚಟಕ್ಕೆ ಬಿದ್ದವನು ಕೊಲೆಗಾರನಾಗ ಕಥೆ.. ಬಾಡಿಗೆ ಮನೆ ದುರಂತ..

Publicspot

Kolar malur MLA Case; ಕಾಂಗ್ರೆಸ್‌ ಶಾಸಕನ ಸ್ಥಾನ ಅನರ್ಹ.. ಸುಪ್ರೀಂಕೋರ್ಟ್‌ನಲ್ಲಿ ಸಿಗುತ್ತಾ ರಿಲೀಫ್..?

Publicspot

Mother Murder ; ಪ್ರೀತಿಗಾಗಿ ತಾಯಿಯನ್ನೇ ಕೊಂದ ಅಪ್ರಾಪ್ತ ಹುಡುಗಿ..!

Publicspot