The Public Spot
ಅಪರಾಧ

ಜೈಲಿನಲ್ಲಿ ಚಳಿ.. ಬೆಡ್‌ಶೀಟ್‌ ಕೇಳಿದ ದರ್ಶನ್.. ಎಲ್ಲಾ ಕೈದಿಗಳಿಗೂ ಅನ್ವಯ ಆಗುತ್ತಾ..?

ಬೆಂಗಳೂರಿನ ಪಟ್ಟಣಗೆರೆ ಶೆಡ್‌‌ನಲ್ಲಿ ರೇಣುಕಾಸ್ವಾಮಿ ವಿರುದ್ಧ ಅಬ್ಬರಿಸಿದ ಡಿ ಗ್ಯಾಂಗ್‌ ಕಾನೂನು ಸಂಕಷ್ಟಕ್ಕೆ ಸಿಲುಕಿ ಪರಪ್ಪನ ಅಗ್ರಹಾರ ಜೈಲಿನಲ್ಲಿದೆ. ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್‌ ಮಾಡ್ತಿದ್ದ ರೇಣುಕಾಸ್ವಾಮಿ ಮೇಲೆ ಪ್ರತಾಪ ತೋರಿಸಿದ್ದವರು ಕಂಬಿ ಹಿಂದೆ ಕಾಲ ಕಳೆಯುವಂತಾಗಿದೆ. ಇದಿಗ ಚಲಿಗಾಲ ಆರಂಭ ಆಗಿದ್ದು, ಜೈಲಿನಲ್ಲಿ ಚಳಿ ಆಗ್ತಿದೆ ಎಂದು ಕೋರ್ಟ್‌ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಜೈಲಿನಲ್ಲಿ ಅಗತ್ಯ ವಸ್ತುಗಳನ್ನ ಕೊಡೋಕೆ ಏನು..? ಜೈಲು ನಿಯಮದಲ್ಲಿ ಏನೇನು ಇದೆಯೋ ಅದನ್ನ ಕೊಡಿ. ಚಳಿ ಇದೆ, ಬೆಡ್​​ಶೀಟ್ ಕೊಡಲ್ಲ ಅಂದ್ರೆ ಹೇಗೆ..? ಅವರು ಮನುಷ್ಯರೇ ಅಲ್ವಾ..? ಅಂತಾ ಸರ್ಕಾರದ ಪರ ವಕೀಲರನ್ನು ಪ್ರಶ್ನೆ ಮಾಡಿದ್ದಾರೆ.

​​​ರೇಣುಕಾಸ್ವಾಮಿ ಕೊಲೆ ಕೇಸ್‌ನ 2ನೇ ಆರೋಪಿ ದರ್ಶನ್, ಜೈಲಿನಲ್ಲಿ ಸಿಕ್ಕಾಪಟ್ಟೆ ಚಳಿ ಇದೆ. ರಾತ್ರಿ ನಿದ್ರೆ ಮಾಡಲು ಸಾಧ್ಯವಾಗದೇ ಎದ್ದು ಕುಳಿತುಕೊಳ್ತಿದ್ದೇವೆ, ಆದ್ರಿಂದ ಜೈಲಿನಲ್ಲಿ ನಮಗೆ ಬೆಡ್​​​​ಶೀಟ್ ಒದಗಿಸಿ ಎಂದು ಕೋರ್ಟ್‌ನಲ್ಲಿ ಅವಲತ್ತುಕೊಂಡಿದ್ದಾರೆ. ಮತ್ತೋರ್ವ ಕೊಲೆ ಆರೋಪಿ, ದರ್ಶನ್‌ ಮ್ಯಾನೇಜರ್‌ ಆಗಿದ್ದ ನಾಗರಾಜ್​​​​, ನಮಗೆ ಮನೆಯವರು ಕಂಬಳಿಯನ್ನ ಕೊಟ್ಟಿದ್ದಾರೆ. ಆದರೆ ಅಧಿಕಾರಿಗಳು ನಮಗೆ ಬೆಡ್‌ಶೀಟ್‌ ನೀಡುತ್ತಿಲ್ಲ. ಜೈಲಿನಲ್ಲಿ ಚಳಿ‌ ಜಾಸ್ತಿ ಇದೆ, ದಯವಿಟ್ಟು ಕಂಬಳಿ ಕೊಡಿಸಿ ಎಂದು ಮನವಿ ಮಾಡಿದ್ದರು.

ಐಷಾರಾಮಿ ಜೀವನ ಮಾಡುತ್ತಿದ್ದ ದರ್ಶನ್‌ ಹಾಗೂ ಡಿ. ಗ್ಯಾಂಗ್‌, ಜೈಲಿನಲ್ಲಿ ಹಾಸಿಗೆ ದಿಂಬಿಗೂ ಪರದಾಡುವಂತಾಗಿದೆ. ನವೆಂಬರ್ ಚಳಿಗೆ ಕಂಬಿ ಹಿಂದೆ ಗಢಗಢನೆ ನಡುಗುವಂತಾಗಿದೆ. ಇದೀಗ ಕೋರ್ಟ್‌ ಜೈಲಿನ ಮ್ಯಾನ್ಯುಯಲ್‌ ಪ್ರಕಾರ ಏನು ಕೊಡಬೇಕೋ ಅದನ್ನು ಕೊಡಿ ಎಂದಿದೆ. ಈ ಹಿಂದೆಯೂ ಈ ವಿಚಾರವಾಗಿ ಕೋರ್ಟ್‌ ಇದೇ ರೀತಿ ಹೇಳಿತ್ತು. ಆದರೂ ಸಮಸ್ಯೆ ಬಗೆಹರಿದಿಲ್ಲ. ಇದೀಗ ಟ್ರಯಲ್ ದಿನಾಂಕ ನಿಗದಿ ಮಾಡಲು ಕೋರ್ಟ್‌ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾದ ವೇಳೆ ದರ್ಶನ್​ ಹಾಗೂ ನಾಗರಾಜ್​ ಬೆಡ್​ಶೀಟ್​ಗಾಗಿ ಮನವಿ ಮಾಡಿದ್ರು. ಜೈಲಿನ ಚಳಿ ದಾಸನನ್ನು ನಡುಗಿಸುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಂಡ ನ್ಯಾಯಾಧೀಶರೂ ಕೂಡ ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ದರ್ಶನ್‌ಗೆ ಜೈಲಿನ ಮ್ಯಾನ್ಯುಯೆಲ್‌ ಪ್ರಕಾರ ಏನು ಕೊಡಬೇಕೋ ಅದನ್ನು ಕೊಟ್ಟಿದ್ದೇವೆ ಎಂದು ಜೈಲು ಪರ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರು. ಇದೀಗ ಕೋರ್ಟ್‌ ಚಳಿ ಅಲ್ವಾ..? ಅವರೂ ಮನುಷ್ಯರು ಅಲ್ವಾ..? ಎಂದಿದೆ. ಆದರೆ ಜೈಲಿನ ಮ್ಯಾನ್ಯುಯೆಲ್‌ ಪ್ರಕಾರ ಏನು ಕೊಡಬೇಕೋ ಅದನ್ನು ಕೊಟ್ಟಿದ್ದೇವೆ ಎಂದಿದ್ದ ಜೈಲಿನ ಅಧಿಕಾರಿಗಳು ಇದೀಗ ಮತ್ತೆ ಹೊಸದಾಗಿ ಬೆಡ್‌ಶೀಟ್‌ ಕೊಡ್ತಾರಾ..? ಅನ್ನೋದನ್ನು ಕಾದು ನೋಡ್ಬೇಕು. ಜೈಲಿನಲ್ಲಿ ಚಳಿಯಿದೆ ಅನ್ನೋ ಕಾರಣಕ್ಕೆ ಬೇರೆ ಬೇರೆ ಆರೋಪಿಗಳು ಇದೇ ರೀತಿ ಅರ್ಜಿ ಹಾಕಿದ್ರೆ ಇದೇ ರೀತಿಯ ಅವಕಾಶ ಸಿಗುತ್ತಾ..? ಅನ್ನೋದನ್ನು ಕಾದು ನೋಡಬೇಕು. ಆರೋಪಿಗಳು ಜೈಲಿಗೆ ಹೋದ ಬಳಿಕ ಚಳಿ, ಬಿಸಿಲು ಮಳೆ ಎಂದಾಗ ಅದಕ್ಕೆ ಅರ್ಥ ಇದೆಯಾ..? ಅನ್ನೋದು ಗಮನಿಸಬೇಕಾದ ವಿಚಾರ.

Related posts

Women Death for Love; ಹೆಣ್ಣು ಮನಸ್ಸು ಚಂಚಲ ಅಂತಾರೆ.. ಆದರೆ ಮದುವೆ ಆಗಿದ್ದ ಹೆಣ್ಣು ಮಾಡಿದ್ದೇನು..?

Publicspot

ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.. ಬಂಡಾರದ ಲೆಕ್ಕಾಚಾರ..

Publicspot

DARMASTHALA SIT ವರದಿ ಸಲ್ಲಿಸಿ: ಸದನದಲ್ಲಿ ಇವತ್ತು ಧರ್ಮಸ್ಥಳ ರಿಪೋರ್ಟ್.. ಏನಿದೆ..?

Publicspot

ನಿನ್ನೆ ಆಯ್ತು.. ಇವತ್ತೂ ಕೊಲೆ ಕೇಸ್‌ ವಿಚಾರಣೆ.. ನಟ ದರ್ಶನ್‌ಗೆ ಢವಢವ..

Publicspot

Lover Good Husband Bad; ಆನೇಕಲ್​ ಆಂಟಿ ವಾಪಸ್​ ಬಂದು ಗೊಳೋ ಅಂತಿರೋದ್ಯಾಕೆ..?

Publicspot

Film Actress Case; ಲಿವ್‌ ಇನ್‌ ರಿಲೇಷನ್‌.. ಆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌.. ಕೋರ್ಟ್‌ನಲ್ಲಿ ಜಾಮೀನು..

Publicspot