The Public Spot
ಅಪರಾಧ

ನಿನ್ನೆ ಆಯ್ತು.. ಇವತ್ತೂ ಕೊಲೆ ಕೇಸ್‌ ವಿಚಾರಣೆ.. ನಟ ದರ್ಶನ್‌ಗೆ ಢವಢವ..

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ ಅಂಡ್‌ ಟೀಂಗೆ ಸಂಕಷ್ಟ ಎದುರಾಗುವ ಪ್ರಕ್ರಿಯೆ ಆರಂಭವಾಗಿದೆ. ನಿನ್ನೆ ರೇಣುಕಾಸ್ವಾಮಿ ತಂದೆ ತಾಯಿ ಕೋರ್ಟ್‌ಗೆ ಹಾಜರಾಗಿದ್ದರು. ಬೆಂಗಳೂರಿನ ಸಿಸಿಎಚ್ 57 ಕೋರ್ಟ್‌ನಲ್ಲಿ ರೇಣುಕಾಸ್ವಾಮಿ ಹೆತ್ತವರ ವಿಚಾರಣೆ ನಡೆದಿದ್ದು, ಪವಿತ್ರಾ ಗೌಡ ಪರ ವಕೀಲರು ಕ್ರಾಸ್‌ ಎಕ್ಸಾಮಿನೇಷನ್‌ ನಡೆಸಿದ್ದಾರೆ. ಇಂದು ಮಧ್ಯಾಹ್ನ 12ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ. ಟ್ರಯಲ್‌ ಶುರುವಾಗ್ತಿದ್ದಂತೆ ಎಲ್ಲಾ ಆರೋಪಿಗಳು ಜಡ್ಜ್‌ ಮುಂದೆ ಹಾಜರಾಗಿದ್ರು.. ದರ್ಶನ್‌ ಹಾಗೂ ಪವಿತ್ರಾ ಗೌಡ ಸೇರಿದಂತೆ ಜೈಲಿನಲ್ಲಿರುವ 7 ಆರೋಪಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾದ್ರೆ, ಉಳಿದವ್ರು ಕೋರ್ಟ್‌ಗೆ‌ ಹಾಜರಾಗಿದ್ರು..

ಕೊಲೆ ಕೇಸ್‌ನಲ್ಲಿ ಸಿಲುಕಿರುವ ದರ್ಶನ್‌ಗೆ ಅಸಲಿ ನರಕ ದರ್ಶನ ಆಗುವುದಕ್ಕೆ ಶುರುವಾಗಿದೆ. ಕೊಲೆ ನಡೆದು ಒಂದೂವರೆ ವರ್ಷದ ಬಳಿಕ ಕೊಲೆ ಕೇಸ್‌ನ ಟ್ರಯಲ್‌ ಶುರುವಾಗಿದೆ. ಕೋರ್ಟ್‌ ವಿಚಾರಣೆ ವೇಳೆ ಒಂದೊಂದೇ ರಹಸ್ಯಗಳು ಹೊರ ಬೀಳೋದಕ್ಕೆ ಶುರುವಾಗಿದೆ. ಪವಿತ್ರಾ ಗೌಡ ಪರ ವಕೀಲರು ರೇಣುಕಾಸ್ವಾಮಿ ತಾಯಿಯನ್ನು ಕ್ರಾಸ್‌ ಎಕ್ಸಾಮಿನೇಷನ್‌ ನಡೆಸಿದ್ದಾರೆ. ನಿಮ್ಮ ಮಗ ಕೋರ್ಟ್ ಕೇಸ್ ಹೋಗ್ತಿದ್ದದ್ದು ಗೊತ್ತಾ? ನಿಮ್ಮ ಮಗನನ್ನ ಬಂಧಿಸಿದ್ರು ಅನ್ನೋದು ಗೊತ್ತಾ? ಭಜರಂಗದ ಹುಡುಗರ ಜೊತೆ ಓಡಾಡ್ತಿದ್ದದ್ದು ನಿಮಗೆ ಗೊತ್ತಿತ್ತಾ..? ಎಂದು ಕೇಳಿದ್ದಾರೆ. ಗೊತ್ತಿದ್ದಷ್ಟು ಮಾಹಿತಿಯನ್ನು ರೇಣುಕಾಸ್ವಾಮಿ ತಾಯಿ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಇನ್ನು 08/06/24ರಂದು ನಿಮ್ಮ ಮಗ ನಿಮಗೆ ಕರೆ ಮಾಡಿದ್ನಾ..? ಸಂಜೆ ಏಳು ಗಂಟೆಗೆ ಕರೆ ಬಂದಿತ್ತಾ..? ಬೆಳಗ್ಗೆ ಕರೆ ಮಾಡಿದ್ದಾಗ ಎಲ್ಲಿದ್ದ ಗೊತ್ತಿದ್ಯಾ..? ಎಂದು ವಕೀಲರು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಸೊಸೆಗೆ ಮಗ ಕರೆ ಮಾಡಿದ್ದು ರೆಕಾರ್ಡ್ ಆಗಿದ್ಯಾ..? ಬೆಳಗ್ಗೆ ಮನೆಯಲ್ಲಿ ತಿಂಡಿ ಸೇವಿಸಿ, ಮಧ್ಯಾಹ್ನ ಹೋಟೆಲ್‌ನಲ್ಲಿ ಊಟ ಮಾಡ್ತಿದ್ನಾ..? ಶವಾಗಾರದಲ್ಲಿ‌ ನಿಮ್ಮ ಮಗನನ್ನ ನೋಡಿದ್ರಾ..? ನಿಮ್ಮ ಮಗನ ಮೈಮೇಲೆ ಬ್ಲೂ ಟಿ ಶರ್ಟ್ ಇತ್ತು. ಮನೆಯಿಂದ‌ ಹೊರಡುವಾಗ ಟಿ ಶರ್ಟ್ ಹಾಕಿದ್ನಾ..? ಎಂದಿದ್ದಾರೆ. ಆದರೆ ಮನೆಯಿಂದ ಹೋಗುವಾಗ ಬೇರೆ ಬಟ್ಟೆ ಇತ್ತು, ಆ ಬಟ್ಟೆ ಇರಲಿಲ್ಲ ಎಂದಿದ್ದಾರೆ. ಶವ ನೋಡಿದಾಗ ಚೈನ್ – ಉಂಗುರದ ಬಗ್ಗೆ ನೀವು ಹೇಳಿಲ್ಲ ಎಂದಿದ್ದಾರೆ. ಅದಕ್ಕೆ ಇಲ್ಲ ನಾನು ಹೇಳಿದ್ದೇನೆ ಎಂದಿದ್ದಾರೆ. ರಾಜಕೀಯ ಪಿತೂರಿ, ಯಾರೋ ಹೇಳಿಕೊಟ್ಟಿದ್ದನ್ನ ಹೇಳ್ತಿದ್ದೀರಿ ಎಂದಾಗಲೂ ಇಲ್ಲ ಎಂದಿದ್ದಾರೆ.

ಇವತ್ತು ಮಧ್ಯಾಹ್ನ 12 ಗಂಟೆಗೆ ವಿಚಾರಣೆ ನಡೆಯಲಿದೆ. ನಿನ್ನೆ ದರ್ಶನ್‌ ಪರ ವಕೀಲ ಸಿ.ವಿ ನಾಗೇಶ್‌ ಕೂಡ ಕೋರ್ಟ್‌ಗೆ ಹಾಜರಾಗಿದ್ದರು. ಆದರೆ ಎ1 ಆಗಿರುವ ಪವಿತ್ರಾಗೌಡ ಪರ ವಕೀಲರಿಗೆ ಮೊದಲು ಪ್ರಶ್ನೆ ಕೇಳಲು ಅವಕಾಶ ಸಿಕ್ಕಿದ್ದು, ಇವತ್ತು ದರ್ಶನ್‌ ಪರ ವಕೀಲರು ಪ್ರಶ್ನೆ ಕೇಳುವ ಸಾಧ್ಯತೆಯಿದೆ. ಇನ್ನು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯನ್ನು ಆದಷ್ಟು ಬೇಗ ಮುಗಿಸುತ್ತೇವೆ ಎಂದು ಸರ್ಕಾರ ಹೇಳಿದ್ದು, ಆದಷ್ಟು ಬೇಗ ವಿಚಾರಣೆ ಮುಗಿದು ಆದೇಶ ಹೊರಬೀಳಬೇಕಿದೆ. ಹೀಗಾಗಿ ಸೆಷನ್ಸ್‌ ಕೋರ್ಟ್‌ನಲ್ಲಿ ಆದಷ್ಟು ನಿರಂತರ ವಿಚಾರಣೆ ಆಗುವ ಸಾಧ್ಯತೆಯಿದೆ. ಫಾಸ್ಟ್‌ ಟ್ರ್ಯಾಕ್‌‌ ಕೋರ್ಟ್‌ ಮಾಡಬೇಕು ಎನ್ನುವ ಕೂಗೂ ಎದ್ದಿತ್ತು. ಆದರೆ ಫಾಸ್ಟ್ ಟ್ರ್ಯಾಕ್‌ ಕೋರ್ಟ್‌ ಇಲ್ಲದಿದ್ರೂ ಸಾಮಾನ್ಯ ಕೋರ್ಟ್‌ನಲ್ಲೇ ವೇಗ ಕೊಟ್ಟು ಮುಗಿಸುವ ನಿರ್ಧಾರ ಸರ್ಕಾರದ್ದು ಎನ್ನಬಹುದು.

Related posts

ಕಮಲಾಕರ ಭಟ್‌ಗೆ ಬಲೆ ಬೀಸಿದಾಕೆ ಸುಚಿತ್ರಾ ಅಲ್ಲ.. ಸುಳ್ಳು ಹೆಸರಿನ ಹಿಂದಿನ ರಹಸ್ಯ ಏನು..?

Publicspot

Ananya Mother: ನಾನು ಸಾಯಲು ಸಿದ್ಧಳಿದ್ದೇನೆ.. ರಸ್ತೆಯಲ್ಲಿ ಬೆತ್ತಲೆ ನಿಲ್ತೇನೆ..!

Publicspot

RAMYA REACTION: ನಟ ದರ್ಶನ್​ ಜೈಲಿಗೆ ಹೋಗಿದ್ದಕ್ಕೆ ರಮ್ಯಾ ಬೇಸರ.. ಟ್ರೋಲರ್ಸ್​ ಭೀತಿನಾ..?

Publicspot

ಧರ್ಮಸ್ಥಳದಲ್ಲಿ ಮತ್ತೊಂದು ಮಗ್ಗುಲಿಗೆ ಹೊರಳಿದ SIT ತನಿಖೆ..! ಮೂಳೆಗಳು ಬಂದಿದ್ದು ಎಲ್ಲಿಂದ..?

Publicspot

Dating App: ಡೇಟಿಂಗ್​ ಆ್ಯಪ್​ನಲ್ಲಿ ಬಲೆ.. ಸುಲಿಗೆ ಮಾಡಿ ಹುಡುಗಿ ಎಸ್ಕೇಪ್​..

Publicspot

14 Days Judicial Custody : ಮಹೇಶ್​ ಶೆಟ್ಟಿ ತಿಮರೋಡಿ ಜಾಮೀನು ಅರ್ಜಿ ವಜಾ, ಹಿರಿಯಡ್ಕ ಜೈಲಿಗೆ​ ತಿಮರೋಡಿ

Publicspot