The Public Spot
ಟ್ರೆಂಡ್

Mysore Dassara: ಈ ಬಾರಿ ದಸರಾ ಉದ್ಘಾಟನೆ ಮಾಡೋದು ಬೂಕರ್​ ಪುರಸ್ಕೃತೆ..! ಅನ್ಯಾಯ ಅಲ್ಲವೇ..?

ಮೈಸೂರು ದಸರಾವನ್ನ ಈ ಬಾರಿ ಬೂಕರ್ ಪ್ರಶಸ್ತಿ ವಿಜೇತ ಭಾನು ಮುಸ್ತಾಕ್ ಉದ್ಘಾಟನೆ ಮಾಡಲಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮುಂದೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಕರ್ನಾಟಕದ ಒಬ್ಬ ಮಹಿಳೆಗೆ ಬೂಕರ್ ಪ್ರಶಸ್ತಿ ಸಿಕ್ಕಿರೊದು ಬಹಳ ಸಂತೋಷ. ಹೋರಾಟದ ಹಿನ್ನೆಲೆಯಿಂದ ಬಂದವರು ಭಾನು. ಕನ್ನಡ ಚಳುವಳಿಯಲ್ಲಿ ಕೆಲಸ ಮಾಡಿರೋರು. ಪ್ರಗತಿ ಪರ ಚಿಂತಕರು. ದಸರಾ ಉದ್ಘಾಟನೆಗೆ ಅವರಿಗೆ ಆಹ್ವಾನ ಮಾಡಿದ್ದೇವೆ. ಈ ಭಾರಿ 11ದಿನ ದಸರಾ ನಡೆಯಲಿದೆ. ಸಪ್ಟೆಂಬರ್‌ 22ರಿಂದ ದಸರಾ ಆರಂಭ ಆಗಲಿದೆ. ಅಕ್ಟೋಬರ್ 2ರಂದು ವಿಜಯದಶಮಿ ಇದೆ. ಭಾನು ಮುಸ್ತಾಕ್ ಅವರನ್ನು ಗೌರವದಿಂದ ಮೈಸೂರು ಜಿಲ್ಲಾಡಳಿತ ಆಹ್ವಾನಿಸಲಿದೆ ಎಂದಿದ್ದಾರೆ.

ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಭಾನು ಮುಷ್ತಾಕ್ ಹೆಸರು ಘೋಷಣೆ ಆದ ಬಳಿಕ ಹಾಸನದಲ್ಲಿ ಮಾತನಾಡಿರುವ ಸಾಹಿತಿ ಬಾನು ಮುಷ್ತಾಕ್​, ನಾಡ ಹಬ್ಬಕ್ಕೆ ತಮ್ಮ ಹೆಸರು ಘೋಷಣೆ ಮಾಡಿದ್ದು ಖುಷಿಯಾಗಿದೆ. ನಮ್ಮ ನಾಡ ಹಬ್ಬ ಮಾಡೋದು ನಮಗು ಖುಷಿಯ ವಿಚಾರ ಎಂದು ತಮ್ಮ ಹೆಸರು ಘೋಷಣೆ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ ಭಾನು ಮುಷ್ತಾಕ್. ಸದ್ಯ ಲಂಡನಲ್ಲಿರೊ ಭಾನು ಮುಷ್ತಾಕ್ ಫೋನ್ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸಿಎಂ ಸಿದ್ದರಾಮಯ್ಯ ನನ್ನೊಟ್ಟಿಗೆ ಈ ಬಗ್ಗೆ ಮಾತನಾಡಿದ್ದರು. ಮೈಸೂರು ದಸರಾ ಸಂದರ್ಭದಲ್ಲಿ ತಾವು ಸಮಯ ಕಾಯ್ದಿರಿಸಿಕೊಳ್ಳಿ ಎಂದು ಹೇಳಿದ್ದರು ಎಂದಿದ್ದಾರೆ.

ನಾನು ಕೇರಳ‌ ಪ್ರವಾಸದಲ್ಲಿ ಇರುವಾಗ ಸಿಎಂ ಸಿದ್ದರಾಮಯ್ಯ ಫೋನ್ ಮೂಲಕ‌ ಮಾತನಾಡಿದ್ದರು. ದಸರಾ ಉದ್ಘಾಟನೆಯನ್ನ ಒಪ್ಪಿರೊ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ ಹಿರಿಯ ಸಾಹಿತಿ ಭಾನು ಮುಷ್ತಾಕ್. ಇನ್ನೊಂದು ವಾರದಲ್ಲಿ ಇಂಡಿಯಾಗೆ ಮರಳುತ್ತೇನೆ. ನಮ್ಮ ನಾಡ ಹಬ್ಬ ಮಾಡೋದು ನಮಗೂ ಖುಷಿ ಸಂಭ್ರಮದ ವಿಚಾರ ಎಂದಿದ್ದಾರೆ ಸಾಹಿತಿ ಭಾನು ಮುಷ್ತಾಕ್. ಆದರೆ ಇಲ್ಲೊಂದು ಸಣ್ಣ ಸಮಸ್ಯೆಯೊಂದು ಎದುರಾಗಿದೆ. ಭಾನು ಮುಸ್ತಾಕ್​ ಅವರನ್ನು ಹಿರಿಯ ಸಾಹಿತಿ, ಕನ್ನಡ ನಾಡಿನಲ್ಲಿ ಸಾಕಷ್ಟು ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಮಹಿಳೆಯರ ದನಿಯಾಗಿದ್ದಾರೆ ಎಂದು ದಸರಾ ಉದ್ಘಾಟನೆಗೆ ಆಹ್ವಾನ ಮಾಡಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಬೂಕರ್​ ಪ್ರಶಸ್ತಿ ವಿಜೇತೆ ಎಂದು ಆಹ್ವಾನ ಮಾಡಿದ್ದು ಸರಿಯಲ್ಲ.

ನಿಜವಾಗಿಯೂ ಬೂಕರ್​ ಪ್ರಶಸ್ತಿ ಬಂದಿದ್ದು ದೀಪಾ ಭಸ್ತಿ ಬರೆದಿದ್ದ ಹಾರ್ಟ್​ ಲ್ಯಾಂಪ್​ ಕೃತಿಗೆ. ಪತ್ರಕರ್ತೆ ಹಾಗೂ ಸಾಹಿತಿ ಆಗಿರುವ ಮಡಿಕೇರಿಯ ದೀಪಾ ಭಸ್ತಿ, ಭಾನು ಮುಷ್ತಾಕ್​ ಅವರ ಎದೆಯ ಹಣತೆ ಪುಸ್ತಕವನ್ನು ಇಂಗ್ಲೀಷ್​ಗೆ ಭಾಷಾಂತಾರ ಮಾಡಿದ್ದರು. ಆ ಕಾರಣದಿಂದ ಅಂತಾರಾಷ್ಟ್ರೀಯ ಬೂಕರ್​ ಪ್ರಶಸ್ತಿ ಆಯೋಜಕರು ಇಬ್ಬರಿಗೂ ಪ್ರಶಸ್ತಿ ನೀಡುವ ನಿರ್ಧಾರ ಮಾಡಿದ್ದರು. ಇಬ್ಬರಿಗೂ ಸಮನಾಗಿ ಕ್ಯಾಷ್​ ಪ್ರೈಜ್​ ಹಂಚಿಕೆ ಮಾಡಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಅಂತಾರಾಷ್ಟ್ರೀಯ ಬೂಕರ್​ ಪ್ರಶಸ್ತಿ ಗೆದ್ದಿದ್ದಾರೆ ಎಂದು ಭಾನು ಮುಷ್ತಾಕ್​ ಅವರನ್ನು ಆಯ್ಕೆ ಮಾಡಿದ್ದೇವೆ ಎಂದಿದ್ದಾರೆ. ಅಲ್ಲಿಗೆ ದೀಪಾ ಭಸ್ತಿಯನ್ನು ಸರ್ಕಾರ ಮರೆತಿದ್ದು ಯಾಕೆ..? ಆಕೆಯೂ ಕನ್ನಡದ ಹೆಣ್ಣು ಮಗಳಲ್ಲವೇ..? ಬೂಕರ್​ ಪ್ರಶಸ್ತಿಯನ್ನೇ ಒಟ್ಟಿಗೆ ಪಡೆದ ಧೀಮಂತ ಹೆಣ್ಣುಮಕ್ಕಳನ್ನು ಒಟ್ಟಿಗೆ ಕರೆದಿದ್ದರೆ ಸರ್ಕಾರಕ್ಕೂ ಗೌರವ ಹೆಚ್ಚುತ್ತಿತ್ತು. ಅಲ್ಲವೇ..? ಈಗಲೂ ಕಾಲ ಮಿಂಚಿಲ್ಲ.. ಸರ್ಕಾರದ ಗಮನೆ ಸೆಳೆಯುವ ತನಕ ಈ ಸುದ್ದಿ ಹಂಚೋಣ..

Related posts

ಮೌಢ್ಯದ ಮಹಲಿನಲ್ಲಿ ಮರೆಯಾದ ಚಂದಿರ.. ಫಲಾಹಾರ ಸೇವಿಸಿ ಸೈ ಎಂದ ಪ್ರಗತಿಪರರು

Publicspot

ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವ ಗೌರಿ ಹಬ್ಬ.. ಏನಿದರ ವಿಶೇಷ..?

Publicspot

ಜೈಲಿನಲ್ಲಿ ಇನ್ಮುಂದೆ ಕೈದಿಗಳಿಗೆ ಸಂಕಷ್ಟ ಫಿಕ್ಸ್​.. ಅಖಾಡಕ್ಕೆ ಖಡಕ್​ ಅಲೋಕ್ ಎಂಟ್ರಿ..​

Publicspot

ಚಂದ್ರಗ್ರಹಣ ಬರಿಗಣ್ಣಿನಿಂದಲೇ ನೋಡಿ.. ಇದೆಲ್ಲವೂ ಸೃಷ್ಟಿಯ ಅಚ್ಚರಿಗಳು..

Publicspot

Farmers Fight; ಸಕ್ಕರೆ ಕಾರ್ಖಾನೆ ಮಾಲೀಕರು ಡ್ರಾಮಾ ಮಾಡಿದ್ರೆ ರೈತರು ಬುದ್ಧಿ ಕಲಿಸ್ತಾರೆ..!

Publicspot

ಲೈಂಗಿಕ ಸಮಸ್ಯೆಗೆ 48 ಲಕ್ಷದ ಮದ್ದು..! ಕನಸು ಕೈಗೂಡಲಿಲ್ಲ.. ಕಿಡ್ನಿಯೇ ಹೋಯ್ತು..

Publicspot