The Public Spot
ಅಪರಾಧ

Old Women Murder; ಕಜ್ಜಾಯ ಕೊಡ್ತೀನಿ ಬಾರಜ್ಜಿ ಎಂದವಳು ಕೊಂದು ಮೂಟೆ ಕಟ್ಟಿಟ್ಟಳು.. ಯಾಕೆ..?

ಕನ್ನಡ ಹಾಗೂ ಮಲಯಾಳಂನ ದೃಶ್ಯಂ ಸಿನಿಮಾದಲ್ಲಿ ಎಲ್ಲರೂ ನೋಡಿರುವಂತೆ ಕೊಲೆ ಮಾಡಿದ ಬಳಿಕ ಪೊಲೀಸ್‌ ಠಾಣೆಯ ಒಳಗೇ ಹೂತಿಟ್ಟಿದ್ದರು. ಅದೇ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗೂರು ಗ್ರಾಮದಲ್ಲಿ ಭದ್ರಮ್ಮ ಎಂಬ ವೃದ್ದೆ ನಾಪತ್ತೆ ಆಗಿದ್ದರು. ಆ ಬಳಿಕ ಕುಟುಂಬಸ್ಥರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸ್ರು, ಹುಡುಕಾಟ ನಡೆಸಿದಾಗ ಆ ವೃದ್ಧೆ ಭದ್ರಮ್ಮ ಎದುರಿನ ಮನೆಗೆ ಹೋಗಿದ್ದ ವಿಚಾರ ಪತ್ತೆಯಾಗಿತ್ತು. ಆ ಬಳಿಕ ವಿಚಾರಣೆ ಭಯಾನಕ ವಿಚಾರವೂ ಬಯಲಾಗಿದೆ.

ಬಿಸಿ ಬಿಸಿ ಕಜ್ಜಾಯ ಮಾಡಿದ್ದೀನಿ ಕೊಡ್ತೀನಿ ಬಾ ಅಜ್ಜಿ ಅಂತಾ ಕರೆದಿದ್ದ ಮಹಿಳೆ ದೀಪಾ, ಕೊಲೆಗಾತಿ ಆಗಿದ್ದಾಳೆ. ಅಜ್ಜಿಯನ್ನ ಮನೆಗೆ ಕರೆದಿದ್ರಿಂದ ಅಜ್ಜಿ ಕೂಡ ಆಸೆಯಿಂದ ಹೋಗಿತ್ತು. ನೆರೆಮನೆಗೆ ಹೋಗಿದ್ದ ಅಜ್ಜಿ ಇದ್ದಕ್ಕಿದ್ದಂತೆ ಕಾಣೆಯಾಗಿತ್ತು. ಅಜ್ಜಿಯನ್ನು ಕೊಂದು ಮನೆಯಲ್ಲೇ ಶವ ಬಚ್ಚಿಟ್ಟಿದ್ದ ಮಹಿಳೆ ದೀಪಾ ಪೊಲೀಸರ ಅತಿಥಿಯಾಗಿದ್ದಾಳೆ. ಅಜ್ಜಿ ಮೈಮೇಲೆ ಹಾಕಿದ್ದ ಚಿನ್ನಾಭರಣಕ್ಕಾಗಿ ವೃದ್ಧೆಯನ್ನು ಕೊಲೆಗೈದು ಮನೆಯಲ್ಲಿಯೇ ಶವವನ್ನು ಬಚ್ಚಿಟ್ಟಿದ್ದಳು.

ಅಕ್ಟೋಬರ್‌ 30ರಂದು ಮನೆಯಲ್ಲಿದ್ದ ವೃದ್ದೆ ಭದ್ರಮ್ಮರನ್ನ ಪುಸಲಾಯಿಸಿದ್ದ ದೀಪಾ ಕಜ್ಜಾಯ ಮಾಡಿದ್ದೀನಿ ಕೊಡ್ತೀನಿ ಬಾ ಅಂತ ಮನೆಗೆ ಕರೆದೊಯ್ದಿದ್ದಳು. ಬಳಿಕ ವೃದ್ದೆ ಬಳಿಯಿದ್ದ ಚಿನ್ನಾಭರಣ ಕಸಿದುಕೊಂಡು ಮನೆಯಲ್ಲಿ ಕೊಲೆ ಮಾಡಿ ಮೂಟೆಯಲ್ಲಿ ಕಟ್ಟಿಟ್ಟಿದ್ದಳು. 2 ದಿನಗಳ ಬಳಿಕ ಮೃತದೇಹ ವಾಸನೆ ಬರುತ್ತಿದ್ದಂತೆ, ಮಗನಿಗೆ ಮನೆಯಲ್ಲಿ ಕಸದ ಮೂಟೆ ಇದೇ ಕೆರೆ ಬಳಿ ಎಸೆದು ಬರೋಣ ಅಂತ ಹೇಳಿ ವೃದ್ದೆಯ ಮೃತದೇಹ ತುಂಬಿದ್ದ ಗೋಣಿ ಚೀಲದ ಮೂಟೆಯನ್ನ ತೆಗೆದುಕೊಂಡು ಹೋಗಿ ದೊಡ್ಡತಿಮ್ಮಸಂದ್ರ ಕೆರೆಯಲ್ಲಿ ಎಸೆದು ಮನೆಗೆ ಹೋಗಿದ್ದಳು.

ವೃದ್ದೆ ಕಾಣೆಯಾದ ಬಗ್ಗೆ ಕುಟುಂಬಸ್ಥರು ಸರ್ಜಾಪುರ ಪೊಲೀಸರಿಗೆ ದೂರು ನೀಡಿದ ಬಳಿಕ ಎಲ್ಲಾ ಹುಡುಕಾಟ ನಡೆಸಲಾಗಿತ್ತು. ಆಗ ವೃದ್ದೆ ಭದ್ರಮ್ಮ ಕೊನೆಯದಾಗಿ ದೀಪಾ ಮನೆಗೆ ಹೋಗಿ ವಾಪಸ್ ಆಗಿರಲಿಲ್ಲ. ಈ ಬಗ್ಗೆ ಅನುಮಾನಗೊಂಡ ಸರ್ಜಾಪುರ ಪೊಲೀಸ್ ಇನ್ಸ್ ಪೆಕ್ಟರ್ ನವೀನ್ ನೇತೃತ್ವದ ತಂಡ, ದೀಪಾಳನ್ನ ಕರೆತಂದು ಪೊಲೀಸ್ ಸ್ಟೈಲ್‌ನಲ್ಲಿ ವಿಚಾರಣೆ ನಡೆಸಿದಾಗ ಚಿನ್ನಾಭರಣಕ್ಕಾಗಿ ಕೊಲೆ ಮಾಡಿರೋದಾಗಿ ಹಂತಕಿ ದೀಪಾ ತಪ್ಪೊಪ್ಪಿಕೊಂಡಿದ್ದಾಳೆ. ಹಂತಕಿ ದೀಪಾ ಕೊಟ್ಟ ಮಾಹಿತಿಯಂತೆ ಮೃತದೇಹವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆದರೂ ಚಿನ್ನ ಧರಿಸಿದ್ದ ಕಾರಣಕ್ಕೇ ಕೊಲೆ ಆಗಿರುವುದು ದುರಂತದ ವಿಚಾರ.

Related posts

BENGALURU FIRE ACCIDENT: ಬೆಂಕಿ ಅವಘಡಕ್ಕೆ ನಿನ್ನೆ ಒಂದು.. ಇವತ್ತು ಐವರ ಸಜೀವ ದಹನ..

Publicspot

ಸ್ಕ್ಯಾನಿಂಗ್​ಗೆ ಹೋದಾಗ ಬೆರಳಿಟ್ಟು ವಿಕೃತಿ.. ಲೈಂಗಿಕ ಕಿರುಕುಳ ಬಾಯ್ಬಿಡದಂತೆ ಧಮ್ಕಿ..

Publicspot

ಅಕ್ರಮ ಸಂಬಂಧ ಬೇಡ ಎಂದಿದ್ದಕ್ಕೆ ಅಟ್ಯಾಕ್​​ ಮಾಡಿದ್ದ ಅಡಕಮಾರನಹಳ್ಳಿ ಆಂಟಿ ಅರೆಸ್ಟ್​..

Publicspot

ಶಿಡ್ಲಘಟ್ಟದ ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ರಾಜೀವ್‌ ಗೌಡನ ಜೊತೆ ಮತ್ತೊಬ್ಬ ಅರೆಸ್ಟ್‌

Publicspot

ಧರ್ಮಸ್ಥಳದಲ್ಲಿ ಇವತ್ತು ಹೈಟೆಕ್​ ತಂತ್ರಜ್ಞಾನದ ಜೊತೆಗೆ ಅಸ್ಥಿ ಆಪರೇಷನ್​..!!

Publicspot

Girl Sale Like a Sex Toy; ಋತುಮತಿಯಾದ ಹೆಣ್ಣು.. ಪುರುಷತ್ವ ಹೆಚ್ಚಳ ಶಕ್ತಿ.. 20 ಲಕ್ಷಕ್ಕೆ ಬಾಲಕಿ ಮಾರಾಟ..!!

Publicspot