The Public Spot
ಅಪರಾಧ

ಧರ್ಮಸ್ಥಳದಲ್ಲಿ ಇವತ್ತು ಹೈಟೆಕ್​ ತಂತ್ರಜ್ಞಾನದ ಜೊತೆಗೆ ಅಸ್ಥಿ ಆಪರೇಷನ್​..!!

ಧರ್ಮಸ್ಥಳದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಅಸ್ಥಿಪಂಜರ ಆಪರೇಷನ್​ ಅಂತಿಮ ಹಂತಕ್ಕೆ ಬಂದು ತಲುಪಿದೆ. ಅಸ್ಥಿಪಂಜರ ಆಪರೇಷನ್​ ಹೈಟೆಕ್​ ತಂತ್ರಜ್ಞಾನ ಬಳಸಿಕೊಂಡು ಮಾಡುವುದಕ್ಕೆ SIT ಟೀಂ ನಿರ್ಧಾರ ಮಾಡಿದೆ. ಡ್ರೋನ್-ಮೌಂಟೆಡ್ GPR (Drone GPR) ತಂತ್ರಜ್ಞಾನ ಬಳಸಿ ಪಾಯಿಂಟ್ ನಂಬರ್ 13 ಸ್ಕ್ಯಾನ್ ಮಾಡುವುದಕ್ಕೆ ತನಿಖಾ ತಂಡ ಸಿದ್ದತೆ ನಡೆಸಿತ್ತು. ನಿನ್ನೆ ಕಾರಣಾಂತರಗಳಿಂದ ಕಾರ್ಯಾಚರಣೆ ಶುರುವಾಗಲಿಲ್ಲ. ಇವತ್ತು, ಡ್ರೋನ್ ಮೂಲಕ ಜಿಪಿಅರ್ ಸ್ಕ್ಯಾನ್​ಗೆ ಸಿದ್ದತೆ ನಡೆದಿದೆ. ಸಾಮಾನ್ಯ GPR ಆಂಟೆನಾವನ್ನು ಡ್ರೋನ್‌ನ ಕೆಳಭಾಗದಲ್ಲಿ ಅಳವಡಿಸಿ ಶೋಧ ಮಾಡಲಾಗುತ್ತದೆ ಎನ್ನಲಾಗಿದೆ. ಡ್ರೋನ್ ಗಾಳಿಯಲ್ಲಿ ಹಾರುತ್ತಾ ನೆಲದ ಮೇಲ್ಮೈಗೆ ಸಮೀಪವಾಗಿ GPR ಸಿಗ್ನಲ್ ಕಳುಹಿಸುತ್ತದೆ. ಆ ಸಿಗ್ನಲ್ ನೆಲದೊಳಗೆ ಹೋಗಿ ಪ್ರತಿಫಲಿಸಿ ಮರಳಿ ಬರುತ್ತದೆ. ಅದನ್ನು ಸೆನ್ಸರ್‌ಗಳು ದಾಖಲಿಸಿಕೊಮಡು ನಿಖರ ಫಲಿತಾಂಶ ನೀಡುತ್ತದೆ. ನಂತರ ಡೇಟಾವನ್ನು ಸಾಫ್ಟ್‌ವೇರ್ ಮೂಲಕ 2D/3D ಚಿತ್ರವಾಗಿ ಪರಿವರ್ತನೆ ಮಾಡಿಕೊಳ್ಳಬಹುದು ಎನ್ನಲಾಗ್ತಿದೆ.

ಈ ತಂತ್ರಜ್ಞಾನದ ಮೂಲಕ ವೇಗವಾಗಿ ದೊಡ್ಡ ಪ್ರದೇಶವನ್ನು ಶೋಧಿಸಲು ಅನುಕೂಲ ಆಗುತ್ತದೆ ಎಂದು ಡ್ರೋನ್ ಜಿಪಿಅರ್ ಬಳಕೆ ಮಾಡಲಾಗ್ತಿದೆ. ಜನರು ತಲುಪಲು ಕಷ್ಟವಾದ ನದಿ ದಂಡೆಯಿರೋ ಕಾರಣ ಡ್ರೋನ್ ಜಿಪಿಅರ್ ಅನುಕೂಲಕಾರಿ ಅನ್ನೋ ಮಾತುಗಳು ಕೇಳಿ ಬಂದಿವೆ. ಪಾಯಿಂಟ್ ನಂಬರ್ 13 ರಲ್ಲಿ ಡ್ರೋನ್ ಮೌಂಟೆಡ್ ಜಿಪಿಆರ್​ನಿಂದ ಡೆಮೋ ಸ್ಕ್ಯಾನ್ ಮಾಡಲಾಗಿದೆ. ಸುಮಾರು 5‌ ನಿಮಿಷಗಳ ಕಾಲ ಡೆಮೋ ನಡೆಸಿದ ತಂಡ, ಆ ಬಳಿಕ ಪಾಯಿಂಟ್ ನಂಬರ್ 13ರ ಸ್ವಚ್ಚತಾ ಕಾರ್ಯಕ್ಕೆ ಸೂಚನೆ ಕೊಟ್ಟಿತ್ತು. ಕಾರ್ಮಿಕರು ಪಾಯಿಂಟ್​ ನಂಬರ್​ 13 ರ ಬಳಿ ಗಿಡ ಗಂಟಿಗಳನ್ನು ಕಿತ್ತು ಕ್ಲೀನ್ ಮಾಡಿದ್ದಾರೆ. ಇವತ್ತು ಡ್ರೊನ್ ಮೌಂಟೆಡ್ ಜಿಪಿಆರ್ ಬಳಸಿ ಅಸ್ಥಿ ಆಪರೇಷನ್​ ನಡೆಯಲಿದೆ. ನಿನ್ನೆ ಡೆಮೋ ನಡೆಸಿದ ಬಳಿಕ ಪಾಯಿಂಟ್ ನಂಬರ್ 13 ರಿಂದ SIT ಅಧಿಕಾರಿಗಳೂ ಹಾಗೂ ತಂತ್ರಜ್ಞರ ತಂಡ ವಾಪಸ್​ ಆಗಿದ್ದು, ಇದೀಗ ಮೊದಲಿಗೆ ಪಾಯಿಂಟ್​ ನಂಬರ್​ 13 ರಿಂದಲೇ ಆರಂಭ ಮಾಡುವ ನಿರೀಕ್ಷೆ ಇದೆ.

ನಿನ್ನೆ ಎಸ್​ಐಟಿ ಕಚೇರಿಯಲ್ಲೇ ಇದ್ದ ದೂರುದಾರನಿಗೆ ಮಂಗಳವಾರ ಹಾಜರಾಗುವಂತೆ ಹೇಳಿ ಕಳುಹಿಸಿದ್ದರಾರೆ SIT ಅಧಿಕಾರಿಗಳು. ಇವತ್ತು ಬೆಳಿಗ್ಗೆಯಿಂದಲೇ GPR ಯಂತ್ರದ ಮೂಲಕ ಕಾರ್ಯಾಚರಣೆ ನಡೆಯಲಿದ್ದು, ದೂರುದಾರ ತೋರಿಸಿದ ಸ್ಥಳದಲ್ಲಿ ಆತನ ಸಮ್ಮುಖದಲ್ಲೇ ಇಂದು ಉತ್ಖನನ ಕಾರ್ಯ ನಡೆಯಲಿದೆ. ಈ ನಡುವೆ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ಪರಿಶೀಲನೆಗಾಗಿ ಪಾಯಿಂಟ್ ನಂಬರ್ 16 ರ ಬಳಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಪರಿಶೀಲನೆ ಮಾಡಿದೆ. ಸ್ಪಾಟ್ ನಂಬರ್​ 16ರ ಬಳಿ ಉದ್ದೇಶಪೂರ್ವಕವಾಗಿ ಮಣ್ಣು ಸುರಿಯಲಗಿದೆ ಅನ್ನೋ ಆರೋಪದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದಿಂದ ಪರಿಶೀಲನೆ ನಡೆಸಲಾಗಿದೆ. ಧರ್ಮಸ್ಥಳ ಪೊಲೀಸರ ಬಳಿ ಮಾಹಿತಿ ಕೇಳಿದ ಮಾನವ ಹಕ್ಕು ಆಯೋಗ, ಧರ್ಮಸ್ಥಳದ ವಿವಿಧ ಭಾಗಗಳಿಗೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಅನಾಮಿಕ ತೋರಿಸಿದ ಜಾಗದಲ್ಲಿ ಮೂಳೆಗಳಿಗಾಗಿ ಭೂಮಿ ಅಗೆದು ಉತ್ಖನನ ಮಾಡಲಾಗ್ತಿತ್ತು. ಇದೀಗ ಮೂಳೆ ಇದೆಯೋ ಇಲ್ಲವೋ ಅನ್ನೋದನ್ನು ಪರಿಶೀಲಿಸಿ ಭೂಮಿ ಅಗೆಯುವ ಕೆಲಸ ಮಾಡಲಾಗುತ್ತದೆ.

ಬಾಹುಬಲಿ ಬೆಟ್ಟ, ನೇತ್ರಾವತಿ ನದಿ ತೀರ, ಬಂಗ್ಲೆ ಗುಡ್ಡ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಶವ ಹೂತಿರುವುದಾಗಿ ಹೇಳಿರುವ ಅನಾಮಿಕ ವ್ಯಕ್ತಿ, ಇದೀಗ ಕನ್ಯಾಡಿಯ ಖಾಸಗಿ ಜಮೀನಿನಲ್ಲೂ ಶವವನ್ನು ಹೂತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಆದರೆ SIT ಅಧಿಕಾರಿಗಳು ಇಲ್ಲೀವೆರಗೂ ಆ ಸ್ಥಳವನ್ನು ಗುರುತು ಮಾಡುವ ಕೆಲಸ ಮಾಡಿಲ್ಲ. ಇದೀಗ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಆಪರೇಷನ್​ ಅಸ್ಥಿಪಂಜರ ಮಾಡುತ್ತಿರುವ ಕಾರಣದಿಂದ ಖಾಸಗಿ ಜಮೀನಿನಲ್ಲೂ ಕಾರ್ಯಾಚರಣೆ ನಡೆಸ್ತಾರಾ ಅನ್ನೋ ಗುಮಾನಿ ಕಾಡುತ್ತಿದೆ. ಇನ್ನೊಂದು ಸಂಗತಿ ಏನೆಂದರೆ ಎಲ್ಲರೂ ಮಾತನಾಡುತ್ತಿರುವುದು ಅನಾಮಿಕ ತೋರಿಸಿದ ಜಾಗದಲ್ಲಿ ಅಗೆಯುತ್ತಾ ಹೋಗುತ್ತಿದ್ದಾರೆ. ಅಧಿಕಾರಿಗಳು ತೆಗೆದುಕೊಳ್ತಿರೋ ನಿರ್ಧಾರ ಸರಿಯಲ್ಲ ಅನ್ನೋ ಮಾತುಗಳನ್ನೂ ಕೆಲವರು ಆಡಿದ್ದಾರೆ. ಆದರೆ IAS, IPS ಅಧಿಕಾರಿಗಳು ಈ ಅಸ್ಥಿ ಆಪರೇಷನ್​ನಲ್ಲಿ ಭಾಗಿಯಾಗಿದ್ದಾರೆ. ಯಾವುದೇ ಪ್ರಬಲ ಸಾಕ್ಷ್ಯ ಇಲ್ಲದಿದ್ರೆ ಇಷ್ಟೆಲ್ಲಾ ಮಾಡುತ್ತಿರಲಿಲ್ಲ ಅಲ್ಲವೇ..?

Related posts

ತರಬೇತಿ ಸರ್ಟಿಫಿಕೇಟ್‌‌ ಪಡೆಯಲು ಹೋದ ವೈದ್ಯೆ ಕೊಂದಿದ್ಯಾರು..?

Publicspot

Dharmasthala SIT Investigation: ಧರ್ಮಸ್ಥಳ ಕೇಸ್​ ಬಗ್ಗೆ ಮಾಸ್ಕ್​ ಮ್ಯಾನ್​ ಸುಳ್ಳು ಹೇಳ್ತಿರೋದ್ಯಾಕೆ..?

Publicspot

Teacher Asulted student; ಕ್ರೂರವಾಗಿ ವರ್ತಿಸಿದ ಶಿಕ್ಷಕನ ಬಂಧನ, ಜೈಲಿಗೆ ಶಿಫ್ಟ್​..

Publicspot

DHARMASTHALA BJP RALLY: ಧರ್ಮಸ್ಥಳಲ್ಲಿ ಶುರುವಾಗಿದೆ ಧರ್ಮ ರಾಜಕಾರಣ..

Publicspot

Darshan Bail Order: ನಟ ದರ್ಶನ್ ಮತ್ತು ಪವಿತ್ರ ಗೌಡ ಬೇಲ್ ರದ್ದಾಗುತ್ತಾ..?

ಯಶವಂತಿ

IT Raid on PES Colleges; ಆದಾಯ ತೆರಿಗೆ ಇಲಾಖೆಯಿಂದ ಲೆಕ್ಕಪತ್ರ ಶೋಧ..

Publicspot