The Public Spot
ರಾಜ್ಯ

ಇವತ್ತೂ ನಾಳೆ ರಾಜ್ಯದಲ್ಲಿ ಮಳೆಯೋ ಮಳೆ.. ಕರಾವಳಿಗೆ ಮಾತ್ರ ರಜೆ..

ರಾಜ್ಯದಲ್ಲಿ ನಾಳೆ ಮತ್ತು ನಾಡಿದ್ದು ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಅಲರ್ಟ್​ ಘೋಷಣೆ ಮಾಡಿದೆ. ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ಕಲಬುರಗಿ, ವಿಜಯನಗರ, ವಿಜಯಪುರ, ಯಾದಗಿರಿ, ಬೀದರ್, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆಯಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸವದತ್ತಿಯ ಸವದತ್ತಿ ಯಲ್ಲಮ್ಮನ ದೇವಾಲಯಕ್ಕೆ ಮಳೆ ನೀರು ನುಗ್ಗಿ ಅವಾಂತರವೇ ಸಸೃಷ್ಟಿಯಾಗಿದೆ. ದೇವಸ್ಥಾನದ ಬಳಿಯಿದ್ದ ಎಣ್ಣೆ ಹೊಂಡ ಸಂಪೂರ್ಣವಾಗಿ ಜಲಾವೃತ ಆಗಿದೆ. ರಭಸದಿಂದ ಹರಿಯುತ್ತಿದ್ದ ಮಳೆ ನೀರಿನಲ್ಲಿ ಸಿಲುಕಿದ ವ್ಯಕ್ತಿಯೊಬ್ಬ ಪೊಲೀಸ್​ ಚೌಕಿ ಒಳಗೆ ಕುಳಿತು ರಕ್ಷಣೆಗಾಗಿ ಅಂಗಲಾಚಿದ್ದಾರೆ. ಸವದತ್ತಿಯಲ್ಲಿ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ ಆಗಿದೆ.

ವಿಜಯಪುರದಲ್ಲೂ ಸತತ ಒಂದು ಗಂಟೆಯಿಂದ ಸುರಿದ ಭಾರೀ ಮಳೆಗೆ ವಿಜಯಪುರ ಪಟ್ಟಣ ಸೇರಿದಂತೆ ವಿವಿಧ ಭಾಗಗಳಲ್ಲಿ ‌ಮಳೆ ಅವಾಂತರಕ್ಕೆ ಕಾರಣವಾಗಿದೆ. ಸ್ಟೇಷನ್ ರಸ್ತೆ, ಶಾಪೇಟೆ, ರಾಮ ನಗರ, ಫಿರದೋಸ್ ನಗರ, ಗಣೇಶ ನಗರ, ಲಕ್ಷಣ ನಗರದಲ್ಲಿ ಮನೆಗಳಿಗೆ ಮಳೆ‌‌ ನೀರು ನುಗ್ಗಿದೆ. ಮನೆಗಳಲ್ಲಿದ್ದ ದಿನಸಿ ಹಾಗೂ ಇತರೆ ವಸ್ತುಗಳು ನೀರು ಪಾಲಾಗಿದ್ದು, ಮನೆಗಳಿಗೆ ನುಗ್ಗಿದ ನೀರನ್ನು ಹೊರ ಹಾಕಲು ಜನರು ಹರಸಾಹಸ ಮಾಡುವಂತಾಗಿದೆ.

ಧಾರವಾಡದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ತುಂಬಿದ ಕೆರೆ ತುಂಬಿದ್ದು, ಕೆರೆ ಕೋಡಿ ಬಿದ್ದಿದೆ. ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ‌ ಕೆರೆ ಭರ್ತಿಯಾಗಿ ಕೋಡಿ ನೀರು ಗ್ರಾಮದ ಒಳಕ್ಕೆ ಹರಿದು ಬರ್ತಿದ್ದು, ಭಾರೀ ಮಳೆಯಿಂದ ಕೆರೆ ಏರಿ ಒಡೆದು ಹೋದರೆ ಅನ್ನೋ ಆತಂಕದಲ್ಲಿದ್ದಾರೆ ಇಡೀ ಗ್ರಾಮಸ್ಥರು. ಮಳೆ‌ ಹೆಚ್ಚಾದರೆ ಕೆರೆಯ ಏರಿ ಒಡೆಯುವುದು ನಿಶ್ಚಿತ ಎನ್ನುವಂತಾಗಿದ್ದು, ಗ್ರಾಮದ ಮನೆಗಳಿಗೆ ನೀರು ನುಗ್ಗುವ ಭಯ ಎದುರಾಗಿದ್ದು, ಕೆರೆಯ ನೀರನ್ನು ಪರ್ಯಾಯ ಮಾರ್ಗವಾಗಿ ಹರಿಸುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ಇನ್ನೂ ಧಾರವಾಡದಲ್ಲಿ ಧಾರಾಕಾರ ಮಳೆಯಾಗ್ತಿದ್ದು, ನಾಯಕನೂರು ಬಳಿ ಸೇತುವೆ ಸಂಪೂರ್ಣ ಜಲಾವೃತ ಆಗಿದೆ. ಸೇತುವೆ ಜಲಾವೃತವಾಗಿ ಜನರು ಸಂಚಾರ ಮಾಡಲು ಪರದಾಡುವಂತಾಗಿದೆ. ಗದಗ-ನಾಯಕನೂರು- ನರಗುಂದ ಸಂಪರ್ಕ ಕಡಿತವಾಗಿದೆ. ನವಲಗುಂದ ತಾಲೂಕಿನ ನಾಯಕನೂರು ಗ್ರಾಮದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಹಳ್ಳ ಉಕ್ಕಿಹರಿಯುತ್ತಿದೆ. ಸೇತುವೆ ಮುಳುಗಡೆ ಆದರೂ ಸಂಚಾರ ಮಾಡಲು ಹೋದಾಗ ವಾಹನ ಸವಾರರ ಸಿಲುಕಿ ಪರದಾಡಿದ್ದಾನೆ.

ಕೋಲಾರದಲ್ಲಿ ಮಳೆರಾಯನ ಆರ್ಭಟ ಹೆಚ್ಚಾಗಿದ್ದು, ಬಂಗಾರಪೇಟೆಯ ಸೇಠ್ ಕಾಂಪೌಂಡ್ ಬಡಾವಣೆ ಜಲಾವೃತ ಆಗಿದೆ. ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಭರ್ತಿಯಾಗಿದ್ದು, ಸಾರ್ವಜನಿಕರ ಪರದಾಡ್ತಿದ್ದಾರೆರ. ಕಳೆದ ಹಲವು ವರ್ಷದಿಂದ ಬಡಾವಣೆಯ ರಸ್ತೆಗಳು ಜಲಾವೃತ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯ ವಾರ್ಡ್ ಸದಸ್ಯ ಹಾಗು ಬಂಗಾರಪೇಟೆ ಪುರಸಭೆ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ. ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡ್ತಿದ್ರೂ ವಾರ್ಡ್ ಕೌನ್ಸಿಲರ್ ಬಂದು ನೋಡ್ತಿಲ್ಲ ಅಂತಾ ಆಕ್ರೋಶ ಹೊರಹಾಕಿದ್ದಾರೆ.

Related posts

ಕುರುಬರಿಗೆ ಎಸ್ಟಿ ಮೀಸಲಾತಿ ಕೇಂದ್ರ ವಾಪಸ್‌ ಕಳುಹಿಸಿದೆ.. ನಾನು ಮತ್ತೆ ಕಳುಹಿಸುತ್ತೇನೆ..

Publicspot

Abhiman Studio: ಅಭಿಮಾನ್​ ಸ್ಟುಡಿಯೋ ವಶಕ್ಕೆ ಪಡೆದ ಸರ್ಕಾರ.. ಮತ್ತೆ ತಲೆ ಎತ್ತುತ್ತಾ ಸ್ಮಾರಕ..?

Publicspot

Veerendra Heggade: ಧರ್ಮಸ್ಥಳದಿಂದ ಸರ್ಕಾರಕ್ಕೆ ಧನ್ಯವಾದ.. ಒಳ್ಳೆಯದ್ದೇ ಮಾಡುವ ಭರವಸೆ..

Publicspot

ಮೀಸಲಾತಿ ಮಸೂದೆಗೆ ಅಂಕಿತ.. ಆದರೂ ಹಳೇ ಮೀಸಲಾತಿಯಲ್ಲಿ ನೇಮಕಾತಿ ಯಾಕೆ..?

Publicspot

Kannada Sahithya Academy; ಯುವ ಪತ್ರಕರ್ತರಿಗೆ ಕೋಟೆ ನಾಡಲ್ಲಿ ಕನ್ನಡ ಸಾಹಿತ್ಯದ ರಸದೌತಣ

Publicspot

ಪರಿಸರವನ್ನು ಪಠ್ಯಕ್ರಮವಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

admin