The Public Spot
ರಾಜ್ಯ

Veerendra Heggade: ಧರ್ಮಸ್ಥಳದಿಂದ ಸರ್ಕಾರಕ್ಕೆ ಧನ್ಯವಾದ.. ಒಳ್ಳೆಯದ್ದೇ ಮಾಡುವ ಭರವಸೆ..

ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಭಕ್ತರಿಂದ ವಿಶೇಷ ಪ್ರಾರ್ಥನೆ ಜೊತೆಗೆ ಲಲಿತಾಸಹಸ್ರನಾಮ ಪಠಣ ಕಾರ್ಯಕಮ ಹಮ್ಮಿಕೊಳ್ಳಲಾಗಿತ್ತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ, ಪತ್ನಿ ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಜೈನ್​ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮದ ಜನರು ಭಾಗಿಯಾಗಿದ್ದರು. ಮಂಜುನಾಥಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಯ ಭಕ್ತರು ಪ್ರಾರ್ಥನೆ ಸಲ್ಲಿಸಿದರ. ಆ ಬಳಿಕ ಮಹಿಳಾ ಭಕ್ತರಿಗೆ ಬಾಗಿನ ನೀಡಿ ಗೌರವ ಸಲ್ಲಿಸಲಾಯ್ತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಸಿದ್ದಗಂಗಾ ಶ್ರಿಗಳನ್ನ ನೆನೆದಿದ್ದಾರೆ. ಕೋವಿಡ್​ ಸಮಯದಲ್ಲಿ ಹಾಗೂ ಈಗ ಅನೇಕ ಪುಸ್ತಕಗಳನ್ನ ನಾನು ಓದಿದ್ದೇನೆ. ಅದರಲ್ಲೂ ಸಿದ್ದಗಂಗಾ ಶ್ರೀಗಳ ಹಲವು ಪುಸ್ತಕಗಳನ್ನ ನಾನು ಓದಿದ್ದೇನೆ. ನಮ್ಮನ್ನ ಬಹಳವಾಗಿ ಹೊಗಳಿದ್ದೀರಿ. ಆದರೆ ನಮ್ಮ ಸೇವೆ ಧರ್ಮ ನಮಗೆ ಮುಖ್ಯ ಅಂತ ಸಿದ್ದಗಂಗಾ ಶ್ರಿಗಳು ಹೇಳಿದ್ದಾರೆ ಎಂದಿದ್ದಾರೆ. ಇನ್ನು ನನಗೆ ಈಗ ಮನಸ್ಸು ಸ್ವಲ್ಪ ಹಗುರವಾಗಿದೆ. ನಮ್ಮ ಮೇಲೆ ದೃಢವಾದ ನಂಬಿಕೆ ಇಟ್ಟ ಎಲ್ಲರಿಗೂ ನಾನು‌ ಆಭಾರಿಯಾಗಿದ್ದೇನೆ. ನಾವು ಯಾರನ್ನೂ ಹೀಯಾಳಿಸಿಲ್ಲ, ದ್ವೇಷ ಕೂಡ ಮಾಡಿಲ್ಲ. ನಾವು ತಪ್ಪು ಮಾಡದ ಕಾರಣ ನಮಗೆ ಆತ್ಮವಿಶ್ವಾಸ ಇದೆ ಎಂದಿದ್ದಾರೆ.

ಕೆಲವರು ನಮ್ಮ ಮೇಲಿನ ಪ್ರೀತಿಯಲ್ಲಿ ಟೀಕೆ ಮಾಡಿದ್ರು. ಇವರ ಹಾಗೇ ಟೀಕೆ ಮಾಡಿಲ್ಲ. ನಿಮಗೆ ನಾನು ಎಷ್ಟು ಕೃತಜ್ಞತೆ ಸಲ್ಲಿಸಿದ್ರೂ ಕಡಿಮೆಯೇ. ಧರ್ಮಸ್ಥಳ ಬೇರೆ, ಧರ್ಮಸ್ಥಳದ ಊರಿನವರು ಬೇರೆ ಅಲ್ಲ. ಎಷ್ಟು ನಿಷ್ಟೂರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆದಿದೆ ಅಂತ ನೀವು ನೋಡಿದ್ದೀರಿ. ಯಾಕೆ ಇಷ್ಟು ದ್ವೇಷ ನನ್ನ ಮೇಲೆ ಇದೆ..? ಅಂತ ನನಗೆ ಗೊತ್ತಾಗ್ತಿಲ್ಲ ಎಂದಿದ್ದಾರೆ. ಬೆಂಗಳೂರು ಅಥವಾ ಎಲ್ಲೋ ಕುಳಿತು ಟೀಕೆ ಮಾಡೋರು ಬೇಡ. ನಮಗೆ ನಮ್ಮವರು ಬೇಕು.. ನಮ್ಮ ಜೊತೆಗೆ ನಿಲ್ಲೋರು ಬೇಕು. ನಮ್ಮ ಮೇಲೆ ಪ್ರೀತಿ ತೋರಿದ ಎಲ್ಲಾ ಹೆಣ್ಮಕ್ಕಳಿಗೂ ನಾನು ಆಭಾರಿ ಎಂದಿದ್ದಾರೆ. ಇನ್ನು ಎಸ್​ಐಟಿ ತನಿಖೆ ಬಗ್ಗೆಯೂ ಮಾತನಾಡಿದ ವೀರೇಂದ್ರ ಹೆಗ್ಗಡೆ, ಎಸ್ಐಟಿ ವರದಿ ಅರ್ಧ ಬಂದಿದೆ. ಹೀಗಾಗಿ ನಾನು ಇಷ್ಟು ಧೈರ್ಯವಾಗಿ ಮಾತನಾಡ್ತಿದ್ದೀನಿ. ನಮ್ಮ ಹೊಳಪು ಹಾಗೇ ಉಳಿದುಕೊಂಡಿದ್ದಕ್ಕೆ ನಾನು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸ್ತೇನೆ ಎಂದಿದ್ದಾರೆ.

ಧರ್ಮಸ್ಥಳ ಕುರಿತು ಎಸ್ಐಟಿ ತನಿಖೆ ಬಗ್ಗೆ ವೀರೇಂದ್ರ ಹೆಗಡೆ ಸ್ವಾಗತ ಮಾಡಿರುವ ವಿಚಾರವಾಗಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ನಾವು ಯಾವಾಗಲೂ ಒಳ್ಳೆಯದೇ ಮಾಡೋದು ನಡೀರಿ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಡಿಸಿಎಂ ಡಿ.ಕೆ ಶಿವಕುಮಾರ್​ ಮಾತನಾಡಿ, ಕಾಂಗ್ರೆಸ್ ಸರ್ಕಾರ ಯಾವತ್ತಿಗೂ ಯಾರಿಗೂ ತೊಂದರೆ ಬಯಸೋದಿಲ್ಲ. ಕಾನೂನಿನ ಚೌಕಟ್ಟಿನೊಳಗೆ ಏನೇನು ನ್ಯಾಯ ಒದಗಿಸಬೇಕೋ ಅದನ್ನು ಮಾಡುತ್ತೇವೆ. ತಪ್ಪು ಮಾಡಿದವರಿಗೂ ಕಾನೂನು ರೀತಿಯಲ್ಲಿ ಕ್ರಮ ವಹಿಸಲಾಗುತ್ತದೆ. ಇವತ್ತಿನವರೆಗೂ ನಾವು ಧರ್ಮಸ್ಥಳ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿಲ್ಲ. ನಾವು ಕೂಡ ಅಧಿಕಾರಿಗಳ ಬಳಿ ಏನು ಅಂತಾ ಕೇಳಿಲ್ಲ. ಇಷ್ಟು ದಿನಗಳ ಕಾಲ ಮಾಧ್ಯಮಗಳಲ್ಲಿ ಬಂದ ವರದಿ ಬಗ್ಗೆ ನಾವು ಮಾತಾಡಿದ್ದೇವೆ. ಮುಂದೆ ಅಂತಿಮವಾದ ವರದಿ ಬರಲಿ, ಆ ನಂತರ ಮಾತಾಡೋಣ ಎಂದಿದ್ದಾರೆ.

Related posts

ಆಣೆ ಪ್ರಮಾಣವೋ.. ಕಾಂಗ್ರೆಸ್‌ ಪಾಲಿಗೆ ಬಿಡದಿ ಅನ್ನೋದು ಶಾಪವೋ..?

Publicspot

High Court Dismissed PIL ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಇನ್ನಿಲ್ಲ ತಡೆ..

Publicspot

ಜನರು ಫ್ಲೋರೈಡ್ ಯುಕ್ತ ನೀರನ್ನು ಕುಡಿಯುವ ಅನಿವಾರ್ಯತೆ ಇತ್ತು. ಇದರಿಂದ ಜನರಿಗೆ ಆರೋಗ್ಯದ ತೊಂದರೆ

admin

ಶಿಕ್ಷಕರ ನೇಮಕಾತಿ & ಕಡ್ಡಾಯ ನಿಯಮಗಳು.. BE, BSc, BCA ಗೂ ಚಾನ್ಸ್​​

Publicspot

ಜನ ಮೆಚ್ಚಿದ ಅಧಿಕಾರಿ ಮಹಾಂತೇಶ್‌ ಬೀಳಗಿ ಇನ್ನಿಲ್ಲ.. ಅಪಘಾತದಲ್ಲಿ ನಿಧನ

Publicspot

Abhiman Studio: ಅಭಿಮಾನ್​ ಸ್ಟುಡಿಯೋ ವಶಕ್ಕೆ ಪಡೆದ ಸರ್ಕಾರ.. ಮತ್ತೆ ತಲೆ ಎತ್ತುತ್ತಾ ಸ್ಮಾರಕ..?

Publicspot