The Public Spot
ಟ್ರೆಂಡ್

RSS VS DSS.. ಮತ್ತೆ ಸಂಘದ ವಿರುದ್ಧ ಗುಡುಗಿದ ಪ್ರಿಯಾಂಕ್‌ ಖರ್ಗೆ

RSS ಬ್ಯಾನ್‌ ಮಾಡ್ಬೇಕು ಎಂದಿದ್ದ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ದತ್ತಾತ್ರೇಯ ಹೊಸಬಾಳೆ ನಿನ್ನೆ ವಿರೋಧಿಸಿದ್ರು. ದೇಶದ ಜನರು ಒಪ್ಪಿದ್ದಾರೆ. ನಿಷೇಧಕ್ಕೆ ಏನಾದರೂ ಒಂದು ಕಾರಣ ಇರಬೇಕಲ್ಲ, ಏನು ಕಾರಣ ಎಂದು ಪ್ರಶ್ನಿಸಿದ್ದರು. ಇದೀಗ ಪ್ರಿಯಾಂಕ್ ಖರ್ಗೆ ಮಾತನಾಡಿ, ಕೆಲವು ಜನರು ಒಪ್ಪಿರಬಹುದು, ಎಲ್ಲ ಜನರು ಒಪ್ಪಿದ್ದಾರಾ? ದೇಶದ ಕಾನೂನು ಒಪ್ಪಬೇಕಲ್ವಾ? ಎಂದು ಪ್ರಶ್ನಿಸಿದ್ದಾರೆ. ಕೆಲವರು ಒಪ್ಪಬಹುದು, ಕೆಲವರು ಒಪ್ಪಿದ ತಕ್ಷಣ ಇಡೀ ದೇಶ ಒಪ್ಪಿದ್ದಾರೆ ಅನ್ನೋ ಭ್ರಮೆ ಯಾರಿಗೂ ಬೇಡ. ನನ್ನ ನಿಲುವು ಸ್ಪಷ್ಟವಾಗಿದೆ ಎಂದಿದ್ದಾರೆ ಪ್ರಿಯಾಂಕ್ ಖರ್ಗೆ.

ಸರ್ಕಾರದವರು RSSನ ಆಳು ಮಕ್ಕಳಲ್ಲ. ಇವರು ಹೇಳಿದ ತಕ್ಷಣ RSSಗೆ ಭದ್ರತೆ ಕೊಡೋದಕ್ಕೆ ಎಂದಿರುವ ಪ್ರಿಯಾಂಕ್‌ ಖರ್ಗೆ, ಪಥ ಸಂಚಲನ ಯಾಕೆ ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ. ಇಡೀ ರಾಷ್ಟ್ರದಲ್ಲಿ ಪಥ ಸಂಚಲನ ಮಾಡಿದ್ದಾರೆ. ಮುಂದೆಯೂ ಪಥ ಸಂಚಲನ ಮಾಡಬೇಕು ಅಂತೇನಿದೆ? ನೋಂದಣಿಯೆ ಆಗದ ಸಂಸ್ಥೆಗೆ ಪಥ ಸಂಚಲನಕ್ಕೆ ಯಾಕೆ ಅನುಮತಿ ಕೊಡಬೇಕು? ಯುನಿಫಾರ್ಮ್ ಹಾಕ್ಕೊಂಡು ಡ್ರಮ್ ಬಾರಿಸಿಕೊಂಡು ದೊಣ್ಣೆ ಹಿಡಿದು ಪಥ ಸಂಚಲನದ ಅಗತ್ಯ ಏನಿದೆ? ಯಾವ ಸಂಪ್ರದಾಯ ಇದು ? ಎಂದಿದ್ದಾರೆರ. ಖಾಸಗಿ ಸಂಸ್ಥೆಯಲ್ಲಿ ಮಾಡಿಕೊಳ್ಳಿ ಯಾರು ಬೇಡ ಅಂದಿದ್ದಾರೆ ಎಂದಿರುವ ಸಚಿವ ಪ್ರಿಯಾಂಕ್‌ ಖರ್ಗೆ ತ್ರಿಶೂಲ ಧೀಕ್ಷೆಯನ್ನೇ ಕೊಡಬೇಕು ದೊಣ್ಣೆಯನ್ನೇ ಹಿಡಿಯಬೇಕು ಎಂಬುದು ಏನಿದೆ..? ಎಂದು ಕಿಚಾಯಿಸಿದ್ದಾರೆ.

ದೇಶಕ್ಕಾಗಿ ಕೆಲಸ ಮಾಡುವ ಎಲ್ಲಾ ಸಂಸ್ಥೆಗಳೂ ರಿಜಿಸ್ಟರ್ ಆಗಿವೆ. RSS ಮಾತ್ರ ಯಾಕೆ ರಿಜಿಸ್ಟರ್ ಆಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದು, RSS ನಿಷೇಧ ವಿಚಾರದಲ್ಲಿ ಜಟಾಪಟಿ ಕುರಿತಂತೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ದತ್ತಾತ್ರೇಯ ಹೊಸಬಾಳೆ ಟಕ್ಕರ್ ಕೊಟ್ಟ ವಿಚಾರವಾಗಿ RSS ಸಂಘಟನೆಯನ್ನು ಇಡೀ ಸಮಾಜ ಒಪ್ಪಿಲ್ಲ, ಇಡೀ ದೇಶ ಒಪ್ಪಿಲ್ಲ. ಎಲ್ಲರೂ ಒಪ್ಪಿದ್ದಾರೆ ಅನ್ನೋ ಭಾವನೆ ಸರಿಯಲ್ಲ. ಸರ್ಕಾರಿ ಜಾಗಗಳಲ್ಲಿ ಚಟುವಟಿಕೆ ಮಾಡೋ ಆಗಿಲ್ಲ. ಅನುಮತಿ ತಗೋಬೇಕು, ನಾವು RSSನ ಆಳು ಮಕ್ಕಳು ಅಲ್ಲ. ದೊಡ್ಡ ಸಂಘಟನೆ ಅಂತಾರೆ, ಯಾಕೆ ಇನ್ನೂ ಆರ್‌ಎಸ್‌ಎಸ್ ನೋಂದಣಿ ಆಗಿಲ್ಲ..? ಇವರಿಗೊಂದು ನ್ಯಾಯ ನಮಗೊಂದು ನ್ಯಾಯನಾ? ಸಂಘವೇ ನೋಂದಣಿ ಆಗದೇ ಹೇಗೆ ಅನುಮತಿ ಪಡೀತಾರೆ..? ಎಂದಿದ್ದಾರೆ.

RSS ಬ್ಯಾನ್‌ ಮಾಡಬೇಕು ಅನ್ನೋ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತಿಗೆ RSS ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ನಿನ್ನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ತಿರುಗೇಟು ನೀಡಿದ್ದರು. RSS ಒಂದು ಶತಮಾನದಿಂದ ದೇಶಕ್ಕಾಗಿ ಕೆಲಸ ಮಾಡ್ತಿದೆ. ಭಾರತೀಯರೂ ಕೂಡ RSS ಅನ್ನು ಒಪ್ಪಿಕೊಂಡಿದ್ದಾರೆ. ಆದರೂ ನಿರ್ಬಂಧ ಹೇರುವುದಕ್ಕೆ ಒಂದು ಕಾರಣ ಬೇಕಲ್ಲವೇ..? RSS ನಿಷೇಧ ಮಾಡಿ ನೀವು ಸಾಧಿಸುವುದಾದರೂ ಏನು ಅಂತಾ ಪ್ರಶ್ನೆ ಮಾಡಿದ್ದರು. ಖರ್ಗೆ ಮಾತಿಗೆ RSS ಎತ್ತಿದ ಪ್ರಶ್ನೆಗೆ ಪ್ರಿಯಾಂಕ್‌ ಖರ್ಗೆ ಟಾಂಗ್ ಕೊಟ್ಟಿದ್ದಾರೆ.

ಇನ್ನೂ ಚಿತ್ತಾಪುರ ಬಳಿಕ ಯಾದಗಿರಿಯಲ್ಲೂ RSS ವರ್ಸಸ್‌ DSS ಪಥಸಂಚಲನ ಜಟಾಪಟಿ ಶುರುವಾಗಿದೆ. ಕೆಂಭಾವಿಯಲ್ಲಿ ನವೆಂಬರ್‌ 4 ರಂದು ಪಥಸಂಚಲನಕ್ಕೆ ಅನುಮತಿ ಕೇಳಲಾಗಿದೆ. ಆದರೆ ಅದೇ ದಿನ ಕೆಂಭಾವಿಯಲ್ಲಿ ಪರೇಡ್ ನಡೆಸಲು ಅನುಮತಿ ಕೇಳಿದೆ DSS. ನವೆಂಬರ್‌ 4 ರಂದು ಪಥ ಸಂಚಲನಕ್ಕೆ ಕೆಂಭಾವಿ ಪಟ್ಟಣ ಸಜ್ಜಾಗಿದೆ. ಕೆಂಭಾವಿ ಪಟ್ಟಣದ ಹಲವು ಬೀದಿಗಳಲ್ಲಿ ಕೇಸರಿ ಬಾವುಟ, ಬಟಿಂಗ್ಸ್ ಅಳವಡಿಕೆ ಮಾಡಲಾಗಿದೆ. ಪಥ ಸಂಚಲನಕ್ಕೆ ಸಂಪೂರ್ಣವಾಗಿ ಕೇಸರಿಮಯ ಆಗಿದೆ ಕೆಂಭಾವಿ ಪಟ್ಟಣ. ಆದರೆ RSS ಪಥಸಂಚಲನಕ್ಕೆ ಕೌಂಟರ್ ಕೊಡಲು DSS ಸಿದ್ಧತೆ ಮಾಡಿಕೊಂಡಿದೆ.

Related posts

Hasanambe Last two days; ಕಾಲ್ತುಳಿತ ಸಂಭವಿಸಿದರೆ ನಾವು ಜವಾಬ್ದಾರಿ ಹೊರುವುದಿಲ್ಲ.. ಬಸ್‌ ನಿಲ್ಲಿಸಿ..

Publicspot

Today Blood moon: ರಕ್ತ ಚಂದ್ರಗ್ರಹ.. ಎಲ್ಲೆಲ್ಲಿ ಕಾಣುತ್ತೆ..? ಏನಿದ್ರ ವಿಶೇಷ..

Publicspot

RSS ಪಥಸಂಚಲನ.. ಸಸ್ಪೆಂಡ್​ಗೆ ಆಕ್ರೋಶ.. ಇವತ್ತು ಮತ್ತೆ ಪಥಸಂಚಲನ ಸಂಚಲನ..!

Publicspot

ಚಳಿಗಾಲ ವಿಪರೀತ.. ಎಚ್ಚರ ತಪ್ಪಿದ್ರೆ ಹಾರಿ ಹೋಗುತ್ತೆ ಪ್ರಾಣ ಪಕ್ಷಿ.. ಕಾರಣ ಏನು..?

Publicspot

Elephant; ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಆನೆ ಬದುಕಿದ್ಯಾ..? ಸತ್ತೇ ಹೋಯ್ತಾ..?

Publicspot

ಸುಳ್ಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿ ಸಿಕ್ಕಿಬಿತ್ತಾ ರಾಮೇಶ್ವರಂ ಕೆಫೆ..?

Publicspot