The Public Spot
ಕ್ರೀಡೆ

India Wins Women’s WorldCup: ಚೊಚ್ಚಲ ವಿಶ್ವಕಪ್​ಗೆ ಮುತ್ತಿಟ್ಟ “ಭಾರತಾಂಬೆ” ಮಕ್ಕಳು

ಹೆಣ್ಮಕ್ಳೇ ಸ್ಟ್ರಾಂಗು ಗುರು ಅನ್ನೋದನ್ನು ಭಾರತೀಯ ನಾರಿಯರು ಮತ್ತೊಮ್ಮೆ ಸಾಬೀತು ಮಾಡಿದರು. ಇತ್ತೀಚಿಗೆ RCB ಮಹಿಳಾ ತಂಡ ಕಪ್​ ಗೆಲ್ಲುವ ಮೂಲಕ ಪುರುಷರಿಗಿಂತಲೂ ಮೊದಲೇ ಕಪ್​ ಗೆಲ್ಲುವ ಮೂಲಕ ನಾವು ಮಹಿಳೆಯರು ಸ್ಟ್ರಾಂಗ್​ ಅನ್ನೋದನ್ನು ಕರ್ನಾಟಕಕ್ಕೆ ಸಾರಿ ಸಾರಿ ಹೇಳಿದ್ರು. ಇದೀಗ ಭಾರತೀಯ ಮಹಿಳಾ ತಂಡ ವಿಶ್ವಕಪ್​ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ನಾವು ಮಹಿಳೆಯರು ಪುರುಷರಿಗೇನು ಕಡಿಮೆ ಇಲ್ಲ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಸೌತ್​ ಆಫ್ರಿಕಾ ಮಹಿಳಾ ತಂಡವನ್ನು 52 ರನ್​ಗಳಿಂದ ಸೋಲಿಸುವ ಮೂಲಕ ಭಾರತ ಮಹಿಳಾ ಕ್ರಿಕೆಟ್​​ ತಂಡ ಚೊಚ್ಚಲ ವಿಶ್ವಕಪ್​ ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತಾಂಬೆ ಸಂಭ್ರಮ ಹಿಮ್ಮಡಿಗೊಳಿಸಿದ್ದಾರೆ.

ನವಿ ಮುಂಬೈನ ಡಿ ವೈ ಪಾಟೀಲ್​ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಫೈನಲ್ ಪಂದ್ಯ ಭಾರೀ ಮಳೆಯಿಂದ 2 ಗಂಟೆಗಳ ಕಾಲ ತಡವಾಗಿ ಆರಂಭ ಆದರೂ ಓವರ್​ಗಳನ್ನು ಕಡಿತ ಮಾಡದೆ ಇರುವ ನಿರ್ಧಾರ ತೆಗೆದುಕೊಳ್ಳಲಾಯ್ತು. 4.32ರ ಸುಮಾರಿಗೆ ಟಾಸ್​ ಆದಾಗ ಭಾರತ ಟಾಸ್​ ಸೋತಿತ್ತು. ಆದರೆ ಸೌತ್​ ಆಫ್ರಿಕಾ ಟೀಂ ನಾಯಕಿ ಲಾರಾ ವೋಲ್ವಾರ್ಟ್​ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡು ಭಾರತವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಅದೃಷ್ಟವೆಂಬಂತೆ ಭಾರತ ಉತ್ತಮ ಆರಂಭ ಪಡೆಯಿತ್ತಲ್ಲದೆ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 298 ದಾಖಲಿಸಿತ್ತು. 299 ರನ್​ಗಳ ಟಾರ್ಗೆಟ್​ ಪಡೆದ ದಕ್ಷಿಣ ಆಫ್ರಿಕಾ ಆರಂಭದಿಂದಲೂ ಒತ್ತಡಕ್ಕೆ ಸಿಲುಕಿ ಸೋಲಿನ ಹಾದಿಯಲ್ಲೇ ಸಾಗಿ ಅಂತಿಮವಾಗಿ ಸೋಲನ್ನು ಒಪ್ಪಿಕೊಳ್ತು.

ಭಾರತದ ಪರವಾಗಿ ಆರಂಭಿಕರಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಉತ್ತಮ ಆರಂಭ ತಂದುಕೊಡುವಲ್ಲಿ ಯಶಸ್ವಿಯಾದರು. ಸ್ಮೃತಿ ಮಂದಾನ 45 ರನ್​ ಗಳಿಸಿ ಔಟ್​ ಆದರೆ ಶಫಾಲಿ ವರ್ಮಾ 87 ರನ್​ ಮಳೆ ಸುರಿಸಿ ಖಾಕಾ ಬೌಲಿಂಗ್​ನಲ್ಲಿ ಸುನೆ ಲೂಸ್​ಗೆ ಕ್ಯಾಚ್​ ನೀಡುವ ಮೂಲಕ ಸೆಂಚ್ಯೂರಿ ಮಿಸ್​ ಮಾಡಿಕೊಂಡರು. ಇವರಿಬ್ಬರ ಜೊತೆಯಾಟ ಬರೋಬ್ಬರಿ 104 ಆಗಿತ್ತು. ಆ ಬಳಿಕ ಶಫಾಲಿ ವರ್ಮಾ ಜೊತೆಯಾದ ಜೆಮಿಮಾ ರಾಡ್ರಿಗಸ್ 62 ರನ್​ಗಳ ಜೊತೆಯಾಟ ಆಡಿದ್ರು. ಜೆಮಿಮಾ 24 ರನ್​ ಗಳಿಸಿ ಔಟ್​ ಆದ್ರೆ, ಕ್ಯಾಪ್ಟನ್​ ಹರ್ಮನ್​ಪ್ರೀತ್​ ಕೌರ್​ 20 ರನ್​ಗಳಿಗೆ ಆಟ ಮುಗಿಸಿ ಪೆವಿಲಿಯನ್​ ಸೇರಿಕೊಂಡ್ರು. ಆ ನಂತರ ತಂಡಕ್ಕೆ ಆಸರೆ ಆಗಿದ್ದು, ದೀಪ್ತೀ ಶರ್ಮಾ (58 ರನ್​) ಹಾಗೂ ವಿಕೆಟ್​ ಕೀಪರ್​ ರಿಚ್ಚಾ ಘೋಷ್ (34 ರನ್​) 299 ರನ್​ಗಳ ಟಾರ್ಗೆಟ್​ ಕೊಟ್ಟ ಭಾರತ ಫೀಲ್ಡಿಂಗ್​ನಲ್ಲಿ ಅಲ್ಲಲ್ಲಿ ತಪ್ಪು ಮಾಡಿದರೂ ಹರಿಣಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಸೌತ್​ ಆಫ್ರಿಕಾ ಪರವಾಗಿ ಮೂರು ವಿಕೆಟ್​ ಪಡೆದ ಅಯಾಬೊಂಗಾ ಖಾಕಾ 9 ಓವರ್​ನಲ್ಲಿ 58 ರನ್​ಗಳನ್ನು ಕೊಟ್ಟು ದುಬಾರಿಯೂ ಆದ್ರು. ಇನ್ನು ಬ್ಯಾಟಿಂಗ್​ನಲ್ಲಿ ಸೌತ್​ ಆಫ್ರಿಕಾ ನಾಯಕಿ ಲಾರಾ ವೋಲ್ವಾರ್ಟ್​ 101 ರನ್​ ಗಳಿಸುವ ಮೂಲಕ ಗೆಲುವಿನ ದಡ ಸೇರಿಸುವ ಪ್ರಯತ್ನ ಮಾಡಿದ್ದರು,. ಆದರೆ ಮತ್ತೊಂದು ಎಂಡ್​ನಲ್ಲಿ ವಿಕೆಟ್​ಗಳು ತರಗೆಲೆಗಳಂತೆ ಉರುರಿಸಿದ್ದು, ಮತ್ತದೇ ಭಾರತೀಯ ನಾರಿಶಕ್ತಿ. ಭಾರತಾಂಬೆಯ ಶಕ್ತಿ ಹೊಂದಿದ್ದ ನಮ್ಮ ಮಹಿಳಾ ಮಣಿಗಳು ಉತ್ತಮ ಬೌಲಿಂಗ್​ ಮಾಡಿ ಸೈ ಎನಿಸಿಕೊಂಡರು. 58 ರನ್​ ಗಳಿಸಿ ಶಹಬ್ಬಾಸ್​ಗಿರಿ ಪಡೆದಿದ್ದ ದೀಪ್ತಿ ಶರ್ಮಾ, ಬೌಲಿಂಗ್​ನಲ್ಲೂ ಮಿಂಚಿನ ದಾಳಿ ನಡೆಸಿ 9.3 ಓವರ್​ಗಳಲ್ಲಿ ಕೇವಲ 39 ರನ್​ ಕೊಟ್ಟು 5 ವಿಕೆಟ್​ ಪಡೆದು ದಾಖಲೆ ನಿರ್ಮಿಸಿದರು. ಶಫಾಲಿ ವರ್ಮಾ 2 ಹಾಗೂ ಶ್ರೀಚರಣಿ 1 ವಿಕೆಟ್​ ಪಡೆದುಕೊಂಡು 45.3 ಓವರ್​ಗಳಲ್ಲಿಯೇ ಆಟ ಮುಗಿಸಿದರು.

ಮೊದಲ ಬಾರಿಗೆ ಫೈನಲ್​ ಪ್ರವೇಶ ಪಡೆದಿದ್ದ ಸೌತ್​ ಆಫ್ರಿಕಾ ತಂಡ ಭಾರತದ ನಾರಿ ಶಕ್ತಿ ಎದುರು ಮಂಡಿಯೂರಿತ್ತು. ಆದರೆ ಮೂರನೇ ಬಾರಿ ಫೈನಲ್​ ಪ್ರವೇಶ ಮಾಡಿದ್ದ ಭಾರತ ಮಾತ್ರ, ನಾವು ಕಪ್​ ಗೆದ್ದೇ ತೀರುತ್ತೇವೆ ಎನ್ನುವ ಛಲದೊಂದಿಗೆ ಆಟವಾಡಿ ಕಪ್​ ಮುಡಿಗೇರಿಸಿಕೊಂಡಿದೆ. ಫೈನಲ್​ ಕಪ್​ ಗೆದ್ದ ತಂಡಕ್ಕೆ ICC 40 ಕೋಟಿ ನಗದು ಬಹುಮಾನ ನೀಡಲಿದೆ. ಆದರೆ ನಮ್ಮ ಭಾರತದ ಕ್ರಿಕೆಟ್​ ಸಂಸ್ಥೆ BCCI ಇಡೀ ಭಾರತದ ತಂಡಕ್ಕೆ ₹125 ಕೋಟಿ ರೂಪಾಯಿ ನಗದು ಬಹುಮಾನ ಘೋಷಣೆ ಮಾಡಿದೆ. ಭಾರತಾಂಬೆಯ ಪುತ್ರಿಯರು ವಿಶ್ವಕಪ್​ ಮುಕುಟ ಧರಿಸುವ ಮೂಲಕ ಇಡೀ ಭಾರತಕ್ಕೆ ಹರ್ಷ ತಂದಿದ್ದಾರೆ ಎಂದರೆ ಸುಳ್ಳಲ್ಲ. ಗೆಲುವು ದಕ್ಕಿಸಿಕೊಂಡ ಭಾರತದ ಮಹಿಳಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಇಡೀ ದೇಶವೇ ಶುಭಾಶಯಗಳ ಸುರಿಮಳೆ ಸುರಿಸಿದೆ.

Related posts

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚಿನ್ನದಂತ ಆಟವಾಡಿದ RCB ಹುಡುಗರು.. ಚೆನ್ನೈ ಪಲ್ಟಿ..

Publicspot

T-20 ವಿಶ್ವಕಪ್‌ ಫೈನಲ್‌ಗೆ ಲಗ್ಗೆ ಹಾಕಿದ ಟೀಂ ಇಂಡಿಯಾ..!

Publicspot

IPL ಕ್ರಿಕೆಟ್‌ ಪಂದ್ಯ ನಡೆಸಲು ಸರ್ಕಾರದ ಸಮ್ಮತಿ..! 11 ಜನರ ಬಲಿ ಬಳಿಕ ಮತ್ತೆ ಪಂದ್ಯ..

Publicspot

19 ವರ್ಷದ ಒಳಗಿನ ಹುಡುಗರಲ್ಲೂ ಭಾರತವೇ ಲೀಡರ್‌.. 6ನೇ ವಿಶ್ವಕಪ್‌..

Publicspot

ಚಿನ್ನಸ್ವಾಮಿ ಸ್ಟೇಡಿಯಂ ವಿಚಾರದಲ್ಲೂ ರಾಜಕೀಯ ನಡೀತಿದ್ಯಾ..? ನಾಳಿನ ಪಂದ್ಯ ಕ್ಯಾನ್ಸಲ್​..!!

Publicspot

ಟಿ-20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಹಂತಕ್ಕೆ ಲಗ್ಗೆ ಹಾಕಿದ ಟೀಂ ಇಂಡಿಯಾ!

Publicspot