The Public Spot
ಅಪರಾಧ

Dharmasthala SIT: ಶೀಘ್ರವೇ ಮಹೇಶ್​ ಶೆಟ್ಟಿ ತಿಮರೋಡಿ ಬಂಧನ ಆಗುತ್ತಾ..?

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು SIT ತನಿಖೆಗೆ ಕಾರಣವಾಗಿದ್ದ ಮಾಸ್ಕ್​ ಮ್ಯಾನ್​ ಚಿನ್ನಯ್ಯನನ್ನು SIT ಟೀಂ ಈಗಾಗಲೇ ಬಂಧನ ಮಾಡಿದೆ. ಬುರುಡೆ ಪ್ರಕರಣದ ವಿಚಾರವಾಗಿ ಎಸ್​ಐಟಿ ತನಿಖೆ ಚುರುಕುಗೊಳಿಸಿದೆ. ಮಾಸ್ಕ್​ ಮ್ಯಾನ್​ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಹೊರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ದಿನಪೂರ್ತಿ ಶೋಧ ನಡೆಸಿದೆ SIT ಟೀಂ. ಮಹೇಶ್​ ತಿಮರೋಡಿ ಸಹೋದರ ಮೋಹನ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ವಾಸ್ತವ್ಯ ಹೂಡಿದ್ದ. ಹೀಗಾಗಿ ತಿಮರೋಡಿ ಮನೆಯ ಪಕ್ಕದಲ್ಲೇ ಇರುವ ಸಹೋದರ ಮೋಹನ್ ಶೆಟ್ಟಿ ಮನೆಯಲ್ಲೂ ಮಹಜರು ಮಾಡಲಾಗಿದೆ. SIT ಎಸ್​ಪಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆದಿದೆ. ಸೋಕೋ ಟೀಂ ಸೇರಿದಂತೆ ವಿವಿಧ ತಂಡಗಳು SIT ಅಧಿಕಾರಿಗಳಿಗೆ ಸಾಥ್​ ಕೊಟ್ಟಿದ್ದಾರೆ.

SIT ಅಧಿಕಾರಿಗಳು ಮಹಜರು ಜೊತೆ ಜೊತೆಗೇ ಮಾಸ್ಕ್​ ಮ್ಯಾನ್​ ಚಿನ್ನಯ್ಯನ ವಿಚಾರಣೆ ಕೂಡ ಆಗ್ತಿದೆ. ಮಹೇಶ್​ ಶೆಟ್ಟಿ ತಿಮರೋಡಿ ಮನೆಯಲ್ಲಿ ಸಭೆಗಳು ಆಗುತ್ತಿತ್ತಾ..? ರಹಸ್ಯ ಸಭೆಯಲ್ಲಿ ಯಾರೆಲ್ಲಾ ಇರುತ್ತಿದ್ದರು..? ಸಭೆ ವೇಳೆ ನಿನಗೆ ಯಾವ ನಿರ್ದೇಶನ ಕೊಡುತ್ತಿದ್ದರು..? ಅನ್ನೋ ಬಗ್ಗೆ ಚಿನ್ನಯ್ಯನನ್ನು ವಿಚಾರಣೆ ಮಾಡಿದ್ದಾರೆ. ಮಹೇಶ್​ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ಮಲಗುತ್ತಿದ್ದ ಕೋಣೆಯನ್ನು ಪರಿಶೀಲನೆ ಮಾಡಲಾಗಿದ್ದು, ಜನರು ಬರುತ್ತಿದ್ದ ವೇಳೆ ಕೋಣೆ ಒಳಕ್ಕೆ ಹೋಗುವಂತೆ ಹೇಳಿ, ಕಳುಹಿಸುತ್ತಿದ್ದರು. ನನ್ನನ್ನು ಕೋಣೆಯ ಒಳಕ್ಕೆ ಕಳುಹಿಸಿ ಬೀಗ ಹಾಕುತ್ತಿದ್ರು ಎಂದಿದ್ದಾನಂತೆ ಮಾಸ್ಕ್​ ಮ್ಯಾನ್​ ಚಿನ್ನಯ್ಯ.

ಮಹೇಶ್ ಶೆಟ್ಟಿ ತಿಮರೋಡಿ ಮನೆಯಿಂದ ಮಾಸ್ಕ್​ಮ್ಯಾನ್​ ಚಿನ್ನಯ್ಯನ ಮೊಬೈಲ್​​ನ ಎಸ್​​ಐಟಿ ವಶಕ್ಕೆ ಪಡೆದಿರುವ SIT ಟೀಂ. ಚಿನ್ನಯ್ಯ ಉಳಿದುಕೊಂಡಿದ್ದ ರೂಮ್​ನಲ್ಲಿ ಶೋಧ ನಡೆಸಿ ಬಟ್ಟೆ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದ್ರ ಜೊತೆಗೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಸಿಸಿಟಿವಿ ಹಾರ್ಡ್ ಡಿಸ್ಕ್​ ಅನ್ನೂ ಕೂಡ SIT ಟೀಂ ಪಡೆದುಕೊಂಡಿದೆ. ಪತ್ತೆಯಾದ ವಸ್ತುವಿನ ವಿವರ ಬರೆದುಕೊಂಡು SIT ಸಿಬ್ಬಂದಿ ಎಲ್ಲವನ್ನೂ ಸೀಲ್ ಮಾಡಿ ಫೋರೆನ್ಸಿಕ್ ಲ್ಯಾಬ್​ ಪರೀಕ್ಷೆಗೆ ಕಳುಹಿಸಲು ತಯಾರಿ ನಡೆಸಿದ್ದಾರೆ.

ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ ಸಂಬಂಧ ಇಲ್ಲೀವರೆಗೂ ಚಿನ್ನಯ್ಯನ ನೀಡಿರುವ ಹೇಳಿಕೆಗಳ ದಾಖಲೆ ಸಂಗ್ರಹಕ್ಕೆ ಎಸ್​ಐಟಿ ಮುಂದಾಗಿದೆ. ಇನ್ನೊಂದು ಕಡೆ ಎಸ್​ಐಟಿ ಕಚೇರಿಗೆ ಕರೆದುಕೊಂಡು ಬರ್ತಿದ್ದ ಕಾರಿನ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಉಜಿರೆಯ ಪ್ರಮೋದ್ ಕುಮಾರ್ ಶೆಟ್ಟಿ ಎಂಬವರ KA19MP8545 ನಂಬರ್​​​​ನ ಕಿಯಾ ಕ್ಯಾರೆನ್ಸ್​​ ಕಾರ್​ನಲ್ಲಿ SIT ಕಚೇರಿಗೆ ಬರ್ತಿದ್ದ. ತನಿಖೆಯ ಭಾಗವಾಗಿ ಕಾರಿನ ಮಾಲೀಕ ಪ್ರಮೋದ್ ಶೆಟ್ಟಿ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ನಂಟಿನ ಬಗ್ಗೆಯೂ ಎಸ್​ಐಟಿ ತನಿಖೆ ಕೈಗೊಂಡಿದೆ. ಕಾರು ವಶಕ್ಕೆ ಪಡೆದು ತನಿಖೆ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಒಂದು ವೇಳೆ ಸಂಚು ನಡೆಸಿರುವುದು ಏನಾದರೂ ಪತ್ತೆಯಾದರೆ ಮಹೇಶ್​ ಶೆಟ್ಟಿ ತಿಮರೋಡಿ ಕೂಡ ಬಂಧನಕ್ಕೆ ಒಳಗಾಗುವ ಸಾಧ್ಯತೆ ದಟ್ಟವಾಗಿದೆ.

Related posts

Student Suicide; ಹಾಸ್ಟೆಲ್​ ವಾರ್ಡನ್ ಬೈಯ್ದಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಳಾ..?

Publicspot

Dating App: ಡೇಟಿಂಗ್​ ಆ್ಯಪ್​ನಲ್ಲಿ ಬಲೆ.. ಸುಲಿಗೆ ಮಾಡಿ ಹುಡುಗಿ ಎಸ್ಕೇಪ್​..

Publicspot

ಹಾಡಹಗಲೇ ಬರ್ತಾರೆ.. ಪೊಲೀಸರೇ ದರೋಡೆ ಮಾಡಿಕೊಂಡು ಹೋಗ್ತಾರೆ..!!?

Publicspot

ಅಕ್ರಮ ಸಂಬಂಧ ಬೇಡ ಎಂದಿದ್ದಕ್ಕೆ ಅಟ್ಯಾಕ್​​ ಮಾಡಿದ್ದ ಅಡಕಮಾರನಹಳ್ಳಿ ಆಂಟಿ ಅರೆಸ್ಟ್​..

Publicspot

Byrathi Basavaraj; ನಿರೀಕ್ಷಣಾ ಜಾಮೀನು ಅರ್ಜಿ ವಜಾ.. ಮುಂದಿರುವ ಮಾರ್ಗ ಏನು..?

Publicspot

ಕೋರ್ಟ್​ನಲ್ಲಿ ಇಂದಿನಿಂದ ದರ್ಶನ್​ ಕೊಲೆ ಕೇಸ್​ ವಿಚಾರಣೆ!!

Publicspot