The Public Spot
ಅಪರಾಧ

Dating App: ಡೇಟಿಂಗ್​ ಆ್ಯಪ್​ನಲ್ಲಿ ಬಲೆ.. ಸುಲಿಗೆ ಮಾಡಿ ಹುಡುಗಿ ಎಸ್ಕೇಪ್​..

ಹೆಣ್ಣಿನ ಮೋಹದ ಜಾಲಕ್ಕೆ ಬೀಳದವರು ಯಾರೂ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಮಾಯಾಂಗನೆಯ ಮಾಯ ಜಾಲ ಬೀಸಿದ ಮಹಿಳೆ ಮಾತಲ್ಲೇ ಮೋಹದ ಬಲೆ ಬೀಸಿ ಮಕ್ಮಲ್‌ ಟೋಪಿ ಹಾಕಿದ್ದಾಳೆ. ಈಕೆ ಹೆಸರು ಕವಿಪ್ರಿಯಾ. ತಮಿಳುನಾಡು ಮೂಲದ ಈಕೆ ಸಾಫ್ಟ್‌ವೇರ್‌ ಇಂಜಿನಿಯರ್‌. ಮೂರೊತ್ತು ಡೇಟಿಂಗ್‌ ಆ್ಯಪ್‌ನಲ್ಲಿ ಕಾಡುತ್ತಿದ್ದ ಈಕೆ, 24 ವರ್ಷದ ಸಾಫ್ಟ್‌‌ವೇರ್ ಉದ್ಯೋಗಿಯನ್ನು ಕಲರ್‌ ಕಲರ್‌ ಫೋಟೋ ಹಾಕಿ ಬಲೆಗೆ ಬೀಳಿಸ್ಕೊಂಡಿದ್ದಳು. ಕವಿಪ್ರಿಯಾ ಬಲೆಗೆ ಬಿದ್ದವನು ಭೇಟಿ ಆಗೋಣ ಅಂತ ಕರೆದಿದ್ದ.

ಹುಡುಗ ಹೇಳ್ತಾ ಇದ್ದ ಹಾಗೆ ಮಾಯಾಂಗಿನಿ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಳು. ಬೆಂಗಳೂರಿನ ಇಂದಿರಾನಗರದ ರೆಸ್ಟೋರೆಂಟ್‌‌ಗೆ ನವೆಂಬರ್‌‌ 1ರಂದು ಇಬ್ಬರು ಭೇಟಿ ಆಗಿದ್ದರು. ಭರ್ಜರಿಯಾಗಿ ಪಾರ್ಟಿ ಮಾಡ್ಕೊಂಡು ಅಂತಿಮವಾಗಿ ಲಾಡ್ಜ್‌‌ಗೆ ಎಂಟ್ರಿ ಕೊಟ್ಟಿದ್ದರು. ಮಧ್ಯರಾತ್ರಿ ಆನ್‌‌ಲೈನ್‌ ಆರ್ಡರ್‌ ಮೂಲಕ ಊಟವನ್ನೂ ತರಿಸಿಕೊಂಡು ಮಾಡಿದ್ರು. ಊಟದ ಬಳಿಕ ನೀರಿನಲ್ಲಿ ಅದೇನ್‌ ಬೆರಸಿದ್ದಳು ಅನ್ನೋದು ಈತನಿಗೆ ಗೊತ್ತಾಗಿಲ್ಲ. ನೀರು ಕುಡಿಯುತ್ತಿದ್ದಂತೆ ಯುವಕ ಪ್ರಜ್ಞೆ ತಪ್ಪಿ ಮಲಗಿದ್ದ. ಆತ ಪ್ರಜ್ಞೆ ತಪ್ಪಿ ಮಲಗ್ತಿದ್ದಂತೆ ಹಣ, ಚಿನ್ನ ದೋಚಿ ಕಿಲಾಡಿ ಲೇಡಿ ಎಸ್ಕೇಪ್‌ ಆಗಿದ್ದಳು.

ಪ್ರಜ್ಞೆ ಪಂದು ನೋಡಿದಾಗ ತಾನು ವಂಚನೆ ಹೋಗಿದ್ದೀನಿ ಅನ್ನೋದು ಗೊತ್ತಾಗಿತ್ತು. ಕೂಡಲೇ ಎಚ್ಚೆತ್ತ ಯುವಕ ಇಂದಿರಾನಗರ ಠಾಣೆಗೆ ಹೋಗಿ ದೂರು ನೀಡಿದ್ದ. ತನಿಖೆಗಿಳಿದ ಪೊಲೀಸರು ಆರೋಪಿಯನ್ನ ಅರೆಸ್ಟ್‌ ಮಾಡಿದ್ದಾರೆ. ಈ ವೇಳೆ ಕವಿಪ್ರಿಯಾಗೆ ಸಾಥ್‌ ಕೊಟ್ಟಿದ್ದು ಆಕೆಯ ಪ್ರಿಯಕರ ಹರ್ಷವರ್ಧನ ಅನ್ನೋದು ಗೊತ್ತಾಗಿದೆ. ಹಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸ್ತಿದ್ದ ಈ ಜೋಡಿ, ಆ್ಯಪ್‌‌ಗಳ ಮೂಲಕ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದರು. ಚಿನ್ನ, ಹಣ ದೋಚಿ ತಮಿಳುನಾಡಿಗೆ ಎಸ್ಕೇಪ್‌ ಆಗಿದ್ದ ಈ ಜೋಡಿ, ಅಂಗಡಿಯೊಂದರಲ್ಲಿ ಚಿನ್ನ ಅಡವಿಟ್ಟಿದ್ರಂತೆ.

ಇಂದಿರಾನಗರ ಪೊಲೀಸರು ಇಬ್ಬರನ್ನೂ ಬಂಧಿಸಿ ಡ್ರಿಲ್‌ ಮಾಡ್ತಿದ್ದಾರೆ.ಆದರೆ ತಮ್ಮ ಮೋಜು ಮಸ್ತಿಗಾಗಿ ಬೇರೆಯವರನ್ನು ಬುಟ್ಟಿಗೆ ಕೆಡವಿ, ಮಂಚಕ್ಕೆ ಕರೆದು ಹೊಟ್ಟೆ ತುಂಬಾ ಉಂಡು, ಲಾಡ್ಜ್​ಗೆ ಕರ್ಕೊಂಡು ಹೋಗಿ ಮೈಮೇಲಿದ್ದ ಚಿನ್ನಾಭರಣ, ಪರ್ಸ್​ನಲ್ಲಿದ್ದ ಹಣವನ್ನು ಎತ್ಕೊಂಡು ಹೋಗೋದನ್ನೇ ಕಾಯಕ ಮಾಡಿಕೊಂಡಿದ್ದಳು. ಈಕೆಯ ಖತರ್ನಾಕ್​ ಕೆಲಸಕ್ಕೆ ಸ್ವತಃ ಈಕೆಯ ಸ್ನೇಹಿತನೇ ಸಾಥ್​​ ಕೊಡ್ತಿದ್ದ ಅನ್ನೋದು ಗೊತ್ತಾಗಿದೆ. ಇತ್ತೀಚಿಗೆ ಸೋಷಿಯಲ್​ ಮೀಡಿಯಾ ಸೇರಿದಂತೆ ಸಾಕಷ್ಟು ಆ್ಯಪ್​ಗಳಲ್ಲಿ ಈ ರೀತಿ ಮೋಹದ ಜಾಲ ಬೀಸುವ ಕೆಲಸಗಳು ನಡೆಯುತ್ತಿವೆ. ಎಚ್ಚರಿಕೆ ಇಂದ ಇದ್ದರೆ ಒಳಿತು.

Related posts

Aunty Rape: ಚಿಕ್ಕಮ್ಮನ ಜೊತೆಗೇ ಕಾಮ ಕೇಳಿ.. 10 ವರ್ಷದ ಬಳಿಕ ಅತ್ಯಾಚಾರ ಎಂದ ಆಂಟಿ..

Publicspot

Mother Murder ; ಪ್ರೀತಿಗಾಗಿ ತಾಯಿಯನ್ನೇ ಕೊಂದ ಅಪ್ರಾಪ್ತ ಹುಡುಗಿ..!

Publicspot

Dharmasthala Issue: ಧರ್ಮಸ್ಥಳ ವಿಚಾರದಲ್ಲಿ ಸರ್ಕಾರ ಮತ್ತೆ ಎಡವಟ್ಟುಗಳು..

Publicspot

ಜೈಲಿನಲ್ಲಿ ಚಳಿ.. ಬೆಡ್‌ಶೀಟ್‌ ಕೇಳಿದ ದರ್ಶನ್.. ಎಲ್ಲಾ ಕೈದಿಗಳಿಗೂ ಅನ್ವಯ ಆಗುತ್ತಾ..?

Publicspot

Husband Murder: ನನಗೆ ಗಂಡ ಬೇಡ.. ನೀನೇ ಬೇಕು ಅಂದಳು.. ಬಾಲ್ಯ ಸ್ನೇಹಿತನ ಕೊಂದವನ ಮಾತು.. ಖಾಕಿ ಶಾಕು..

Publicspot

ಶಾಸಕ ಚಂದ್ರು ಲಮಾಣಿಯನ್ನು ಟ್ರ್ಯಾಪ್‌ನಲ್ಲಿ ಸಿಲುಕಿಸಿದ್ರಾ..? ಬಂಜಾರ ಬೆಂಬಲ..!!

Publicspot