The Public Spot
ಅಪರಾಧ

SIT ತನಿಖೆ NIAಗೆ ವರ್ಗಾವಣೆ ಆಗುತ್ತಾ..? ಏನಿದು BJP ಆಗ್ರಹ..?

ಧರ್ಮಸ್ಥಳದಲ್ಲಿ ಯೂಟ್ಯೂಬರ್ ಸಮೀರ್‌ನನ್ನು ನಿನ್ನೆ ಸತತ 9 ಗಂಟೆಗಳ ಕಾಲ ವಿಚಾರಣೆ ಮಾಡಲಾಗಿದೆ. ಸಮೀರ್ AI ವಿಡಿಯೋ ಪ್ರಕರಣ ಸೇರಿದಂತೆ ಇನ್ನೆರಡು ಪ್ರಕರಣದ ವಿಚಾರಣೆ ಮಾಡಲಾಗಿದೆ. ಸುದೀರ್ಘ 9 ಗಂಟೆಗಳ ಕಾಲ ವಿಚಾರಣೆ ಮಾಡಿದ ಬಳಿಕ ಮತ್ತೆ ವಿಚಾರಣೆಗೆ ಕರೆದಾಗ ಬರುವಂತೆ ತನಿಖಾಧಿಕಾರಿ ಸೂಚಿಸಿದ್ದಾರೆ. AI ವಿಡಿಯೋ ಪ್ರಕರಣ ಹಾಗೂ ಬೆಳ್ತಂಗಡಿಯ ಬೆನಕ ಆಸ್ಪತ್ರೆ ಬಳಿ ಗಲಾಟೆ ಪ್ರಕರಣದಲ್ಲೂ ವಿಚಾರಣೆ ನಡೆಸಲಾಗಿದೆ. ಖಾಸಗಿ ವಾಹಿನಿ ವರದಿಗಾರನ ಮೇಲೆ ಹಲ್ಲೆ ಪ್ರಕರಣದ ವಿಚಾರಣೆಯನ್ನೂ ಮಾಡಲಾಗಿದ್ದು, ಮುಂದಿನ ದಿನದಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್ ನೀಡಲು ಸಮೀರ್‌ಗೆ ಸೂಚನೆ ಕೊಡಲಾಗಿದೆ ಎನ್ನಲಾಗಿದೆ.

ಧರ್ಮಸ್ಥಳದಲ್ಲಿ ಸಮಾವೇಶ ನಡೆಸಲು ತಯಾರಿ!

ಈ ನಡುವೆ ಈಗಾಗಲೇ ಧರ್ಮಸ್ಥಳಕ್ಕೆ ರ್ಯಾಲಿ ಮಾಡಿದ್ದ ಬಿಜೆಪಿ ನಾಯಕರು, ಮತ್ತೊಮ್ಮೆ ಸೆಪ್ಟೆಂಬರ್​ 1 ರಂದು ಸೋಮವಾರ ಧರ್ಮಸ್ಥಳ ಚಲೋಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ‌ ಕರೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ವಿಜಯೇಂದ್ರ, ಹಿಂದೂ ಸಮಾಜಕ್ಕೆ ಧಕ್ಕೆ ಆಗಿದೆ. ಸೆಪ್ಟೆಂಬರ್ 1ರಂದು ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗುತ್ತದೆ. ರಾಜ್ಯದ ಪ್ರತಿ ಜಿಲ್ಲೆಗಳಿಂದ ಜನರು ಬರ್ತಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನ ಎನ್​ಐಎಗೆ ಕೊಡಬೇಕು. ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಒತ್ತಾಯ ಮಾಡಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್​, ಧರ್ಮಸ್ಥಳ ವಿಚಾರವಾಗಿ ಬುರುಡೆ ಬಿಟ್ಟಿದ್ದಾರೆ. ಇದು ಬುರುಡೆ ಸರ್ಕಾರ. ಹಿಂದೂ ದೇವಾಲಯಗಳನ್ನು ಮುಜರಾಯಿ ಇಲಾಖೆ ಸೇರಿಸಲು ಹೊರಟಿದ್ದಾರೆ. ಇದರ ಹಿಂದೆ ದೊಡ್ಡ ಹುನ್ನಾರ ಅಡಗಿದೆ ಅಂತ ಕಿಡಿಕಾರಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಧರ್ಮದ ಉಳಿವಿಗಾಗಿ ಧರ್ಮಯುದ್ದ ಅನ್ನೋ ಹೆಸರಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶಿಡ್ಲಘಟ್ಟ ನಗರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರೇಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗಿದೆ. KSRTC ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಮಾಡಿ, ತಹಶೀಲ್ದಾರ್‌‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿರುವ ಸೀಕಲ್ ರಾಮಚಂದ್ರೇಗೌಡ, ಧರ್ಮಸ್ಥಳ ಪ್ರಕರಣವನ್ನು NIAಗೆ ನೀಡುವಂತೆ ಆಗ್ರಹಿಸಿದ್ದಾರೆ.

ಧರ್ಮಸ್ಥಳ ವಿವಾದದ ಬೆನ್ನಲ್ಲೇ ಧರ್ಮಾಧಿಕಾರಿಗಳು ಮಾತನಾಡಿದ್ದಾರೆ. ಭಕ್ತರನ್ನು ಉದ್ದೇಶಿಸಿ ಮಾತನಾಡಿರುವ ಡಾ.ಡಿ ವೀರೇಂದ್ರ ಹೆಗ್ಗಡೆ, ಭಕ್ತರು ತೋರಿಸ್ತಿರುವ ಗೌರವ, ಕಾಳಜಿಗೆ ಧನ್ಯವಾದ ಎಂದಿದ್ದಾರೆ. ಧರ್ಮಸ್ಥಳಕ್ಕೆ ಮನಸಾರೆ ಗೌರವ ಸೂಚಿಸುವವರು ಇದ್ದೀರಿ, ನಿಮ್ಮ ಪ್ರೀತಿಯನ್ನು ಮಂಜುನಾಥ್ ಸ್ವಾಮಿಗೆ ಒಪ್ಪಿಸುತ್ತೇನೆ. ಸಮಯ ಬಂದಾಗ ಎಲ್ಲಾ ವಿಚಾರದ ಬಗ್ಗೆ ಮಾತಾಡ್ತೀನಿ ಎಂದಿದ್ದಾರೆ.

SIT ಸ್ವಾಗತಿಸಿದ ಮೇಲೆ NIA ಯಾಕೆ..?

ಸ್ವತಃ ಆರೋಪ ಕೇಳಿ ಬಂದಿರುವ ವೀರೇಂದ್ರ ಹೆಗ್ಗಡೆ ಅವರೇ SIT ತನಿಖೆಯನ್ನು ಸ್ವಾಗತ ಮಾಡಿದ್ದಾರೆ. ಆದರೆ ಬಿಜೆಪಿ ನಾಯಕರು, ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಬೆಂಬಲ ಸೂಚಿಸುವ ನೆಪದಲ್ಲಿ ರಾಜಕೀಯ ಲಾಭ ಪಡೆಯಲು ನಾಮುಂದು ತಾಮುಂದು ಎಂದು ಹೋಗುತ್ತಿದ್ದಾರೆ. ಈ ನಡುವೆ ಬಿಜೆಪಿ ನಾಯಕರು SIT ತನಿಖೆ ಬೇಡ, NIA ತನಿಖೆಗೆ ಕೊಡಿ ಎನ್ನುವ ಹೊಸ ವರಸೆ ತೆಗೆದಿದ್ದಾರೆ. NIA ತನಿಖೆ ನಡೆದರೆ ಅದು ಕೇಂದ್ರದ ಉಸ್ತುವಾರಿಯಲ್ಲಿ ನಡೆಯಲಿದೆ. ಧರ್ಮಸ್ಥಳಕ್ಕೆ ಅಂಟಿರುವ ಕಳಂಕ ತೊಳೆಯಬಹುದು ಅನ್ನೋ ಕಾರಣಕ್ಕೆ ಈ ರೀತಿ ಕೇಳುತ್ತಿದ್ದಾರೆ ಅನ್ನೋ ಆರೋಪಗಳೂ ಅಲ್ಲಲ್ಲಿ ಕೇಳಿ ಬರುತ್ತಿವೆ. ಒಟ್ಟಾರೆ ಧರ್ಮ ರಾಜಕೀಯ ಶುರುವಾಗಿದೆ. ಯಾರಿಗೆ ಲಾಭ..? ಯಾರಿಗೆ ನಷ್ಟ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.

Related posts

ಧರ್ಮಸ್ಥಳ ಮೂಳೆ ರಹಸ್ಯ.. SIT ತನಿಖಾ ವರದಿ ಮತ್ತು ಅನುಮಾನದ ಹುತ್ತ..

Publicspot

ಪ್ರೀತಿ ಮಾಡು.. ಇಲ್ಲದಿದ್ರೆ ನೋಡು.. ಇದು ಪ್ರೇಮಿಗಳ ದಿನದ ವಿಶೇಷ..

Publicspot

Husband Murder: ನನಗೆ ಗಂಡ ಬೇಡ.. ನೀನೇ ಬೇಕು ಅಂದಳು.. ಬಾಲ್ಯ ಸ್ನೇಹಿತನ ಕೊಂದವನ ಮಾತು.. ಖಾಕಿ ಶಾಕು..

Publicspot

Aunty Rape: ಚಿಕ್ಕಮ್ಮನ ಜೊತೆಗೇ ಕಾಮ ಕೇಳಿ.. 10 ವರ್ಷದ ಬಳಿಕ ಅತ್ಯಾಚಾರ ಎಂದ ಆಂಟಿ..

Publicspot

ಆಂಟಿ ಕೊಂದ ಮಧು ಮುಡಿ ಕೊಟ್ಟು ಹರಕೆ ಕಟ್ಟಿದ್ಯಾಕೆ ಗೊತ್ತಾ..?

Publicspot

ತಂದೆ ತಾಯಿಗೆ ಚಾಕು ಇರಿದ ಮಗ.. ಅಮೆರಿಕದಲ್ಲಿ ಓದಿಸಿದ್ದಕ್ಕೂ ಸಾರ್ಥಕ..

Publicspot