September 14, 2026
The Public Spot
ಟ್ರೆಂಡ್

ಕಾಳಸಂತೆಯಲ್ಲಿ ಸಿಲಿಂಡರ್‌ ಮಾರಾಟ ಮಾಡಿದ್ರೆ ಹುಷಾರ್‌..! ಬರೀ ಮಾತಿಗಾ..?

ಬೆಂಗಳೂರಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಅಭಾವ ಹೆಚ್ಚಾಗಿದೆ. ಅದರ ಹೊರತಾಗಿಯೂ ದೊಡ್ಡ ದೊಡ್ಡ ಹೋಟೆಲ್‌ಗಳಿಗೆ ರಾತ್ರೋ ರಾತ್ರಿ ಗ್ಯಾಸ್ ಪೂರೈಕೆ ಮಾಡಲಾಗ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಪ್ರಮುಖ ರೆಸ್ಟೋರೆಂಟ್‌ಗಳಿಗೆ ಲೋಡ್‌ಗಟ್ಟಲೆ ಕಮರ್ಷಿಯಲ್ ಸಿಲಿಂಡರ್ ಸರಬರಾಜು ಮಾಡಲಾಗಿದೆ. ಬೆಂಗಳೂರಿನ ಪ್ರಸಿದ್ಧ ಹೋಟೆಲ್‌ಗಳಿಗೆ ಮೊನ್ನೆ ರಾತ್ರಿಯಿಂದ ಕಮರ್ಷಿಯಲ್ ಗ್ಯಾಸ್ ಡೆಲಿವರಿ ಕೊಡಲಾಗಿದೆ. ಆದರೆ ಕಮರ್ಷಿಯಲ್ ಗ್ಯಾಸ್ ಸಂಪೂರ್ಣ ಬಂದ್ ಅಂತಿರೋ ಗ್ಯಾಸ್ ಏಜೆನ್ಸಿಗಳು, ಕದ್ದು ಮುಚ್ಚಿ ಶ್ರೀಮಂತರು, ಪ್ರಭಾವಿಗಳ ಹೋಟೆಲ್‌ಗೆ ಗ್ಯಾಸ್ ಪೂರೈಕೆ ಮಾಡಿದ್ದಾರೆ. ನಗರದ ಪ್ರಮುಖ ವೆಜ್ & ನಾನ್ ವೆಜ್ ಹೋಟೆಲ್‌ಗಳಿಗೆ ಗ್ಯಾಸ್ ಸರಬರಾಜು ಆಗ್ತಿದೆ. ಆದರೆ ಸಣ್ಣ ಸಣ್ಣ ಉದ್ದಿಮೆದಾರರಿಗೆ ಗ್ಯಾಸ್‌ ಪೂರೈಕೆ ಮಾಡ್ತಿಲ್ಲ ಅನ್ನೋ ಆರೋಪ ಎದುರಾಗಿದೆ.

ಗ್ಯಾಸ್ ಅಕ್ರಮ ದಾಸ್ತಾನು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗ್ತಿದೆ. ಬೆಂಗಳೂರಿನ ಚೊಕ್ಕಸಂದ್ರ ಮುಖ್ಯರಸ್ತೆಯಲ್ಲಿರುವ ವಿನಾಯಕ‌ ಗ್ಯಾಸ್ ಏಜೆನ್ಸಿಯ ಮಾಲೀಕ ಜನಾರ್ದನ್ ಮೇಲೆ ಪೀಣ್ಯ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ಪರವಾನಗಿ ಇಲ್ಲದೇ 45 ಖಾಸಗಿ ಕಂಪನಿಗಳ ಸಿಲಿಂಡರ್ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ಆಹಾರ ನಿರೀಕ್ಷಕರು ದಾಳಿ ಮಾಡಿ ಅಕ್ರಮ ದಾಸ್ತಾನು ಪತ್ತೆ ಮಾಡಿದ್ದರು. ಫುಡ್ ಇನ್‌‌ಸ್ಪೆಕ್ಟರ್‌ ಕೊಟ್ಟ ದೂರಿನ ಆಧಾರದಲ್ಲಿ FIR ದಾಖಲು ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ ಅಧಿಕಾರಿಗಳು. ಪರಿಶೀಲನೆಯ ವೇಳೆ 498 ಕೆಜಿ LPGಯನ್ನು ಅಕ್ರಮವಾಗಿ ದಾಸ್ತಾನು ಮಾಡಿರೋದು ಪತ್ತೆಯಾಗಿದೆ. ಗ್ಯಾಸ್ ವಿತರಣೆಗೆ ಸಂಬಂಧಿಸಿದ ಯಾವುದೇ ಅಧಿಕೃತ ಡೀಲರ್‌ ಶಿಪ್ ಪಡೆದ ಬಗ್ಗೆ ದಾಖಲೆಗಳು ಇರ್ಲಿಲ್ಲ ಎನ್ನಲಾಗಿದೆ.

ವಾಣಿಜ್ಯ ಗ್ಯಾಸ್ ಸಿಲಿಂಡರ್ ಸಮಸ್ಯೆ ಬಗ್ಗೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಮಸ್ಯೆ ಇನ್ನು ಒಂದು ವಾರಗಳ ಕಾಲ ಇರಲಿದೆ. ಅಲ್ಲೀವರೆಗೂ ಹೋಟೆಲ್ ಮಾಲೀಕರು ಸುಧಾರಿಸಿಕೊಳ್ಳಬೇಕು. ಈಗಾಗಲೇ ಇರಾನ್ ಅವರು ಭಾರತದೊಂದಿಗೆ ಸ್ನೇಹ ಬೆಳೆಸ್ತೀವಿ ಅಂತ ಹೇಳಿದ್ದಾರೆ. ಇನ್ನು ಭಾರತಕ್ಕೆ ಹತ್ತನ್ನೆರಡು ಹಡಗುಗಳು ಬರಬೇಕಿವೆ. ಈಗ ಎರಡು ಹಡಗುಗಳು ಭಾರತಕ್ಕೆ ಬರಲು ಪ್ರಯಾಣ ಬೆಳೆಸಿವೆ. ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಸಮಸ್ಯೆ ಸರಿಹೋಗುತ್ತದೆ. ಈಗ ಇರುವ 14 ಕೆಜಿ ಸಿಲಿಂಡರ್‌ಗಳನ್ನ ಕಮರ್ಷಿಯಲ್ ಆಗಿ ಪರಿವರ್ತನೆ ಮಾಡ್ತೇವೆ. ಹೋಟೆಲ್ ತಿಂಡಿಗಳ ಮೇಲೆ ಬಹಳಷ್ಟು ಜನ ಅವಲಂಬಿತರಾಗಿದ್ದಾರೆ. ಸಮಸ್ಯೆ ವಿಚಾರವಾಗಿ ಸೋಮವಾರ ಅಧಿಕಾರಿಗಳ ಸಭೆ ಕರೆದು ಮಾತಾನಾಡ್ತೀನಿ ಎಂದಿದ್ದಾರೆ. ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್ ಮಾರಲು ಅವಕಾಶವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಜವಾಬ್ದಾರಿಯನ್ನ ಹೊತ್ತುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಕಾಳಸಂತೆಯಲ್ಲಿ ಕಮರ್ಷಿಯಲ್ ಸಿಲಿಂಡರ್ ಮಾರಾಟ ಮಾಡಿದ್ರೆ ಏಜೆನ್ಸಿ ರದ್ದು ಮಾಡುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಜಿಲ್ಲೆಯ ಗ್ಯಾಸ್ ಏಜೆನ್ಸಿ ಮುಖ್ಯಸ್ಥರ ಸಭೆ ಕರೆದು ಎಚ್ಚರಿಕೆ ನೀಡಿರುವ ಜಿಲ್ಲಾಧಿಕಾರಿ, ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆಯಲ್ಲಿ ಸಭೆ ಮಾಡಿದ್ದಾರೆ. ಬುಕ್ಕಿಂಗ್ ಮಾಡಿದವರಿಗೆ ಒಂದು ಸಿಲಿಂಡರ್ ಮಾತ್ರ ಕೊಡಬೇಕು. ಎಲ್ಲಾ ರಿಟೇಲರ್ಸ್ ಮತ್ತು ಅಂಗಡಿಗಳಿಗೆ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು. ಹೆಚ್ಚು ಬೆಲೆಗೆ ವಾಣಿಜ್ಯ ಸಿಲಿಂಡರ್ ಮಾರಾಟ ಮಾಡಿದ್ರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ ಅಡಿ ನಿಗದಿತ ಬೆಲೆಗೆ ಮಾರಾಟ ಮಾಡಬೇಕು. ನಿಯಮ ಮೀರಿ ಹೆಚ್ಚು ಹಣಕ್ಕೆ ಮಾರಾಟ ಮಾಡಿದ್ರೆ ಏಜೆನ್ಸಿ ಪರವಾನಗಿ ರದ್ದು ಮಾಡಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಗೃಹ ಉಪಯೋಗಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಆಗೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Related posts

ಸುಳ್ಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿ ಸಿಕ್ಕಿಬಿತ್ತಾ ರಾಮೇಶ್ವರಂ ಕೆಫೆ..?

Publicspot

RSS VS DSS.. ಮತ್ತೆ ಸಂಘದ ವಿರುದ್ಧ ಗುಡುಗಿದ ಪ್ರಿಯಾಂಕ್‌ ಖರ್ಗೆ

Publicspot

S.L Byrappa No More; ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ S.L ಬೈರಪ್ಪ ಇನ್ನಿಲ್ಲ..

Publicspot

CM Meeting; ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಭೆ.. ಬರ್ತಾರಾ ರೈತರು..?

Publicspot

ಎಲೆಕ್ಟ್ರಿಕ್‌ ವಾಹನ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ದೂರು.. ಕುಮಾರಣ್ಣ ಏನಂತಾರೆ..?

Publicspot

Mysore Dassara: ಈ ಬಾರಿ ದಸರಾ ಉದ್ಘಾಟನೆ ಮಾಡೋದು ಬೂಕರ್​ ಪುರಸ್ಕೃತೆ..! ಅನ್ಯಾಯ ಅಲ್ಲವೇ..?

Publicspot