The Public Spot
ದೇಶ-ವಿದೇಶ

ಕೇರಳದಲ್ಲಿ ಭೂಮಿ ಕುಸಿತಕ್ಕೆ ಐವರು ಸಾವು.. ಏಕಾಏಕಿ ಕುಸಿದ ಗುಡ್ಡ.

ಕೇರಳದ ವಯನಾಡಿನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ.. ಮೇಪಾಡಿ ಬಳಿಯ ಕಲ್ಲಾಡಿಯಲ್ಲಿ ಮೀನಾಕ್ಷಿ ಸೇತುವೆ ಬಳಿ ಭೂಕುಸಿತ ಸಂಭವಿಸಿದ್ದು, ದೃಶ್ಯ ಭಯಾನಕವಾಗಿದೆ. ಸುನಾಮಿಯಂತೆ ಕೆಸರು ಮಿಶ್ರಿತ ಮಣ್ಣು ರಸ್ತೆಗೆ ಅಪ್ಪಳಿಸಿದೆ. ಗುಡ್ಡ ಕುಸಿಯುತ್ತಿರೋದನ್ನ ಜನ ನಿಂತು ನೋಡುತ್ತಿದ್ದರು. ಏಕಾಏಕಿ ಗುಡ್ಡದಿಂದ ಮಣ್ಣು ಕುಸಿದು ಸುನಾಮಿಯಂತೆ ಅಪ್ಪಳಿಸಿತು. ರಸ್ತೆಯಲ್ಲಿ ನಿಂತಿದ್ದ ಟ್ಯಾಂಕರ್‌ ಸಮೇತ ತಳ್ಳಿಕೊಂಡು ಮಣ್ಣು ಬಂದಿದೆ. 10ಕ್ಕೂ ಹೆಚ್ಚು ಮಂದಿ ಓಡೋಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನು ಕೆಲವರು ಮಣ್ಣಿನ ಅವಶೇಷಗಳಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ ಐವರು ಮೃತಪಟ್ಟಿದ್ದಾರೆ. 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಕ್ಯಾಲಿಕಟ್‌ಗೆ ರವಾನಿಸಲಾಗಿದೆ. ಮೇಪಾಡಿ ಬಳಿಯ ಕಲ್ಲಾಡಿಯಲ್ಲಿ ಮೀನಾಕ್ಷಿ ಸೇತುವೆ ಬಳಿ ಭೂಕುಸಿತ ಸಂಭವಿಸಿದ್ದು, ಸುರಂಗ ಮಾರ್ಗ ಕಾಮಗಾರಿ ವೇಳೆ ಇದ್ದಕ್ಕಿದ್ದಂತೆ ಗುಡ್ಡ ಕುಸಿದಿದೆ. ಬೆಟ್ಟದಿಂದ ಗುಡ್ಡ ಕುಸಿಯುವ ದೃಶ್ಯ ಭಯಾನಕವಾಗಿದೆ. ಅವಶೇಷಗಳ ಅಡಿಯಲ್ಲಿ ಮತ್ತಷ್ಟು ಕಾರ್ಮಿಕರು ಸಿಲುಕಿರುವ ಶಂಕೆ ಇದ್ದು, ಸ್ಥಳಕ್ಕೆ NDRF ತಂಡ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸ್ತಿದೆ.

ಕೇರಳ ಕೃಷಿ ಸಚಿವ ಟಿ. ಸಿದ್ದಿಕ್ ಮತ್ತು ವಯನಾಡು ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಶೋಧ ಕಾರ್ಯವನ್ನು ತೀವ್ರಗೊಳಿಸಲು ಮತ್ತು ಸಮನ್ವಯಗೊಳಿಸಲು ಆದೇಶಿಸಿದ್ದಾರೆ. ಮೀನಾಕ್ಷಿ ಸೇತುವೆ ನಿರ್ಮಾಣವನ್ನು 2 ಸಾವಿರ ರೂಪಾಯಿ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗ್ತಿತ್ತು. ಬಂಡೆ ಬ್ಲ್ಯಾಸ್ಟ್ ಮಾಡುವಾಗ ಏಕಾಏಕಿ ಭೂಮಿ ಕುಸಿದುಬಿದ್ದಿದೆ. ಅವಳಿ ಸುರಂಗ ಕಾಮಗಾರಿ ನಡೀತಿತ್ತು. ಸುರಂಗ ನಿರ್ಮಾಣ ಕೊನೇ ಹಂತ ತಲುಪಿದ್ದಾಗ ಭೂ ಕುಸಿತ ದುರಂತ ನಡೆದಿದೆ. ಮಣ್ಣಿನಡಿ ಸಿಲುಕಿರುವ ಕಾರ್ಮಿಕರಿಗಾಗಿ ರಕ್ಷಣೆ ಕಾರ್ಯಾಚರಣೆ ಮಾಡಲಾಗ್ತಿದೆ. ಈ ಮಾರ್ಗದಲ್ಲಿ ವಾಹನ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ.

ಭೂ ಕುಸಿತದ ಹೊಡೆತಕ್ಕೆ ಬಸ್‌ವೊಂದು ಮೀನಾಕ್ಷಿ ನದಿಗೆ ಬಿದ್ದಿದೆ. ಸೇತುವೆ ಬಳಿ ನಿಂತಿದ್ದ ಬಸ್‌ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಕ್ರೇನ್‌ ಮೂಲಕ ಬಸ್‌ ಮೇಲಕ್ಕೆ ಎತ್ತಲಾಗಿದೆ. ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೀತಿದೆ. ರಕ್ಷಣಾ ಕಾರ್ಯಾಚರಣೆಯನ್ನ ಖುದ್ದು ಕೇರಳ ಸಿಎಂ ವಿ.ಡಿ ಸತೀಶನ್‌ ಮಾನಿಟರ್‌ ಮಾಡಿದ್ದಾರೆ.. ಅಗ್ನಿಶಾಮಕ ಸಿಬ್ಬಂದಿ, NDRF ಟೀಂನಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಗಾಯಾಳುಗಳ ಬಗ್ಗೆ ಸಿಎಂ ವಿ.ಡಿ.ಸತೀಶನ್ ಮಾಹಿತಿ ಪಡೆದಿದ್ದಾರೆ.

Related posts

ಇರಾನ್‌ ಮೇಲೆ ಅಮೆರಿಕ, ಇಸ್ರೇಲ್‌ ದ್ವೇಷಕ್ಕೆ ಕಾರಣ ಏನು..? ಖಮೇನಿ ಕೊಂದಿದ್ಯಾಕೆ..?

Publicspot

ಇರಾನ್‌ ಶರಣಾಗುತ್ತೆ ಎಂದಿದ್ದ ಅಮೆರಿಕಕ್ಕೆ ಡಿಚ್ಚಿ.. ಇಸ್ರೇಲ್‌ ಪ್ರಧಾನಿ ಹತ್ಯೆ ಪ್ರತಿಜ್ಞೆ

Publicspot

ಕೊಲ್ಲೂರಿನಲ್ಲಿ ತಮಿಳುನಾಡು ಸಿಎಂ ವಿಜಯ್‌ ಪೂಜೆ.. ಮೂಕಾಂಬಿಕೆಗೆ ಖಡ್ಗ ಸಮರ್ಪಣೆ..

Publicspot

80ನೇ ಸ್ವಾತಂತ್ರ್ಯ ಸಂಭ್ರಮ.. ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ

Publicspot

Sugar Rate hike; ಸಕ್ಕರೆ MSP ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ.. ಯಾರಿಗೆ ಲಾಭ..?

Publicspot

ಇಂದಿನಿಂದ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋದು ಗೊತ್ತಿದ್ಯಾ..?

Publicspot