September 20, 2026
The Public Spot
ಅಪರಾಧ

ಅಪ್ಪನ ಕಡು ಕೋಪಕ್ಕೆ ನಡೀತು ಘನಘೋರ ಘಟನೆ.. ಅಯ್ಯೋ ಶಿವನೇ..

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್​ನ ಪ್ರಗತಿಪುರದಲ್ಲಿ ಮಗ ಹೇಳದೆ ಕೇಳದೆ ಬೈಕ್ ತೆಗೆದುಕೊಂಡು ಹೋಗಿದ್ದ ಅನ್ನೋ ಕಾರಣಕ್ಕೆ ಮಗನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. 4 ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದ 45 ವರ್ಷದ ಆನಂದ್ ದೊಡ್ಡಮನಿ ಗಾರೆ ಕೆಲಸ ಮಾಡುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಅದರಲ್ಲಿ 19 ವರ್ಷದ ಮಲ್ಲಿಕಾರ್ಜುನ್ ಅಪ್ಪನ ಜೊತೆಯಲ್ಲೇ ಟೈಲ್ಸ್ ಕೆಲಸಕ್ಕೆ ಹೋಗುತ್ತಿದ್ದ. ಮೇ 1 ರಂದು ಕಾರ್ಮಿಕ ದಿನಾಚರಣೆ ಪ್ರಯುಕ್ತ ಕೆಲಸಕ್ಕೆ ರಜೆ ಇದ ಕಾರಣ ಅಪ್ಪನ ಬೈಕ್ ತೆಗೆದುಕೊಂಡು ಮಗ ಮಲ್ಲಿಕಾರ್ಜನ್ ದೇವಸ್ಥಾನಕ್ಕೆ ಹೋಗಿದ್ದ.

ತನನ್ನು ಕೇಳದೆ ಬೈಕ್​ ತೆಗೆದುಕೊಂಡು ಹೋಗಿದ್ದಾನೆ ಎಂದು ಕೆರಳಿ ಕೆಂಡವಾಗಿದ್ದ ಆನಂದ್ ದೊಡ್ಡಮನಿ, ಮಗ ರಾತ್ರಿ ಮನೆಗೆ ವಾಪಸ್​ ಆದ ಕೂಡಲೇ ಜಗಳ ತೆಗೆದಿದ್ದ. ಆ ಸಮಯದಲ್ಲಿ ಬಾಟಲ್​ನಲ್ಲಿದ್ದ ಪೆಟ್ರೋಲ್ ತೆಗೆದು ಮಗನ ಮೇಲೆ ಎರಚಿದ್ದಾನೆ. ಆಗ ಪಕ್ಕದಲ್ಲೇ ಸೌಧೆ ಉರಿಯುತ್ತಿದ್ರಿಂದ ಯುವಕ ಮಲ್ಲಿಕಾರ್ಜುನ್​ಗೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರು ಬೆಂಕಿ ನಂದಿಸಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇಕಡಾ 40ರಷ್ಟು ಸುಟ್ಟ ಗಾಯಗಳಿಂದ ಮಲ್ಲಿಕಾರ್ಜುನ್ ಆಸ್ಪತ್ರೆ ಸೇರಿದ್ದು, ಘಟನೆಗೆ ಕಾರಣವಾದ ಆನಂದ್ ದೊಡ್ಡಮನಿಗೂ ಶೇಕಡ 18ರಷ್ಟು ಸುಟ್ಟ ಗಾಯಾಗಳಾಗಿದ್ದು, ಇಬ್ಬರೂ ಆಸ್ಪತ್ರೆಯಲ್ಲಿ ಸಾವು ಬದುಕಿನ ಜೊತೆಗೆ ಹೋರಾಟ ಮಾಡುತ್ತಿದ್ದಾರೆ.

ಸದ್ಯ ತಂದೆ ಮಗ ಇಬ್ಬರೂ ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಆರೋಪಿ ಸಂಬಂಧಿ ಆರ್ಮುಗಮ್ ಮಾತನಾಡಿ, ಮಗ ಮಲ್ಲಿಕಾರ್ಜುನ್ ಸರಿಯಾಗಿ ಕೆಲಸಕ್ಕೆ ಹೋಗ್ತಿರಲಿಲ್ಲ. ಸ್ನೇಹಿತರ ಜೊತೆಗೆ ಊರೂರು ಸುತ್ತುತ್ತಿದ್ದ. ಇದರಿಂದ ತಂದೆ ಮಗನ ನಡುವೆ ಜಗಳ ಸರ್ವೇ ಸಾಮಾನ್ಯವಾಗಿತ್ತು. ಬೈಕ್ ತೆಗೆದುಕೊಂಡು ಹೋಗಿದ್ದು ಜಗಳಕ್ಕೆ ಕೇವಲ ನೆಪ ಮಾತ್ರ ಎಂದು ತಿಳಿಸಿದ್ದಾರೆ.

ಮಗ 19 ವರ್ಷಕ್ಕೆ ಟೈಲ್ಸ್​ ಕೆಲಸಕ್ಕೆ ಹೋಗಿದ್ದಾನೆ. ಕಲಿಯಬಾರದ ದುಶ್ಚಟಗಳಿಗೆ ದಾಸನಾಗಿದೆ. ಅಪ್ಪನ ಜೊತೆಗೆ ಕೆಲಸಕ್ಕೆ ಹೋಗುವುದನ್ನು ಬಿಟ್ಟು ಸ್ನೇಹಿತರ ಜೊತೆಗೆ ಪೋಲಿ ಅಲೆಯುವುದನ್ನೇ ಕಾಯಕ ಮಾಡಿಕೊಂಡಿದ್ದಾನೆ. ನಾನು ದುಡಿದು ಮಗನನ್ನು ಸಾಕುತ್ತಿದ್ದೇನೆ. ದುಡಿಯಬೇಕಾದ ಮಗ ಊರೂರು ಸುತ್ತುತ್ತಿದ್ದಾನೆ ಎಂದು ಕೋಪಗ್ರಸ್ತನಾದ ತಂದೆ ಕೂಡ ಕಾನೂನು ಮೀರಿ ವರ್ತಿಸಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾನೆ. ಮಕ್ಕಳು ಒಂದು ಹಂತಕ್ಕೆ ಬರುವ ತನಕ ತಂದೆ ತಾಯಿಗಳು ಬೆಳೆಸಿ ದೊಡ್ಡವರನ್ನಾಗಿ ಮಾಡಬೇಕು. ಆ ಬಳಿಕ ಸರಿದಾರಿಗೆ ಬಾರದಿದ್ರೆ ನಿನ್ನ ದಾರಿ ನೀನು ನೋಡಿಕೋ, ನನಗೂ ನಿನಗೂ ಸಂಬಂಧವಿಲ್ಲ ಎಂದು ಮನೆಯಿಂದ ಹೊರಹಾಕುವುದು ಉತ್ತಮ. ಇಲ್ಲದಿದ್ರೆ ಕೋಪ ಏನನ್ನಾದರೂ ಮಾಡಿಸುತ್ತದೆ. ಕೊನೆಗೆ ಜೈಲು ಸೇರುವ ಅನಿವಾರ್ಯತೆಯೂ ಎದುರಾಗುತ್ತದೆ.

Related posts

ಸಾವಿತ್ರಿ ಗಂಡನ ಸಹವಾಸ ಬಿಟ್ಟು ಹೋದಳಾ..? ಕೊಲೆ ಆದಳಾ..? ಏನೀ ಅನುಮಾನ..?

Publicspot

ದಾವಣಗೆರೆ SP ಉಮಾ ಪ್ರಶಾಂತ್​​ ಬಗ್ಗೆ ಕೀಳು ಮಾತು.. ಅರೆಸ್ಟ್​ ಆಗ್ತಾರಾ ಶಾಸಕ..?

Publicspot

Jail Video Case; ಮೊಬೈಲ್​ ಬಳಕೆಗೆ ಅವಕಾಶ ಕೊಟ್ಟವರು ಅಲ್ಲ.. ವಿಡಿಯೋ ಮಾಡಿದವರ ಟಾರ್ಗೆಟ್..

Publicspot

Friendship: ಸ್ನೇಹ ಮಾಡುವಾಗ ಎಷ್ಟೊಂದು ಹುಷಾರ್​ ಆಗಿರ್ಬೇಕು..? ಇಲ್ಲಿದೆ ಉತ್ತರ

Publicspot

ಮದುವೆ ಆಗಿ 15 ದಿನ ಕಳೆದರೂ ಮಂಚಕ್ಕೆ ಬರಲಿಲ್ಲ.. ಕೊಂದೇ ಬಿಟ್ಟ ಗಂಡ..!!

Publicspot

Mandya Murder: ಮಗಳನ್ನು ಪ್ರೀತಿಸಿದ್ದಕ್ಕೆ ಕೊಂದೇ ಬಿಟ್ರಾ..?

Publicspot