September 20, 2026
The Public Spot
ಅಪರಾಧ

ಗಂಡ ದುಡಿದು ಕೆಟ್ಟ.. ಹೆಂಡತಿ ಶೋಕಿ ಮಾಡಿ ಕೆಟ್ಟಳು.. ಕೊನೆಗೆ..

ಸಾಮಾಜಿಕ ಜಾಲತಾಣ ಅನ್ನೋದು ಈಗ ಹುಡುಗಿಯರ ಮಾರ್ಕೆಟ್​ ರೀತಿ ಆಗಿದೆ ಅನ್ನೋದು ಬಹಳಷ್ಟು ಜನರ ಆರೋಪ. ಇಲ್ಲೊಂದು ಪ್ರಕರಣದಲ್ಲಿ ಸೋಷಿಯಲ್‌ ಮೀಡಿಯಾ ಈ ಸಂಸಾರವನ್ನೇ ಛಿದ್ರಛಿದ್ರ ಮಾಡಿಬಿಟ್ಟಿದೆ. ಹುಡುಗ, ಹುಡುಗಿ ಅನ್ನದೆ ವಯಸ್ಸಾದ ಮಹಿಳೆಯರೂ ಈಗ ಸೋಷಿಯಕಲ್​ ಮೀಡಿಯಾದಲ್ಲಿ ನಡು ಬಳುಕಿಸಿ ವೈಯ್ಯಾರದ ನೋಟ ಬೀರುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಅದು ಅವರವರ ಅಭಿವ್ಯಕ್ತಿ ಸ್ವಾತಂತ್ರ್ಯ. ಅದನ್ನು ನಾವು ನೀವು ಪ್ರಶ್ನೆ ಮಾಡೋಕೆ ಸಾಧ್ಯವಿಲ್ಲ. ಆದರೆ ಇಲ್ಲಿ ಓರ್ವ ಮಹಿಳೆ ಗಂಡ ದುಡಿದ ಹಣದಿಂದ ತನ್ನನ್ನು ತಾನು ಮಾಡೆಲ್​ ರೀತಿ ಬದಲಿಸಿಕೊಂಡಿದ್ದಾಳೆ. ಜೊತೆಗೆ ಗಂಡನಿಗೆ ಟಾರ್ಚರ್​ ಮಾಡಲೂ ಶುರು ಮಾಡಿಕೊಂಡಿದ್ದಾಳೆ.

ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ಬಳಿಯ ಬಾಂಬೆಚಾಳದ ರಾಘವೇಂದ್ರ ಜೊತೆಗೆ ಧಾರವಾಡ ಮೂಲದ ಮೇಘಾ ಮದುವೆ ಆಗಿತ್ತು. ಅಮಾಯಕಿ ರೀತಿ ಇದ್ದ ಮೇಘಾ, ಎರಡು ಮಕ್ಕಳನ್ನು ಅಡೆದ ಬಳಿಕ ಮಕ್ಕಳ ಲಾಲನೆ ಪಾಲನೆ ಮಾಡುತ್ತ ಊರಿನಲ್ಲೇ ಉಳಿದಿದ್ರೆ, ಗಂಡ ರಾಘವೇಂದ್ರ ಮಾತ್ರ ಸಂಪಾದನೆ ಮಾಡುವ ಉದ್ದೇಶದಿಂದ ಮಲೇಷ್ಯಾಗೆ ತೆರಳಿದ್ದ. ಗಂಡ ಕಷ್ಟಪಟ್ಟು ದುಡಿಮೆ ಮಾಡ್ತಿದ್ರೆ ಮೇಘಾ ಕ್ಲಬ್ಬು – ಪಬ್ಬು ಅಂತಾ ಸುತ್ತಾಡೋದು, ಕಂಡ ಕಂಡವರ ತೋಳಲ್ಲಿ ತೆಕ್ಕೆಯಾಗುವುದು ನಡೆಯುತ್ತಿತ್ತು. ಗಂಡನಿಗೆ ಗೋಲಿ ಮೇಘಾ, ಕಗ್ಗತ್ತಲ ರಾತ್ರಿಯಲ್ಲಿ ಮೈಚಳಿ ಬಿಟ್ಟು ಕ್ಲಬ್​ಗಳಲ್ಲಿ ಕುಣಿಯುತಿದ್ಲು. ಈ ಎಲ್ಲಾ ವಿಚಾರ ಗಂಡನಿಗೆ ತಿಳಿಯಿತು.

ಮದುವೆಯಾದ ಮೂರು ವರ್ಷ ತುಂಬುವ ಹೊತ್ತಿಗೆ ಮೇಘಾಳ ನವರಂಗಿ ಆಟ ಶುರುವಾಗಿತ್ತು. ಮಗಳ ಹಸಿಬಿಸಿ ಆಟಕ್ಕೆ ತಾಯಿಯೇ ಬೆಂಗಾವಲಾಗಿ ನಿಂತಿದ್ದಳು. ಬೇರೆ ಮನೆ ಮಾಡೋಣ. ನಿಮ್ಮ ತಾಯಿಯಿಂದ ದೂರ ಇರೋಣ ಅಂತಾ ತುಂಬಾನೇ ಕಾಟ ಕೊಟ್ಟಿದ್ದ ಮೇಘಾಳ ಒತ್ತಡ ತಾಳಲಾರದೆ ರಾಘವೇಂದ್ರ ಮಲೇಷ್ಯಾದಲ್ಲಿ ಕೆಲಸಕ್ಕೆ ವಾಪಸ್​ ಆಗಿದ್ದ. ಗಂಡ ವಿದೇಶಕ್ಕೆ ಹೋದ ಬಳಿಕ ಮತ್ತಷ್ಟು ಫ್ರೀ ಆದ ಮೇಘಾ, ಪ್ರೇಮದಾಟ ಶುರು ಮಾಡಿಕೊಂಡಿದ್ದಳು. ಗಂಡನನ್ನು ಬಿಟ್ಟು ಇನ್ನೊಬ್ಬನ ಸಂಗ ಬೆಳೆಸಿದ ಮೇಘಾ, ಮನೆ, ಮಕ್ಕಳು ಅನ್ನೋದನ್ನ ಮರೆತು, ಮೈಮಾಟ ತೋರಿಸುತ್ತಾ ಸುತ್ತುವುದನ್ನೇ ಕಾಯಕ ಮಾಡಿಕೊಂಡಿದ್ದಳು. ಕೆಲವು ದಿನಗಳ ಹಿಂದೆ ಊರಿಗೆ ವಾಪಸ್​ ಬಂದಿದ್ದ ರಾಘವೇಂದ್ರ, ಪತ್ನಿ ಜೊತೆ ಸುಖ ಜೀವನ ನಡೆಸೋ ಕನಸು ಕಂಡಿದ್ದ. ಆದ್ರೆ, ತವರು ಮನೆ ಸೇರಿದ್ದ ಮೇಘಾ, ನನಗೆ ಡಿವೋರ್ಸ್‌ ಕೊಡು ಅಂತಾ ಕಾಟ ಕೊಡಲು ಶುರು ಮಾಡಿದ್ದಳು.

ಡಿವೋರ್ಸ್​ ಕೊಡಲು ಒಪ್ಪದಿದ್ರೆ ನನ್ನ ಕಡೆಯವರನ್ನು ಕರ್ಕೊಂಡು ಬಂದು ನಿನ್ನ ಕಥೆ ಮುಗಿಸ್ತೀನಿ ಅಂತಾನೂ ಬೆದರಿಕೆ ಹಾಕಿದ್ದಳು. ಪತ್ನಿಯ ಪಲ್ಲಂಗದಾಟದ ಬಗ್ಗೆ ಗೊತ್ತಾಗ್ತಿದ್ದಂತೆ ನೊಂದು ಬೆಂದು ಹೋಗಿದ್ದ ರಾಘವೇಂದ್ರ, ಈಕೆಯ ಜೊತೆಗೆ ಕೋರ್ಟ್​, ಡಿವೋರ್ಸ್​ ಅಂತಾ ಜಂಜಾಟವೇ ಬೇಡ, ನಾನು ದುಡಿದ ಹಣದಲ್ಲಿ ಮದವೇರಿಯ ಈಕೆಯೇ ಬದುಕಲಿ. ಆದರೆ ನನ್ನ ಸಾವಿಗೆ ಕಾರಣವಾದ ನನ್ನ ಹೆಂಡತಿ ಮೇಘಾ ಹಾಗೂ ಆಕೆಯ ತಾಯಿಯನ್ನು ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಿ ಎಂದು ಡೆತ್​ನೋಟ್​ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ. ಇದೀಗ ಪೊಲೀಸರು ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೂ ಹಣ ಸಂಪಾದನೆ ಎಂದು ಹೊರಟ ಗಂಡ, ಮುದ್ದಾದ ಕುಟುಂಬವನ್ನೇ ಕಳೆದುಕೊಂಡು ಸಾವಿಗೆ ಶರಣಾಗಿದ್ದು ದುರ್ದೈವವೇ ಸರಿ.

Related posts

Friendship: ಸ್ನೇಹ ಮಾಡುವಾಗ ಎಷ್ಟೊಂದು ಹುಷಾರ್​ ಆಗಿರ್ಬೇಕು..? ಇಲ್ಲಿದೆ ಉತ್ತರ

Publicspot

ACTOR AJAY RAO MARRIAGE STORY: ಕಷ್ಣನ ಲವ್‌ ಸ್ಟೋರಿಯಲ್ಲ.. ಸಂಸಾರ ಬಿರುಕು..

Publicspot

Mysore Girl Rape; ಬಲೂನ್​ ಮಾರಾಟ ಮಾಡ್ತಿದ್ದ ಪುಟ್ಟ ಕಂದನ ಮೇಲೆ ಅತ್ಯಾಚಾರ, ಕೊಲೆ..!!

Publicspot

Hassan Death in birthday; ಹುಟ್ಟುಹಬ್ಬದ ದಿನವೇ ಸಾವನ್ನಪ್ಪಿದ ವಿದ್ಯಾರ್ಥಿ.. ಸರ್ಕಾರದಿಂದ ಪರಿಹಾರ ಘೋಷಣೆ..

Publicspot

Film Actress Case; ಲಿವ್‌ ಇನ್‌ ರಿಲೇಷನ್‌.. ಆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌.. ಕೋರ್ಟ್‌ನಲ್ಲಿ ಜಾಮೀನು..

Publicspot

Brother murder: ಅಕ್ಕನ ಅಕ್ರಮ ಸಂಬಂಧಕ್ಕೆ ಬಲಿಯಾದ ತಮ್ಮ..

Publicspot