The Public Spot
ಕ್ರೀಡೆ

ಪಂಜಾಬ್‌ ವಿರುದ್ಧ RCB ಗೆಲುವಿಗೆ CSK ಫ್ಯಾನ್ಸ್‌ ಪ್ರಾರ್ಥನೆ.. ಯಾಕೆ..?

IPL ಟೂರ್ನಿ ಅಂತಿಮ ಘಟ್ಟಕ್ಕೆ ಬರುತ್ತಿದ್ದು, ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಹಾಗೂ ಕೊಲ್ಕತ್ತಾ ನೈಟ್​ ರೈಡರ್ಸ್ ಹಣಾಹಣಿ ನಡೆಸಿದ್ವು. ಗುಜರಾತ್‌ ವಿರುದ್ಧ KKR​ ತಂಡ 29 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಕೊಲ್ಕತ್ತಾದ ಈಡನ್​ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಕೊಲ್ಕತ್ತಾ ತಂಡ​, 20 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 247 ರನ್​ಗಳಿಸಿತು. 248 ರನ್​ಗಳ ಗುರಿ ಬೆನ್ನತ್ತಿದ ಗುಜರಾತ್​ ತಂಡ 4 ವಿಕೆಟ್​ ನಷ್ಟಕ್ಕೆ 218 ರನ್​ ಗಳಿಸಲು ಅಷ್ಟೇ ಶಕ್ತವಾಯ್ತು. ಈ ಮೂಲಕ ಸೋಲು ಅನುಭವಿಸಿತು. ಕೊಲ್ಕತ್ತಾ ಸರಣಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 5 ಮ್ಯಾಚ್‌ಗಳಲ್ಲಿ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಅತ್ತ ಗುಜರಾತ್​ ತಂಡ ಸರಣಿಯಲ್ಲಿ ಆಡಿರುವ 13 ಪಂದ್ಯದಲ್ಲಿ 8 ರಲ್ಲಿ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನನದಲ್ಲಿದೆ.

ಇವತ್ತು ಸೂಪರ್​ ಸಂಡೇ IPL ಅಭಿಮಾನಿಗಳ ಪಾಲಿಗೆ ಡಬಲ್​ ಧಮಾಕ. ಇಂದು ಮಧ್ಯಾಹ್ನ 3 ಗಂಟೆ 30 ನಿಮಿಷಕ್ಕೆ ಮೊದಲ ಪಂದ್ಯ ನಡೆಯಲಿದ್ದು, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡಗಳು ಮುಖಾಮುಖಿಯಾಗಲಿದೆ. ಧರ್ಮಶಾಲ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಆರ್​ಸಿಬಿ ಸರಣಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 8 ರಲ್ಲಿ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇತ್ತ ಪಂಜಾಬ್​ ತಂಡ ಸರಣಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 6 ರಲ್ಲಿ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಪಂಜಾಬ್​ ಕಳೆದ 5 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ಇಂದಿನ ಪಂದ್ಯದಲ್ಲಾದ್ರೂ ಗೆಲುವಿನ ಹಳಿಗೆ ಮರಳುತ್ತಾ ಕಾದು ನೋಡಬೇಕಿದೆ.

ಇನ್ನು ಸಂಜೆ 7.30ಕ್ಕೆ ನಡೆಯಲಿರುವ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವರ್ಸಸ್‌ ರಾಜಸ್ಥಾನ್​ ರಾಯಲ್ಸ್​ ತಂಡಗಳು ಮುಖಾಮುಖಿ ಆಗಲಿದೆ. ದೆಹಲಿಯ ಅರುಣ್​ ಜೆಟ್ಲಿ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಡೆಲ್ಲಿ ಸರಣಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇತ್ತ ರಾಜಸ್ಥಾನ್​ ರಾಯಲ್ಸ್ ಸರಣಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 6 ರಲ್ಲಿ ಗೆಲುವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಈಗಾಗಲೇ ಅಗ್ರಸ್ಥಾನದಲ್ಲಿ ಇದ್ದರೂ ಇಂದಿನ ಪಂದ್ಯ ಭಾರೀ ಮಹತ್ವ ಪಡೆದುಕೊಂಡಿದೆ. ಕಳೆದ ಬಾರಿ ಚಾಂಪಿಯನ್ಸ್‌ ಆಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಈ ಬಾರಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಉಳಿಯಬೇಕು ಅನ್ನೋ ಆಸೆ RCB ಫ್ಯಾನ್ಸ್‌ಗಳದ್ದು. ಇನ್ನು RCB ಟೀಂಗೆ ಕಟ್ಟಾ ಎದುರಾಳಿ ಎಂದರೆ CSK. ಇದೀಗ CSK ಅಭಿಮಾನಿಗಳು ಇವತ್ತು RCB ಗೆಲುವು ಕಾಣಲಿ ಎಂದು ಪ್ರಾರ್ಥಿಸುವಂತಾಗಿದೆ. ಇವತ್ತು ಪಂಜಾಬ್‌ ವಿರುದ್ಧ RCB ಗೆಲುವು ಸಾಧಿಸುವುದರ ಮೇಲೆ ಚೆನ್ನೈ ಸೂಪರ್‌ ಕಿಂಗ್ಸ್‌‌ ಪ್ಲೇ ಆಫ್ ಕನಸು ನನಸಾಗಲಿದೆ. ಇಂದಿನ ಪಂದ್ಯ ಸೋಲುಂಡರೆ ಪಂಜಾಬ್‌ ತಂಡಕ್ಕೆ ಪ್ಲೇ ಆಫ್‌ ಕನಸು ಭಗ್ನವಾಗುವ ಸಾಧ್ಯತೆಯಿದೆ.

Related posts

IPL ಕ್ರಿಕೆಟ್‌ ಪಂದ್ಯ ನಡೆಸಲು ಸರ್ಕಾರದ ಸಮ್ಮತಿ..! 11 ಜನರ ಬಲಿ ಬಳಿಕ ಮತ್ತೆ ಪಂದ್ಯ..

Publicspot

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚಿನ್ನದಂತ ಆಟವಾಡಿದ RCB ಹುಡುಗರು.. ಚೆನ್ನೈ ಪಲ್ಟಿ..

Publicspot

India Win; ಅಂಗಳದಲ್ಲಿ ಆಪರೇಷನ್​ ಸಿಂದೂರ್​.. ಪಾಕಿಸ್ತಾನಕ್ಕೆ ಮೋದಿ ಗುದ್ದು..

Publicspot

ಚಿನ್ನಸ್ವಾಮಿ ಸ್ಟೇಡಿಯಂ ವಿಚಾರದಲ್ಲೂ ರಾಜಕೀಯ ನಡೀತಿದ್ಯಾ..? ನಾಳಿನ ಪಂದ್ಯ ಕ್ಯಾನ್ಸಲ್​..!!

Publicspot

RCB – CSK ಪಂದ್ಯಕ್ಕೆ ಸಜ್ಜಾಗಿದೆ ಚಿನ್ನಸ್ವಾಮಿ.. ಶಾಸಕರ ಟಿಕೆಟ್‌ಗಾಗಿ ಕ್ಯೂ ಕ್ಯೂ..

Publicspot

ಟಿ-20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಹಂತಕ್ಕೆ ಲಗ್ಗೆ ಹಾಕಿದ ಟೀಂ ಇಂಡಿಯಾ!

Publicspot