September 10, 2026
The Public Spot
ಅಪರಾಧ

ಅಮ್ಮನ ಹುಟ್ಟು ಹಬ್ಬದ ದಿನವೇ ಮಗಳ ಕೊಲೆ.. ಅಮ್ಮ ನೀನೆಷ್ಟು ಕ್ರೂರಿ..!!

ಬೆಂಗಳೂರಿನ ಕಾಡುಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 3 ತಿಂಗಳ ಹಿಂದೆ ನಡೆದಿದ್ದ 5 ವರ್ಷದ ಬಾಲಕಿ ಸಾವಿನ ಪ್ರಕರಣದಲ್ಲಿ ಭಾರೀ ಟ್ವಿಸ್ಟ್‌ ಸಿಕ್ಕಿದ್ದು, ಅದು ಸಾವು ಆಕಸ್ಮಿಕವಲ್ಲ, ಕೊಲೆ ಅನ್ನೋದು ಬಯಲಾಗಿದೆ. ಮದುವೆ ಆಗಿ ಇಬ್ಬರು ಹೆಣ್ಣು ಮಕ್ಕಳು ಆದ ಬಳಿಕ ಆಕಸ್ಮಿಕವಾಗಿ ಹಳೇ ಲವರ್‌ ಸಿಕ್ಕಿದ ಎಂದು ಗಂಡನನ್ನು ಬಿಟ್ಟು ಸ್ನೇಹಿತನನ್ನೇ ಮದುವೆ ಆಗಿ ವಾಸವಿದ್ದ ಪ್ರಿಯಾಂಕಾ, ತನ್ನ ಕಿರಿಯ ಮಗಳನ್ನು ಜೊತೆಯಲ್ಲಿ ಇರಿಸಿಕೊಂಡಿದ್ದಳು. ಹಿರಿಯ ಮಗಳು ಅಪ್ಪನ ಜೊತೆಗೆ ದಾವಣಗೆರೆಯಲ್ಲಿ ವಾಸವಿದ್ದಳು. ಇದೀಗ ಮಗಳ ಸಾವಿನ ಪ್ರಕರಣದಲ್ಲಿ ಲವ್ವರ್‌ ಮೋಹನ್‌ ಅರೆಸ್ಟ್‌ ಆಗಿದ್ದು, ಆಂಟಿ ಪ್ರಿಯಾಂಕಾ ಎಸ್ಕೇಪ್‌ ಆಗಿದ್ದಾಳೆ.

2026ರ ಮಾರ್ಚ್ 21ರಂದು ತನ್ನ ಪ್ರಿಯಕರ ಮೋಹನ್ ಜೊತೆಗೆ ಮಧುರೈಗೆ ಹೋಗಿದ್ದ ಪ್ರಿಯಾಂಕಾ, ಮೂರು ದಿನ ದೇವಸ್ಥಾನಗಳನ್ನು ಸುತ್ತಾಡಿ. ಮಾರ್ಚ್‌ 24ರಂದು ಬೆಂಗಳೂರಿಗೆ ವಾಪಸ್ ಆಗಿದ್ದಳು. ಅವತ್ತು ಪ್ರಿಯಾಂಕಾ ಆಂಟಿಯ ಬರ್ತ್‌ಡೇ ಇತ್ತು. ಕೋಲಾರ ಬಳಿಯ ಕಾಫಿ ಶಾಪ್‌ಗೆ ಹೋಗಿ ಬರ್ತ್‌ ಡೇ ಸೆಲಬ್ರೇಟ್‌ ಸಹ ಮಾಡಿದ್ರು. ಆ ನಂತ್ರ ಈ ಮಗುವನ್ನೂ ಕರ್ಕೊಂಡು ಇಂದಿರಾನಗರಕ್ಕೆ ಬರ್ತಿದ್ದಂತೆ ನಡೆಯಬಾರದ ಘಟನೆ ನಡೆದು ಹೋಗಿತ್ತು.

ಅವತ್ತು ರಾತ್ರಿ 8 ಗಂಟೆ ಸುಮಾರಿಗೆ ಇಂದಿರಾನಗರಕ್ಕೆ ಬರ್ತಿದ್ದಂತೆ ಪ್ರಿಯಾಂಕಾ ಆಂಟಿಗೆ ಶಾಪಿಂಗ್‌ ಮಾಡೋ ಮನಸ್ಸಾಗಿತ್ತು. ಮಗುವನ್ನ ತನ್ನ ಲವರ್‌ ಮೋಹನ್‌ ಜೊತೆಗೆ ಬಿಟ್ಟು ಶಾಪಿಂಗ್‌‌ ಮಾಡೋದಕ್ಕೆ ಹೋಗಿದ್ದಳು. ಈ ವೇಳೆ ಮಗು ಹಾಗೂ ಮೋಹನ್‌ ಕಾರ್‌ನಲ್ಲೇ ಇದ್ದರು. ಅಷ್ಟರಲ್ಲಿ ಯಾರೋ ತಿನ್ನುತಯ್ತಿದ್ದ ಐಸ್‌ಕ್ರೀಂ ನೋಡಿದ ಮಗುವಿಗೂ ಐಸ್​ಕ್ರೀಂ ತಿನ್ನೋ ಆಸೆಯಾಗಿದೆ. ಹೀಗಾಗಿ ಐಸ್‌ ಕ್ರೀಂ ಕೊಡಿಸಿ ಅಂತಾ ಕೇಳ್ತಿದ್ದಂತೆ ಮೋಹನ್‌ ಐಸ್‌ಕ್ರೀಂ ತಂದು ಕೊಟ್ಟಿದ್ದ. ಆದರೆ ಮಗುವಿಗೆ ಇಷ್ಟ ಆಗಿರ್ಲಿಲ್ಲ. ಹೀಗಾಗಿ ಇದು ಬೇಡ, ಬೇರೆ ಐಸ್​​ಕ್ರೀಂ ಬೇಕು ಅಂತಾ ಹಠ ಮಾಡಿತ್ತಂತೆ.

ಯಾವಾಗ ಮೋಹನ್‌ ತಂದುಕೊಟ್ಟ ಐಸ್‌ಕ್ರೀಂ ಬೇಡ, ಬೇರೆ ಐಸ್‌ಕ್ರೀಂ ಬೇಕು ಎಂದು ಹಠ ಮಾಡ್ತೋ ಮೋಹನ್ ಪಿತ್ತ ನೆತ್ತಿಗೇರಿತ್ತು. ಸಿಟ್ಟಿನಲ್ಲಿ ಮಗುವಿನ ಹೊಟ್ಟೆ ಭಾಗಕ್ಕೆ ಗುದ್ದಿದ್ದು, ಮಗು ನೋವಿನಲ್ಲಿ ಚೀರಾಡಿದೆ. ಆಗ ಬಾಯಿ ಮುಚ್ಕೊಂಡ ಮೋಹನ್‌, ಮಗು ಅಳು ನಿಲ್ಲಿಸೋ ತನಕ ಉಸಿರು ಬಿಗಿ ಹಿಡಿದು ಕೊಂದಿದ್ದಾನೆ. ಆ ಬಳಿಕ ಶಾಪಿಂಗ್‌ ಮುಗಿಸ್ಕೊಂಡು ಬಂದ ಪ್ರಿಯಾಂಕಾಳಿಗೆ ಮಗಳ ಸಾವಿನ ವಿಚಾರ ಹೇಳಿದ್ದಾನೆ. ಆಕಸ್ಮಿಕವಾಗಿ ಇದೆಲ್ಲಾ ನಡೆದೋಯ್ತು. ಬೇಕಂತ ಮಾಡಿಲ್ಲ ಅಂತಾ ಹೇಳಿದ್ದ. ಆ ಬಳಿಕ ಮನೆಗೆ ಮಗು ಬಾಡಿ ತಗೊಂಡು ಹೋದ ಪ್ರೇಮಿಗಳು ರಾತ್ರಿಯೆಲ್ಲ ಮೃತದೇಹವನ್ನ ಮನೆಯಲ್ಲೇ ಇರಿಸಿಕೊಂಡು ತಪ್ಪಿಸಿಕೊಳ್ಳೋಕೆ ಪ್ಲ್ಯಾನ್ ಮಾಡಿದ್ದಾರೆ.

ಬೆಳಗ್ಗೆ ಖಾಸಗಿ ಆಸ್ಪತ್ರೆಗೆ ಕರ್ಕೊಂಡು ಹೋಗಿ ರಾತ್ರಿ ಮಲಗಿದ್ದ ಮಗು ಎದ್ದಿಲ್ಲ. ಮೆಟ್ಟಿಲ ಮೇಲಿಂದ ಬಿದ್ದಿತ್ತು, ಮಲಗಿಸಿದ್ವಿ ಅಂತ ಕಥೆ ಕಟ್ಟಿದ್ದಾರೆ. ವೈದ್ಯರು ಪರೀಕ್ಷೆ ಮಾಡ್ತಿದ್ದಂತೆ ಮಗು ಸಾವನ್ನಪ್ಪಿರೋದು ಗೊತ್ತಾಗಿತ್ತು. ಯಾವಾಗ ಮಗು ಇನ್ನಿಲ್ಲ ಅಂತಾ ಡಾಕ್ಟರ್‌ ಹೇಳಿದ್ರೋ ಪ್ರಿಯಾಂಕಾ ಆಂಟಿ, ಮಗಳನ್ನು ಕಳೆದುಕೊಂಡ ದುಃಖದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ ಪೋಸ್ಟ್‌‌ ಮಾರ್ಟಂ ರಿಪೋರ್ಟ್‌ ಬಂದ ಬಳಿಕ ಮಗುವಿನ ತಂದೆಗೆ ಅನುಮಾನ ಬಂದಿತ್ತು. ಹೆಂಡತಿ ಮೇಲೆ ಸಂಶಯ ಹೆಚ್ಚಾಗಿತ್ತು. ಹೀಗಾಗಿ ಇಂಗ್ಲೆಂಡ್‌ನಲ್ಲಿ ವೈದ್ಯೆಯಾಗಿರು ತನ್ನ ಅಕ್ಕನಿಗೆ ಪೋಸ್ಟ್‌ ಮಾರ್ಟಂ ರಿಪೋರ್ಟ್‌ ಕಳಿಸಿದ್ದು, ಘಟನೆ ಬೆಳ.ಕಿಗೆ ಬರುವುದಕ್ಕೆ ಕಾರಣವಾಗಿದೆ. ಇದೀಗ ಪೊಲೀಸ್ರು ಮೋಹನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾ ಎಲ್ಲಾ ಸಂಗತಿಗಳು ಬಯಲಾಗಿವೆ.
.

Related posts

DARMASTHALA SIT ವರದಿ ಸಲ್ಲಿಸಿ: ಸದನದಲ್ಲಿ ಇವತ್ತು ಧರ್ಮಸ್ಥಳ ರಿಪೋರ್ಟ್.. ಏನಿದೆ..?

Publicspot

Drunk Drive; ಪೊಲೀಸರ ದಂಡ ದಾಹಕ್ಕೆ ಆಟೋ ಡ್ರೈವರ್​ ಆತ್ಮಹತ್ಯೆ ಯತ್ನ..

Publicspot

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಲಾಕಪ್‌ ಡೆತ್‌ ಕೇಸ್‌‌ನಲ್ಲಿ ಪೊಲೀಸರಿಗೆ ಗಲ್ಲು ಶಿಕ್ಷೆ..

Publicspot

2023 Video Leak; ಚಿನ್ನಯ್ಯ ಹೇಳಿದ ಮಾತುಗಳು ಎಷ್ಟು ಸತ್ಯ..? ಎಷ್ಟು ಸುಳ್ಳು.. ಹೊಸ ವಿಡಿಯೋ ಲೀಕ್‌..

Publicspot

ಒಂದು ಪ್ರೀತಿ ಮೂವರ ಕೊಲೆ.. ಮನೆಯಲ್ಲೇ ಮಣ್ಣು ಮಾಡಿ ಸಿಕ್ಕಿಬಿದ್ದಿದ್ಯಾಕೆ..?

Publicspot

Lesbian Love; ಸಲಿಂಗ ಕಾಮವೂ ತಪ್ಪಲ್ಲ.. ಅಕ್ರಮ ಸಂಬಂಧವೂ ತಪ್ಪಲ್ಲ.. ಆದರೆ..

Publicspot