September 20, 2026
The Public Spot
ದೇಶ-ವಿದೇಶರಾಜ್ಯ

ಮೇಕೆದಾಟು ಡ್ಯಾಂಗೆ ತಮಿಳುನಾಡು ವಿರೋಧ.. ಸಮಸ್ಯೆ ಆಗೋದೇ ನಮಗಲ್ಲ..!!

ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಸರ್ಕಾರ ಕ್ಯಾತೆ ತೆಗೆದಿದ್ದು, ಮಕೆದಾಟು ಅಣೆಕಟ್ಟು ಕಟ್ಟುವುದಕ್ಕೆ ಬಿಡಬಾರದು ಎಂದು ನಿರ್ಣಯ ಪಾಸ್​ ಮಾಡಿದೆ. ಟಿವಿಕೆ ಸರ್ಕಾರಕ್ಕೆ ತಮಿಳುನಾಡು ಕಾಂಗ್ರೆಸ್​ ಕೂಡ ಬೆಂಬಲ ನೀಡಿದೆ. ಇದೀಗ ರಾಜ್ಯದ ಕಾಂಗ್ರೆಸ್​​ ಸರ್ಕಾರ ಏನು ಮಾಡುತ್ತದೆ ಅನ್ನೋದು ಕುತೂಹಲ ಮೂಡಿಸಿದೆ. ವಿಧಾನಸೌಧದಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಮೇಕೆದಾಟು ನಮ್ಮ ರಾಜ್ಯದ ಮಹಾತ್ವಕಾಂಕ್ಷಿ ಯೋಜನೆ. ಡ್ಯಾಮ್ ಕಟ್ಟಬೇಕು, ಅದರಿಂದ 67 TMC ನೀರನ್ನು ಸಂಗ್ರಹಿಸಲಾಗುತ್ತದೆ. 400 ಮೆಗಾ ವ್ಯಾಟ್ ವಿದ್ಯುತ್ ಪೂರೈಕೆ ಮಾಡಬಹುದು. ನಮ್ಮಲ್ಲಿ 16 TMC ನೀರು ಮಾತ್ರ ಇದೆ. ತಮಿಳುನಾಡಿಗೆ ಏನು ನಿಗದಿಯಾಗಿದೆ ಆ ನೀರನ್ನ ಕೊಡೋಣ. ನಮಗೆ ಎಷ್ಟು ನೀರು ಬೇಕೊ ಅದನ್ನು ಇಟ್ಟುಕೊಳ್ಳೋಣ ಎಂದಿದ್ದಾರೆ.

ಸದ್ಯ ಈಗ ಮಳೆ ಹೆಚ್ಚಾಗಿ ಆಗದ ಕಾರಣಕ್ಕೆ ನೀರಿನ ಪ್ರಮಾಣ ಕಡಿಮೆ ಇದೆ ಎಂದಿರುವ ಜಲಸಂನ್ಮೂಲ‌ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರಿಗೆ ಎರಡು ತಿಂಗಳಿಗೆ ನೀರಿನ ಸಮಸ್ಯೆ ಇಲ್ಲ. ಇಂದು ಕೆಆರ್​ಎಸ್​ಗೆ ಒಳ ಹರಿವು 11 ಸಾವಿರ ಕ್ಯೂಸೆಕ್​ ಇದೆ. ಇನ್ನೂ ಕಬಿನಿ ಜಲಾಶಯದಲ್ಲಿ 5 ಟಿಎಂಸಿ ನೀರು ಇದೆ. ಕುಡಿಯುವ ನೀರು ಬಿಟ್ಟು 3 ಟಿಎಂಸಿ ಹೆಚ್ಚುವರಿ ಇದೆ ಎಂದಿದ್ದಾರೆ. ಇನ್ನೂ ತುಂಗಾಭದ್ರಾ ಡ್ಯಾಂಗೆ ಕ್ರಸ್ಟ್​ ಗೇಟ್ ಅಳವಡಿಕೆ ವಿಚಾರವಾಗಿ ಮಾತನಾಡಿ, ಟಿಬಿ ಡ್ಯಾಂನ 19ನೇ ಗೇಟ್ ಮುರಿದು ಹೋಗಿತ್ತು. ಹೊಸ ಗೇಟ್ ಉದ್ಘಾಟನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೇಂದ್ರ ಜಲಸಂಪನ್ಮೂಲ ಸಚಿವರು ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ ಎಂದಿದ್ದಾರೆ.

ಮೇಕೆದಾಟು ಯೋಜನೆ ಮಹತ್ವಾಕಾಂಕ್ಷಿ ಯೋಜನೆ. ಕೇವಲ ಹೊಸ ಡ್ಯಾಮ್ ಕಟ್ಟೋ ಯೋಜನೆ ಅಲ್ಲ. ಇದು ಬರೀ ನೀರು ಸ್ಟೋರೇಜ್ ಅಷ್ಟೇ. ಇದರಿಂದ ಬೆಂಗಳೂರಿಗೆ 4.75 TMC ಕುಡಿಯೋಕೆ ನೀರು ಸಿಗುತ್ತದೆ. 400 ಮೆಗಾವಾಟ್ ಕರೆಂಟ್ ಕೂಡ ಜನರೇಟ್ ಆಗುತ್ತದೆ. ಈ ಡ್ಯಾಂನಿಂದ ವ್ಯವಸಾಯಕ್ಕೆ ನೀರು ಸಿಗಲ್ಲ. 4 ರಿಂದ 5 ವರ್ಷಕ್ಕೆ ಒಮ್ಮೆ ಮಳೆ ಕಡಿಮೆ ಆಗುತ್ತದೆ. ತಮಿಳುನಾಡಿಗೆ ಸೆಂಟ್ರಲ್ ರೂಲ್ಸ್ ಪ್ರಕಾರ ತಿಂಗಳಿಗೆ ಒಮ್ಮೆ ನೀರು ಬಿಡಬೇಕು. 19 TMC ಜೂನ್‌ನಲ್ಲಿ ನೀರು ಬಿಡಬೇಕು ಅಂತ ಇದೆ. ಇದು ಹಿಂದೆ ತೀರ್ಮಾನ ಆಗಿದೆ. ನಮ್ಮ ಬಳಿ 16 TMC ನೀರು ಇದೆ. ಕುಡಿಯೋ ನೀರು ಬಿಟ್ಟು ಬರೀ 3 TMC ಇದೆ ಎಂದಿದ್ದಾರೆ.

ತಮಿಳುನಾಡಿನವರು ಸುಪ್ರೀಂಕೋರ್ಟ್‌ಗೆ ಹಾಕಿದ್ದ ಅಪ್ಲಿಕೇಶನ್ ರಿಜೆಕ್ಟ್ ಆಯ್ತು. ಪುನರ್​ ಪರಿಶೀಲನಾ ಅರ್ಜಿ ಕೂಡ ರಿಜೆಕ್ಟ್ ಅಯ್ತು. 2 ಬಾರಿ ತಮಿಳುನಾಡಿನ ಪಿಟಿಷನ್ ರಿಜೆಕ್ಟ್ ಆಗಿದೆ. ಆದ್ರೂ ಅಲ್ಲಿನ ಮುಖ್ಯಮಂತ್ರಿ ಹೋರಾಟ ಮಾಡಬೇಕು ಅಂತ ಹೇಳಿದ್ದಾರೆ. ನಮಗೆ ಅಲೋಕೇಶನ್ ಆಗೋ ನೀರು ನಮಗೆ ಸಾಕು. ಮೇಕೆದಾಟುವಿನಲ್ಲಿ ಡ್ಯಾಮ್ ಕಟ್ಟಿದರೆ ಇವಾಗ ಅವರಿಗೆ ನೀರು ಬಿಡಬಹುದಿತ್ತು. ಇದು ಅವರ ರೈತರಿಗೂ ಕೂಡ ಅನುಕೂಲ ಆಗುತ್ತದೆ. ಅವರು ವಿರೋಧ ಮಾಡಿದರೆ ಅವರ ರೈತರಿಗೆ ಕಷ್ಟ ಆಗುತ್ತದೆ. ಈಗಾಗಲೇ DPR ರೆಡಿ ಆಗಿದೆ. ತಮಿಳುನಾಡಿಗೆ ಅಲೋಕೇಶನ್ ಆಗಿರುವ ನೀರಿನಲ್ಲಿ ನಮಗೆ ಒಂದು ಹನಿ ಕೂಡ ಜಾಸ್ತಿ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

Related posts

Namma Metro ಹಳದಿ ಮಾರ್ಗದಲ್ಲಿ ಮಹಾನ್​ ಎಡವಟ್ಟು.. ಜನರೆಲ್ಲಾ ಕಂಗಾಲು..

Publicspot

ಆಲಿಕಲ್ಲು ಮಳೆ.. ಇವತ್ತೂ ನಾಳೆ ಬರುತ್ತೆ.. ಸಿಡಿಲಿಗೆ ಸಿಗಲೇಬೇಡಿ..

Publicspot

ಹಾವೇರಿಯಲ್ಲಿಯಲ್ಲಿ ಮಳೆರಾಯನ ಅಬ್ಬರ.. ಜನ ಜೀವನ ಅಯೋಮಯ..

Publicspot

ಇರಾನ್‌ ಶರಣಾಗುತ್ತೆ ಎಂದಿದ್ದ ಅಮೆರಿಕಕ್ಕೆ ಡಿಚ್ಚಿ.. ಇಸ್ರೇಲ್‌ ಪ್ರಧಾನಿ ಹತ್ಯೆ ಪ್ರತಿಜ್ಞೆ

Publicspot

Independence Day: 79ನೇ ಸ್ವಾತಂತ್ರ್ಯೋತ್ಸವಕ್ಕೆ ನೀವೂ ಹೋಗಬಹುದು.. ಪಾಸ್‌ ಎಲ್ಲಿ ಸಿಗುತ್ತೆ ಗೊತ್ತಾ..?

ಯಶವಂತಿ

BJP Protest Against Potholes; ರಸ್ತೆ ಗುಂಡಿ ಮುಚ್ಚದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ..

Publicspot