September 20, 2026
The Public Spot
ರಾಜ್ಯ

ನೀಟ್‌ ಪರೀಕ್ಷೆ ಮುಕ್ತಾಯ.. ಕಾಂಗ್ರೆಸ್‌ ಕಾರಣದಿಂದ ಮಿಸ್‌ ಆಯ್ತು ಪರೀಕ್ಷೆ..‌

ದೇಶಾದ್ಯಂತ ಬಿಗಿ ಭದ್ರತೆಯೊಂದಿಗೆ ನೀಟ್ ಮರು ಪರೀಕ್ಷೆ ಮುಕ್ತಾಯ ಆಗಿದೆ. ಒಟ್ಟು 22.79 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ದೇಶದ 551 ನಗರಗಳು & 14 ಅಂತಾರಾಷ್ಟ್ರೀಯ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆದಿದೆ. ನೀಟ್ ಮರುಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಲು ನಿಷೇಧಾಜ್ಞೆ ಜಾರಿ ಮಾಡಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬೆಂಗಳೂರಿನ 68 ಪರೀಕ್ಷಾ ಕೇಂದ್ರಗಳಿಗೆ ಪ್ರತ್ಯೇಕ ವಾಹನಗಳಲ್ಲಿ ಪ್ರಶ್ನೆ ಪತ್ರಿಕೆ ಸರಭರಾಜು ಮಾಡಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15 ವರೆಗೂ ಪರೀಕ್ಷೆ ನಡೆದಿದೆದೆ.

ಮಲ್ಲೇಶ್ವರದ ಪರೀಕ್ಷಾ ಕೇಂದ್ರದಲ್ಲಿ ದಾರದ ವಿಚಾರಕ್ಕೆ ವಾಗ್ದಾದ ನಡೆದಿದೆ. ಕೈಗೆ ಧರಿಸಿದ್ದ ಕಪ್ಪು ದಾರ ಬಿಚ್ಚಲು ಸಿಬ್ಬಂದಿ ಸೂಚಿಸಿದ್ರಿಂದ ಸಿಬ್ಬಂದಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಪರೀಕ್ಷ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಮೆಟಲ್ ಆಬ್ಜೆಕ್ಟ್ ತಪಾಸಣೆ ನಡೆಸಲಾಯ್ತು. ಈ ವೇಳೆ ಬೆಲ್ಟ್ ಹಾಕಿ ಬಂದ ವಿದ್ಯಾರ್ಥಿಯನ್ನ ಸಿಬ್ಬಂದಿ ವಾಪಸ್ ಕಳಿಸಿದ್ರು. ಮತ್ತೊಂದು ಕಡೆ ಜ್ಯುವೆಲ್ಲರಿ ಧರಿಸಿ ಬಂದ ವಿದ್ಯಾರ್ಥಿನಿಯನ್ನೂ ಕೂಡ ವಾಪಸ್ ಕಳಿಸಲಾಯ್ತು. ನಂತರ ಎಲ್ಲವನ್ನೂ ತೆಗೆದು ಹಾಕಿ ವಾಪಸ್‌ ಬಂದಾಗ ಅವಕಾಶ ಕೊಡಲಾಯ್ತು.

ಬೆಂಗಳೂರಿನಲ್ಲಿ ಮೂವರಿಗೆ ನೀಟ್‌ ಎಕ್ಸಾಂ ಮಿಸ್ ಆಯ್ತು. RC ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಮಾಗಡಿ ಮೂಲದ ವಿದ್ಯಾರ್ಥಿನಿ ತಡವಾಗಿ ಆಗಮಿಸಿದ್ರು ಅನ್ನೋ ಕಾರಣಕ್ಕೆ NEET ಪರೀಕ್ಷೆಗೆ ಅವಕಾಶ ಕೊಡಲಿಲ್ಲ. ಈ ವೇಳೆ ಗೇಟ್ ಓಪನ್ ಮಾಡದ ಕಾರಣಕ್ಕೆ ವಿದ್ಯಾರ್ಥಿನಿ ಗೇಟ್ ಹಾರಿ ಹೋಗುವ ಪ್ರಯತ್ನ ಮಾಡಿದರೂ ಅವಕಾಶ ಸಿಗಲಿಲ್ಲ. ಪರೀಕ್ಷಾ ಕೇಂದ್ರಕ್ಕೆ ಸಿಬ್ಬಂದಿ ಬಿಡದನ್ನು ಖಂಡಿಸಿ ಕಾಲೇಜು ಗೇಟ್ ಎದುರು ಪೋಷಕರು ಕಿರುಚಾಡಿದ್ದಾರೆ. ಕಾಂಗ್ರೆಸ್‌ ಸಮಾವೇಶದಿಂದಲೇ ಟ್ರಾಫಿಕ್‌ ಸಮಸ್ಯೆ ಆಯ್ತು. ಅದರಿಂದಲೇ ಪರೀಕ್ಷೆಗೆ ತಡವಾಯ್ತು ಎಂದು ಪೋಷಕರು ಕಿಡಿಕಾರಿದ್ದಾರೆ.

ನೀಟ್​ ಪರೀಕ್ಷೆ ಹಿನ್ನೆಲೆ ಇವತ್ತು ಸೊಲ್ಲಾಪುರದ ಕಡೆ ಸಾಗುತ್ತಿದ್ದ ವಿದ್ಯಾರ್ಥಿಗಳು ಪರದಾಟ ನಡೆಸಿದ್ರು. ರೈಲಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ರಿಂದ ಕೆಲ ಕಾಲ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾದ್ರು. ಸುಮಾರು ಒಂದು ಗಂಟೆಯಿಂದ ರೈಲಿನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಪರಿಣಾಮ ವಿಧಿಯಿಲ್ಲದೆ ರೈಲು ಬಿಟ್ಟು ಬದಲಿ ವ್ಯವಸ್ಥೆ ಮೂಲಕ ನೀಟ್ ಪರೀಕ್ಷಾರ್ಥಿಗಳು ತೆರಳಿದ್ರು. ಹುಬ್ಬಳ್ಳಿಯ 10 ಕೇಂದ್ರಗಳಲ್ಲಿ 3,927 ಅಭ್ಯರ್ಥಿಗಳಿಂದ ಪರೀಕ್ಷೆ ಬರೆದಿದ್ದಾರೆ.

ದಾವಣಗೆರೆಯಲ್ಲಿ ನೀಟ್​​ ಮರು ಪರೀಕ್ಷೆ ಹಿನ್ನೆಲೆ ಪರೀಕ್ಷೆಗೆ ಆಗಮಿಸುವ ವಿದ್ಯಾರ್ಥಿಗಳ ಕೊರಳಲ್ಲಿ ಶಿವ ದಾರ, ರುದ್ರಾಕ್ಷಿ, ಜನಿವಾರವನ್ನ ತೆಗೆಸಲಾಗಿದೆ. ಕೊರಳಲ್ಲಿರೋ ಎಲ್ಲಾ ದಾರಗಳನ್ನು ವಿದ್ಯಾರ್ಥಿಗಳಿಂದಲೇ ತೆಗೆಸಿದ ಸಿಬ್ಬಂದಿ ವಿದ್ಯಾರ್ಥಿಗಳನ್ನ ಒಳ ಕಳಿಸಿದ್ದಾರೆ. ಸೊಂಟಕ್ಕೆ ಕಟ್ಟಿದ ಉಡದಾರವನ್ನೂ ಕೂಡ ಸಿಬ್ಬಂದಿ ಕತ್ತರಿಸಿ ಹಾಕಿದ್ದಾರೆ.

Related posts

ಜ್ಞಾನಭಾರತಿ ಆವರಣದಲ್ಲಿ ತಿಮ್ಮಕ್ಕ ಅಂತ್ಯಕ್ರಿಯೆ.. ವೃಕ್ಷಮಾತೆಯ ಕೊನೆ ಆಸೆ ಏನು ಗೊತ್ತಾ..?

Publicspot

HEAVY RAIN ALERT: ರಾಜ್ಯದಲ್ಲಿ ಮಳೆ ಆರ್ಭಟ.. 5 ಜಿಲ್ಲೆಗೆ ರೆಡ್ ಅಲರ್ಟ್‌

Publicspot

ಸ್ವಂತ ಜಮೀನಲ್ಲಿ ನಿಧಿ ಸಿಕ್ಕರೂ ಸರ್ಕಾರಕ್ಕೆ ಸೇರುತ್ತಾ..? ಕಾರಣವೇನು..?

Publicspot

ಆನೆ ದಾಳಿಗೆ ಇನ್ನೆಷ್ಟು ಬಲಿ ಬೇಕು..? ಸರ್ಕಾರಕ್ಕೆ ಯಾಕಿಲ್ಲ ಕಾಳಜಿ..?

Publicspot

ಕಸದ ಸಮಸ್ಯೆಗೆ ಸಿಗುತ್ತಾ ಪರಿಹಾರ..? ಕೃಷ್ಣಬೈರೇಗೌಡರು ಏನಂದ್ರು..?

Publicspot

CAG REPORT; ಜನರಿಗೆ ಗ್ಯಾರಂಟಿ ಕೊಡಲು ಸಾಲ ಮಾಡಿದ್ದಾರೆ ಸಿದ್ದರಾಮಯ್ಯ..!!

Publicspot