September 20, 2026
The Public Spot
ರಾಜ್ಯ

ರಾಜ್ಯದಲ್ಲಿ ಬೇಸಿಗೆ ಮಳೆ.. ಸಿಡಿಲಬ್ಬರಕ್ಕೆ ಜೀವ ಬಲಿ, ಮರ, ವಿಂಡ್‌ ಫ್ಯಾನ್‌‌ ಭಸ್ಮ..

ರಾಜ್ಯದಲ್ಲಿ ಹಲವೆಡೆ ಅಕಾಲಿಕ ಮಳೆಯಾಗಿದೆ. ಚಿಕ್ಕಮಗಳೂರಿನಲ್ಲಿ ವರುಣದೇವ ಅಬ್ಬರಿಸಿದ್ದು, ಆಲ್ದೂರು, ಕಣತಿ, ಮುತ್ತೋಡಿ ಭಾಗದಲ್ಲಿ ಭಾರೀ ಮಳೆಯಾಗಿದೆ. ಆಲಿಕಲ್ಲು ಸಹಿತ ಜೋರು ಮಳೆಯಾಗಿದ್ದು, ಬಿಸಿಲಿನಿಂದ ಕಾದು ಕೆಂಡವಾಗಿದ್ದ ಭೂಮಿಗೆ ವರುಣ ತಂಪೆರೆದಿದ್ದಾನೆ. ಹಾಸನದಲ್ಲೂ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಭಾರೀ ಮಳೆಗೆ ಮನೆ ಹಾಗೂ ರಸ್ತೆ ಬದಿಯಲ್ಲೆಲ್ಲ ರಾಶಿ ರಾಶಿ ಆಲಿಕಲ್ಲು ಬಿದ್ದಿದ್ದವು. ನಿನ್ನೆ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಆಲಿಕಲ್ಲು ಮಳೆ ನೋಡಿ ಮಕ್ಕಳು ಸಖತ್ ಎಂಜಾಯ್ ಮಾಡಿದ್ದಾರೆ. ಆದರೆ ದಿಢೀರ್ ಎಂದು ಸುರಿದ ಮಳೆಯಿಂದ ವಾಹನ ಸವಾರರು ಪರದಾಡುವಂತಾಯ್ತು.

ಮೈಸೂರು ಜಿಲ್ಲೆಯಲ್ಲೂ ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಬಿರು ಬಿಸಿಲಿನ ಮಧ್ಯೆ ಆಲಿಕಲ್ಲು ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇತ್ತ ಪಿರಿಯಾಪಟ್ಟಣ ತಾಲೂಕಿನ ಅಲ್ಪನಾಯಕನಹಳ್ಳಿಯಲ್ಲಿ ಸಿಡಿಲು ಬಡಿತಕ್ಕೆ ಮರವೊಂದು ಹೊತ್ತಿ ಉರಿದಿದೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಾದ್ಯಂತ ಸಿಡಿಲು ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಆದ್ರೆ ಯಂಬಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ವಿಂಡ್ ಫ್ಯಾನ್ ಹೊತ್ತಿ ಉರಿದಿದೆ. ಹಾವೇರಿ ಜಿಲ್ಲೆಯ ಹಲವೆಡೆ ಅಲ್ಲಿಕಲ್ಲು ಸಹಿತ ಮಳೆಯಾಗಿದೆ. ರಾಣೇಬೆನ್ನೂರು, ಹಾನಗಲ್ ಸೇರಿದಂತೆ ವಿವಿಧೆಡೆ ಮಳೆರಾಯ ಅಬ್ಬರಿಸಿದ್ದಾನೆ. ಮನೆಯ ಅಂಗಳದಲ್ಲಿ ಆಲಿಕಲ್ಲುಗಳು ತುಂಬಿದ್ದು, ಬೇಸಿಗೆಯಲ್ಲಿ ಸುಟ್ಟು ಸುಣ್ಣವಾಗಿದ್ದ ಜನರಿಗೆ ಅಲ್ಲಿಕಲ್ಲು ಮಳೆಯಿಂದ ತಣ್ಣಗೆ ಆಗುವಂತೆ ಮಾಡಿದೆ.

ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಪುತ್ತೂರಿನಾದ್ಯಂತ ಗುಡುಗು ಸಹಿತ ಭಾರೀ ಮಳೆ-ಗಾಳಿ ಆಗಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ವಾಹನ ಸವಾರರು ಮತ್ತು ಜನ ಕೊಂಚ ಪರದಾಡುವಂತಾಯ್ತು. ಒಮ್ಮೆಲೇ ಸುರಿದ ಮಳೆಯಿಂದಾಗಿ ಬಿಸಿಲಿನಲ್ಲಿ ಒಣಗಲು ಹಾಕಿದ್ದ ಅಡಿಕೆಯೂ ಕೆಲವು ಕಡೆಗಳಲ್ಲಿ ಮಳೆ ನೀರಿನಿಂದ ತೊಯ್ದು ಹೋಗಿದೆ. ಭಾರೀ ಗುಡುಗು, ಗಾಳಿಯಿಂದಾಗಿ ಪುತ್ತೂರು ನಗರದಲ್ಲಿ ವಿದ್ಯುತ್ ಪೂರೈಕೆಯೂ ಸ್ಥಗಿತಗೊಂಡಿತ್ತು. ದಾವಣಗೆರೆ ನಗರದಾದ್ಯಂತ ಭರ್ಜರಿ ಮಳೆಯಾಗಿದೆ. ಸತತ ಒಂದು ಗಂಟೆಗಳ ಕಾಲ ಸುರಿದ ಮಳೆಗೆ ವಾಹನ ಸವಾರರು ಹೈರಾಣಾದ್ರು. APMC ರೈಲ್ವೆ ಬ್ರಿಡ್ಜ್ ಬಳಿ ರಸ್ತೆಯಲ್ಲಿ ನೀರು ನಿಂತಿದ್ದು ಸಂಚರಿಸಲಾಗಿದೆ ಪರದಾಡಿದ್ರು.

ಕೊಪ್ಪಳ ಜಿಲ್ಲೆಯಾದ್ಯಂತ ಮಳೆ ಆರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಒಂದ್ಕಡೆ ಆಲಿಕಲ್ಲು ಮಳೆಯ ಅಬ್ಬರ, ಮತ್ತೊಂದ್ಕಡೆ ಗುಡುಗು – ಸಿಡಿಲು ಬಡಿತಕ್ಕೆ ಬಾಲಕ ಬಲಿಯಾಗಿದ್ದಾನೆ. ಯಲಬುರ್ಗಾ ತಾಲೂಕಿನ ಜರಕುಂಟಿಯಲ್ಲಿ 15 ವರ್ಷದ ಮಂಜುನಾಥ ಮುದೇಗೌಡ ಎಂಬಾತನಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಮಂಡ್ಯ ಜಿಲ್ಲೆಯ ಗಡಿ ಜಿಲ್ಲೆಗಳಲ್ಲೂ ಮಳೆಯಾಗುತ್ತಿದ್ದು, ಕೆ.ಆರ್‌ ಪೇಟೆ, ನಾಗಮಂಗಲ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Related posts

ಚುಂಚನಗಿರಿ ಶ್ರೀಗಳು ದಾರಿ ತಪ್ಪಿದ್ದಾರೆ ಎಂದು ಕ್ಷಮೆ ಕೇಳಿದ ಶಾಸಕ..!

Publicspot

ಕುರುಬರಿಗೆ ಎಸ್ಟಿ ಮೀಸಲಾತಿ ಕೇಂದ್ರ ವಾಪಸ್‌ ಕಳುಹಿಸಿದೆ.. ನಾನು ಮತ್ತೆ ಕಳುಹಿಸುತ್ತೇನೆ..

Publicspot

Police Constable; ವಯೋಮಿತಿ ಹೆಚ್ಚಿಸಿ.. ಪೊಲೀಸ್​ ನೇಮಕಾತಿ ಮಾಡಿ.. ಆಕಾಂಕ್ಷಿಗಳ ಆಗ್ರಹ..

Publicspot

ನಾಳೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆ ಆಗುತ್ತಾ..? ಇಲ್ವಾ..? ಕಾಂಗ್ರೆಸ್‌-ಬಿಜೆಪಿ ಇಬ್ಬರಿಗೂ ಮನಸ್ಸಿಲ್ವಾ..?

Publicspot

ಸ್ವಂತ ಜಮೀನಲ್ಲಿ ನಿಧಿ ಸಿಕ್ಕರೂ ಸರ್ಕಾರಕ್ಕೆ ಸೇರುತ್ತಾ..? ಕಾರಣವೇನು..?

Publicspot

ಲಂಕೇಶ್ ಅವರನ್ನು ರೂಪಿಸಿದ್ದು ಅವರ ಬಹುರೂಪಿ ಓದು. ತನ್ನ ಕಾಲಮಾನದ ಎಲ್ಲಾ ವಯೋಮಾನದವರ ಬರವಣಿಗೆ

admin