The Public Spot
ರಾಜ್ಯ

ಬಂಗಾಳದಲ್ಲಿ ಬಿಜೆಪಿ, ತಮಿಳುನಾಡಲ್ಲಿ ವಿಜಯ್‌ಗಿಲ್ಲ ಅಧಿಕಾರ.. ಚಾಣಕ್ಯ ಸಮೀಕ್ಷೆ

ಪಶ್ಚಿಮ ಬಂಗಾಳದಲ್ಲಿ ಗದ್ದುಗೆ ಏರೋದು ಯಾರು ಅನ್ನೋ ಬಗ್ಗೆ ಟುಡೇಸ್‌ ಚಾಣಕ್ಯ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದ್ದು, ಮೋದಿ ನೇತೃತ್ವದ ಬಿಜೆಪಿ ಭಾರೀ ಬಹುಮತ ಪಡೆಯುತ್ತದೆ ಎಂದು ಸಮೀಕ್ಷೆ ಹೇಳಿದೆ. ಬಿಜೆಪಿ 181 ರಿಂದ 192 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗಿದೆ. ಇನ್ನು TMC ಕೂಡ 91 ರಿಂದ 100 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಇದ್ದು, ಇತರರು 2 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಪಕ್ಕಾ ಮಾಹಿತಿಗಾಗಿ ಚುನಾವಣೆ ಮುಗಿದ 24 ಗಂಟೆಗಳ ಬಳಿಕ ಟುಡೇಸ್‌ ಚಾಣಕ್ಯ ಎಕ್ಸಿಟ್‌ ಪೋಲ್‌ ಪ್ರಕಟಿಸಿದೆ.

ಟುಡೇಸ್‌ ಚಾಣಾಕ್ಯ ಸಮೀಕ್ಷೆ ಪ್ರಕಾರ ತಮಿಳುನಾಡಿನಲ್ಲಿ ಡಿಎಂಕೆ ಮತ್ತೆ ಸರ್ಕಾರ ರಚನೆ ಮಾಡಲಿದ್ದು, ವಿಜಯ್‌‌ ವಿಪಕ್ಷ ಸ್ಥಾನದಲ್ಲಿ ಕೂರಲಿದೆ ಎಂದು ಸಮೀಕ್ಷೆ ಹೇಳಿದೆ. ಒಟ್ಟು 234 ಕ್ಷೇತ್ರಗಳಲ್ಲಿ ಸರ್ಕಾರ ರಚಿಸಲು ಬೇಕಾಗಿರೋ ಮ್ಯಾಜಿಕ್​​ ನಂಬರ್‌ 118 ಡಿಎಂಕೆ ಪಡೆಯಲಿದ್ದು, ಬಿಜೆಪಿ – AIADMK ಮೈತ್ರಿಕೂಟಕ್ಕೆ 34 ರಿಂದ 45 ಸೀಟು ಸಿಗಬಹುದು ಎಂದಿದೆ.. DMK 114 ರಿಂದ 125 ಕ್ಷೇತ್ರಗಳಲ್ಲಿ ಗೆಲ್ಲಬಹುದು..ಇನ್ನು ಮೊದಲ ಬಾರಿಗೆ ತಮಿಳುನಾಡು ರಾಜಕೀಯಕ್ಕೆ ಇಳಿದು ಧೂಳೆಬ್ಬಿಸ್ತಿರೋ ನಟ ವಿಜಯ್‌ ನೇತೃತ್ವದ TVK ಪಕ್ಷ 52 ರಿಂದ 63 ಕ್ಷೇತ್ರಗಳನ್ನ ಗೆದ್ದು ವಿಪಕ್ಷ ಸ್ಥಾನದಲ್ಲಿ ಕೂರಲಿದೆ ಎಂದಿದೆ ಟುಡೇ ಚಾಣಾಕ್ಯ ಸಮೀಕ್ಷೆ.

ಕೇರಳಂನಲ್ಲಿ ಒಟ್ಟು 140 ಸ್ಥಾನಗಳ ಪೈಕಿ, ಸರ್ಕಾರ ರಚಿಸಲು ಬೇಕಾಗಿರೋ ಮ್ಯಾಜಿಕ್​​ ನಂಬರ್‌ 71.. ಈ ಸಲ ಕೇರಳಂನಲ್ಲಿ ಕಾಂಗ್ರೆಸ್‌‌ ಮೈತ್ರಿಕೂಟ UDF 60 ರಿಂದ 69 ಸ್ಥಾನ ಗೆಲ್ಲಲಿದೆ ಎಂದು ಚಾಣಕ್ಯ ಸಮೀಕ್ಷೆ ಹೇಳಿದೆ. ಇನ್ನೂ BJP ಮೈತ್ರಿಕೂಟ ಕೇರಳದಲ್ಲಿ 3 ರಿಂದ 7 ಕ್ಷೇತ್ರ ಗೆಲ್ಲಬಹುದು.. ಅದೇ ರೀತಿ LDF 55 ರಿಂದ 64 ಕ್ಷೇತ್ರದಲ್ಲಿ ಗೆಲ್ಲಲಿದೆ. ಇತರರು 1 ಕ್ಷೇತ್ರದಲ್ಲಿ ಗೆಲ್ಲಬಹುದು ಅಂತಾ ಟುಡೇಸ್‌ ಚಾಣಾಕ್ಯ ಸಮೀಕ್ಷೆ ಹೇಳಿದೆ.

ಅಸ್ಸಾಂನಲ್ಲಿ 126 ಕ್ಷೇತ್ರಗಳ ಪೈಕಿ ಸರ್ಕಾರ ರಚಿಸಲು 63 ಮ್ಯಾಜಿಕ್​​ ನಂಬರ್‌ ಬೇಕಿದ್ದು, ಟುಡೇಸ್‌ ಚಾಣಾಕ್ಯ ಎಕ್ಸಿಟ್‌ ಪೋಲ್‌ ಪ್ರಕಾರ ಅಸ್ಸಾಂನಲ್ಲಿ BJP ಮೈತ್ರಿಕೂಟವೇ ಮತ್ತೆ ಸರ್ಕಾರ ರಚಿಸಲಿದೆ. ಯಾಕಂದ್ರೆ ಸಮೀಕ್ಷೆಗಳಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 93 ರಿಂದ 102 ಸೀಟು ಸಿಕ್ಕಿದೆ.. ಕಾಂಗ್ರೆಸ್‌‌ ಮತ್ತು ದೋಸ್ತಿಗಳಿಗೆ ಅಸ್ಸಾಂನಲ್ಲಿ 14 ರಿಂದ 23 ಸ್ಥಾನ ಸಿಗಬಹುದು.. ಇತರರು 1 ಕಡೆ ಗೆಲ್ಲಬಹುದು ಎನ್ನಲಾಗಿದೆ.

Related posts

Caste Census Issue: ಜಾತಿ ಜನಗಣತಿ ಆರಂಭಕ್ಕೂ ಮುನ್ನವೇ ಶುರುವಾಯ್ತು ಗೊಂದಲ

Publicspot

Rain Alert: ರಾಜ್ಯದಲ್ಲಿ ಎರಡು ದಿನ ಮಳೆಯಬ್ಬರ.. ಯಾವೆಲ್ಲಾ ಜಿಲ್ಲೆಗಳಿಗೆ ಅಲರ್ಟ್‌..!?

Publicspot

ಹೈಕೋರ್ಟ್‌ ಆದೇಶಕ್ಕೆ ಮಣಿದ ಸರ್ಕಾರ.. ನಾಳೆಯೇ SSLC ರಿಸಲ್ಟ್‌

Publicspot

ಲಂಕೇಶ್ ಅವರ ಅಧ್ಯಯನಶೀಲತೆ ಮಾದರಿಯಾಗಲಿ: ಪತ್ರಕರ್ತರ ಮಕ್ಕಳಿಗೆ ಕೆವಿ ಪ್ರಭಾಕರ್ ಕರೆ

admin

ಹಿಂದೂ ಅನ್ನೋ ಧರ್ಮ ಇಲ್ಲ.. ಲಿಂಗಾಯತ ಸ್ವಾಮೀಜಿಗಳ ನೇರಮಾತು..!!

Publicspot

ಕಬ್ಬು ತುಂಬಿದ ಟ್ರಾಕ್ಟರ್‌ಗಳಿಗೆ ಬೆಂಕಿ.. ಕಚ್ಚಿದ್ಯಾರು..? ASP ಕಾಲು ಮುರಿದಿದ್ಯಾರು..?

Publicspot