ಕಲಬುರಗಿ ಜಿಲ್ಲೆ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ RSS ಹಾಗೂ ದಲಿತ ಸಂಘಟನೆಗಳ ನಡುವೆ ಸಮರವೇ ಏರ್ಪಟ್ಟಂತೆ ಕಾಣ್ತಿದೆ. ಈ ಹಿಂದೆ RSS ಪಥಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಆ ಬಳಿಕ RSS ಮುಖಂಡರು ಹೈಕೋರ್ಟ್ ಮೆಟ್ಟಿಲೇರಿದ ಬಳಿಕ ಅನುಮತಿ ನೀಡುವ ಬಗ್ಗೆ ಹೈಕೋರ್ಟ್ ಸಲಹೆ ನೀಡಿತ್ತು. ಶಾಂತಿ ಸಾಮರಸ್ಯಕ್ಕೆ ಸಮಸ್ಯೆ ಆಗುತ್ತೆ ಅನ್ನೋ ಕಾರಣಕ್ಕೆ ಅನುಮತಿ ನಿರಾಕರಿಸಲಾಗಿತ್ತು ಅನ್ನೋದು ಸರ್ಕಾರದ ವಾದ. ಆದರೆ RSS ಪಥಸಂಚಲನಕ್ಕೆ ಮನವಿ ಮಾಡಿದ ದಿನವೇ ಭೀಮ್ ಆರ್ಮಿ ಹಾಗೂ ದಲಿತ ಸಂಘಟನೆಗಳು ಪಥ ಸಂಚಲನಕ್ಕೆ ನಿರ್ಧಾರ ಮಾಡಿದ್ದವು. ಇದೀಗ ಮತ್ತೆ ನವೆಂಬರ್ 2ರಂದು RSS ಪಥ ಸಂಚಲನ ಕಾರ್ಯಕ್ರಮಕ್ಕೆ ಮನವಿ ಮಾಡಿದ್ದು, ಅದರ ಬೆನ್ನಲ್ಲೇ ಭೀಮ್ ಆರ್ಮಿ ಹಾಗೂ ದಲಿತ ಸಂಘಟನೆಗಳು ಪಥಸಂಚಲನಕ್ಕೆ ಅರ್ಜಿ ಹಾಕಿದ್ದಾರೆ. ಇದೊಂದು ರೀತಿಯ ಸಂಘರ್ಷಕ್ಕೆ ಕಾರಣವಾಗುವ ಸನ್ನಿವೇಶ ನಿರ್ಮಾಣ ಮಾಡಲಾಗ್ತಿದೆ.

ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ವಿಚಾರ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಿವಾಗ್ತಿದೆ. ಅಷ್ಟೇ ಅಲ್ಲದೆ ಬೆದರಿಕೆ ಕರೆಗಳು ಬಂದಿದ್ದವು ಅನ್ನೋ ಆರೋಪದ ಬೆನ್ನಲ್ಲೇ ಮಹಾರಾಷ್ಟ್ರ ಮೂಲದ ವ್ಯಕ್ತಿಯ ಬಂಧನ ಮಾಡಲಾಗಿತ್ತು. ಇದೀಗ ರಾಜ್ಯ ಸರ್ಕಾರ ಪ್ರಿಯಾಂಕ್ ಖರ್ಗೆಗೆ ಬೆಂಗಾವಲು ಪಡೆ ನೀಡಿದೆ. ಗುಪ್ತಚರ ಇಲಾಖೆ ಮಾಹಿತಿಯಂತೆ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ. ಪ್ರಿಯಾಂಕ್ ಖರ್ಗೆ ಎಸ್ಕಾರ್ಟ್ ಸೌಲಭ್ಯ ತಿರಸ್ಕರಿಸಿದ್ದು, ಮನೆ ಬಳಿಯೇ ಬೆಂಗಾವಲು ವಾಹನ ನಿಲ್ಲಿಸಲಾಗಿದೆ. RSS ಪಥ ಸಂಚಲನಕ್ಕೆ ಅನುಮತಿ ಕೇಳಿರೋ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ಕೊಟ್ಟಿದ್ದು.ಲ ವಾತಾವರಣ ಚೆನ್ನಾಗಿದ್ದರೆ ಪಥಸಂಚಲನ ಮಾಡಲಿ. ಮೊನ್ನೆ ದಲಿತ ಸಂಘಟನೆಗಳೂ ಅನುಮತಿ ಕೇಳಿವೆ. ಮಾನದಂಡ ಎಲ್ಲರಿಗೂ ಅನ್ವಯ ಆಗುತ್ತದೆ. ಮುಂಚೆಯಿಂದಲೂ ನಾವು ಆರ್‌ಎಸ್‌ಎಸ್‌ಗೆ ಟಾರ್ಗೆಟ್ ಆಗಿದ್ದೇವೆ. ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜು ಖರ್ಗೆ, ಡಿಸಿಎಂ ಡಿ.ಕೆ ಶಿವಕುಮಾರ್ ಸಾಹೇಬ್ರು ಎಲ್ಲರು ಟಾರ್ಗೆಟ್ ಆಗಿದ್ದೇವೆ ಎಂದಿದ್ದಾರೆ.

ಕರ್ನಾಟಕ ಬಿಜೆಪಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ಟ್ವೀಟ್ ವಾರ್ ಮುಂದುವರಿದಿದೆ. ಈ ಮಧ್ಯೆ ಹಳೆಯ ವಿಡಿಯೋ ಒಂದನ್ನು ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಕೇಂದ್ರ ಸಚಿವ ದಿ.ಅನಂತ್ ಕುಮಾರ್ ನಡುವಿನ ಸಂಭಾಷಣೆ ಬಹಿರಂಗಪಡಿಸಿದ್ದಾರೆ. ಇದ್ರಲ್ಲಿ ಇಬ್ಬರು ನಾಯಕರು ಹೈಕಮಾಂಡ್ ಕಾಣಿಕೆ ಬಗ್ಗೆ ಮಾತನಾಡಿದ್ದಾರೆ. ಈ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ವಿಡಿಯೋ ಪೋಸ್ಟ್‌ಗೆ ಐಶ್ವರ್ಯ ಅನಂತ್ ಕುಮಾರ್ ಟಾಂಗ್ ಕೊಟ್ಟಿದ್ದಾರೆ. ಅನಂತ ಕುಮಾರ್ ಕೆಲಸವನ್ನ ನಿಮ್ಮ ಪಕ್ಷದ ನಾಯಕರೇ ಮೆಚ್ಚಿದ್ದಾರೆ. ಇದನ್ನು ನೀವು ಮರೆತಂತೆ ಕಾಣುತ್ತಿದೆ. ವಿಡಿಯೋದಲ್ಲಿನ ಚರ್ಚೆಯ ಹಿನ್ನೆಲೆ ಮೊದಲು ತಿಳಿದುಕೊಳ್ಳಿ. ನೆನಪಿಟ್ಟುಕೊಳ್ಳಿ ಸತ್ಯ ಯಾವತ್ತೂ ಹೊರಗಡೆ ಬಂದೇ ಬರುತ್ತದೆ ಅಂತ ಕೌಂಟರ್ ಮಾಡಿದ್ದಾರೆ. ಅನಂತ್ ಕುಮಾರ್ ಪುತ್ರಿ ಐಶ್ವರ್ಯಾ ಪೋಸ್ಟ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಅವರು ರಾಜಕೀಯದಲ್ಲಿ ಇದ್ದಾರೋ ಇಲ್ವೋ ಗೊತ್ತಿಲ್ಲ. ವಿಡಿಯೋದಲ್ಲಿ ಅನಂತ್ ಕುಮಾರ್ ಇದ್ದಾರೆ. ಅದು ಯಾರ ಧ್ವನಿ ಅಂತ FSL ರಿಪೋರ್ಟ್ ಇದೆ. ಬಿಜೆಪಿ ನಾಯಕರು ಅವರ ಕುಟುಂಬದ ಬಗ್ಗೆ ಹೇಗೆ ನಡೆದುಕೊಂಡ್ರು ಅನ್ನೋದು ಗೊತ್ತಿದೆ. ಈ ಬಗ್ಗೆ ಜನರೇ ಚರ್ಚೆ ಮಾಡ್ತಿದ್ದಾರಲ್ವಾ..? ಅಂತ ಸಮರ್ಥನೆ ಮಾಡ್ಕೊಂಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಶಾಸಕ ಆಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ. ಪ್ರಿಯಾಂಕ್ ಖರ್ಗೆ ಅಂದ್ರೆ ಎಡವಟ್ಟು ಅಲ್ವಾ..? ಆತುರ ಆತುರದಿಂದ ಯಡವಟ್ಟು ಮಾಡ್ತಿದ್ದಾರೆ. ಇದ್ರಿಂದ ಕಾಂಗ್ರೆಸ್ ಪಕ್ಷವೂ ಎಡವಟ್ಟಲ್ಲಿ ಸಿಲುಕಿ ಹಾಕಿಕೊಳ್ಳುತ್ತದೆ. ನಿಮ್ಮ ಪಕ್ಷದ ಭ್ರಷ್ಟಾಚಾರದ ಬಗ್ಗೆ ಸಿದ್ದರಾಮಯ್ಯ ಏನ್ ಹೇಳಿದ್ರು..? ಅನ್ನೋದನ್ನ ಅನಂತ್ ಕುಮಾರ್ ಅವರು ಯಡಿಯೂರಪ್ಪನವರಿಗೆ ಹೇಳಿದ್ದಾರೆ ಎಂದಿದ್ದಾರೆ. RSSಗೆ ದುಡ್ಡು ಎಲ್ಲಿಂದ ಬರುತ್ತೆ..? ರಿಜಿಸ್ಟರ್ ಆಗಿದ್ಯಾ..? ಅಂತ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಕೌಂಟರ್ ಕೊಟ್ಟಿದ್ದು, ಪ್ರಿಯಾಂಕ್ ಖರ್ಗೆ ಅವರೆ RSS ಹೆಸರಲ್ಲಿರುವ ಒಂದು ಬಿಲ್ಡಿಂಗ್ ಇದ್ರೆ ಹುಡ್ಕೊಂಡು ಬನ್ನಿ. RSS ಹೆಸರಲ್ಲಿ ಆಸ್ತಿ ಇಲ್ಲ. ಅವರು ದೇಶಕ್ಕಾಗಿ ಜೀವವನ್ನೇ ಸಮರ್ಪಣೆ ಮಾಡುವ ಪ್ರಚಾರಕರು. ನಿಮ್ಮ ಕುಟುಂಬದ ಆಸ್ತಿ ಬಗ್ಗೆ ಕೇಳಿದ್ರೆ ಉತ್ತರ ಇಲ್ಲ ಅಂತ ಕಿಡಿಕಾರಿದ್ದಾರೆ.
ಇದೆಲ್ಲಾ ವಾಗ್ವಾದಗಳ ನಡುವೆ ನವೆಂಬರ್ 2ರಂದು ಚಿತ್ತಾಪುರದಲ್ಲಿ ಭೀಮ್ ಆರ್ಮಿ ಱಲಿಗೆ ನಮ್ಮ ತಕರಾರಿಲ್ಲ. ಜಿಲ್ಲಾಡಳಿತ ಅನುಮತಿ ಕೊಟ್ಟ ದಿನದಂದು ಆರ್‌ಎಸ್‌ಎಸ್ ಪಥ ಸಂಚಲನ ನಡೆಸಲಿದೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಉದ್ದೇಶವೇ ಬೇರೆ ಇದೆ. ಪ್ರಚಾರ ಪಡೆಯಲು ಹೀಗೆ ಮಾಡುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ. ನವೆಂಬರ್ 2 ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಸಜ್ಜಾಗಿದೆ. ಇದಕ್ಕೆ ಕೌಂಟರ್ ಕೊಡಲು ದಲಿತ ಸಂಘಟನೆ ಎಂಟ್ರಿ ಕೊಟ್ಟಿದೆ. ನವೆಂಬರ್ 2ರಂದೇ ನಾವು ಪಥಸಂಚಲನ ಮಾಡ್ತೀವಿ ಅಂತ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಮುಂದಾಗಿದೆ. ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ನೇತೃತ್ವದಲ್ಲಿ ಡಿಸಿ ಬಿ ಫೌಜಿಯಾ ತರನ್ನುಮ್‌ಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ಸಂವಿಧಾನ ಪೀಠಿಕೆ, ನೀಲಿ ಶಾಲು ಧರಿಸಿ ಪಥಸಂಚಲನಕ್ಕೆ ದಲಿತ ಪ್ಯಾಂಥರ್ ನಿರ್ಧಾರ ಮಾಡಿದೆ. ಅನುಮತಿ ಕೊಡದಿದ್ರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತ ಆಡಳಿತವೇ ಹೊಣೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.


