The Public Spot
ರಾಜಕೀಯ

ಉತ್ತರ ಬೇಕಾದವರು ಈ ಪ್ರಶ್ನೆಗಳಿಗೆ ಉತ್ತರಿಸಿ.. ಸಂತೋಷ್​ ಲಾಡ್ ಸವಾಲು..!​​

ದೆಹಲಿ ಬಾಂಬ್ ಸ್ಫೋಟ ವಿಚಾರವಾಗಿ ಮಂಡ್ಯದಲ್ಲಿ ಸಚಿವ ಸಂತೋಷ್ ಲಾಡ್ ಮಾತನಾಡಿದ್ದಾರೆ. ಕಳೆದ 10ವರ್ಷದಲ್ಲಿ 25 ಬಾಂಬ್ ಸ್ಫೋಟ ಪ್ರಕರಣಗಳು ನಡೆದಿವೆ. ಪುಲ್ವಾಮ, ಪೆಹಲ್ಗಾಮ್ ಸೇರಿದಂತೆ ಹಲವು ದೊಡ್ಡ ದೊಡ್ಡ ಸ್ಫೋಟಗಳಾಗಿದೆ. ಈ ಸಂಧರ್ಭದಲ್ಲಿ ನಾವು ಕೇಂದ್ರ ಸರ್ಕಾರದ ಜೊತೆಗಿದ್ದೇವೆ. ಈಗ ರಾಜಕೀಯ ಮಾತನಾಡಲ್ಲ ಎಂದಿದ್ದಾರೆ. ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಮಾತನಾಡಿ, ಶೇಮ್ ಆನ್ ಸಿಸ್ಟಮ್ ಎಂದಿರುವ ಸಂತೋಷ್​ ಲಾಡ್​, ದಕ್ಷ ಅಧಿಕಾರಿಗಳನ್ನ ನೇಮಕ ಮಾಡಬೇಕು, ಭ್ರಷ್ಟರ ವಿರುದ್ಧ ಕ್ರಮ ಆಗಬೇಕು. ಎಲ್ಲೋ ಒಂದು ಕಡೆ ಈ ರೀತಿ ಆದರೆ ಸರ್ಕಾರವನ್ನೇ ಬ್ಲೇಮ್ ಮಾಡಲು ಆಗುತ್ತಾ..? ಎಂದು ಪ್ರಶ್ನಿಸಿದ್ದಾರೆ.

ಜೈಲು ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಹೊಣೆ ಮಾಡೋದಾದರೆ ದೆಹಲಿ ಸ್ಫೋಟ ವಿಚಾರದಲ್ಲಿ ಕೇಂದ್ರ ಸರ್ಕಾರ ಹೊಣೆ ಹೊರುತ್ತಾ..? ಎಂದು ಪ್ರಶ್ನೆ ಮಾಡಿದ್ದಾರೆ. ಇಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೇಳುವವರು, ನರೇಂದ್ರ ಮೋದಿ ರಾಜೀನಾಮೆ ಕೇಳ್ತಾರ..? ಎಂದು ತಿರುಗೇಟು ನೀಡಿದ್ದಾರೆ. ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಾಮೂಹಿಕ ನಮಾಜ್ ಮಾಡಿರುವ ವಿಚಾರವಾಗಿ ಮಾತನಾಡಿ, ಏರ್‌ಪೋರ್ಟ್ ನಿರ್ವಹಣೆ ಮಾಡುವುದು ಕೇಂದ್ರ ಸರ್ಕಾರ. ಇದನ್ನೆಲ್ಲಾ ಕೇಂದ್ರ ಸರ್ಕಾರ ಕಂಟ್ರೋಲ್ ಮಾಡಬೇಕು. ಏರ್‌ಪೋರ್ಟ್‌ನಲ್ಲಿ ನಮಾಜ್ ಮಾಡಲು ಅನುಮತಿ ಕೊಟ್ಟಿದ್ಯಾರು..? ಅಕ್ರಮ ಮದರಸಗಳಿದ್ದರೆ ದೂರು ನೀಡಲಿ. ದೂರು ಕೊಟ್ಟಿದ್ದರೆ, ತನಿಖೆ ನಡೆಯಲು ಸಮಯ ತೆಗೆದುಕೊಳ್ಳುತ್ತದೆ. ತಾಲಿಬಾನ್ ಸಚಿವ ಭಾರತದಲ್ಲಿ ಸುದ್ದಿಗೋಷ್ಠಿ ನಡೆಸುವಾಗ ಹೆಣ್ಣು ಮಕ್ಕಳು ಇರಬಾರದು ಅಂತಾನೆ. ಅದನ್ನ ಕೇಂದ್ರ ಸರ್ಕಾರ ಒಪ್ಪುತ್ತದೆ. ಆಪರೇಷನ್​ ಸಿಂದೂರ್, ಹೆಣ್ಣುಮಕ್ಕಳ ಗೌರವ ಅಂದವರು ಎಲ್ಲಿ ಹೋದರು..? ನಿಮ್ಮ ಅಕ್ಕತಂಗಿಯರು ಪ್ರೆಸ್‌ಮೀಟ್‌ಗೆ ಬರಬಾರದು ಎಂದರಲ್ಲ, ಆಗ ಅವಮಾನ ಆಗಲಿಲ್ವ ದೇಶಕ್ಕೆ..? ಎಂದು ಪ್ರಶ್ನೆಗಳ ಸರಮಾಲೆಯನ್ನೇ ಮುಂದಿಟ್ಟಿದ್ದಾರೆ.

ಕಳೆದ ಹತ್ತು ವರ್ಷದಲ್ಲಿ ಯಾವ ಹಿಂದೂಗಳನ್ನು ಉದ್ಧಾರ ಮಾಡಿದ್ದೀರಿ..? ಎಂದಿರುವ ಸಚಿವ ಸಂತೋಷ್​ ಲಾಡ್​, ಸಗಣಿ, ಉಚ್ಚೆ ಅನ್ನೋದನ್ನ ಬಿಟ್ಟು ಇನ್ನೇನು ಮಾತನಾಡಿದ್ದೀರ..? ಕಾಫಿ, ಟೀ ಯಾಕೆ ಕುಡಿಸುತ್ತೀರಾ..? ಉಚ್ಚೆಯನ್ನೇ ಕುಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲಿ ರಾಜ್ಯಾತಿಥ್ಯ ವಿಚಾರವಾಗಿ ಬಿಜೆಪಿ ಪ್ರೋಟೆಸ್ಟ್ ಅನ್ನೋದನ್ನು ಸಂತೋಷ್​ ಲಾಡ್ ಸ್ವಾಗತ ಮಾಡಿದ್ದಾರೆ. ಆರ್​. ಅಶೋಕ್ ಪ್ರತಿಭಟನೆ ಮಾಡೋದು ಸರಿ ಇದೆ. ಆದರೆ ಈಗ ದೆಹಲಿಯಲ್ಲಿ ಬ್ಲಾಸ್ಟ್ ಆಗಿದ್ಯಲ್ಲ ಅದೇನು ಮಾಡ್ತಾರೆ..? ಸಿದ್ದರಾಮಯ್ಯ, ಪರಮೇಶ್ವರ್ ಯಾಕೆ ಉಗ್ರರಿಗೆ ಪ್ರೋತ್ಸಾಹ ಕೊಡ್ತಾರೆ..? ಪ್ರೋತ್ಸಾಹ ಕೊಟ್ಟರೆ ಏನು ಅನುಕೂಲ ಆಗುತ್ತದೆ..? ನಾವು ಪ್ರೋತ್ಸಾಹ ಕೊಟ್ಟಿರುವುದಕ್ಕೆ ಏನಾದರೂ ಮಾಹಿತಿ, ವಿಟ್ನೇಸ್ ಇದ್ಯಾ..? ಎಂದು ಮರು ಪ್ರಶ್ನೆ ಎಸೆದಿದ್ದಾರೆ.

ಜೈಲಲ್ಲಿ ಯಾರೋ ಸಿಬ್ಬಂದಿ ಉಗ್ರನಿಗೆ ಸವಲತ್ತು ಕೊಟ್ಟ ಮಾತ್ರಕ್ಕೆ ಕಾಂಗ್ರೆಸ್​ ಉಗ್ರರಿಗೆ ಸಪೋರ್ಟ್​ ಮಾಡುತ್ತೆ ಎನ್ನುವುದಾದರೆ, ದೆಹಲಿಯಲ್ಲಿ ಆಗಿರುವ ಬಾಂಬ್ ಬ್ಲಾಸ್ಟ್​ಗೆ ಯಾರು ಪ್ರೋತ್ಸಾಹ ಕೊಟ್ಟವರು..? ಅಶೋಕಣ್ಣ ಸಪೋರ್ಟ್​ ಕೊಟ್ಟಿದ್ದಾರಾ..? ಎಂದಿರುವ ಸಂತೋಷ್​ ಲಾಡ್, ಈ ರೀತಿ ಮಾತನಾಡುವುದನ್ನ ಮೊದಲು ನಿಲ್ಲಿಸಿ. ಸಿಎಂ ಸಿದ್ದರಾಮಯ್ಯ ರಾಜಿನಾಮೆ ಕೇಳೋರು ಇವಾಗ ಪ್ರಧಾನ ಮಂತ್ರಿ ರಾಜೀನಾಮೆ ಕೊಡ್ತಾರಾ? ಜಮ್ಮು ಕಾಶ್ಮೀರದ ಪೆಹಲ್ಗಾಮ್​ ದುರಂತದ ಬಗ್ಗೆಯೂ ಪ್ರಧಾನಿ ಮೋದಿ ಉಸಿರು ಬಿಟ್ಟಿಲ್ಲ. ಇವಾಗ ಅವರ ರಾಜೀನಾಮೆ ಕೇಳೋದು ಬೆಡ್ವಾ..? ಎಂದು ಟಾಂಗ್​ ಕೊಟ್ಟಿದ್ದಾರೆ.

ಇಷ್ಟು ವರ್ಷಗಳ ಕಾಲ ಬರೀ ಮೋದಿ ಫೋಟೊನೇ ಹಾಕೊಂಡಿದ್ದಾರೆ. ಮೋದಿ ಪಿಚ್ಚರ್ ಮುಗಿಯುತ್ತಾ ಬಂದಿದೆ ಅದಕ್ಕೆ ಅವರಿಗೆ ಭಯ ಎಂದಿರುವ ಲಾಡ್​, ಪಾರ್ಟಿ ಕಟ್ಟಿದವರು ಎಲ್ಲ ಹೊಗ್ಬಿಟ್ಟರು. ಬಿಜೆಪಿಯವರು ಮೋದಿನಾ ದೇವರು ಅನ್ಕೊಂಡವರೆ, ರಾಮ ಮೂರು ಅಡಿ, ಮೋದಿ ಆರು ಅಡಿ. ರಾಮನಿಗಿಂದ ಮೋದಿ ದೊಡ್ಡವರು ಅಂತ ಬಿಜೆಪಿಯವರು ತೋರಿಸ್ಬಿಟ್ರು. ರಾಮನ ಕೈ ಹಿಡಿದು ಮೋದಿ ಕರೆದುಕೊಂಡು ಹೊಗ್ತಾರೆ. ರಾಮನಿಗೆ ದಾರಿ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೂ ನವೆಂಬರ್ ಕ್ರಾಂತಿ ವಿಚಾರವಾಗಿ ಮಾತನಾಡಿ, ಕ್ರಾಂತಿ ಅನ್ನೋದು ಬಿಹಾರ ಚುನಾವಣೆ ಬಳಿಕ ಮೋದಿ ಬದಲಾವಣೆ ಅದೇ ಕ್ರಾಂತಿ ಎನ್ನುವ ಮೂಲಕ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

Related posts

ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಹೆಕಮಾಂಡ್‌ಗೆ ಡೈನಾಮೇಟ್‌..

Publicspot

ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸ್ಥಗಿತ ಆಗುತ್ತಾ..? ಸರ್ಕಾರದ ಉದ್ದೇಶ ಏನು..?

Publicspot

JDS – BJP ಮೈತ್ರಿ ಹಾಳಾದರೆ ಹಾಸನದ ಕಿತಾಪತಿಯೇ ಕಾರಣ..?

Publicspot

Congress MP Opposed Cm Decision; ಸಿದ್ದರಾಮಯ್ಯ ಆಸೆಗೆ ತಣ್ಣೀರು ಎರಚಿದ ಕಾಂಗ್ರೆಸ್‌ ಸಂಸದ

Publicspot

BiggBoss Congress; ಬಿಗ್​ಬಾಸ್​ ವಿಚಾರದಲ್ಲಿ ಹೊರಬಿತ್ತು ಕಾಂಗ್ರೆಸ್​ ಅಸಮಾಧಾನ!!

Publicspot

ಪಾವಗಡದಲ್ಲಿ ವಿದ್ಯುತ್ ಉತ್ಪಾದನೆ ಪ್ಲಾಂಟ್ ಏಷ್ಯಾದಲ್ಲೇ ನಂ 1 ಎಂದ ಸಿಎಂ ಸಿದ್ದರಾಮಯ್ಯ

admin