The Public Spot
Uncategorized

ಬಿ ‘ಹಾರ’ ಯಾರಿಗೆ..? ಮತ ಎಣಿಕೆ ಮೇಲೆ ಕೋಟಿ ಕೋಟಿ ಕಣ್ಣು..!

ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಇವತ್ತು ಹೊರಬೀಳಲಿದೆ. 243 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದ ಆರಂಭ ಆಗಲಿದೆ. 122 ಸ್ಥಾನಗಳಲ್ಲಿ ಗೆಲುವು ಕಾಣಲಿರುವ ಪಕ್ಷ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ಹಾಗೂ RJD ಒಟ್ಟಾಗಿ ಚುನಾವಣೆ ಎದುರಿಸಿದ್ರೆ, ಬಿಜೆಪಿ ಹಾಗೂ ಜೆಡಿಯು ಜೊತೆಯಾಗಿ ಚುನಾವಣೆ ಮಾಡಿವೆ. ಈ ಎರಡೂ ಮೈತ್ರಿಕೂಟಗಳಲ್ಲಿ ಯಾರು ಗೆಲುವು ದಾಖಲಿಸ್ತಾರೆ..? ಬಿಹಾರದ ಜನತೆ ಯಾರಿಗೆ ಅಧಿಕಾರ ಕೊಟ್ಟಿದ್ದಾನೆ ಎನ್ನುವುದು ಇನ್ನೇನು ಕೆಲವೇ ಗಂಟೆಗಳಲ್ಲಿ ಹೊರಬೀಳಲಿರುವ ಫಲಿತಾಂಶ ಹೇಳಲಿದೆ.

ಬಿಹಾರ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆದಿದ್ದು, ನವೆಂಬರ್‌ 6 ಮತ್ತು ನವೆಂಬರ್‌ 11 ರಂದು ಮತದಾನ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಜನರು ಅತ್ಯುತ್ಸಾಹದಿಂದ ಭಾಗಿಯಾಗಿದ್ದಾರೆ. ಈ ಬಾರಿ ಶೇಕಡ 67ರಷ್ಟು ಜನರು ಮತದಾನ ಮಾಡಿದ್ದಾರೆ. ಇಷ್ಟು ಪ್ರಮಾಣದಲ್ಲಿ ಮತದಾನ ಆಗಿರುವುದು ಬಿಹಾರದಲ್ಲೇ ಅತ್ಯಧಿಕ ದಾಖಲೆಯ ಮತದಾನ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.. ಸ್ವತಂತ್ರ ಬಂದ ಬಳಿಕ 1951 ರಿಂದ ಇಲ್ಲೀವರೆಗೂ ಇಷ್ಟು ದೊಡ್ಡ ಪ್ರಮಾಣದ ಮತದಾನ ನಡೆದಿರಲಿಲ್ಲ. ಇದೆ ಮೊದಲ ಬಾರಿ ಭಾರೀ ಪ್ರಮಾಣದ ಮತದಾನ ನಡೆದಿದೆ. ಆದರೆ ಆ ಮತದಾರನ ಆಯ್ಕೆ ಏನು..? ಯಾರನ್ನು ಅಧಿಕಾರದ ಗದ್ದುಗೆಗೆ ಕೂರಿಸ್ತಾನೆ ಕಾದು ನೋಡ್ಬೇಕು.

ಬಿಹಾರದಲ್ಲಿ ಮತ ಎಣಿಕೆಗೆ ಚುನಾವಣಾ ಆಯೋಗ ಭರ್ಜರಿ ತಯಾರಿ ಮಾಡಿಕೊಂಡಿದೆ. ಒಟ್ಟು 38 ಜಿಲ್ಲೆಗಳ 46 ಮತ ಎಣಿಕೆ ಕೇಂದ್ರದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು 7.4 ಕೋಟಿ ಮತದಾರರು ಹಕ್ಕು ಚಲಾಯಿಸುವ ಅವಕಾಶ ಪಡೆದಿದ್ದರು. ಇನ್ನೂ ಅಖಾಡದಲ್ಲಿ 2,600 ಮಂದಿ ಅಭ್ಯರ್ಥಿಗಳ ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಳಪಡಿಸಿದ್ದರು. ಇವತ್ತು ಎಲ್ಲರ ಭವಿಷ್ಯ ಹೊರ ಬೀಳಲಿದೆ. ಇವತ್ತು 243 ಜನರು ಗೆಲುವು ಕಾಣಲಿದ್ದು, ಯಾವ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ ಅನ್ನೋದು ಮತ ಪೆಟ್ಟಿಗೆಯಿಂದ ಬಹಿರಂಗವಾಗಬೇಕಿದೆ.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ ಆಗಲಿದ್ದು, ಮೊದಲಿಗೆ ಪೋಸ್ಟಲ್‌ ಮತ ಎಣಿಕೆ ಮಾಡಬೇಕು ಅಂತಾ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಬೆಳಗ್ಗೆ 8.30ರ ನಂತರ EVM ಮತ ಎಣಿಕೆ ಆರಂಭ ಆಗಲಿದೆ. ಪೋಸ್ಟಲ್‌ ವೋಟ್‌ ಕೌಂಟ್‌ ಮಾಡುವಾಗ ತಪ್ಪದೆ ಚುನಾವಣಾ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಏಜೆಂಟ್‌ ಇರಬೇಕು ಎಂದು RO ಹಾಗೂ ಅಸಿಸ್ಟೆಂಟ್‌ ROಗಳಿಗೆ ಆಯೋಗ ನಿರ್ದೇಶನ ನೀಡಲಾಗಿದೆ. ಇನ್ನೂ ಇವಿಎಂ ಮೆಷಿನ್‌ಗಳನ್ನು ರೌಂಡ್‌ ಪ್ರಕಾರ ಕೌಂಟಿಂಗ್‌‌ಗೆ ತರಬೇಕು. ಕೌಂಟಿಂಗ್‌ ಏಜೆಂಟ್ಸ್‌‌ಗಳ ಎದುರಲ್ಲಿ ಸೀಲ್‌ ಆಗಿರುವುದನ್ನು ಖಚಿತಪಡಿಸಿಕೊಳ್ಬೇಕು ಎಂದು ಸೂಚನೆ ಕೊಡಲಾಗಿದೆ.

ಬಿಹಾರದಲ್ಲಿ ಮತ ಎಣಿಕೆಗೆ ಭಾರೀ ಬಂದೋಬಸ್ತ್‌ ಮಾಡಿಕೊಳ್ಳಲಾಗಿದೆ. 46 ಮತ ಎಣಿಕಾ ಕೇಂದ್ರದಲ್ಲಿ ಎರಡು ಹಂತದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಡಬಲ್‌ ಲಾಕ್‌ ಸಿಸ್ಟಂ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಮೊದಲ ರೌಂಡ್‌ನಲ್ಲಿ ಸೆಂಟ್ರಲ್‌ ಪ್ಯಾರಮಿಲಿಟರಿ ಫೋರ್ಸ್‌ ಹಾಗೂ ಎರಡನೇ ಹಂತದಲ್ಲಿ ರಾಜ್ಯ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಜೊತೆಗೆ ಮತ ಎಣಿಕೆ ಟೇಬಲ್‌ ಹಾಗೂ ಮತ ಎಣಿಕೆ ಕೇಂದ್ರದಲ್ಲಿ ಸಿಸಿಟಿವಿಗಳನ್ನು ಭದ್ರತೆಗೆ ಬಳಕೆ ಮಾಡಲಾಗಿದೆ.

Related posts

Online Game And Betting Apps Law: ಭಾರತದಲ್ಲಿ ಆನ್​ಲೈನ್ ಗೇಮ್​..​ ಬೆಟ್ಟಿಂಗ್ ಆ್ಯಪ್​​ ​ ಕಾನೂನು ಜಾರಿ..

Publicspot

Darshan Jail Case; ದರ್ಶನ್‌ ಕೊಲೆಗಾರ ಅಷ್ಟೆ.. ಸೆಲೆಬ್ರಿಟಿ ಅಲ್ಲ.. ಕೋರ್ಟ್‌ನಲ್ಲಿ ಸರ್ಕಾರದ ಸ್ಪಷ್ಟನೆ..!

Publicspot

ಲ್ಯಾಂಡ್‌ ಲಾರ್ಡ್‌ ಸಿನಿಮಾಗೆ ತೆರಿಗೆ ವಿನಾಯ್ತಿ ಕೊಟ್ಟ ರಾಜ್ಯ ಸರ್ಕಾರ!

Publicspot

BigBoss Kannada; ಈ ಬಾರಿ ಕನ್ನಡಮಯ ಆಗಿದ್ಯಾಕೆ ಬಿಗ್‌ಬಾಸ್‌..?

Publicspot

ಸುಪ್ರೀಂಕೋರ್ಟ್​ನಲ್ಲಿ PIL ಅರ್ಜಿ ವಜಾ ಮತ್ತು ಮಾಧ್ಯಮಗಳಲ್ಲಿ ಬಂದ ಅಸತ್ಯ..!

Publicspot

ಚಂದ್ರಚೂಡ್​ ಕಥೆಗಳನ್ನು ಯಾವುದೇ ನಿರ್ಮಾಪಕ ಸಿನಿಮಾ ಮಾಡುವಂತಿಲ್ಲ..!

Publicspot