The Public Spot
Uncategorized

ಚಂದ್ರಚೂಡ್​ ಕಥೆಗಳನ್ನು ಯಾವುದೇ ನಿರ್ಮಾಪಕ ಸಿನಿಮಾ ಮಾಡುವಂತಿಲ್ಲ..!

ಕನ್ನಡ ಸಿನಿಮಾ ನಿರ್ಮಾಪಕರ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಕಮೋಡ್ ಟು ಕಾಂಡೋಮ್ ಎಂಬ ಹೇಳಿಕೆ ಬಗ್ಗೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ವಾಗ್ದಾಳಿ ಮಾಡಿದೆ. ಈಗಾಗಲೇ ಚಕ್ರವರ್ತಿ ಚಂದ್ರಚೂಡ್​ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇವೆ ಎಂದು ನಿರ್ಮಾಪಕ ಕೆ.ಮಂಜು ತಿಳಿಸಿದ್ದಾರೆ. ಇತ್ತೀಚಿಗೆ ಕೆಲವರಿಗೆ ಮಾತನಾಡೋ ತೆವಲು ಜಾಸ್ತಿಯಾಗಿದೆ. ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಸುಮ್ನೆ ಗಾಳಿಯಲ್ಲಿ ಗುಂಡು ಹಾರಿಸಬಾರದು ಎಂದು ಎಚ್ಚರಿಸಿದ್ದಾರೆ.

ನಟ ಸುದೀಪ್ ಅವರಿಗೆ ಈ ವಿಷಯನೇ ಗೊತ್ತಿಲ್ಲ. ನನ್ನನ್ನು ಕೊಬ್ರಿ ಮಂಜ ಅಂತ ಹೇಳಿದ್ದಾರೆ. ಚಕ್ರವರ್ತಿ ಚಂದ್ರಚೂಡ್​ ಬುದ್ಧಿವಂತ ಅಂತಾರಲ್ಲ, ಮಾತಾಡೋ ರೀತಿಯೂ ಗೊತ್ತಿಲ್ವಾ ಅಂತಾ ನಿರ್ಮಾಪಕ ಕೆ. ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನೇನು ಪಿಂಪ್ ಕೆಲಸ ಮಾಡ್ತೀನಾ..? 55 ಕನ್ನಡ ಸಿನಿಮಾ ಮಾಡಿದ್ದೀನಿ. ನಿರ್ಮಾಪಕರು ಉಳಿಬೇಕು. ಇಂಡಸ್ಟ್ರಿಯಲ್ಲಿ ಚಕ್ರವರ್ತಿ ಏನ್ ಮಾಡಿದ್ದಾರೆ..? ಚಕ್ರವರ್ತಿ ಚಂದ್ರಚೂಡ್​ ಅವರ ವೈಯಕ್ತಿಕ ಜೀವನ ನಮಗೆ ಬೇಕಾಗಿಲ್ಲ. ಯಾರೇ ಆಗಲಿ ಚಿತ್ರರಂಗದ ಬಗ್ಗೆ ಮಾತಾಡಬಾರದು ಎಂದು ಎಚ್ಚರಿಸಿದ್ದಾರೆ.

ನಾನು ಯಾರ ಬಗ್ಗೆಯೂ ಹಗುರವಾಗಿ, ಪರ್ಸನಲ್ ಆಗಿ ನಾನು ಮಾತಾಡಿಲ್ಲ. ಬೇರೆಯವರಿಗೆ ಮೋಸ ಮಾಡಿರೋದು ಚಕ್ರವರ್ತಿ, ಚಕ್ರವರ್ತಿಯಿಂದ ಚಿತ್ರರಂಗಕ್ಕೆ ಯಾವ ಕೊಡುಗೆಯೂ ಇಲ್ಲ. ಚಂದ್ರಚೂಡ್ ದಿಕ್ಕುತಪ್ಪಿಸುವ ಯತ್ನ ಮಾಡ್ತಿದ್ದಾರೆ. ಕೈ ಬಾಯಿ, ಕಚ್ಚೆ ಮೂರು ನನ್ನ ಹತ್ತಿರ ಚೆನ್ನಾಗಿದೆ. ನೀನು ಬ್ಯಾಡ್ ಆದ್ರೆ ನಾನು ವೆರಿ ಬ್ಯಾಡ್ ಎಂದು ನೇರವಾಗಿಯೇ ಟಾಂಗ್​ ಕೊಟ್ಟಿದ್ದಾರೆ.

ಇಲ್ಲಿ ಯಾರೂ ಬೆಗ್ಗರ್​ಗಳು ಅಲ್ಲ. ಚಕ್ರವರ್ತಿ ಚಂದ್ರಚೂಡ್​ ವಿರುದ್ಧ ನಾನು ಕಂಪ್ಲೈಂಟ್ ಕೊಡ್ತೀನಿ. ನಾನು ಡಿಫರ್ಮೇಷನ್‌ ಕೇಸ್ ಹಾಕ್ತಿನಿ. 5 ಕೋಟಿ ಮಾನನಷ್ಟ ಮೊಕದ್ದಮ್ಮೆ ಹೂಡುತ್ತೇನೆ ಎಂದಿರುವ ಕೆ. ಮಂಜು, ಚಂದ್ರಚೂಡ್ ನೀನು ಎದುರಿಗೆ ಸಿಕ್ಕಿ ಮಾತನಾಡು, ನಿನ್ನ ಮನೆ ಅಡ್ರೆಸ್ ಕಳಿಸು.. ನಾವು ಹುಡುಕ್ತಿದ್ದೇವೆ ನಿನ್ನ ಎಂದು ನೇರವಾಗಿ ಧಮ್ಕಿ ಸ್ಟೈಲ್​ನಲ್ಲೇ ಹೇಳಿದ್ದಾರೆ.

ಇನ್ನು ಮುಂದೆ ಚಿತ್ರರಂಗದಲ್ಲಿ ಚಂದ್ರಚೂಡ್ ರಚಿಸಿದ ಕಥೆಗಳನ್ನ ನಿರ್ಮಾಪಕರು ತೆಗೆದುಕೊಳ್ಳುವಂತಿಲ್ಲ ಎನ್ನುವ ನಿರ್ಧಾರ ಮಾಡಿದ್ದು, ಚಿತ್ರರಂಗದ ಬಗ್ಗೆ ಮಾತಾಡುವಾಗ ಬಹಳ ಯೋಚಿಸಬೇಕು. ಚಂದ್ರಚೂಡ್ ಹಿಸ್ಟರಿ ಕೇಳಿದ್ರೆ ಅಸಹ್ಯ ಆಗುತ್ತದೆ. ಚಕ್ರವರ್ತಿ ಚಂದ್ರಚೂಡ್ ಚಿತ್ರರಂಗದ ಗೌರವ ಕಳೆಯುವ ಕೆಲಸ ಮಾಡಬೇಡಿ. ನನ್ನ ಬಗ್ಗೆ ಏನ್ ಮಾಡ್ತಾನೋ ಮಾಡಲಿ.. ನೋಡ್ತಿನಿ. ಅವನಿಗೆ ದೊಡ್ಡವರ ಬಲ, ರೌಡಿಗಳ ಬಲ ಇರಬಹುದು. ಆದ್ರೆ ನನಗೆ ಭಗವಂತನ ಬಲ ಇದೆ. ಚಂದ್ರಚೂಡ್ ಯಾರ್ ಹತ್ತಿರ ಕೆಲಸ ಮಾಡ್ತಾನೆ ಅವರಿಗೂ ಹೇಳಿದ್ದೀನಿ. ಚಂದ್ರಚೂಡ್ ನಿಮ್ಮ ಹತ್ತಿರ ಇದ್ರೆ ತುಂಬಾ ಕಷ್ಟ ಆಗುತ್ತೆ ಅಂತಾ ಎಂದಿದ್ದಾರೆ.

Related posts

New Law In Loksabha: ಪ್ರಧಾನಿ, ಸಿಎಂ, ಮಂತ್ರಿಗಳಿಗೂ ಬರ್ತಿದೆ ಹೊಸ ಕಾನೂನು..!

Publicspot

ಬಿ ‘ಹಾರ’ ಯಾರಿಗೆ..? ಮತ ಎಣಿಕೆ ಮೇಲೆ ಕೋಟಿ ಕೋಟಿ ಕಣ್ಣು..!

Publicspot

Karnataka Rathna Dr Vishnuvardhan: ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪುರಸ್ಕಾರ

Publicspot

ರೇಣುಕಾಸ್ವಾಮಿ ಕೊಲೆ ಆಧಾರಿತ ಚಿತ್ರ ಅಂತಾ BOSS ಚಿತ್ರ ಬಿಡುಗಡೆಗೆ ಬ್ರೇಕ್‌..

Publicspot

ಅಮೆರಿಕ ಎದುರು ಗುಟುರು ಹಾಕಿದ ಭಾರತ – ರಷ್ಯಾ ಜೋಡಿ..

Publicspot

ಕುರುಬರಿಗೆ ಎಸ್ಟಿ ಮೀಸಲಾತಿ ಕೇಂದ್ರ ವಾಪಸ್‌ ಕಳುಹಿಸಿದೆ.. ನಾನು ಮತ್ತೆ ಕಳುಹಿಸುತ್ತೇನೆ..

Publicspot