The Public Spot
Uncategorized

Darshan Jail Case; ದರ್ಶನ್‌ ಕೊಲೆಗಾರ ಅಷ್ಟೆ.. ಸೆಲೆಬ್ರಿಟಿ ಅಲ್ಲ.. ಕೋರ್ಟ್‌ನಲ್ಲಿ ಸರ್ಕಾರದ ಸ್ಪಷ್ಟನೆ..!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಿಲ್ಲ ಎಂದು ನಟ ದರ್ಶನ್‌ ಅರ್ಜಿ ಸಲ್ಲಿಸಿದ್ದರು. ಆ ಬಳಿ ಜೈಲಿನ ಮ್ಯಾನ್ಯುಯಲ್‌ ಪ್ರಕಾರ ಸೌಲಭ್ಯ ಕಲ್ಪಿಸುವಂತೆ ಕೋರ್ಟ್‌ ಆದೇಶ ಮಾಡಿತ್ತು. ಆದರೂ ಸೌಲಭ್ಯ ಕಲ್ಪಿಸಿಲ್ಲ ಎಂದು ಕೋರ್ಟ್‌ನಲ್ಲಿ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇವತ್ತು ಕೋರ್ಟ್‌ ಎದುರು ಹಾಜರಾಗುವಂತೆ ಜಥಲು ಅಧಿಕಾರಿಗಳಿಗೆ ಕೋರ್ಟ್‌ ಸೂಚನೆ ಕೊಟ್ಟಿತ್ತು. ಕೋರ್ಟ್‌ಗೆ ಆಗಮಿಸಿದ್ದ ಜೈಲಿನ ಚೀಫ್‌ ಸೂಪರಿಂಟೆಂಡೆಂಟ್ ಸುರೇಶ್, 64 ಸಿಸಿಎಚ್ ಕೋರ್ಟ್‌ಗೆ ಹಾಜರಾಗಿ ಜೈಲಿನಲ್ಲಿ ಕಲ್ಪಿಸಿರುವ ವ್ಯವಸ್ಥೆ ಕಲ್ಪಿಸಿದ್ದರು. ಸರ್ಕಾರದ ಪರವಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ರು. ಜೈಲಿನ ಮ್ಯಾನುಯಲ್ ಪ್ರಕಾರವೇ ಎಲ್ಲಾ ಸೌಲಭ್ಯವನ್ನು ನೀಡಲಾಗಿದೆ. ಆದರೆ ಜೈಲಿನಲ್ಲಿ ಮಲಗಲು ಪಲ್ಲಂಗ ಕೊಡಿ ಎಂದು ಕೇಳಿದ್ರೆ‌ ಹೇಗೆ ಕೊಡಬೇಕು..? ಅದನ್ನು ಕೊಡಲು ನಮಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಬೆಳಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆ ವಾಕಿಂಗ್‌‌ಗೆ ಅವಕಾಶ ಕೊಡಲಾಗಿದೆ. ಆರೋಪಿ ಹೊರಗಡೆ ಹೋಗಬೇಕು, ಇದೇ ಬ್ಯಾರಕ್‌ನಲ್ಲಿ ಇರಬೇಕು ಅಂದರೆ ಅದು ಸಾಧ್ಯವಿಲ್ಲ. ಬಿಸಿಲು ಬರೋ ಜಾಗಕ್ಕೆ ಕಳಿಸಿ ಅಂದ್ರೂ ಆಗಲ್ಲ. ಫಂಡಮೆಂಟಲ್ ರೈಟ್ಸ್‌ ಇರಬಹುದು, ಆದ್ರೆ ಜೈಲಿನ ಮ್ಯಾನುಯಲ್ ಪ್ರಕಾರ ಅವಕಾಶ ನೀಡಲು ಆಗಲ್ಲ. ಅವರಿಗೆ ಬಿಸಿಲು ಬರ್ತಾ ಇಲ್ಲ ಅಂದ್ರೆ ನಾವು ಏನ್ ಮಾಡಬೇಕು..? ಎಂದು ಪ್ರಶ್ನಿಸಿದ್ದಾರೆ.

ಕ್ವಾರಂಟೈನ್ ಸೆಲ್ ಬೇಡ ಬೇರೆ ಸೆಲ್ ಬೇಕು‌ ಅಂತಾ ದರ್ಶನ್ ಕೇಳಿದ ಕೂಡಲೇ ಬೇರೆ ಸೆಲ್‌ಗೆ ಕಳಿಸಲು ಆಗಲ್ಲ ಎಂದಿರುವ SPP ಪ್ರಸನ್ನ ಕುಮಾರ್, ಏನು ಸೌಲಭ್ಯ ಕೊಡಬೇಕು ಅಂತಾ ಇದೆಯೋ ಅದನ್ನು ಜೈಲಾಧಿಕಾರಿಗಳು ನೀಡ್ತಾರೆ, ಅವರಿಗೆ ಬೇಕಾದ್ದನ್ನೆಲ್ಲ ನೀಡಲು‌ ಆಗಲ್ಲ ಎಂದಿದ್ದಾರೆ. ಈ ವೇಳೆ ಖುದ್ದಾಗಿ ಹಾಜರಾಗಿದ್ದ ಜೈಲರ್‌ಗೆ ಜಡ್ಜ್ ಪ್ರಶ್ನೆ ಮಾಡಿದ್ದು, ಜೈಲ್‌ ಮ್ಯಾನ್ಯುಯಲ್‌ ಪ್ರಕಾರ ಎಲ್ಲಾ ಸೌಲಭ್ಯ ನೀಡಲಾಗ್ತಿದ್ಯಾ ಅಂತಾ ಕೇಳಿದ್ದಾರೆ. ಜೈಲ್‌ ಮ್ಯಾನುಯಲ್ ಪ್ರಕಾರ ನೀಡಲಾಗ್ತಿದೆ ಸ್ವಾಮಿ ಎಂದಿದ್ದಾರೆ ಜೈಲರ್. ಈ ವೇಳೆ ಜೈಲು ಅಧಿಕಾರಿಗಳಿಗೆ ಕೋರ್ಟ್ ಆದೇಶವೇ ಅರ್ಥ ಆಗಿಲ್ಲ. ಅವರಿಗೆ ಆದೇಶ ಅರ್ಥ ಆಗಿಲ್ಲ ಅಂದ್ರೆ ನಮ್ಮನ್ನು ಕೇಳಲಿ, ಅವರಿಗೆ ಇಂಗ್ಲೀಷ್ ಬರೋದಿಲ್ಲ ಅಂದಿದ್ದಾರೆ ದರ್ಶನ್‌ ಪರ ವಕೀಲ ಸುನೀಲ್. ಆ ವೇಳೆ ಸುನೀಲ್ ವಾದಕ್ಕೆ ಎಸ್‌ಪಿಸಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಇಂಗ್ಲೀಪ್ ಬರಲ್ಲ, ಅದು ಇದು ಎಲ್ಲಾ ಬೇಡ. ಅವರು ಅಧಿಕಾರಿಗಳು, ಅವರಿಗೆ ಅರ್ಥ ಆಗುತ್ತೆ ಅಂತ ಗರಂ ಆಗಿದ್ದಾರೆ. ಈ ವೇಳೆ ನಾವೇನು ದರ್ಶನ್‌ಗೆ ಚಿನ್ನದ ಮಂಚ ಬೇಕು ಅಂತಾ ಕೇಳಿದ್ವಾ..? ಬರೀ ಲೋಟ, ತಟ್ಟೆ ಕೊಟ್ಟಿದ್ದಾರೆ ಎಂದಿದ್ದಾರೆ. ಈ ವೇಳೆ ಅದೆಲ್ಲ ಬೇಡ ಕೋರ್ಟ್ ಆದೇಶ ಏನು ಉಲ್ಲಂಘನೆ ಮಾಡಿದ್ದಾರೆ ಅದನ್ನು ಹೇಳಿ ಅಂತ ದರ್ಶನ್ ಪರ ವಕೀಲರಿಗೆ ಕೇಳಿದ್ದಾರೆ ಜಡ್ಜ್.

ತಟ್ಟೆ, ಲೋಟ, ಚಾಪೆ, ಮಗ್ಗು, ದಿಂಬು ಕೊಟ್ಟಿದ್ದಾರೆ, ಕಂಬಳಿಯನ್ನು ಕೋರ್ಟ್ ಆದೇಶದ ಬಳಿಕ ಕೊಟ್ಟಿದ್ದಾರೆ. ವಾಕಿಂಗ್‌ಗೆ ಅಂತೂ ಅವಕಾಶವನ್ನೆ ಕೊಡ್ತಿಲ್ಲ. ಬರೀ ಸೆಲ್ ಒಳಗಡೆಯೇ ವಾಕ್‌ ಮಾಡಿ ಅಂತಿದ್ದಾರೆ. ನಾವೇನು ಚಿನ್ನದ ಮಂಚ ಕೊಡಿ ಅಂತಿದೀವಾ..? ಮೂಲಭೂತ ಸೌಲಭ್ಯಗಳನ್ನು ಕೊಡಿ ಅಂತಿದ್ದೀವಿ ಅಷ್ಟೆ. ದರ್ಶನ್ ಭೇಟಿಗೆ ಹೋಗುವವರಿಗೆ ಪ್ರತ್ಯೇಕ ರಿಜಿಸ್ಟರ್ ಇಟ್ಟಿದ್ದಾರೆ. ಪ್ರತ್ಯೇಕ ರಿಜಿಸ್ಟರ್ ಯಾಕೆ ಇಟ್ಟಿದ್ದಾರೆ ಎಂದು ಇವರು ಹೇಳಲಿ. ಕೋರ್ಟ್ ಮಾನಿಟರ್ ಮಾಡ್ತಾ ಇರೋದಕ್ಕೆ, ನಾಳೆ ಯಾರೆಲ್ಲ ಭೇಟಿಗೆ ಬಂದ್ರು ಅಂದಾಗ ನೀಡಲು ಇಟ್ಟಿದ್ದಾರೆ ಎಂದಿದ್ದಾರೆ ಎಸ್‌ಪಿಪಿ. ಜೈಲು ಮ್ಯಾನುಯಲ್ ಪ್ರಕಾರ ಏನ್ ಕೊಡಬೇಕು ಅಂತ ದರ್ಶನ್ ಪರ ವಕೀಲರಿಗೆ ಕೇಳಿದ್ದಾರೆ ಜಡ್ಜ್. ನಾವು ಕೇಳ್ತಾ ಇರೋದು ಬೆಡ್, ಬೆಡ್ ಶೀಟ್, ತಟ್ಟೆ, ಲೋಟ, ಮಿರರ್, ಕೂಮ್, ಚಪ್ಪಲಿ, ಕಂಬಳಿ ಕೊಡಿ ಅಂತ. ಆದರೆ ದರ್ಶನ್ ಸೆಲೆಬ್ರಿಟಿ ಅಂತ ಇವರು ಹೀಗೆಲ್ಲ ಮಾಡಿದ್ರೆ ಹೇಗೆ..? ಎಂದಿದ್ದಾರೆ. ಆಗ ಸುನೀಲ್ ವಾದಕ್ಕೆ ಮತ್ತೊಮ್ಮೆ ಆಕ್ಷೇಪಣೆ ವ್ಯಕ್ತಪಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್‌, ನಾವು ಎಲ್ಲೂ ದರ್ಶನ್‌ನನ್ನು ಸೆಲೆಬ್ರಿಟಿ ಅಂತ ಹೇಳಿಲ್ಲ. ದರ್ಶನ್‌‌ ಒಬ್ಬ ಕೊಲೆ ಆರೋಪಿ ಅಷ್ಟೆ. ನಾವ್ಯಾಕೆ ಸೆಲೆಬ್ರಿಟಿ ಅನ್ನಬೇಕು ಎಂದಿದ್ದಾರೆ. ಸೆಲೆಬ್ರಿಟಿ ಅಂತಾ ನೀವು ಹೇಳ್ತಾ ಇರೋದು ಅಂತ ಪ್ರಸನ್ನ ಕುಮಾರ್ ತಿರುಗೆಟು ನೀಡಿದ್ದಾರೆ.

ಕ್ವಾರಂಟೈನ್ ಸೆಲ್‌ನಲ್ಲಿ 14 ದಿನ ಇಡೋದು ಸಾಮಾನ್ಯ. ಆದ್ರೆ ದರ್ಶನ್‌ನನ್ನು ಇನ್ನು ಅದೆಷ್ಡು ದಿನ‌ ಕ್ವಾರಂಟೈನ್‌ ಸೆಲ್‌ನಲ್ಲಿ ಇಡಬೇಕು ಅಂದುಕೊಂಡಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ ವಕೀಲ ಸುನೀಲ್. 45 ದಿನಗಳಿಂದ ದರ್ಶನ್‌ನನ್ನು ಕ್ವಾರಂಟೈನ್ ಸೆಲ್ ಅಲ್ಲೇ ಇಟ್ಟಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ನ್ಯಾಯನಾ..? ಉಮೇಶ್ ರೆಡ್ಡಿಗೆ ಎಷ್ಟು ಸೌಲಭ್ಯ ನೀಡಿದ್ದಾರೆ ಗೊತ್ತಾ..? ಐಷಾರಾಮಿ ಸೌಲಭ್ಯ ನೀಡಿದ್ದಾರೆ. ಅದರ ದಾಖಲೆಗಳು ಕೊಡ್ತೀನಿ ಬೇಕಿದ್ರೆ ಎಂದಿದ್ದಾರೆ. ಆಗ ಅದಕ್ಕೆ ನಮಗೆ ಈಗ ಟೈಂ ಇಲ್ಲ ಬೇರೆ ಕೆಲಸ‌ ಇದೆ, ನಿಮಗೆ ಏನ್ ಬೇಕೋ‌ ಅದನ್ನ ಮಾತ್ರ ಕೇಳಿ ಅಂದಿದ್ದಾರೆ ಜಡ್ಜ್. SPP ಜೈಲರ್‌ನ ಮಿಸ್ ಲೀಡ್ ಮಾಡ್ತಾ ಇದ್ದಾರೆ. ಇಲ್ಲದ ಕಾನೂನು ಇವರೇ ಸೃಷ್ಟಿ ಮಾಡ್ತಾ ಇದ್ದಾರೆ ಎಂದಿದ್ದಾರೆ. ಆಗ ಎಸ್‌ಪಿಪಿ ಮಧ್ಯಪ್ರವೇಶ ಮಾಡಿ, ಇರಪ್ಪ ಯಾಕೆ ಜಾಸ್ತಿ ಊಟ ಮಾಡಿದ್ದೀಯಾ ಅನಿಸುತ್ತೆ. ನಿನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡ್ತೀನಿ. ಕ್ವಾರಂಟೈನ್ ಅನ್ನೋ ಪದ ಜೈಲು ಮ್ಯಾನುಯಲ್ ಅಲ್ಲಿ ಇಲ್ಲ. ಆ ಪದ ಇದ್ದರೆ ನಾನು ಈಗಲೇ ಕೇಸ್ ವಿತ್ ಡ್ರಾ ಮಾಡ್ತೀನಿ ಅಂದಿದ್ದಾರೆ ಸುನೀಲ್. ತಕ್ಷಣವೇ ಕ್ವಾರಂಟೈನ್ ಅನ್ನೋ ಪದವನ್ನು ತೋರಿಸಿದ ಎಸ್‌ಪಿಪಿ ಒಂದಲ್ಲಾ 11 ಕಡೆಗಳಲ್ಲಿ ಈ ಪದ ಮ್ಯಾನುಯಲ್‌ನಲ್ಲಿ‌ ಇದೆ. ಕ್ವಾರಂಟೈನ್ ಸಬ್ಮೀಷನ್ ಅಂತಾನೂ ಇದೆ. ಹಾಗಿದ್ರೆ ಈಗ ಅರ್ಜಿ ವಾಪಸ್ ತಗೋಳಪ್ಪ ಅಂದಿದ್ದಾರೆ ಎಸ್‌ಪಿಪಿ ಪ್ರಸನ್ನ ಕುಮಾರ್.

1974 ರ ಜೈಲು ಮ್ಯಾನುಯಲ್‌ನಲ್ಲೇ ಕ್ವಾರಂಟೈನ್‌ ಅನ್ನೋ ಪದ ಇದೆ. ಯಾವ ಯಾವ ಆರೋಪಿಗೆ ಯಾವ ಯಾವ ಸೆಕ್ಯುರಿಟಿ ನೀಡಬೇಕು ಅಂತ ಇದೆ. ಅದರಲ್ಲಿ ಸಜಾ ಬಂಧಿ ಕೈದಿಗಳಿಗೆ ಮೂರು ರೀತಿ ಸೆಕ್ಯುರಿಟಿ ನೀಡಬಹುದು. A,B,C ಅಂತ ಮೂರು ರೀತಿ ಇದೆ. ದರ್ಶನ್ ವಿಚಾರಣಾಧೀನ ಕೈದಿ. ಆತನಿಗೆ ಯಾವ ರೀತಿ ಸೆಕ್ಯುರಿಟಿ ನೀಡಬೇಕು ಅಂತಾನೂ‌ ಇದೆ. ಅದ್ರಂತೆ ನಾವು ಸೆಕ್ಯೂರಿಟಿ ನೀಡಲಾಗಿದೆ. ಕ್ವಾರಂಟೈನ್ ಜೈಲಿನಿಂದ ಬೇರೆ ಜೈಲಿಗೆ ಶಿಫ್ಟ್ ಮಾಡಲು ಆಗಲ್ಲ ಎಂದು ವಾದ ಮಂಡಿಸಿದ್ದಾರೆ. ಎಸ್‌ಪಿಪಿ ಪ್ರಸನ್ನ ಕುಮಾರ್‌ ಪ್ರಬಲ ವಾದ ಮಂಡನೆ ಮಾಡಿದ್ದು, ಕ್ವಾರಂಟೈನ್ ವಾರ್ಡ್ ಕೂಡ ಜೈಲಿನ ಒಂದು ಭಾಗವೇ ಆಗಿದೆ. ಅಲ್ಲಿಂದ ಶಿಫ್ಟ್ ಮಾಡಲೇ ಬೇಕು ಅಂತ ಇಲ್ಲ. ಜೈಲಿನ ಮ್ಯಾನ್ಯುಯಲ್‌ನಲ್ಲಿ ಕೆಲವು ಷರತ್ತುಗಳಿವೆ. ಏನಾದರು ವರ್ತನೆಗಳು ನಡೆದರೆ, ಏನಾದರು ನಿಯಮಗಳು ಉಲ್ಲಂಘನೆಯಾದರೆ ಬದಲಾವಣೆಗೆ ಅವಕಾಶ ಇರುತ್ತದೆ. ಕೈದಿ ಅಥವಾ ಆರೋಪಿಯ ವರ್ತನೆಯಿಂದ ಕೆಲ ಬದಲಾವಣೆ ಮಾಡಬಹುದು. ಆದರೆ ಸದ್ಯ ದರ್ಶನ್‌ನ ಶಿಫ್ಟ್ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದಿದ್ದಾರೆ. ವಿಚಾರಣೆ ನಡೆಸಿದ ಕೊರ್ಟ್‌ ಅಕ್ಟೋಬರ್ 9ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದ್ದು, ಜೈಲು ಸೌಲಭ್ಯಗಳ ಬಗ್ಗೆ ಆದೇಶ ಮಾಡಲಿದ್ದಾರೆ.

Related posts

ಉಗ್ರರು, ಅಪರಾಧಿಗಳ ಪಾಲಿನ ಸ್ವರ್ಗ ನಮ್ಮ ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲು

Publicspot

Bihara Laddus; ಗೆದ್ದೇ ಗೆಲ್ಲುವ ವಿಶ್ವಾಸ.. ಸಮೀಕ್ಷೆಗಳೇ ಉಲ್ಟಾ ಆಗುತ್ತಾ..?

Publicspot

PIL rejected by supreme court; ಸುಪ್ರೀಂಕೋರ್ಟ್‌ ಆದೇಶ ಮುಚ್ಚಿಟ್ಟು SIT ರಚನೆ ಮಾಡಿತಾ ಸರ್ಕಾರ..?

Publicspot

Supreme Court; ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆತ.. ಕಾರಣ ಏನು..?

Publicspot

Heavy Rain North India: ವರುಣದ ಆರ್ಭಟಕ್ಕೆ ಉತ್ತರ ಭಾರತ ತತ್ತರ..

Publicspot

ಜಮೀರ್‌ ಆಡಿಯೋ ವೈರಲ್‌.. ಕಾಂಗ್ರೆಸ್‌‌ನಲ್ಲಿ ತಲ್ಲಣ.. ಸಚಿವಗಿರಿ ಸಂಕಷ್ಟ..

Publicspot